Published : Feb 17, 2023, 06:55 AM ISTUpdated : Feb 17, 2023, 02:49 PM IST

Karnataka Budget 2023: ಬಜೆಟ್ ಮಂಡನೆ ಮುಗಿಸಿದ ಸಿಎಂ, ಸೋಮವಾರಕ್ಕೆ ಕಲಾಪ ಮುಂದೂಡಿಕೆ

ಸಾರಾಂಶ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡಿರುವ ಸಿಎಂ ಬೊಮ್ಮಾಯಿ, ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ನೀಡುವ ಜೊತೆಗೆ ಹಲವೆಡೆ ವಿದ್ಯಾರ್ಥಿಗಳಿಗೆ ವಿಶೇಷ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಚಿಕ್ಕಮಗಳೂರಿನ ಬಹು ದಿನಗಳ ಬೇಡಿಕೆಯಾದ ಪ್ರತ್ಯೇಕ ವಿಶ್ವವಿದ್ಯಾಲಯ ಘೋಷಿಸಿದ ಸಿಎಂ, ತುಮಕೂರಿಗೆ ತೋಟಗಾರಿಕಾ ವಿಶ್ವವಿದ್ಯಾಲಯವನ್ನು ಘೋಷಿಸಿದ್ದಾರೆ. ಮೋದಿಯಂತೆ ಸಿಎಂ ಬೊಮ್ಮಾಯಿ ಸಹ ರೈತರ ಸ್ವಾವಲಂಬನೆಗೆ ತಂತ್ರಜ್ಞಾನದ ಮೊರೆ ಹೋಗಿದ್ದು, ಕೃಷಿ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಗೆ ಅಲ್ಪ ಮಟ್ಟದ ಅನುದಾನ ಮೀಸಲಿಟ್ಟಿದ್ದಾರೆ. ನೀರಾವರಿ ಯೋಜನೆಗಳನ್ನು ಕಡೆಗಣಿಸಿದ ಹಾವೇರಿ ಮೂಲದ ಬೊಮ್ಮಾಯಿ, ಉತ್ತರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಕೆಲವು ನೀರಾವರಿ ಯೋಜನೆಗಳಿಗೆ ಅಲ್ಪ ಮಟ್ಟದ ಅನುದಾನವನ್ನು ಮೀಸಲಿಟ್ಟಿದ್ದಾರೆ.  ಈ ಬಾರಿಯ ಕರ್ನಾಟಕ ಬಜೆಟ್ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

Karnataka Budget 2023: ಬಜೆಟ್ ಮಂಡನೆ ಮುಗಿಸಿದ ಸಿಎಂ, ಸೋಮವಾರಕ್ಕೆ ಕಲಾಪ ಮುಂದೂಡಿಕೆ

02:49 PM (IST) Feb 17

ಕಾಂಗ್ರೆಸ್ಸಿಗರ ಕಿವಿಯಲ್ಲಿ ಹೂವು: ಕೀಳು ಮಟ್ಟದ ರಾಜಕೀಯ

ಉಡುಪಿ: ಬಜೆಟ್ ಮಂಡನೆ ಸಂದರ್ಭದಲ್ಲಿ ಕಿವಿಗೆ ಹೂವು ಇಟ್ಟು ಹೋದ ಸಿದ್ದರಾಮಯ್ಯ ಡಿಕೆಶಿ. ಸಿದ್ದರಾಮಯ್ಯ ಡಿಕೆಶಿ ಬಾಲಿಶವಾದ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ. ವಿರೋಧ ಪಕ್ಷವಾಗಿ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಇಂದು ನಡೆದಿರೋದು ಕಾಂಗ್ರೆಸ್ ನ ಸಣ್ಣತನದ ಪ್ರದರ್ಶನ. ಮುಂದಿನ ಚುನಾವಣೆಯಲ್ಲಿ ಜನ ಇವರ ಎರಡು ಕಿವಿಗೆ ಹೂ ಇಡುತ್ತಾರೆ. ಎರಡು ಕಿವಿಗೆ ಹೂ ಇಟ್ಟು ಮಂಡೆ ಬೋಳಿಸಿ ನಾಮ ಹಾಕುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಸದನಕ್ಕೆ ಗೌರವ ಹೇಗೆ ಕೊಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಬಾಲಿಶವಾದ ನಡತೆಯಿಂದ ಕಾಂಗ್ರೆಸ್ ಸದನದಲ್ಲಿ ಬೆತ್ತಲಾಗಿದೆ. ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಹೇಳಿಕೆ

02:28 PM (IST) Feb 17

ಬೊಮ್ಮಾಯಿ.

2023_24 ರ ಬಜೆಟ್ ಮಂಡನೆ ಮಾಡಿದ್ದೇನೆ ಕೋವಿಡ್ ಕಾಲದಲ್ಲಿ ಆರ್ಥಿಕ  ಹಿಂಜರಿತ ಉಂಟಾಗಿತ್ತು. ಆರ್ಥಿಕ ತಜ್ಞರು ಕರ್ನಾಟಕ ಬಜೆಟ್ ಹಳಿಗೆ ಬರಲು ಐದಾರು ವರ್ಷ ಬೇಕು ಅಂತಾ ಹೇಳಿದ್ರು. ಆದ್ರೆ ಕೇವಲ ಎರಡೇ ವರ್ಷ ದಲ್ಲಿ ಸುಧಾರಣೆ ಆಗಿದೆ. ರೆವಿನ್ಯೂ ಎಕ್ಸಪೆಂಡಿಚರ್ ಅನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವ ಸರ್ಕಾರ ಕೂಡಾ ಮಾಡಿರಲಿಲ್ಲ. ಕಳೆದ ಬಾರಿ ಘೋಷಣೆ ಮಾಡಿದ್ದರಲ್ಲಿ ಶೇ 90 ರಷ್ಟು ಸರ್ಕಾರಿ ಆದೇಶಗಳಾಗಿವೆ. ಇನ್ನೂ ಕೆಲವು ಅನುಷ್ಟಾನ ಆಗೋದರಲ್ಲಿ ಇವೆ.

02:03 PM (IST) Feb 17

3,22,000 ಕೋಟಿ ಸಾಲ ಹೆಚ್ಚಾಗಿದೆ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಿಯಾಕ್ಷನ್!

