Published : Feb 01, 2024, 07:40 AM ISTUpdated : Feb 01, 2024, 06:27 PM IST

ಕೇಂದ್ರ ಬಜೆಟ್‌ 2024 Highlights: ಯುವ ಜನಾಂಗದ ಅಭಿವೃದ್ಧಿ, ಮಹಿಳಾ ಕಲ್ಯಾಣ ಭರವಸೆಯ ಬಜೆಟ್‌

ಸಾರಾಂಶ

ಈ ಮೊದಲೇ ತಿಳಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಯಾವುದೇ ಭರ್ಜರಿ ಘೋಷಣೆಗಳನ್ನೂ ಮಾಡಿಲ್ಲ. ಮಧ್ಯಂತರ ಬಜೆಟ್ ಇದಾಗಿದ್ದು, ಚುನಾವಣೆ ಗಮನದಲ್ಲಿಟ್ಟುಕೊಂಡು ಮತ ಸೆಳೆಯಲು ಏನಾದರೂ ಹೊಸ ಘೋಷಣೆ ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಯಾವುದೇ ಫ್ರೀ ಘೋಷಣೆಯೂ ಇಲ್ಲ. ಕೇಂದ್ರ ಬಜೆಟ್‌ನಲ್ಲಿ ಯುವ ಜನಾಂಗದ ಅಭಿವೃದ್ಧಿ ಅವರ ಸಂಶೋಧನೆ ಆವಿಷ್ಕಾರಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಕೆಲ ಘೋಷಣೆಗಳನ್ನು ಮಾಡಲಾಗಿದ್ದರೆ, ಮಹಿಳಾ ಕಲ್ಯಾಣದ ನಿಟ್ಟಿನಲ್ಲಿ 'ಲಖ್‌ಪತಿ ದೀದಿ' ಸೇರಿದಂತೆ ಗೆಲುವು ಯೋಜನೆಗಳನ್ನು ಘೋಷಣೆ ಮಾಡಿದೆ. ಒಟ್ಟಾರೆಯಾಗಿ ಇದೊಂದು ಭರವಸೆಯ ಬಜೆಟ್‌ ಆಗಿದ್ದು, ಮುಂದಿನ ಜುಲೈನಲ್ಲಿ ವಿಕಸಿತ ಭಾರತದ ನೀಲನಕ್ಷೆಯ ಬಜೆಟ್‌ ಮಂಡಿಸುವುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

 

05:06 PM (IST) Feb 01

ಕರ್ನಾಟಕ ರೈಲ್ವೆ ಅಭಿವೃದ್ಧಿಗೆ 7524 ಕೋಟಿ!

ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗಾಗಿ 7524 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. 2009 ರಿಂದ 2014ರ ಬಜೆಟ್‌ಗೆ ಹೋಲಿಸಿದರೆ, ಈ ಬಾರಿಯ ಬಜೆಟ್‌ನಲ್ಲಿ 805 ಕೋಟಿ ರೂಪಾಯಿ ಏರಿಕೆಯಾಗಿದೆ.

05:01 PM (IST) Feb 01

ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸಲು ಮುಂದಾದ ಕೇಂದ್ರ ಸರ್ಕಾರ!

2014ಕ್ಕೂ ಮುನ್ನ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶದ ಆರ್ಥಿಕತೆಯನ್ನು ಯಾವ ರೀತಿ ದುರಪಯೋಗಪಡಿಸಿಕೊಂಡಿತ್ತು ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಶ್ವೇತ ಪತ್ರ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಶ್ವೇತ ಪತ್ರ ಹೊರಡಿಸಲಿದೆ ಕೇಂದ್ರ!

04:06 PM (IST) Feb 01

ಬಜೆಟ್ ಮಂಡನೆ ವೇಳೆ ಚೆಸ್ ತಾರೆ ಆರ್ ಪ್ರಜ್ಞಾನಂದನ್‌ ನೆನಪಿಸಿಕೊಂಡಿದ್ದೇಕೆ

ಭಾರತದ ನಂ.1 ಚೆಸ್ ಪಟು ಎನಿಸಿಕೊಂಡಿರುವ ಆರ್ ಪ್ರಜ್ಞಾನಂದ ಕಳೆದ ವರ್ಷ ವಿಶ್ವ ಚಾಂಪಿಯನ್ ಆಗಿರುವ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದರು.

