
ಭಾರತೀಯ ಮಾರುಕಟ್ಟೆಗೆ Renault India ತನ್ನ ಹೊಸ ಕಾರ್ Renault Duster Strong Hybrid E-Tech 160 ಲಾಂಚ್ ಮಾಡಿದೆ. ಕಂಪನಿಯು ಈ SUV ಜೊತೆಯಲ್ಲಿ ಮೊದಲ ಬಾರಿಗೆ ತನ್ನ ಸ್ಟ್ರಾಂಗ್ ಹೈಬ್ರಿಡ್ ಟೆಕ್ನಾಲಜಿಯನ್ನು ತೆಗೆದುಕೊಂಡು ಬಂದಿದೆ. ಈ ಕಾರ್ Evolution, Techno ಮತ್ತು Emotion ಎಂಬ ಮೂರು ವೇರಿಯಂಟ್ಗಳಲ್ಲಿ ಗ್ರಾಹಕರಿಗೆ ಸಿಗಲಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ Renault ಕಂಪನಿ ಈ ಹೊಸ Duster ಮಾರುಕಟ್ಟೆಗೆ ತೆಗೆದುಕೊಂಡು ಬಂದಿದೆ. ಬೆಸ್ಟ್ ಫರ್ಮಾಮೆನ್ಸ್ ಜೊತೆ ಅತ್ಯಧಿಕ ಮೈಲೇಜ್ ನೀಡುವ ಗುರಿಯೊಂದಿಗೆ ಈ Duster ತೆಗೆದುಕೊಂಡು ಬರಲಾಗಿದೆ.
Renault Duster Strong Hybrid E-Tech 160 ಕಾರ್ 1.8 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಇಂಜಿನ್ ಜೊತೆ ಎರಡು ಎಲೆಕ್ಟ್ರಿಕ್ ಮೋಟಾರ ಮತ್ತು 1.4 kWh ಬ್ಯಾಟರಿ ಬ್ಯಾಕಪ್ ನೀಡಲಾಗಿದೆ. ಈ ಸಿಸ್ಟಮ್ ಒಟ್ಟಾರೆಯಾಗಿ 160 PS ಪವರ್ ನೀಡುತ್ತದೆ. ಈ ಎಸ್ಯುವಿ ಮತ್ತೊಂದು ವಿಶೇಷತೆ ಏನಂದ್ರೆ ಚಾರ್ಜಿಂಗ್ ಮಾಡಲು ಪ್ರತ್ಯೇಕ ಚಾರ್ಜಿಂಗ್ ಸ್ಟೇಷನ್ ಅಥವಾ ಪ್ಲಗ್ ಅಗತ್ಯವಿಲ್ಲ.
ಇದು ಪ್ಲಗ್-ಇನ್ ಹೈಬ್ರಿಡ್ ಕಾರ್ಗಿಂತ ವಿಭಿನ್ನವಾಗಿದ್ದು, ವಾಹನ ಚಲಿಸುವಾಗಲೇ ಬ್ಯಾಟರಿಯು ಆಟೋಮೆಟಿಕ್ ಆಗಿ ಚಾರ್ಜ್ ಆಗುತ್ತದೆ. ಬ್ರೇಕ್ ಹಾಕುವ ಮತ್ತು ಚಲಿಸುವ ಸಮಯದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನು ಬಳಸಿಕೊಂಡು ಬ್ಯಾಟರಿ ಚಾರ್ಜ್ ಮಾಡಲಾಗುತ್ತದೆ. ಈ ವ್ಯವಸ್ಥೆಯಿಂದಾಗಿ ಚಾಲಕರಿಗೆ ವಿದ್ಯುತ್ ಮತ್ತು ಪೆಟ್ರೋಲ್ ತಂತ್ರಜ್ಞಾನದ ಲಾಭ ನೀಡುತ್ತದೆ.
ಹೊಸ Duster Strong Hybrid E-Tech 160 ARAI ಕಾರ್ 29 kmpl ಮೈಲೇಜ್ ನೀಡುತ್ತದೆ ಎಂದು Renault ಹೇಳಿಕೊಂಡಿದೆ. ಕಂಪನಿಯ ಪ್ರಕಾರ, ನಗರ ಪ್ರದೇಶದ ಸಾಮಾನ್ಯದ ದಿನಗಳಲ್ಲಿ ಶೇ.80ರವರೆಗಿನ ಪ್ರಯಾಣವನ್ನು ಇಲೆಕ್ಟ್ರಿಕ್ ಮೋಡ್ನಲ್ಲಿ ಮಾಡಬಹುದು. ಈ ವ್ಯವಸ್ಥೆ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಇದರಲ್ಲಿ Formula 1 ಇನ್ಸ್ಪೈರ್ಡ್ Multi-mode automatic transmission ಒಳಗೊಂಡಿದೆ. ಎರಡು ಎಲೆಕ್ಟ್ರಿಕ್ ಗೇರ್ ಮತ್ತು ನಾಲ್ಕು ಪೆಟ್ರೋಲ್ ಗೇರ್ಗಳನ್ನು ಈ ಎಸ್ಯುವಿ ಹೊಂದಿದೆ. ಡೀಸೆಲ್ ಕಾರಿಗೆ ಹೋಲಿಸಿದರೆ 29% ವರೆಗೆ ಇಂಧನನ್ನು ಸೇವ್ ಮಾಡಬಹುದು.
Evolution Strong Hybrid E-Tech 160: 16.99 ಲಕ್ಷ ರೂಪಾಯಿ
Techno Strong Hybrid E-Tech 160: 18.99 ಲಕ್ಷ ರೂಪಾಯಿ
Emotion Strong Hybrid E-Tech 160: 19.49 ಲಕ್ಷ ರೂಪಾಯಿ
ಇದನ್ನೂ ಓದಿ: Xtreme 160R 4V ದುಬಾರಿ ಬೆಲೆ ಬೈಕ್ಗಳಿಗೆ ಟಕ್ಕರ್ ಕೊಡೋಕೆ ಅಖಾಡಕ್ಕೆ ಬಂತು ನ್ಯೂ ಟೂ ವ್ಹೀಲರ್; ಹೈ ಫೀಚರ್ಸ್