ಒಟ್ಟು ಸಾಲ 5,64,896 ಕೋಟಿ ಆಗತ್ತೆ ಅಂತ ಅವರೇ ಹೇಳಿದ್ದಾರೆ. ಈ ವರ್ಷದ ಅಂತ್ಯಕ್ಕೆ. ನಾನು ಬಿಟ್ಟಾಗ 2,47000 ಕೋಟಿ ಇತ್ತು. 3,22,000 ಕೋಟಿ ಸಾಲ ಹೆಚ್ಚಾಗಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ 41914  ಕೋಟಿ ಸಾಲ ಮಾಡಲಾಗಿತ್ತು. ನಾಲ್ಕು ವರ್ಷದಲ್ಲಿ 2,54,760 ಕೋಟಿ ಬಿಜೆಪಿ ಸರ್ಕಾರ ಸಾಲ ಮಾಡಿದೆ. 1,16,512 ಕೋಟಿ ಸಾಲ ನಾವು ಐದು ವರ್ಷದಲ್ಲಿ ಸಾಲ ಮಾಡಿದ್ವಿ. ಇವ್ರು 2,54,760 ಕೋಟಿ ಸಾಲ ಮಾಡಿದ್ದಾರೆ ನಾಲ್ಕು ವರ್ಷಕ್ಕೆ. ಇವ್ರು ರಾಜ್ಯವನ್ನ ಸಾಲದ ಸುಳಿಗೆ ಸಿಲುಕಿಸಿದ್ದಾರೆ. 34 ಸಾವಿರ ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ. ಇವ್ರು ಯದ್ವಾ ತದ್ವಾ ಸಾಲ ಮಾಡಿ.ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ. ಕೊಟ್ಟ ಭರವಸೆ ಈಡೇರಿಸಿಲ್ಲ. ಸಾಲ ಹೆಚ್ಚು ಮಾಡಿದ್ದಾರೆ. ಹೆಚ್ಚು ಬಡ್ಡಿ ಕಟ್ಡಿದ್ದರೆ ಅಭಿವೃದ್ಧಿ ಆಗುವುದಿಲ್ಲ. 77,750 ಕೋಟಿ ಮುಂದಿನ ವರ್ಷ ಸಾಲ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಾಲದ ಪ್ರಮಾಣ 95% ಹೆಚ್ಚಳ ಆಗತ್ತೆ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ಹೇಗಾಗುತ್ತದೆ? ಮಕ್ಕಳನ್ನ ಸಾಕುವ ಜವಾಬ್ದಾರಿ ಇಲ್ಲದೇ ಇದ್ದರೂ, ಎಷ್ಟು ಮಕ್ಕಳಾದ್ರೂ ಆಗಲೀ ಎಂಬಂತಿದೆ ಈ ಬಜೆಟ್. ಅನುಷ್ಠಾನಗೊಳಿಸುವ ಇಚ್ಚಾಶಕ್ತಿ ಇಲ್ಲದೇ ಇದ್ದರೆ, ಎಷ್ಟು ಬೇಕಾದ್ರೂ ಭರವಸೆ ಕೊಡಬಹುದು. ಈ ಸರ್ಕಾರದಲ್ಲಿ ಇದೇ ಆಗುತ್ತಿದೆ. ಯಾವಾಗಲೂ ಚುನಾಯಿತ ಸರ್ಕಾರ ಪಾರದರ್ಶಕ ಹಾಗೂ ಜನರಿಗೆ ಉತ್ತರದಾಯಿತ್ವ ಆಗಿರಬೇಕು. ಮತದಾರರಿಂದ ಯಾವುದನ್ನೂ ಮುಚ್ಚಿಡಲು ಹೋಗಬಾರದು

01:55 PM (IST) Feb 17

ಚಿಕ್ಕಮಗಳೂರು ಜಿಲ್ಲೆಗೆ ಹೊಸ ವಿವಿ

ಚಿಕ್ಕಮಗಳೂರು ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಂಪರ್‌ ಘೋಷಣೆ ಮಾಡಿದ್ದಾರೆ. ಹೊಸ ವಿಶ್ವವಿದ್ಯಾಲಯವನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದರೆ, ತುಮಕೂರಿನಲ್ಲಿ ಹೊಸ ಪಾಲಿಟೆಕ್ನಿಕ್‌ ಕಾಲೇಜು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹೊಸ ವಿವಿ, ತುಮಕೂರಿನಲ್ಲಿ ಹೊಸ ಪಾಲಿಟೆಕ್ನಿಕ್‌ ಕಾಲೇಜು!

01:39 PM (IST) Feb 17

ನೀರಾವರಿಗೆ 11,236 ಕೋಟಿ ಕೊಡುಗೆ

ನೀರಾವರಿಗೆ ಆದ್ಯತೆ ದೃಷ್ಟಿಯಿಂದ 2022-23ನೇ ಸಾಲಿನಲ್ಲಿ 11,236 ಕೋಟಿ ರೂ. ಮೊತ್ತದ 38 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ವತಿಯಿಂದ 1.5 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಸೃಜಿಸಲಾಗುವುದು.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

 

 

01:22 PM (IST) Feb 17

ಮೈಕ್ರೋ ಸ್ಮಾಲ್ ಇಂಡಸ್ಟ್ರಿಗೆ ಕೊಡಲಿಲ್ಲ ಒತ್ತು: ಎಫ್ ಕೆಸಿಸಿಐ ಅಧ್ಯಕ್ಷ ಗೋಪಾಲರೆಡ್ಡಿ

ಬೊಮ್ಮಾಯಿ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲರೆಡ್ಡಿ ಪತ್ರಿಕಾಗೋಷ್ಠಿ

ರಾಜ್ಯ ಬಜೆಟ್‌ಗೆ ಸ್ವಾಗತ. ಅಗ್ರಿಕಲ್ಚರ್, ರೂರಲ್ ಡೆವಲಪ್ಮೆಂಟ್ ಗೆ ಒತ್ತುಕೊಟ್ಟಿದ್ದಾರೆ. ಮಹಿಳಾ ಸಬಲೀಕರಣಕ್ಕೂ ಆದ್ಯತೆ ನೀಡಿದ್ದಾರೆ. ಬೆಂಗಳೂರು ರಿಂಗ್ ರಸ್ತೆ, ಮೆಟ್ರೋಗೆ ಹಣ ನೀಡಿರೋದು ಸ್ವಾಗತಾರ್ಹ. ಪ್ರೊಫೆಷನಲ್ ಟ್ಯಾಕ್ಸ್ 30 ಸಾವಿರದ ಲಿಮಿಟ್ ಕೇಳಿದ್ವಿ. 25 ಸಾವಿರಕ್ಕೆ ಏರಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಮೈಕ್ರೋ ಸ್ಮಾಲ್ ಇಂಡಸ್ಟ್ರೀಸ್ ಗೆ ಒತ್ತುಕೊಡಲು ಕೇಳಿದ್ವಿ. ಎಪಿಎಂಸಿ ಒಳಗೆ ಹೊರಗೆ ಬೇರೆ ಕಾನೂನು ಇದೆ. ಇದನ್ನ ಸರಿಪಡಿಸೋಕೆ ಕೇಳಿಕೊಂಡಿದ್ವಿ. ಈ ಎರಡೂ ವಿಚಾರ ಪ್ರಸ್ತಾಪ ಆಗಿಲ್ಲ ಹೀಗಾಗಿ ಸ್ವಲ್ಪ ಬೇಸರ ಇದೆ. ನಮ್ಮ ಒಟ್ಟು 8 ಬೇಡಿಕೆ ಇಟ್ಟಿದ್ವಿ ಇದರಲ್ಲಿ 4 ಬೇಡಿಕೆ ಈಡೇರಿದೆ. ಇದು ಚುನಾಚಣೆ ಮುಂದಿಟ್ಟುಕೊಂಡ ಬಜೆಟ್ ಅನ್ನೋದು ಗೊತ್ತಾಗ್ತಿದೆ. ಬೆಂಗಳೂರು ಟ್ರಾಫಿಕ್, ವೈಟ್ ಟಾಪಿಂಗ್ ಗೆ ಒತ್ತುಕೊಟ್ಟಿದ್ದಾರೆ ಇದು ಸ್ವಾಗತಾರ್ಹ.

