ಕಾರು ಕ್ರಾಂತಿ, ಭಾರತದಲ್ಲಿ ಹ್ಯುಂಡೈ ಬಿಡುಗಡೆ ಮಾಡುತ್ತಿದೆ ಜನಸಾಮಾನ್ಯರ ಹೈಬ್ರಿಡ್-ಎಲೆಕ್ಟ್ರಿಕ್ ಕಾರು

Published : Jul 29, 2026, 11:07 AM IST
Hyundai plans Hybrid and Electric Car

ಸಾರಾಂಶ

ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿಯಾಗುತ್ತಿದೆ. ಇದೀಗ ಹ್ಯುಂಡೈ ಜನಸಾಮಾನ್ಯರಿಗಾಗಿ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. HE1i ಹೈಬ್ರಿಡ್, ಹೊಸ ಕ್ರೆಟಾ ಸೇರಿದಂತೆ ಹ್ಯುಂಡೈ ಭಾರತದಲ್ಲಿ ಬಿಡುಗಡೆ ಮಾಡಲಿರುವ ಕಾರುಗಳು ಯಾವುದು?

ನವದೆಹಲಿ (ಜು.29) ಸೌತ್ ಕೊರಿಯಾದ ಹ್ಯುಂಡೈ ಮೋಟಾರ್ ಭಾರತದ ಕಾರು ಮಾರುಕಟ್ಟೆಯಲ್ಲಿರುವ ಟಾಪ್ 5 ಕಾರುಗಳಲ್ಲಿ ಹ್ಯುಂಡೈ ಕೂಡ ಒಂದು. ಐ20, ಕ್ರೆಟಾ, ವರ್ನಾ ಸೇರಿದಂತೆ ಹಲವು ಕಾರುಗಳ ಮೂಲಕ ಹ್ಯುಂಡೈ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಕ್ರೆಟಾ ಎಲೆಕ್ಟ್ರಿಕ್ ಸೇರಿದಂತೆ ಹಲವು ಇವಿ ಕಾರುಗಳನ್ನು ನೀಡುತ್ತಿದೆ. ಇದೀಗ ಹ್ಯುಂಡೈ ಭಾರತದಲ್ಲಿ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಮಾರುತಿ ಸುಜುಕಿ, ಟೋಯೋಟಾ ಬ್ರ್ಯಾಂಡ್‌ಗೆ ಠಕ್ಕರ್ ನೀಡಲು ಮುಂದಾಗಿದೆ. ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರಗಳೇ ಭವಿಷ್ಯದ ಸಾರಿಯಾಗಿರುವ ಕಾರಣ ಹ್ಯುಂಡೈ ಜನಸಾಮಾನ್ಯರಿಗಾಗಿ ಹೊಸ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ಹೈಬ್ರಿಡ್ ಕಾರುಗಳ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಹ್ಯುಂಡೈ ಮುಂದಾಗಿದೆ. ಸದ್ಯ ಮಾರುತಿ ಹೈಬ್ರಿಡ್ ಕಾರಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಹ್ಯುಂಡೈ HE1i EV ಕೈಗೆಟುಕುವ ದರದ ಎಲೆಕ್ಟ್ರಿಕ್ ಕಾರು

ಹ್ಯುಂಡೈ ಎಲೆಕ್ಟ್ರಿಕ್ ಕಾರುಗಳ ಪೈಕಿ HE1i EV ಅಗ್ಗದ ಹಾಗೂ ಕಡಿಮೆ ಬೆಲೆಯ ಇವಿ ಕಾರಾಗಿದೆ. ಈ ವರ್ಷದ ಅಂತ್ಯ ಅಂದರೆ 2026ರ ಡಿಸೆಂಬರ್ ತಿಂಗಳಲ್ಲಿ ಹ್ಯುಂಡೈ ಹೊಸ HE1i EV ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಕಾರು ಟಾಟಾ ನೆಕ್ಸಾನ್ ಇವಿ, ಕಿಯಾ ಸೈರೋಸ್ ಇವಿ, ಟಾಟಾ ಪಂಚ್ ಇವಿ ಪ್ರತಿಸ್ಪರ್ಧಿಯಾಗಿದೆ. ಬಾಕ್ಸಿ ಡಿಸೈನ್ ಮೂಲಕ ಈ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. 400 ಕಿಲೋಮೀಟರ್ ಮೈಲೇಜ್ ರೇಂಜ್, 42 kWh ಹಾಗೂ 49 kWh ಬ್ಯಾಟರಿ ಪ್ಯಾಕ್ ಆಯ್ಕೆ, ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿರುವ ನೂತನ ಕಾರು ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ. ಕೇಂದ್ರ ಸರ್ಕಾರದ ಇವಿ ಯೋಜನೆಯಡಿಯಲ್ಲಿ ಈ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.