ಇಲ್ಲಿದೆ ಲಿಂಕ್ಸ್

 

 

02:42 PM (IST) Feb 01

ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, 6.25 ಲಕ್ಷ ಕೋಟಿ ರೂಪಾಯಿ ಹಂಚಿಕೆ!

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತೀ ಹೆಚ್ಚಿನ ಮೊತ್ತ ಹಂಚಿಕೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡಾ 1.5 ರಷ್ಟು ಹೆಚ್ಚಳ ಮಾಡಲಾಗಿದೆ. ಬರೋಬ್ಬರಿ 6.25  ಲಕ್ಷ ಕೋಟಿ ರೂಪಾಯಿ ಹಣದಲ್ಲಿ ಗಡಿಯಲ್ಲಿ ಫೆನ್ಸಿಂಗ್, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿಯ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?
 
ಇಲ್ಲಿದೆ ಲಿಂಕ್

 

 

02:09 PM (IST) Feb 01

ಯಾವ ಸಚಿವಾಲಯಕ್ಕೆ ಎಷ್ಟು ಅನುದಾನ?

ಇದು ಮಧ್ಯಂತರ ಬಜೆಟ್ ಆಗಿದ್ದು, ನಿರ್ಮಲಾ ಸೀತರಾಮನ್ ತಮ್ಮ ಭಾಷಣದಲ್ಲಿ ಜುಲೈನಲ್ಲಿ ಮತ್ತೆ ಬಜೆಟ್ ಮಂಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈಗ ಯಾವ ಸಚಿವಾಲಯಕ್ಕೆಷ್ಟು ಅನುದಾನ ಸಿಕ್ಕಿದೆ? 

02:04 PM (IST) Feb 01

ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ!

ನಿರ್ಮಾಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ಇದೇ ವೇಳೆ ಸಮಾಜ ಪ್ರತಿಯೊಬ್ಬರಿಗೂ ಅನಕೂಲ ಮಾಡಿಕೊಡುವ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

 

 

 

01:47 PM (IST) Feb 01

ಮಹಿಳಾ ಸಬಲೀಕರಣಕ್ಕೆ ನಿರ್ಮಲಾ ಒತ್ತು, ನಾರಿಗೆ ಶಕ್ತಿ ತುಂಬಲು ಕಸರತ್ತು

ಕೇಂದ್ರ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು, ಮಹಿಳೆಯರಿಗೆ ಸಂಬಂಧಿಸಿ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ. ಅದರೆ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

 

 

01:27 PM (IST) Feb 01

ಪಿಎಂ ಗತಿ ಶಕ್ತಿಗೆ ಇನ್ನಷ್ಟು ಪವರ್‌

ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರೊಂದಿಗೆ ಮೂರು ಪ್ರಮುಖ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಪ್ರಕಟ ಮಾಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

 

 

01:11 PM (IST) Feb 01

ಲಕ್ಷದ್ವೀಪಕ್ಕೆ ಸರ್ಕಾರದ ಹೂಡಿಕೆ!

ಲಕ್ಷದ್ವೀಪವನ್ನು ಆಕರ್ಷಕ ಹಾಗೂ ಭಾರತೀಯ ಪ್ರವಾಸಿಗರ ತಾಣವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಮಾಲ್ಡೀವ್ಸ್‌ ಜೊತೆಗಿನ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲಿಯೇ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಘೋಷಣೆ ಮಾಡಿದೆ.
 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

12:52 PM (IST) Feb 01

ಆದಾಯ ತೆರಿಗೆ ವಿಚಾರದಲ್ಲಿಲ್ಲ ಯಾವುದೇ ರಿಲೀಫ್‌!

ಪಂಚರಾಜ್ಯ ಚುನಾವಣೆ, ರಾಮ ಮಂದಿರ ಉದ್ಘಾಟನೆ ಬಳಿಕ ಮುಂಬರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿರುವ ಮೋದಿ ಸರ್ಕಾರ, ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಮಾಡಿಲ್ಲ. ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 

 

12:40 PM (IST) Feb 01

50 ವರ್ಷದ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ, ಇದರಿಂದ ರಾಜ್ಯಕ್ಕೇನು ಲಾಭ?