.

01:17 PM (IST) Feb 17

ಕಿವಿ ಮೇಲೆ ಹೂ ಇಡುವ ಬಜೆಟ್: ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್ ಹೇಳಿಕೆ,

ಈ ಬಜೆಟ್ ಬಗ್ಗೆ ಈಗಾಗಲೇ ಹೇಳಿದ್ದಾರೆ. ಕಿವಿ ಮೇಲೆ ಹೂ ಇಡುವ ಬಜೆಟ್. ಇದು ಚುನಾವಣಾ ಬಜೆಟ್. ಕಳೆದ‌ಬಾರಿ ನೋಡಿದ್ರೆ ಯಾವುದೂ ಜಿಓ ಇಂಪ್ಲಿಮೆಂಟ್ ಆಗಿಲ್ಲ. ಕಳೆದ ವರ್ಷ ಘೋಷಿಸಿದ ಬಜೆಟ್ ಇಂಪ್ಲಿಮೆಂಟ್ ಆಗದೆ, ಈ ಬಜೆಟ್ ಹೇಗೆ ಜಾರಿಗೆ ಬರಲಿದೆ.. ಮುಂದೆ ಸರ್ಕಾರ ಯಾವುದು ಬರುತ್ತೋ, ಅವರು ಬಜೆಟ್ ಮಂಡಿಸ್ತಾರೆ. ಇದನ್ನ ನಾವು ಸಂಪೂರ್ಣ ತಿರಸ್ಕರಿಸ್ತೇವೆ. ಇದು ಯಾವುದೂ ಕೂಡ ಅನುಷ್ಠಾನ ಆಗುವುದಿಲ್ಲ. ಬಿಜೆಪಿ ವ್ಯರ್ಥ ಪ್ರಯತ್ನ ಮಾಡಿದೆ.

01:13 PM (IST) Feb 17

ಬೆಂಗಳೂರು ಸಮಗ್ರ ಅಭಿವೃದ್ಧಿ ಭರ್ಜರಿ ಕೊಡುಗೆ..

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 13,139 ಕೋಟಿ ರೂ. ವೆಚ್ಚದಲ್ಲಿ 288 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್​ರೋಡ್ ನಿರ್ಮಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ.ಅದಲ್ಲದೇ 150 ಕೋಟಿ ರೂ. ವೆಚ್ಚದಲ್ಲಿ 75 ಜಂಕ್ಷನ್‌ ಅಭಿವೃದ್ಧಿಪಡಿಸಲಾಗುವುದು.ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಸುತ್ತಮುತ್ತ ರಸ್ತೆ ಅಭಿವೃದ್ಧಿ, ಟ್ರಾಫಿಕ್‌ ಕಂಟ್ರೋಲ್‌ಗೆ 300 ಕೋಟಿ ರೂ. ಅನುದಾನವನ್ನು ನೀಡಲಾಗಿದೆ.

01:04 PM (IST) Feb 17

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಎಚ್ಚರಿಕೆ

ರಾಯಚೂರು: ಬಜೆಟ್ ನಲ್ಲಿ ಜಿಲ್ಲೆಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆಗೆ ಖಂಡನೆ. ಕೇಳಿದ್ದು ಏಮ್ಸ್ ನೀಡಿದ್ದು ಮಾದರಿ ಆಸ್ಪತ್ರೆ. ಮಾತು ತಪ್ಪಿದ ಸಿಎಂ ಬಸವರಾಜ ಬೊಮ್ಮಾಯಿ. ನಗರದಲ್ಲಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ ಆಕ್ರೋಶ. ನಮಗೆ ಏಮ್ಸ್ ಮಾದರಿ ಬೇಡ, ಸರ್ಕಾರ ಘೋಷಣೆ ತಿರಸ್ಕಾರ. ನಗರದಲ್ಲಿ 281 (31 ದಿನ ಸರದಿ ಉಪವಾಸ) ದಿನಗಳಿಂದ ನಡೆಯುತಿರುವ ಹೋರಾಟಕ್ಕೆ ಬೆಲೆ ನೀಡದ ಸರ್ಕಾರ. ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಎಚ್ಚರಿಕೆ ನೀಡಿದ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ.

12:59 PM (IST) Feb 17

ಬಜೆಟ್ ಮಂಡನೆ ಮುಗಿಸಿದ ಸಿಎಂ

2 ಗಂಟೆ 35 ನಿಮಿಷಗಳ ಕಾಲ‌ ಬಜೆಟ್ ಓದಿದ ಸಿಎಂಗೆ ಕಿವಿಯಲ್ಲಿ ಹೂ ಹಿಡಿದುಕೊಂಡು ಸಿಎಂ ಬಳಿಗೆ ಹೋಗಿ ಬೊಮ್ಮಾಯಿಗೆ ಶುಭಾಶಯ ಹೇಳಿದ ಡಿ ಕೆ ಶಿವಕುಮಾರ್. ಭಾರತ್ ಮಾತಾಕೀ ಜೈ ಘೋಷಣೆ ಹಾಕಿದ ಬಿಜೆಪಿ ಶಾಸಕರು. ಸೋಮವಾರ 10-30 ಕ್ಕೆ ಸದನ ಮುಂದೂಡಿಕೆ.ಸಿಎಂ ಗೆ ಅಭಿನಂದನೆ ಸಲ್ಲಿಸಿದ ಸಚಿವರು, ಶಾಸಕರು

 

12:52 PM (IST) Feb 17

ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ 10,000ಕ್ಕೆ ಏರಿಕೆ

ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಯೋಜನೆ. ಗೃಹಿಣಿಯರಿಗೆ ತಿಂಗಳಿಗೆ 500 ರೂ. ಗಳ ಸಹಾಯಧನ. ರಾಜ್ಯದಲ್ಲಿ ಗೃಹಿಣಿ ಶಕ್ತಿ ಯೋಜನೆ ಶೀಘ್ರದಲ್ಲೇ ಜಾರಿ. ಆ‍್ಯಸಿಡ್‌ ದಾಳಿ ಸಂತ್ರಸ್ಥರಿಗೆ ಮಾಶಾಸನ 10,000ಕ್ಕೆ ಏರಿಕೆ.

