ಎತ್ತಿನಗಾಡಿಯಲ್ಲಿ ಬಂದು 1.3 ಕೋಟಿ ರೂ ವೆಲ್‌ಫೈರ್ ಕಾರು ಖರೀದಿಸಿದ ಬೆಂಗಳೂರು ರೈತ, ವಿಡಿಯೋ

Published : Oct 13, 2025, 03:30 PM IST
farmer buys vellfire

ಸಾರಾಂಶ

ಎತ್ತಿನಗಾಡಿಯಲ್ಲಿ ಬಂದು 1.3 ಕೋಟಿ ರೂ ವೆಲ್‌ಫೈರ್ ಕಾರು ಖರೀದಿಸಿದ ಬೆಂಗಳೂರು ರೈತ, ವಿಡಿಯೋ ವೈರಲ್ ಆಗುತ್ತಿದೆ. ಈ ಕುರಿತು ಖುದ್ದು ವಿಡಿಯೋ ಹರಿಬಿಟ್ಟಿರುವ ಈ ರೈತ, ಇದೀಗ ಬೆಂಗಳೂರಿನಲ್ಲಿ ಭಾರಿ ಸೆನ್ಸೇಶನ್ ಸೃಷ್ಟಿಸಿದ್ದಾನೆ.

ಬೆಂಗಳೂರು (ಅ.13) ರೈತರು ಕಾರು ಖರೀದಿಸಿ ಸಂಭ್ರಮಿಸಿದ ಹಲವು ವಿಡಿಯೋಗಳು ಭಾರಿ ವೈರಲ್ ಆಗಿದೆ. ರೈತರು ತಮ್ಮ ಬೆಳೆ ಹಣದಲ್ಲಿ ದುಬಾರಿ ಕಾರುಗಳನ್ನು ಖರೀದಿಸಿದ ಉದಾಹರಣೆಗಳೂ ಇವೆ. ಆದರೆ ಬೆಂಗಳೂರಿನ ರೈತನೊಬ್ಬ ಬರೋಬ್ಬರಿ 1.3 ಕೋಟಿ ರೂಪಾಯಿ (ಎಕ್ಸ್ ಶೋ ರೂಂ) ಕಾರು ಖರೀದಿಸಲು ಎತ್ತಿನ ಗಾಡಿಯಲ್ಲಿ ಆಗಮಿಸಿ ಭಾರಿ ಸದ್ದು ಮಾಡಿದ್ದಾನೆ. ಮನೆಯಿಂದ ಎತ್ತಿನ ಗಾಡಿ ಮೂಲಕ ಶೋ ರೂಂಗೆ ಆಗಮಿಸಿದ ರೈತ, ಪೇಪರ್ ವರ್ಕ್ ಪೂರೈಸಿ ಕಾರು ಡೆಲಿವರಿ ಪಡೆದುಕೊಂಡಿದ್ದಾನೆ. ಖುದ್ದು ರೈತ ಈ ವಿಡಿಯೋ ಪೋಸ್ಟ್ ಮಾಡಿದ್ದು ಇದೀಗ ಭಾರಿ ಚರ್ಚೆಯಾಗುತ್ತಿದೆ.

ರೈತ ಎಸ್ಎಸ್ಆರ್ ಸಂಜು ಸಾಧನೆ

ಬೆಂಗಳೂರಿನ ರೈತ ಎಸ್ಎಸ್ಆರ್ ಸಂಜು ಖುದ್ದು ವಿಡಿಯೋ ಪೋಸ್ಟ್ ಮಾಡಿದ್ದಾನೆ. ಶ್ರೀಮಂತ ರೈತ ಎಂದೇ ಗುರುತಿಸಿಕೊಂಡಿರುವ ಈತ ಮನೆಯಿಂದ ಎತ್ತಿನ ಗಾಡಿಯಲ್ಲಿ ಟೊಯೋಟಾ ಡೀಲರ್ ಬಳಿ ಆಗಮಿಸಿದ್ದಾನೆ. ಖುದ್ದು ಎತ್ತಿನ ಹಾಡಿ ಹೊಡೆಯುತ್ತಾ ಶೋ ರೂಂಗೆ ಆಗಮಿಸಿದ ಎಸ್ಎಸ್ಆರ್ ಸಂಜುವನ್ನು ಸಿಬ್ಬಂದಿಗಳು ಬರ ಮಾಡಿಕೊಂಡಿದ್ದಾರೆ. ಬಳಿಕ ವಾಹನದ ಪೇಪರ್ ಪ್ರಕ್ರಿಯೆ ಮುಗಿಸಿದ್ದಾರೆ. ಕೀ ನೀಡಿ, ಟೊಯೋಟಾ ವೆಲ್‌ಫೈರ್ ಕಾರು ಹಸ್ತಾಂತರಿಸಿದ್ದಾರೆ.