ಕೇಂದ್ರ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಜನಪ್ರಿಯ ಯೋಜನೆಗಳಿಲ್ಲದಿದ್ದರೂ ರಾಜ್ಯಗಳಿಗೆ ನೀಡಿರುವ ಕೆಲ ಕೊಡುಗೆಗಳನ್ನು ಮುಂದುವರಿಸಲಾಗಿದೆ. ಫಸ್ಟ್ ಡೆವಲಪ್‌ಮೆಂಟ್ ಇಂಡಿಯಾ ಅಡಿಯಲ್ಲಿ 50 ವರ್ಷ ಬಡ್ಡಿ ರಹಿತ ಸಾಲ ಯೋಜನೆಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ರಾಜ್ಯಕ್ಕೀರುವ ಲಾಭವೇನು?

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:38 PM (IST) Feb 01

ಜಗತ್ತಿನ ಆರ್ಥಿಕ ಶಕ್ತಿಯಾಗಲು ಪೂರಕ ಬಜೆಟ್: ಆರ್ ಆಶೋಕ್

ಬಡವರ ಪರವಾದ, ಅಭಿವೃದ್ಧಿಗೆ ಪೂರಕವಾದ, ತಂತ್ರಜ್ಞಾನ ಬಳಕೆಗೆ ಅನುಕೂಲಕರವಾದ, ಭಾರತದ ಏಳ್ಗೆಯ ಪರವಾದ ಬಜೇಟ್. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ವೇದಿಕೆ ನಿರ್ಮಿಸಿದೆ ಈ ಬಜೆಟ್ 

- ಆರ್. ಅಶೋಕ್, ವಿಪಕ್ಷ ನಾಯಕ

 

12:33 PM (IST) Feb 01

ನಗರಗಳ ಸಾರಿಗೆ ವ್ಯವಸ್ಥೆ ಸುಧಾರಿಸಲು ಹೆಚ್ಚಿನ ಒತ್ತು

ಜನಸಂದಣೆ ಹೆಚ್ಚಾಗಿರುವ ನಗರಗಳಲ್ಲಿ ಸಾರಿಗೆ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲ್ಲಿದ್ದು, ಮೆಟ್ರೋ ರೈಲ್ವೆ ಮಾರ್ಗ ವಿಸ್ತರಣೆ ಮಾಡುವುದಾಗಿ ವಿತ್ತ ಸಚಿವರು ಘೋಷಿಸಿದ್ದಾರೆ. ಅಲ್ಲದೇ ವಂದೇ ಭಾರತ್ ಬೋಗಿಗಳಂತೆ ರೈಲ್ವೆ ಭೋಗಿಗಳ ಅಭಿವೃದ್ಧಿಗೆ ಗಮನ ಹರಿಸುವ ಭರವಸೆ ನೀಡಿದ್ದಾರೆ. 

 

 

12:29 PM (IST) Feb 01

ಸೀ ಫುಡ್ ರಫ್ತು ಡಬಲ್, ಮೀನುಗಾರಿಕೆಗೆ ಮಹತ್ವ

ಮತ್ಸ್ಯಸಂಪದ: ಸಾಗರೋತ್ಪನ್ನಗಳ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದ್ದು, ಸೀ ಫುಡ್‌ ಅಭಿವೃದ್ಧಿಗೆ ಒತ್ತು ನೀಡುವುದಾಗಿ ನಿರ್ಮಲಾ ಘೋಷಿಸಿದ್ದಾರೆ. 2014ರ ನಂತರ ಸೀ ಫುಡ್​​ ರಫ್ತು ಡಬಲ್​ ಆಗಿದ್ದು, ಮೀನುಗಾರಿಕೆಯಲ್ಲಿ 55 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದಾರೆ. 

 

 