12:43 PM (IST) Feb 17

ಆರೋಗ್ಯ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಸಿಕ್ಕಿದ್ದೇನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  2023-24ನೇ ಸಾಲಿನ ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದಾರೆ.ಬೆಂಗಳೂರಿನಲ್ಲಿ ಒಟ್ಟು 243 ವಾರ್ಡ್ ಗಳಲ್ಲಿ 27 ಸ್ಮಾರ್ಟ್ ವರ್ಚ್ಯುವಲ್ ಕ್ಲಿನಿಕ್ ಗೆ ಅನುಮೋದನೆ ನೀಡಲಾಗಿದ್ದು ಹೆಲ್ತ್ ಸಿಸ್ಟಮ್ಸ್ ಅನ್ನು ಪುನರಚನೆ ಮಾಡಲು ನಿರ್ಧರಿಸಲಾಗಿದೆ.ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು.


 

12:36 PM (IST) Feb 17

ಉತ್ತರ ಕರ್ನಾಟಕಕ್ಕೆ ಮತ್ಸ್ಯಘಮ, ಮೀನುಗಾರಿಕೆ ದೋಣಿಗೆ ಹಣ!

ರಾಜ್ಯದ ಮೀನುಗಾರರಿಗೆ ನೆರವಾಗುವ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಅದರಂತೆ ಹಾವೇರಿಯಲ್ಲಿ ಮೀನು ಪಾಲನಾ ಕೇಂದ್ರ ಹಾಗೂ ಬೈಂದೂರಿನಲ್ಲಿ ಸೀಫುಡ್‌ ಪಾರ್ಕ್‌ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಮತ್ಸ್ಯಘಮ

 



 

12:21 PM (IST) Feb 17

ಕಿವಿ ಮೇಲೆ ಹೂವಿಟ್ಟು ಸಿಎಂ ಬಜೆಟ್‌ಗೆ ವಿರೋಧಿಸಿದ ಕಾಂಗ್ರೆಸ್ಸಿಗರು

ಸಿಎಂ ಬೊಮ್ಯಾಯಿ ಕಳೆದ ಬಜೆಟ್‌ನಲ್ಲಿ ನೀಡಿದ ಭರವಸೆಗಳನ್ನೇ ಈಡೇರಿಸಿಲ್ಲ. ಇದೀಗ ಮತ್ತೊಂದು ಸುಳ್ಳು ಯೋಜನೆಗಳ ಬಜೆಟ್ ಮಂಡಿಸುತ್ತಿದ್ದಾರೆಂದು, ಕಾಂಗ್ರೆಸ್ಸಿಗರು ಸದನಕ್ಕೆ ಕಿವಿ ಮೇಲೆ ಹೂವಿಟ್ಟುಕೊಂಡು ಬಂದದ್ದು, ವಿಶೇಷವಾಗಿತ್ತು. 

12:16 PM (IST) Feb 17

ತೆರಿಗೆ ಮತ್ತು ಆಯವ್ಯಯ ಅಂದಾಜು ಹೇಗಿರಲಿದೆ?

 

12:13 PM (IST) Feb 17

110 ಹಳ್ಳಿಗಳಿಗೆ ಕಾವೇರಿ ನೀರು ಲಭ್ಯ

ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ಬರೋಬ್ಬರಿ 9,698 ಕೋಟಿ ರೂ. ಅನುದಾನ ನೀಡಲಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಮತ್ತು ಪ್ರವಾಹವನ್ನು ನಿಯಂತ್ರಿಸಲು 3,000 ಕೋಟಿ ರೂ. ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಈ ವರ್ಷ ಕಾವೇರಿ ಕುಡಿಯುವ ನೀರು ಎಲ್ಲರುಗೂ ಲಭ್ಯವಾಗಲಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:12 PM (IST) Feb 17

ಬಜೆಟ್ ಮಂಡನೆ ವೇಳೆ ಹೈ ಡ್ರಾಮಾ: ಕೆಣಕಿದ ಬೊಮ್ಮಾಯಿಗೆ ಕುಟುಕಿದ ಸಿದ್ದು

ಕಾಂಗ್ರೆಸ್'ನವರು ಕಿವಿ ಮೇಲೆ ಹೂವಿಟ್ಟುಕೊಳ್ಳುತ್ತೇನೆ ಎಂದರೆ ಬೇಡ ಎನ್ನುವುದಿಲ್ಲ, ಜನರ ಮೇಲೆ ಕಿವಿ ಮೇಲೆ ಹೂವಿಡುತ್ತಿದ್ದರು. ಈಗ ಜನರೇ ಕಾಂಗ್ರೆಸ್ ಕಿವಿ ಮೇಲೆ ಹೂವಿಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಬಜೆಟ್ ಮಂಡನೆ ವೇಳೆ ಅವರು, ಕಾಂಗ್ರೆಸ್'ಗೆ ಟಾಂಗ್ ನೀಡಿದರು. ಸಿಎಂ ಮಾತಿಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇನು ಬಜೆಟ್ ಭಾಷಣವೇ ಎಂದು ಅವರು ಕಿಡಿ ಕಾರಿದರು. 600 ಭರವಸೆಗಳಲ್ಲಿ 50 ಭರವಸೆಗಳನ್ನೂ ಈಡೇರಿಸಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಿಎಂ ಬಜೆಟ್ ಮಂಡನೆ ವೇಳೆ ಹೈಡ್ರಾಮಾ ನಡೆದಿದ್ದು, ಆಡಳಿತ- ವಿಪಕ್ಷಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. 

12:10 PM (IST) Feb 17

ಈ ಬಾರಿ 70295 ಕೋಟಿ ರೂ ಸಾಲ ಮಾಡಲು ತಿರ್ಮಾನ..

ಈ ಬಾರಿ 70295 ಕೋಟಿ ರೂ ಸಾಲ ಮಾಡಲು ತಿರ್ಮಾನ...
ಇದೇ ವರ್ಷ 17997 ಕೋಟಿ ರೂ ಸಾಲ ಮರುಪಾವತಿಗೆ ನಿಗದಿ....
ಕೋರೋನಾ ಕಾಲದಲ್ಲಿ ರಾಜ್ಯದ ಜನರ ತಲಾ ಆದಾಯ 2.04 ಲಕ್ಷ ರೂ..
ಈ ವರ್ಷ ಜನರ ತಲಾ ಆದಾಯ - 3.32 ಕೋಟಿ ರೂ ಗಳಿಗೆ ಏರಿಕೆ..
ಶಿಶುಮರಣ ಮತ್ತು ತಾಯಿ‌ಮರಣದ ಪ್ರಮಾಣ ರಾಜ್ಯದಲ್ಲಿ ಗಣನೀಯ ಇಳಿಕೆ....

12:07 PM (IST) Feb 17

ರಾಮನಗರದಲ್ಲಿ ಭವ್ಯ ರಾಮಮಂದಿರ

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಅದರೊಂದಿಗೆ ರಾಜ್ಯದ ವಿವಿಧ ದೇವಸ್ಥಾನ ಹಾಗೂ ಮಠಗಳ ಜೀರ್ಣೋದ್ದಾರಕ್ಕೆ ಮುಂದಿನ 2 ವರ್ಷಗಳಲ್ಲಿ 1 ಸಾವಿರ ಕೋಟಿ ನೀಡುವುದಾಗಿ ಘೋಷಣೆಯಾಗಿದೆ.