ಹ್ಯುಂಡೈ ಬೆಯಾನ್ ಕ್ರಾಸ್‌ಓವರ್ ಹೈಬ್ರಿಡ್

ಹ್ಯುಂಡೈ ಮೊದಲ ಬಾರಿಗೆ ಭಾರತದಲ್ಲಿ ಹೈಬ್ರಿಡ್ ಕಾರಾಗಿ ಹ್ಯುಂಡೈ ಬೆಯಾನ್ ಬಿಡುಗಡೆ ಮಾಡಲಿದೆ. ಸೈಜ್‌ನಲ್ಲಿ ಈ ಕಾರು ಹ್ಯುಂಡೈ ವೆನ್ಯೂ ಹಾಗೂ ಹ್ಯುಂಡೈ ಕ್ರೆಟಾ ಕಾರಿನ ನಡುವಿನ ಕಾರಾಗಲಿದೆ. 4.2 ಮೀಟರ್ ಲೆಂಥ್ ಕಾರಾಗಿದೆ. ವಿಶೇಷವಾಗಿ ಈ ಕಾರು ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ವಿಶೇಷ ಅಂದರೆ ಹೈಬ್ರಿಡ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ. 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ನೀಡಲಾಗುತ್ತಿದೆ. ಈ ಮೂಲಕ ದುಬಾರಿ ಜಿಎಸ್‌ಟಿಯಿಂದಲೂ ತಪ್ಪಿಸಿಕೊಳ್ಳಲಿದೆ. ಹೈಬ್ರಿಡ್ ಕಾರಾದರೂ 10 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ.

ಹ್ಯುಂಡೈ ಕ್ರೆಟಾ ಹೈಬ್ರಿಡ್

ಹ್ಯುಂಡೈ ಕ್ರೆಟಾ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ವರ್ಶನ್ ಭಾರತದಲ್ಲಿ ಲಭ್ಯವಿದೆ. ಹೊಸ ಕೆ3 ಪ್ಲಾಟ್‌ಫಾರ್ಮ್ ಅಡಿಯಲ್ಲಿ ಈ ಕಾರು ನಿರ್ಮಾಣಗೊಳ್ಳುತ್ತಿದೆ. 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಮೂಲಕ ಬಿಡುಗಡೆಯಾಗಲಿದೆ. 2027ರ ಆರಂಭದಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಇದರ ಬೆಲೆ 11 ರಿಂದ 20 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜು ಮಾಡಲಾಗಿದೆ.

ಹ್ಯುಂಡೈ ಅಲ್ಕಜರ್ ಹೈಬ್ರಿಡ್

ಭಾರತದಲ್ಲಿ ಹ್ಯುಂಡೈ ಅಲ್ಕಜರ್ ಈಗಾಗಲೇ ಉತ್ತಮ ಮಾರಾಟ ದಾಖಲೆ ಹೊಂದಿದೆ. ಹ್ಯುಂಡೈ ಕಾರುಗಳ ಪೈಕಿ ಐಷಾರಾಮಿ ಹಾಗೂ ದೊಡ್ಡ ಕಾರಾಗಿರುವ ಅಲ್ಕಜರ್ ಇದೀಗ ಹೈಬ್ರಿಡ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ. 1.5 ಲೀಟರ್ ಹೈಬ್ರಿಡ್ ಪವರ್‌ಟ್ರೇನ್ ಮೂಲಕ 2027ರ ಅಂತ್ಯ ಹಾಗೂ 2028ರ ಆರಂಭದಲ್ಲಿ ಭಾರತದ ರಸ್ತೆಗೆ ಇಳಿಯಲಿದೆ.

PREV
Read more Articles on
click me!

Recommended Stories

ಭಾರತದಲ್ಲಿ ಅನಾವರಣವಾದ Toyota Hilux, ಮತ್ತಷ್ಟು ಸೈಲಿಷ್‌ ಹಾಗೂ ಸ್ಮಾರ್ಟ್‌ ಆದ ಜನಪ್ರಿಯ ಪಿಕಪ್‌
ಭಾರತಕ್ಕೆ ಎಂಟ್ರಿಕೊಡುತ್ತಿದೆ 4 ಹೊಸ ಕಾರು ಕಂಪನಿ, ಕಡಿಮೆ ಬೆಲೆಯ ಕಾರು ಖರೀದಿದಾರರಿಗೆ ಬಂಪರ್