1.30 ಕೋಟಿ ರೂಪಾಯಿ ಮೌಲ್ಯದ ಟೊಯೋಟಾ ವೆಲ್‌ಫೈರ್ ಕಾರು

ರೈತ ಎಂದು ಹೇಳಿಕೊಂಡಿರುವ ಎಸ್ಎಸ್ಆರ್ ರಾಜು ಖರೀದಿಸಿದ ಕಾರು ಟೋಯೋಟಾ ವೆಲ್‌ಫೈರ್ ಕಾರು. ಇದು ಅತ್ಯಂತ ಐಷಾರಾಮಿ ಕಾರು. ಸೆಲೆಬ್ರೆಟಿಗಳು, ರಾಜಕಾರಣಿಗಳು, ಉದ್ಯಮಿಗಳು ಹೆಚ್ಚಾಗಿ ಈ ಕಾರು ಖರೀದಿಸುತ್ತಾರೆ. ಆರಾಮಾದಾಯಕ ಪ್ರಯಾಣ, ಅದೆಷ್ಟೆ ದೂರ ಪ್ರಯಾಣ ಮಾಡಿದರೂ ಆಯಾಸವಾಗದೇ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ಸೆಲೆಬ್ರೆಟಿಗಳು ಈ ಕಾರನ್ನು ಕ್ಯಾರಾವಾನ್ ರೀತಿ ಬಳಸುತ್ತಾರೆ. ಈ ವೆಲ್‌ಫೈರ್ ಕಾರಿನ ಆರಂಭಿಕ ಬೆಲೆ 1.20 ಕೋಟಿ ರೂಪಾಯಿ (ಎಕ್ಸ್ ಶೋ ರೂಂ), ಟಾಪ್ ಮಾಡೆಲ್ ಬೆಲೆ 1.30 ಕೋಟಿ ರೂಪಾಯಿ (ಎಕ್ಸ್ ಶೋ ರೂಂ). ಆನ್‌ರೋಡ್ ಬೆಲೆ 1.6 ಕೋಟಿ ರೂಪಾಯಿಗೂ ಅಧಿಕವಾಗಲಿದೆ.

ಸಂಜು ಬಳಿ ಇದೆ ಹಲವು ಐಷಾರಾಮಿ ಕಾರು

ಎಸ್ಎಸ್ಆರ್ ಸಂಜು ರೈತ ಎಂದು ಹೇಳಿಕೊಂಡಿದ್ದಾನೆ. ಆದರೆ ಸಂಜು ಬಳಿ ಹಲವು ಐಷರಾಮಿ ಕಾರುಗಳಿವೆ. ಜಾಗ್ವಾರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 10ಕ್ಕೂ ಹೆಚ್ಚು ದುಬಾರಿ ಕಾರುಗಳಿವೆ. ಸಂಜು ಅಪಾರ ಜಮೀನು ಹೊಂದಿದ್ದು, ಹಲವು ಬೆಳೆ ಬೆಳೆಯುತ್ತಿದ್ದಾರೆ. ಇಷ್ಟೇ ಅಲ್ಲ ಪಾರಂಪರಿಕವಾಗಿ ಶ್ರೀಮಂತವಾಗಿರುವ ಸಂಜು, ಇದೀಗ ವೆಲ್‌ಫೈರ್ ಕಾರು ಖರೀದಿಸಿ ಎಲ್ಲರ ಹುಬ್ಬೇರಿಸಿದ್ದಾರೆ.ಸಂಜು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಬಾರಿ ಸದ್ದು ಮಾಡುತ್ತಿದೆ.

ಟೊಯೋಟಾ ವೆಲ್‌ಫೈರ್ ಕಾರು

ಟೋಯೋಟಾ ವೆಲ್‌ಫೈರ್ ಅತೀ ಹೆಚ್ಚು ಸ್ಥಳವಕಾಶ ಹೊಂದಿರುವ ಐಷಾರಾಮಿ ಕಾರು. 2487 ಸಿಸಿ ಹೊಂದಿರುವ ಈ ಕಾರು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಮೂರು ಬಣ್ಣದಲ್ಲಿ ಈ ಕಾರು ಲಭ್ಯವಿದೆ. ಜಿಎೆಸ್‌ಟಿ ಕಡಿತದ ಬಳಿಕ ವೆಲ್‌ಫೈರ್ ಕಾರಿಗೆ 2.37 ಲಕ್ಷ ರೂಪಾಯಿ ಕಡಿತಗೊಂಡಿದೆ. ಈ ಕಾರಿನ ವೈಟಿಂಗ್ ಪಿರೀಯೆಡ್ ಭಾರತದಲ್ಲಿ10 ರಿಂದ 14 ತಿಂಗಳು. ಅಡಾಸ್ ಫೀಚರ್, 6 ಏರ್‌ಬ್ಯಾಗ್, ಎಬಿಎಸ್, ಎಬಿಡಿ, ಹಿಲ್ ಹೋಲ್ಡ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ. ಆಕರ್ಷಕ ವಿನ್ಯಾಸ, ಐಷಾರಾಮಿ ಪ್ರಯಾಣ ಹಾಗೂ ಡ್ರೈವಿಂಗ್‌ಗೆ ಈ ಕಾರು ಉತ್ತಮವಾಗಿದೆ. ಹಲವು ಸಿನಿಮಾ ನಟರು, ರಾಜಕಾರಣಿಗಳು ಈ ಕಾರು ಬಳಸುತ್ತಿದ್ದಾರೆ. 

 

PREV
Read more Articles on
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್