ರಾಮನಗರದಲ್ಲಿ ರಾಮಮಂದಿರ

12:04 PM (IST) Feb 17

ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2023ನೇ ಆರ್ಥಿಕ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ರೈತರಿಗೆ ವಿವಿಧ ಸಹಾಯಧನಗಳ ಘೋಷಣೆ ಜೊತೆಗೆ ಭೂ ಸಿರಿ ಎಂಬ ನೂತನ ಯೋಜನೆಯನ್ನು ಕೂಡ ಘೋಷಿಸಿದ್ದಾರೆ. 

ರೈತರಿಗೆ ದಕ್ಕಿದ್ದೇನು? ಇಲ್ಲಿ ಕ್ಲಿಕ್ಕಿಸಿ

 

 

12:01 PM (IST) Feb 17

ಆದಾಯದ ಹಂಚಿಕೆ ಹೇಗೆ?

ಆದಾಯವನ್ನು ಬೊಮ್ಮಾಯಿ ಹೇಗೆ ಹಂಚುತ್ತಿದ್ದಾರೆ?

 

 

11:59 AM (IST) Feb 17

ಕಾರ್ಯಕರ್ತರ ಗೌರವ ಧನ ಸಾವಿರ ಏರಿಕೆ, ಸಂತೋಷ ಆದರೆ ಸಾಲದು ಎಂದ ನಾಗಲಕ್ಷ್ಮಿ ಬಾಯಿ

ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ಸಹಾಯಧನ ಹೆಚ್ಚು ಮಾಡಿದ್ದಾರೆ. ಇದನ್ನ ಸ್ವಾಗತ ಮಾಡಿದ‌ ಸಂಘಟನೆ. ಕೊರೋನಾ‌ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ನಿರಂತರ ಹೋರಾಟ ಮಾಡಿದ್ದರ ಪರಿಣಾಮ 1 ಸಾವಿರ ಹೆಚ್ಚು ಮಾಡಿದ್ದಾರೆ. ಇಂತ ಬೆಲೆಏರಿಕೆ ಸಂದರ್ಭದಲ್ಲಿ ಒಂದು ಸಾವಿರ ತುಂಬಾ ಕಡಿಮೆಯಾಗಿದೆ. ಕನಿಷ್ಠ 12 ಸಾವಿರವಾದ್ರೂ ಆಶಾ ಕಾರ್ಯಕರ್ತೆಯರಿಗೆ ನಿಗದಿಯಾಗಬೇಕಿತ್ತು. ಸರ್ಕಾರದಿಂದ 5 ಸಾವಿರದಿಂದ 6 ಸಾವಿರವಾಗಿದೆ. ಕೇಂದ್ರ ಸರ್ಕಾರದಿಂದ ಮೂರ್ನಾಲ್ಕು ಸಾವಿರ ಬರುತ್ತೆ. ಒಟ್ಟು 8 ರಿಂದ 9 ಸಾವಿರವಷ್ಟೇ ಆಗುತ್ತೆ. ಕನಿಷ್ಠ 12 ಸಾವಿರ ಅನ್ನೋದು ಆಶಾ ಕಾರ್ಯಕರ್ತೆಯರ ಬೇಡಿಕೆಯಾಗಿತ್ತು. ಆರೋಗ್ಯ ವಿಚಾರಕ್ಕೆ ಹಲವು ಬೇಡಿಕೆಗಳನ್ನ ಇಡಲಾಗಿದೆ. ಅದ್ರೆ ಇಂದಿನ ಬಜೆಟ್ ನಲ್ಲಿ ಆಶಾ ಕಾರ್ಯಕರ್ತೆಯರ ಆರೋಗ್ಯಕ್ಕೆ ಬಜೆಟ್ ಇಡಬೇಕಿತ್ತು. 1 ಸಾವಿರ ಹೆಚ್ಚಳ ಸಂತೋಷದ ವಿಚಾರವೇ. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಹೆಚ್ಚಳವಾಗಬೇಕಿದೆ. ರಾಜ್ಯ ಆಶಾ ಕಾರ್ಯಕರಗತೆಯರ ಸಂಘದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿಕೆ

11:53 AM (IST) Feb 17

ಎಲ್ಲಿಂದ ಎಷ್ಟು ಆದಾಯ ತರುತ್ತಾರೆ ಬೊಮ್ಮಾಯಿ?

ಆದಾಯ ಮೂಲ ಎಲ್ಲಿಯದ್ದು ಎಂದು ವಿವರಿಸಿದ ಮೋದಿ
 

 

11:49 AM (IST) Feb 17

ಕ್ಯಾನ್ಸರ್ ರೋಗ ತಡೆಗೆ ಜೀವಸುಧೆ ತಪಸಣಾ ಶಿಬಿರ

6 ಹೊಸ ಇಎಸ್‌ಐ ಆಸ್ಪತ್ರೆ, ಮನೆ ಮನೆಗೆ ಆರೋಗ್ಯ ಹೆಸರಲ್ಲಿ ಹಳ್ಳಿಗಳಲ್ಲಿ ಆರೋಗ್ಯ ಶಿಬಿರ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆ ಹೆಚ್ಚಳ. ಉತ್ತರ ಕನ್ನಡ ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಾದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಈ ಸಲದ ಬಜೆಟ್‌ನಲ್ಲಿ ಸಿಎಂ ಘೋಷಿಸಿದ್ದಾರೆ. ಇದಲ್ಲದೆ ಕ್ಷಯ ರೋಗಿಗಳ ತಪಾಸಣೆಗೆ ಯಂತ್ರಗಳ ಘೋಷಣೆ. ಕ್ಯಾನ್ಸರ್‌ ರೋಗ ತಡೆಗೆ ಜೀವಸುಧೆ ಎಂಬ ತಪಾಸಣಾ ಶಿಬಿರ

11:46 AM (IST) Feb 17

ಬೆಂಗಳೂರಲ್ಲಿ ಮತ್ತೊಂದಿಷ್ಟು ನಮ್ಮ ಕ್ಲಿನಿಕ್, ಕೆಲವೆಡೆ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್

ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮತ್ತು 27 ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್‌ಗಳನ್ನು ಅನುಮೋದಿಸಲಾಗಿದೆ.

11:44 AM (IST) Feb 17

ಅಂತರ್ಜಲ ಮಟ್ಟ ಹೆಚ್ಚಿಸಲು ಜಲನಿಧಿ ಯೋಜನೆ

ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣಾ ಕಾಮಗಾರಿಗಳಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ನರೇಗಾ ಯೋಜನೆಯ ಸಮನ್ವಯದೊಂದಿಗೆ ಜಲಹೊಂಡವನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುವುದು.