12:27 PM (IST) Feb 01

ಸರ್ವೈಕಲ್ ಕ್ಯಾನ್ಸರ್ ತಡೆಗೆ ಮದ್ದು

ಯು ವಿನ್​​ ಪ್ಲಾಟ್​ಫಾರ್ಮ್​​ ಮೂಲಕ ತಾಯಂದಿರಿಗೆ, ನವಜಾತ ಶಿಶುಗಳಿಗೆ ಆರೈಕೆ.
ಆರೋಗ್ಯ ಸೇವೆ ಹೊಸ ಆಸ್ಪತ್ರೆ, ಹೊಸ ವಿಭಾಗಗಳ ಸೃಷ್ಠಿ. 
ಹೆಣ್ಣುಮಕ್ಕಳಿಗೆ ಸರ್ವೈಕಲ್​​ ಕ್ಯಾನ್ಸರ್​​ ತಡೆಯಲು ವ್ಯಾಕ್ಸಿನೇಷನ್.​ 
9ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಿ, ಮಾರಾಣಾಂತಿಕ ಕ್ಯಾನ್ಸರ್‌ನಿಂದ ಮಕ್ಕಳು ಮುಕ್ತರಾಗುವಂತೆ ಕ್ರಮ ಕೈಗೊಳ್ಳಲಾಗುವುದು. 

12:24 PM (IST) Feb 01

ನಿರೀಕ್ಷೆಯಂತೆ ಪ್ರವಾಸೋದ್ಯಮಕ್ಕೆ ಒತ್ತು

ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೋಸ್ ಶೇರ್ ಮಾಡಿಕೊಂಡ ಬೆನ್ನಲ್ಲೇ, ಪಕ್ಕದ ಮಾಲ್ಡೀವ್ಸ್ ತಲ್ಲಣಗೊಂಡಿದೆ. ಒಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಮಟ್ಟಿಗೆ ಮೋದಿ ಪರೋಕ್ಷ ಕರೆ ಭಾರತೀಯರ ಮೇಲೆ ಪ್ರಭಾವ ಬೀರಿದ್ದು, ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿ ಭಾರತದ ದ್ವೀಪಗಳಿಗೆ ಭೇಟಿ ನೀಡಲು ಮುಂದಾದರು. ನಿರೀಕ್ಷೆಯಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುವಾಗುವಂತೆ ಕೆಲವು ಘೋಷಣೆಗಳು ಬಜೆಟ್‌ನಲ್ಲಿವೆ. 

 

 

12:21 PM (IST) Feb 01

2027ಕ್ಕೆ ವಿಕಸಿತ ಭಾರತಕ್ಕೆ ಬಜೆಟ್ ಒತ್ತು

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಘೋಷಣೆಯೊಂದಿಗೆ ಈ ಸಾರಿ ಜೈ ಅನುಸಂಧಾನ್ ಎಂಬ ಹೊಸ ಘೋಷ ವಾಕ್ಯ ಸೇರಿಕೊಂಡಿದ್ದು, ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು ನೀಡಲು ಮೋದಿ ಸರಕಾರ ಕಟಿಬ್ಧವಾಗಿದೆ ಎಂಬುದನ್ನು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ. 

12:03 PM (IST) Feb 01

ನಾರಿಶಕ್ತಿ, ಯುವಕರ ಸಬಲೀಕರಣಕ್ಕೆ ಒತ್ತು

ಸ್ಟಾರ್ಟ್‌ ಅಪ್ ಅಪ್ ನೆರವು ಸೇರಿ ತಂತ್ರಜ್ಞಾನ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಹೇಳಿರುವ ವಿತ್ತ ಸಚಿವರು ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದನ್ನು ಸ್ಫಷ್ಟಪಡಿಸಿದ್ದಾರೆ. ಮತದಾರರ ಓಲೈಕೆ ಮಾಡಿಕೊಳ್ಳುವಂಥ ಯಾವ ಯೋಜನೆಗಳನ್ನೂ ಘೋಷಿಸದ ನಿರ್ಮಲಾ, ಜುಲೈನಲ್ಲಿ ಪ್ರಸ್ತುತ ಪಡಿಸುವ ಬಜೆಟ್‌ನಲ್ಲಿ ವಿಕಸಿತ ಭಾರತದ ನೀಲಿ ನಕ್ಷೆಯನ್ನು ಪ್ರಸ್ತುತ ಪಡಿಸುವುದಾಗಿ ಹೇಳುವ ಮೂಲಕ ಮತ್ತೆ  ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. 

