Honda Car Discounts ಫೆಬ್ರವರಿ ತಿಂಗಳ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಹೋಂಡಾ!

Published : Feb 02, 2022, 07:34 PM IST
Honda Car Discounts ಫೆಬ್ರವರಿ ತಿಂಗಳ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಹೋಂಡಾ!

ಸಾರಾಂಶ

ಫೆಬ್ರವರಿ ತಿಂಗಳಲ್ಲಿ ಹೋಂಡಾ ಕಾರುಗಳಿಗೆ ರಿಯಾಯಿತಿ ಗರಿಷ್ಠ 35,596  ರೂಪಾಯಿ ಡಿಸ್ಕೌಂಟ್ ನೀಡಿದ ಹೋಂಡಾ ಯಾವ ಯಾರಿಗೆ ಎಷ್ಟು ಡಿಸ್ಕೌಂಟ್? ಇಲ್ಲಿದೆ ವಿವರ 

ನವದೆಹಲಿ(ಫೆ.02):  ಹೊಸ ವರ್ಷವನ್ನು ಹೊಸ ನಿರೀಕ್ಷೆಗಳೊಂದಿಗೆ ಆರಂಭಿಸಿದ ಭಾರತೀಯ ಆಟೋಮೊಬೈಲ್(Automobile) ಹೆಚ್ಚುಕಡಿಮೆ ಜನವರಿ ತಿಂಗಳಲ್ಲಿ ಉತ್ತಮ ಮಾರಾಟ ದಾಖಲೆ(Car sales) ಹೊಂದಿದೆ. ಆದರೆ ಕೇಂದ್ರ ಬಜೆಟ್(Union Budget 2022) ಆಟೋಮೊಬೈಲ್ ಕಂಪನಿಗಳ ನಿರೀಕ್ಷೆ ಹುಸಿಯಾಗಿಸಿದೆ. ಇದರ ಬೆನ್ನಲ್ಲೇ ಹೋಂಡಾ ಇಂಡಿಯಾ(Honda India) ತನ್ನ ಮಾರಾಟ ದಾಖಲೆ ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಇದೀಗ ಫೆಬ್ರವರಿ ತಿಂಗಳ ರಿಯಾಯಿತಿ ಆಫರ್ ನೀಡಿದೆ. ಹೋಂಡಾ ಡಿಸ್ಕೌಂಟ್ ಆಫರ್(Discounts) ಫೆಬ್ರವರಿ 28ರ ವರೆಗೆ ಲಭ್ಯವಿದೆ. 

ಹೊಂಡಾ ಸಿಟಿ(5ನೇ ಜನರೇಶನ್)
ಹೋಂಡಾ ಸಿಟಿ ಕಾರಿಗೆ ಓಟ್ಟು 35,596 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದು 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಅಥವಾ 10,596 ರೂಪಾಯಿ ಮೌಲ್ಯದ ಆಕ್ಸೆಸರಿ, 5,000 ರೂಪಾಯಿ ಎಕ್ಸ್‌ಚೇಂಜ್ ಆಫರ್, ಹೋಂಡಾ ಗ್ರಾಹಕರಿಗೆ 5,000 ರೂಪಾಯಿ ಲಾಯಲ್ಟಿ ಬೋನಸ್ ಹಾಗೂ ಕಾರ್ಪೋರೇಟ್ ಆಫರ್ 8,000 ರೂಪಾಯಿ ನೀಡಲಾಗಿದೆ. 

ಹೋಂಡಾ ಜಾಝ್
ಹೋಂಡಾ ಜಾಝ್ ಕಾರಿಗೆ ಒಟ್ಟು 33,158 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್  10,000 ರೂಪಾಯಿ ಅಥವಾ  12,158 ರೂಪಾಯಿ ಮೊತ್ತದ ಆ್ಯಕ್ಸೆಸರಿ, 5,000 ರೂಪಾಯಿ ಕಾರು ಎಕ್ಸ್‌ಚೇಂಜ್ ಆಫರ್, ಇನ್ನು ಹೋಂಡಾ ಕಾರು ಎಕ್ಸ್‌ಚೇಂಜ್ ಮಾಡುವ ಗ್ರಾಹಕರಿಗೆ 7,00 ರೂಪಾಯಿ, ಲಾಯಲ್ಟಿ ಬೋನಸ್ 5,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಆಫರ್ ನೀಡಲಾಗಿದೆ.