11:43 AM (IST) Feb 17

ಸಮುದಾಯಗಳತ್ತ ಬೊಮ್ಮಾಯಿ ಚಿತ್ತ, ಬಂಜಾರ ಅಕಾಡೆಮಿ ಸ್ಥಾಪಿಸುವುದಾಗಿ ಘೋಷಣೆ

ಕರ್ನಾಟಕದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಅಕಾಡೆಮಿಯನ್ನು ಹಾಗೂ ಯಕ್ಷರಂಗಾಯಣವನ್ನು ಸ್ಥಾಪಿಸಲಿದೆ.

11:42 AM (IST) Feb 17

ಗಡಿನಾಡಲ್ಲಿ ಕನ್ನಡವೇ ಸಾರ್ವಭೌಮ, ಭಾಷಾ ಬೆಳವಣಿಗೆಗೆ ಆದ್ಯತೆ

ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪ್ರಾಶಸ್ತ್ಯವನ್ನು ನೀಡುವುದಕ್ಕಾಗಿ ಹಾಗೂ ಗಡಿ ಪ್ರದೇಶಗಳ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಅನುದಾನ.

11:40 AM (IST) Feb 17

ಪ್ರವಾಸೋದ್ಯಮಕ್ಕೂ ಅಲ್ಪ ಸ್ವಲ್ಪ ನೀಡಿದ ಬೊಮ್ಮಾಯಿ

ನಂದಿ ಗಿರಿಧಾಮ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ, ನಂದಿಬೆಟ್ಟಕ್ಕೆ ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ರೋಪ್‌ ವೇ ನಿರ್ಮಾಣ, ಪ್ರವಾಸಿ ಗೈಡ್‌ಗಳ ಮಾಸಿಕ ಪ್ರೋತ್ಸಾಹ ಧನ 2 ರಿಂದ 5 ಸಾವಿರಕ್ಕೆ ಏರಿಕೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ರೂ. ಕೋಟಿ

11:36 AM (IST) Feb 17

'ಮುಖ್ಯಮಂತ್ರಿ ವಿದ್ಯಾಶಕ್ತಿ' ಯೋಜನೆ ಆರಂಭ

 ರಾಜ್ಯದ ಶಿಕ್ಷಣ ವಲಯದಲ್ಲಿ ಈ ದಿನ ಅವಿಸ್ಮರಣೀಯ ದಿನವಾಗಲಿದೆ. ರಾಜ್ಯದ ಎಲ್ಲಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಅನುವು ಮಾಡಿಕೊಡುವ ದೃಷ್ಟಿಯಿಂದ 'ಮುಖ್ಯಮಂತ್ರಿ ವಿದ್ಯಾಶಕ್ತಿ' ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳು, ಅನುಕೂಲ ಪಡೆಯಲಿದ್ದಾರೆ.

- ರಾಜ್ಯದಲ್ಲಿ ಈಗಾಗಲೇ 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸಾರ್ವಜನಿಕ ಬಸ್ ಸೇವೆಯನ್ನು ಅವಲಂಬಿಸಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಲ್ಲಿ ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಕಾರ್ಯಾಚರಣೆಗಳನ್ನು ಮಾಡಲು 'ಮಕ್ಕಳ ಬಸ್ಸು' ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

- ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಿದೆ. ನಿಟ್ಟಿನಲ್ಲಿ ವಿವೇಕ ಯೋಜನೆಯಡಿಯಲ್ಲಿ 7,601 ಶಾಲೆಗಳ ಅಭಿವೃದ್ಧಿ.

11:27 AM (IST) Feb 17

ಮಹಿಳೆಯರಿಗೆ ಬಂಪರ್

ರಾಜ್ಯದ ಮಹಿಳಾ ಕಾರ್ಮಿಕರಿಗೆ ತಲಾ 500 ರೂ. ಸಹಾಯಧನ ಹಾಗೂ ಉಚಿತ ಬಸ್‌ ಪಾಸ್‌ ನೀಡಲಾಗುವುದು. ಮತ್ತೊಂದೆಡೆ ಎಲ್ಲ ಶಾಲಾ- ಕಾಲೇಜು ವಿದ್ಯಾರ್ಥಿನಿಯರಿಗೂ ಉಚಿತ ಬಸ್‌ ಪಾಸ್‌ ನೀಡಲಾಗುವುದು.
 

ಮಹಿಳೆಯರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

11:21 AM (IST) Feb 17

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಯುವಸ್ನೇಹಿ ಯೋಜನೆ

ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು 'ಯುವಸ್ನೇಹಿ' ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಒಂದು ಈ ಬಾರಿಯ ಆರ್ಥಿಕ ನೆರವು

11:19 AM (IST) Feb 17

ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ

ಶಿಕ್ಷಣ: 37,960 ಕೋಟಿ
ಜಲಸಂಪನ್ಮೂಲ: 22,854 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 20,494 ಕೋಟಿ
ನಗರಾಭಿವೃದ್ಧಿ: 17,938 ಕೋಟಿ
ಕಂದಾಯ: 15,943 ಕೋಟಿ
ಆರೋಗ್ಯ: 15,151 ಕೋಟಿ
ಒಳಾಡಳಿತ ಮತ್ತು ಸಾರಿಗೆ: 14509 ಕೋಟಿ
ಇಂಧನ: 13,803 ಕೋಟಿ
ಸಮಾಜ ಕಲ್ಯಾಣ: 11,163 ಕೋಟಿ
ಲೋಕೋಪಯೋಗಿ: 10,741 ಕೋಟಿ
ಕೃಷಿ ಮತ್ತು ತೋಟಗಾರಿಕೆ: 9,456 ಕೋಟಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 5,676 ಕೋಟಿ
ಆಹಾರ ಮತ್ತು ನಾಗರೀಕ ಸರಬರಾಜು: 4,600 ಕೋಟಿ
ವಸತಿ: 3,787 ಕೋಟಿ
ಇತರೆ: 1,16,968 ಕೋಟಿ

11:09 AM (IST) Feb 17

ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ

ಕೃಷಿ ಕ್ಷೇತ್ರದಲ್ಲಿ ನಮ್ಮ ಸರ್ಕಾರ ಹಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಂಡಿದೆ. ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿ ಅಳವಡಿಕೆಯೊಂದಿಗೆ ರೈತರು ಮಾಹಿತಿಪೂರ್ಣ ನಿರ್ಧಾರ ಕೈಗೊಳ್ಳಲು ಪೂರಕ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಲಿದೆ. ಇದಲ್ಲದೆ, ಕೃಷಿಯನ್ನು ಲಾಭದಾಯಕವಾಗಿಸಲು ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ರಫ್ತಿಗೆ ಒತ್ತು ನೀಡಲಾಗುತ್ತಿದೆ. ಸಮಗ್ರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯದಲ್ಲಿ ಸ್ಥಿರತೆ ತರಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.

11:07 AM (IST) Feb 17

ಕಳಸಾ ಬಂಡೂರಿ ಯೋಜನೆಗೆ 80 ಕೋಟಿ ರೂ.