 

12:01 PM (IST) Feb 01

ಭರ್ಜರಿ ಘೋಷಣೆಗಳಿಲ್ಲ

ಚುನಾವಣಾ ವರ್ಷದ ಬಜೆಟ್ ಆಗಿದ್ದರಿಂದ ಇದು ಜನಪ್ರಿಯ ಬಜೆಟ್ ಆಗಲಿದೆ. ಹೊಸ ಯೋಜನೆ ಅತವಾ ಆಕರ್ಷಕ ಯೋಜನೆಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಮೊದಲೇ ಹೇಳಿದಂತೆ ನಿರ್ಮಲಾ ಸೀತರಾಮನ್ ಭರ್ಜರಿ ಘೋಷಣೆಗಳಿಲ್ಲದೇ ಬಜೆಟ್ ಮಂಡಿಸಿದ್ದಾರೆ. ಮತ್ತದೇ ಮೋದಿ ಸಬ್ ಕಾ ಸಾಥ್, ಸಬಾ ಕಾ ವಿಕಾಸ್ ಧ್ಯೇಯ ವಾಕ್ಯದೊಂದಿಗೆ ಮುನ್ನಡಿ ಇಡುವ ಭರವಸೆ ನೀಡಿದ್ದಾರೆ. 

 

 

11:59 AM (IST) Feb 01

ಬಜೆಟ್ ಮಂಡನೆ ಮುಗಿಸಿದ ನಿರ್ಮಲಾ ಸೀತರಾಮನ್

ಚುನಾವಣೆ ವರ್ಷದಲ್ಲಿಯೂ ಯಾವುದೇ ಗ್ಯಾರಂಟಿ ಯೋಜನೆಗಳನ್ನೂ ಘೋಷಿಸಿಲ್ಲ ವಿತ್ತ ಸಚಿವೆ. ಅಲ್ಲದೇ ಯಾವ ಫ್ರೀ ಘೋಷಣೆಯೂ ಇಲ್ಲದ ನಿರೀಕ್ಷೆಗೆ ವಿರುದ್ಧವಾಗಿ ಇದು ಚುನಾವಣಾ ಜನಪ್ರಿಯ ಬಜೆಟ್ ಆಗದಂತೆ ನೋಡಿಕೊಂಡಿದ್ದಾರೆ. 

11:57 AM (IST) Feb 01

7 ಲಕ್ಷ ತೆರಿಗೆ ವಿನಾಯಿತಿ

ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ವರ್ಷದ ಬಜೆಟ್ ಸಂದರ್ಭದಲ್ಲಿಯೂ ಶ್ರೀ ಸಾಮಾನ್ಯ ನಿರೀಕ್ಷಿಸಿವ ಆದಾಯ ತೆರಿಗೆ ವಿನಾಯತಿಗೆ ನಿರ್ಮಲಾ ಈ ವರ್ಷವೂ ಮಣೆ ಹಾಕಿಲ್ಲ. ಮಧ್ಯಮ ವರ್ಗದ ಜನರಿಗೆ ಜೇಬಿಗೆ ಕತ್ತರಿ ಬೀಳುವುದು ತಪ್ಪೋಲ್ಲವೆಂಬ ಸಂಕಟ ತಪ್ಪೋಲ್ಲ ಎನ್ನಲಾಗುತ್ತಿದೆ. 

 

11:55 AM (IST) Feb 01

ವಿಕಸಿತ ಭಾರತಕ್ಕೆ ಒತ್ತು

ಜುಲೈನಲ್ಲಿ ಮಂಡಿಸುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಸರಕಾರ ವಿಕಸಿತ ಭಾರತಕ್ಕೆ ಅಗತ್ಯವಾದ ನೀಲ ನಕ್ಷೆ ಪ್ರಸ್ತುತಪಡಿಸಲಿದೆ ಎನ್ನುವ ಮೂಲಕ ಮುಂದೆಯೂ ಬಿಜೆಪಿಯದ್ದೇ ಸರಕಾರವೆಂದು ಘೋಷಿಸಿದ್ದಾರ ೆ ನಿರ್ಮಲಾ ಸೀತರಾಮನ್. 