ಹೋಂಡಾ  WR-V
ಹೋಂಡಾ  WR-V ಕಾರಿಗೆ ಓಟ್ಟು 26,000 ರೂಪಾಯಿ ನೀಡಲಾಗಿದೆ. ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ, ಕಾರ್ಪೋರೇಟ್ ಡಿಸ್ಕೌಂಟ್ 4,000 ರೂಪಾಯಿ, ಲಾಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ ಆಫರ್ ನೀಡಲಾಗಿದೆ. 

ಹೋಂಡಾ ಸಿಟಿ(4ನೇ ಜನರೇಶನ್)
ಹೋಂಡಾ ಸಿಟಿ ಫೋರ್ತ್ ಜನರೇಶನ್ ಕಾರಿಗೆ ಓಟ್ಟು  20,000 ರೂಪಾಯಿ ಆಫರ್ ನೀಡಲಾಗಿದೆ. ಹೋಂಡಾ ಗ್ರಾಹಕರಿಗೆ ಲಾಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ 7,000 ರೂಪಾಯಿ ಇನ್ನು ಕಾರ್ಪೋರೇಟ್ ಬೋನಸ್ 8,000 ರೂಪಾಯಿ ನೀಡಲಾಗಿದೆ. 

ಹೋಂಡಾ ಅಮೇಜ್
ಹೋಂಡಾ ಅಮೇಜ್ ಕಾರಿಗೆ ಒಟ್ಟು 15,000 ರೂಪಾಯಿ ಆಫರ್ ನೀಡಲಾಗಿದೆ. ಇದರಲ್ಲಿ ಕಾರ್ಪೋರೇಟ್ ಆಫರ್ 4,000 ರೂಪಾಯಿ, ಹೋಂಡಾ ಗ್ರಾಹಕರಿಗೆ ಲಾಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 6,000 ರೂಪಾಯಿ ಆಫರ್ ನೀಡಲಾಗಿದೆ. 

ಹೋಂಡಾ ಕಾರು ಆಫರ್ ಫೆಬ್ರವರಿ 28ರ ವರಗೆ ಅಥವಾ ಸ್ಟಾಕ್ ಮುಗಿಯುವ ವರೆಗೆ ಲಭ್ಯವಿದೆ. ಇನ್ನು ಈ ಆಫರ್ ಸ್ಟಾಕ್ ಕಾರು ಲಭ್ಯವಿರುವ ಡೀಲರ್‌ಶಿಪ್‌ ಬಳಿ ಮಾತ್ರ ಲಭ್ಯವಿದೆ. ಹೀಗಾಗಿ ಸಮೀಪದ ಡೀಲರ್‌ಶಿಪ್‌ಬಳಿ ಆಫರ್ ಪರಿಶೀಲಿಸಿ.

ಜನವರಿ ತಿಂಗಳಲ್ಲಿ ಹೋಂಡಾ ಕಾರು ಮಾರಾಟ
ಹೋಂಡಾ ಜನವರಿ ತಿಂಗಳಲ್ಲಿ ಮಾರಾಟ ಕುಸಿತ ಕಂಡಿದೆ. 2022ರ ಜನವರಿ ತಿಂಗಳಲ್ಲಿ ಹೋಂಡಾ ಶೇಕಡಾ 7.88 ರಷ್ಟು ಕುಸಿತ ಕಂಡಿದೆ. ಜನವರಿಯಲ್ಲಿ ಹೋಂಡಾ 10,427 ಕಾರು ಮಾರಾಟಗೊಂಡಿದೆ. ಕಳೆದ ವರ್ಷ ಅಂದರೆ 2021ರ ಜನವರಿ ತಿಂಗಳಲ್ಲಿ 11,319 ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಹೋಂಡಾ ಮಾರಾಟದಲ್ಲಿ ಏರಿಕೆ ಕಂಡಿದೆ. ಡಿಸೆಂಬರ್ 2021ರಲ್ಲಿ ಹೋಂಡಾ 7,973 ಕಾರು ಮಾರಾಟ ಮಾಡಿತ್ತು. ಇನ್ನು ಜನವರಿ ತಿಂಗಳಲ್ಲಿ ಹೋಂಡಾ 1,722 ಕಾರುಗಳನ್ನು ವಿದೇಶಿಗಳಿಗೆ ರಫ್ತು ಮಾಡಿದೆ.

PREV
Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