ನರೇಗಾ ಯೋಜನೆ - 1,000 ಕೋಟಿ
ಕಳಸಾ ಬಂಡೂರಿ - 80 ಕೋಟಿ ರೂ.
ಗಂಗಾ ಕಲ್ಯಾಣ್ 675 ಕೋಟಿ
ಮಹದಾಯಿ - 1,000 ಕೋಟಿ
ಬೆಂಗಳೂರು ಟ್ರಾಫಿಕ್ - 150 ಕೋಟಿ
ಅಂಜನಾದ್ರಿ ಬೆಟ್ಟ - 100 ಕೋಟಿ

ನೀರಾವರಿ ಕ್ಷೇತ್ರ - 25 ಸಾವಿರ ಕೋಟಿ
ಪ್ರಾಣಿ ಕಲ್ಯಾಣ ಮಂಡಳಿ - 5 ಕೋಟಿ ರೂ.
ಬಳ್ಳಾರಿ ಮೆಗಾ ಡೈರಿ - 100 ಕೋಟಿ ರೂ.
-------------
ಬಸ್ ಖರೀದಿ - 500 ಕೋಟಿ 
ಸಾರಿಗೆ ಇಲಾಖೆ - 8,007 ಕೋಟಿ ರೂ
ಗಣಿ ಮತ್ತು ಭೂವಿಜ್ಞಾನ - 7,500 ಕೋಟಿ 
--------------
ಒಟ್ಟು 6 ವಲಯವಾರು ವಿಂಗಡಣೆ
ಆಡಳಿತ ಸುಧಾರಣೆ ಸಾರ್ವಜನಿಕ ಸೇವೆಗಳು..
ಸಂಸ್ಕೃತಿ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ..
ಬೆಂಗಳೂರು ಸಮಗ್ರ ಅಭಿವೃದ್ಧಿ..
ಆರ್ಥಿಕ ಅಭಿವೃದ್ಧಿ..
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ..
ಕೃಷಿ ಮತ್ತು ಪೂರಕ ಚಟುವಟಿಕೆ ‌..
ಒಟ್ಟು ಬಜೆಟ್ ಗಾತ್ರ 309182 ಕೋಟಿ

11:05 AM (IST) Feb 17

ಬೆಂಗಳೂರು ನಗರದಲ್ಲಿ ಶ್ರೀ ಭುವನೇಶ್ವರಿ ಥೀಂ ಪಾರ್ಕ್

ಗ್ರಾಮ ಸಹಾಯಕರ ಗೌರವ ಧನ ಮಾಸಿಕ 13ರಿಂದ 14 ಸಾವಿರಕ್ಕೆ ಏರಿಕೆ
ಗ್ರಾಮ ಸಹಾಯಕರ ಹುದ್ದೆಗೆ ಜನಸೇವಕ ಎಂದು ಮರುನಾಮಕರಣ
ವನ್ಯಜೀವಿಗಳ ಪ್ರಾಣ ಹಾನಿ ಪರಿಹಾರ 7.5 ಲಕ್ಷದಿಂದ 15 ಲಕ್ಷ ರೂ.ಗೆ ಏರಿಕೆ
+++++++++
ಪದವಿ ಮುಗಿಸಿ ಉದ್ಯೋಗವಿಲ್ಲದ ಯುವಕರಿಗೆ ಯುವ ಸ್ನೇಹಿ ಯೋಜನೆ
ನಿರುದ್ಯೋಗಿ ಪದವೀಧರರಿಗೆ ಮಾಸಿಕ 2 ಸಾವಿರ ಆರ್ಥಿಕ ನೆರವು
+++++++
ಐಟಿಐ 3 ತಿಂಗಳ ತರಬೇತಿಗೆ 1,500 ರೂ. ಶಿಷ್ಯವೇತನ
ಐಟಿಐ ಅಪ್ರೆಂಟಿಸ್ ಕಾರ್ಯಕ್ರಮ ತಿಂಗಳಿಗೆ 1,500 ಶಿಷ್ಯವೇತನ
ಬದುಕುವ ದಾರಿ ಯೋಜನೆಯಡಿ ಹೊಸ ಯೋಜನೆ ಘೋಷಣೆ
+++++
ಗ್ರಾಮೀಣ ಸ್ವಯಂ ಉದ್ಯೋಗ ಮಾಡುವವರಿಗೆ ಪ್ರೋತ್ಸಾಹ ಧನ
ಒಂದು ಲಕ್ಷದಿಂದ 5 ಲಕ್ಷದವರೆಗೆ ಸಹಾಯಧನ, ಸುತ್ತುನಿಧಿ ಪ್ರೋತ್ಸಾಹ
++++++++
ಬೆಂಗಳೂರು ನಗರದಲ್ಲಿ ಶ್ರೀ ಭುವನೇಶ್ವರಿ ಥೀಂ ಪಾರ್ಕ್
+++++++
ಬೆಂಗಳೂರು ನಗರದಲ್ಲಿ 250  ಶಿ ಟಾಯ್ಲೆಟ್ ನಿರ್ಮಾಣಕ್ಕೆ 50 ಕೋಟಿ
ಫೀಡಿಂಗ್ ರೂಂ, ಮೊಬೈಲ್ ಚಾರ್ಜಿಂಗ್, ತುರ್ತು ಎಸ್ಒಸಿ ಸೌಲಭ್ಯ ಒದಗಿಸಲು ಆದ್ಯತೆ.
___
ಬೆಂಗಳೂರಿಗೆ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್
27 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್
50 ಡಯಾಲಿಸಿಸ್ ಹಾಸಿಗೆ, 300 ಹಾಸಿಗೆಗಳ ಆಸ್ಪತ್ರೆ
ಬೆಂಗಳೂರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 180 ಕೋಟಿ
+++++++++
ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಕುಡಿಯುವ ನೀರು : 200 ಕೋಟಿ
ಹೊನ್ನಾವರದಲ್ಲಿ ಚೆನ್ನೈಭೈರಾದೇವಿ ಸ್ಮಾರಕ ನಿರ್ಮಾಣ
ಕರ್ನಾಟಕದ ಗೋಲ್ ಗುಂಬಜ್, 
ಅಬಕಾರಿ ತೆರಿಗೆ : ಜೂನ್ ಒಳಗೆ ಮುಂಚಿತವಾಗಿ ಪಾವತಿಸಿದ್ದರೆ ಬಡ್ಡಿ, ದಂಡ ವಿನಾಯಿತಿ
ವೃತ್ತಿ ತೆರಿಗೆ ವಿನಾಯಿತಿ : ಸಂಬಳದಾರರಿಗೆ ಮಾಸಿಕ 15ರಿಂದ 25 ಸಾವಿರದವರೆಗೆ ಏರಿಕೆ
ಟಯರ್ 2 ನಗರಗಳಲ್ಲಿ ಮಿನಿ ಥಿಯೇಟರ್ ನಿರ್ಮಾಣಕ್ಕೆ ಪ್ರೋತ್ಸಾಹ ಧನ

11:03 AM (IST) Feb 17

ಕಾಡುಪ್ರಾಣಿ ದಾಳಿಯಿಂದ ಪ್ರಾಣ ಕೊಳೆದು ಕೊಂಡವರಿಗೆ ಪರಿಹಾರ ಹೆಚ್ಚಳ

ಕಾಡುಪ್ರಾಣಿ ದಾಳಿಯಿಂದ ಪ್ರಾಣ ಕೊಳೆದು ಕೊಂಡವರಿಗೆ 7.50 ಲಕ್ಷದಿಂದ 15 ಲಕ್ಷಕ್ಕೆ ಪರಿಹಾರ  ಹೆಚ್ಚಳ
ಬೆಳೆಹಾನಿಗೆ ನೀಡುವ ಪರಿಹಾರ ಧನವೂ ದ್ವಿಗುಣ, ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಚಿರತೆ ಹಾವಳಿ ತಡೆಯಲು ಸಿಬ್ಬಂದಿ ನೇಮಕ
ಚಿರತೆ ಹಾವಳಿ ತಡೆಗೆ 199 ಸಿಬ್ಬಂದಿಗಳ ನೇಮಕ
ಕಲಬುರಗಿ ಜಿಲ್ಲೆಯ ಮಳಖೇಡ ಕೋಟೆ ಸಂಸ್ಕರಣೆಗೆ 20 ಕೋಟಿ ರೂ. ಅನುದಾನ
ರಕ್ಕಸಗಿ, ತಂಗಡಗಿ, ತಾಳಿಕೋಟೆ ಐತಿಹಾಸಿಕ ತಾಣಗಳ ಅಭಿವೃದ್ಧಿ
ಚಾಮುಂಡಿ ಬೆಟ್ಟದಲ್ಲಿ 10 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ, ಕಲಾ ಗ್ಯಾಲರಿ ನಿರ್ಮಾಣ
ಹೊನ್ನಾವರದಲ್ಲಿ ಚನ್ನಭೈರಾದೇವಿ ಸ್ಮಾರಕ ಪಾರ್ಕ್ ನಿರ್ಮಾಣ
ರಾಮನಗರ ಜಿಲ್ಲೆ ಮಂಚನಬೆಲೆ ಡ್ಯಾಂ ಬಳಿ 10 ಎಕರೆಯಲ್ಲಿ 10 ಕೋಟಿ ವೆಚ್ಚದಲ್ಲಿ ರೆಸಾರ್ಟ್ ನಿರ್ಮಾಣ.

11:02 AM (IST) Feb 17

‘ನಮ್ಮ ನೆಲೆ’ ಹೊಸ ಯೋಜನೆಯಡಿ ಆರ್ಥಿಕ ದುರ್ಬಲವರಿಗೆ 10 ಸಾವಿರ ನಿವೇಶನ

60 ತಾಲೂಕುಗಳಲ್ಲಿ ತಲಾ ಒಂದು ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ ಕ್ರಮ
ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಗಳಲ್ಲಿ Dormitory ನಿರ್ಮಾಣ
47 ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್‌ರೂಮ್ ಗಳ ಅಭಿವೃದ್ಧಿ.
73 ಕರ್ನಾಟಕ ಪಬ್ಲಿಕ್ ಶಾಲೆಗಳು, 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ 'ಸೃಷ್ಟಿ' ಟಿಂಕರಿಂಗ್ ಲ್ಯಾಬ್ ಸ್ಥಾಪನೆ
23 ತಾಲೂಕುಗಳಲ್ಲಿ ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ
46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ 
ವಿದೇಶದಲ್ಲಿ ವ್ಯಾಸಂಗ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ಸಾಲ
ಶೂನ್ಯ ಬಡ್ಡಿ ದರದಲ್ಲಿ 20 ಲಕ್ಷ ರೂವರೆಗೂ ಸಾಲ
ಎಸ್ಸಿ/ ಎಸ್ಟಿ ಗುತ್ತಿಗೆದಾರರಿಗೆ ಕಾಮಗಾರಿ ಮೀಸಲಾತಿ ಹೆಚ್ಚಳ
50 ಲಕ್ಷದಿಂದ 1 ಕೋಟಿ ರೂ.ಗೆ ಹೆಚ್ಚಳ
ಐಐಟಿ/ ಐಐಎಂ, ಐಐಎಸ್ಸಿ/ ಎನ್ಐಟಿ ಸಂಸ್ಥೆಗಳಿಗೆ ಪ್ರವೇಶ ಪಡೆಯುವ 
ಎಸ್ಸಿ/ ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ 4 ಲಕ್ಷಕ್ಕೆ ಏರಿಕೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ 150 ರೂ.ಗೆ ಏರಿಕೆ

11:01 AM (IST) Feb 17

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಜುಯಿಟಿ ಕೊಡಲು ಅನುದಾನ ಮೀಸಲು

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ಗುರುತಿಸಿರುವ ರಾಜ್ಯ ಸರ್ಕಾರವು 2023-24ನೇ ಸಾಲಿನಿಂದ ಅವರಿಗೆ ಉಪಧನವನ್ನು (Gratuity) ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 40 ಕೋಟಿ ರೂ. ಗಳ ಅನುದಾನ ಮೀಸಲಿಡಲಾಗಿದೆ.

25 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ರೂ. ಗಳು ಹಾಗೂ ಅಂಗನವಾಡಿ ಸಹಾಯಕಿಯರಿಗೆ 30,000 ರೂ. ಗಳ ಆರ್ಥಿಕ ಭದ್ರತೆಯನ್ನು ಒಂದು ಬಾರಿಗೆ ನೀಡಿ ಸ್ವಯಂ ನಿವೃತ್ತಿಗೆ ಅವಕಾಶ ಕಲ್ಪಿಸಲಾಗುವುದು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ ಮಕ್ಕಳ ಪೌಷ್ಟಿಕತೆ ಕುರಿತು ಒಂದು ಪ್ರತ್ಯೇಕ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆಯನ್ನು ರೂಪಿಸಲು ನಿರ್ಧರಿಸಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮಹಿಳೆಯರು ದುಡಿಮೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮ ಶಿಶುಪಾಲನಾ ಸೌಲಭ್ಯಗಳು ಅಗತ್ಯವಾಗಿದೆ. ಇದಕ್ಕಾಗಿ 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದ ಕಾರ್ಯಕ್ರಮವನ್ನು ವಿಸ್ತರಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗಾಗಿ ನಗರ ಪ್ರದೇಶದಲ್ಲಿ 4,000 ಶಿಶುಪಾಲನಾ ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ನರೇಗಾ

10:59 AM (IST) Feb 17

ಒಟ್ಟು 6 ವಲಯವಾರು ವಿಂಗಡಣೆ

ಆಡಳಿತ ಸುಧಾರಣೆ ಸಾರ್ವಜನಿಕ ಸೇವೆಗಳು..
ಸಂಸ್ಕೃತಿ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ..
ಬೆಂಗಳೂರು ಸಮಗ್ರ ಅಭಿವೃದ್ಧಿ..
ಆರ್ಥಿಕ ಅಭಿವೃದ್ಧಿ..
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ..
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಆದ್ಯತೆ.


More Trending News