 

11:53 AM (IST) Feb 01

Income Tax

ತೆರಿಗೆ ಸಂಗ್ರದಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದು, ತೆರೆಗೆದಾರರಿಗೆ ನಿರ್ಮಲಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜನರು ಕಟ್ಟಿದ ತೆರಿಗೆಯನ್ನು ದೇಶದ ಅಭಿವೃದ್ಧಿಗೆ ಬಳಸಲಾಗಿದೆ. ಆರ್ಥಿಕ ಅಭಿವೃದ್ಧಿಯಲ್ಲಿ 2014ಕ್ಕಿಂತ ಮುಂಚಿನ ಸವಾಲುಗಳನ್ನು ಯಶಸ್ವಿಯಾಗಿ ಗೆದ್ದಿದ್ದೇವೆ. ಜಿಎಸ್‌ಟಿ ಸಂಗ್ರಹವೂ ದ್ವಿಗುಣಗೊಂಡಿದೆ. ಇದರಿದಂ ರಾಜ್ಯ ಸರಕಾರಗಳು ರಾಜಸ್ವವೂ ಅಧಿಕವಾಗಿದೆ. ತೆರಿಗೆ ಕಟ್ಟೋದನ್ನು ಸರಳೀಕರಣಿಗೊಳಿಸಿದ್ದೇವೆ. ಜಿಎಸ್‌ಟಿ ಜಾರಿಗೆ ಮುನ್ನ ಇದ್ದಕ್ಕಿಂತಲೂ ಇದೀಗ ತೆರಿಗೆ ಸಂಗ್ರಹ ಹೆಚ್ಚಾಗಿದ್ದು, ಇದು ತೆರಿಗೆದಾರರಿಗೇ ಹೆಚ್ಚು ಅನುಕೂರವಾಗುವಂತೆ ಮಾಡುತ್ತಿದೆ. 

11:48 AM (IST) Feb 01

FDI

ಫಸ್ಟ್ ಡೆವಲಪ್ ಇಂಡಿಯಾ ಎಂಬ ಧ್ಯೇಯ ವಾಕ್ಯದೊಂದಿಗೆ ವಿದೇಶಗಳೊಂದಿಗೆ Bilateral Realtinship ಗೆ ಹೆಚ್ಚು ಒತ್ತು ನೀಡಲಾಗಿದ್ದು, 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ನೀಡುವುದೊಂದಿಗೆ ಹೊಸ ಯೋಜನೆಗಳು ಹಾಗೂ ತಂತ್ರಜ್ಞಾನ ಜಾರಿಗೆ ಆದ್ಯತೆ ನೀಡಲಾಗುತ್ತದೆ. ಈ ವರ್ಷ 40 ಸಾವಿರ ಬೋಗಿಗಳು ವಂದೇ ಭಾರತ್ ಯೋಜನೆಯಂತೆ ಅಭಿವೃದ್ಧಿ ಪಡಿಸಲಾಗುತ್ತದೆ. 

11:44 AM (IST) Feb 01

ಪ್ರವಾಸೋದ್ಯಮಕ್ಕೆ ಆದ್ಯತೆ

ಇತ್ತೀಚೆಗೆ ಮೊದಿ ಲಕ್ಷ ದ್ಪೀಪದ ಫೋಟೋಗಳನ್ನು ಶೇರ್ ಮಾಡಿ ಕೊಂಡಿದ್ದು, ಭಾರತೀಯರು ವಿದೇಶಕ್ಕೆ ಹೋಗುವ ಬದಲು ಭಾರತದ ಸ್ಥಳಗಳನ್ನು ಎಕ್ಲ್‌ಪ್ಲೋರ್ ಮಾಡಬೇಕೆಂದು ಕರೆ ನೀಡಿದ್ದರು ಈ ಬೆನ್ನಲ್ಲೇ ನಿರ್ಮಲಾ ಸೀತರಾಮನ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಹಿನ್ನೆಲಯಲ್ಲಿ ಭಾರತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವ ಭರವಸೆ ಮೂಡಿಸಿದ್ದಾರೆ. 

11:41 AM (IST) Feb 01

ರಕ್ಷಣಾ ಅಭಿವೃದ್ಧಿಗೆ ಆತ್ಮ ನಿರ್ಭರತೆ

ಸಾರ್ವಜನಿಕ ಸಾರಿಗೆಯಲ್ಲಿ ಇ-ಬಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಬಯೋ ಮ್ಯಾನುಫಕ್ಟರಿಂಗ್ ಉತ್ಪನ್ನಗಳಿಗೆ ಒತ್ತು ನೀಡಲಿದ್ದು, ಇದರಿಂದ ಬದಲಿ ಇಂಧನ ವ್ಯವಸ್ಥೆಗೆ ಸಾಕಷ್ಟು ಪ್ರೇರಣೆ ನೀಡುವಂತಾಗುತ್ತದೆ. ಸರಕು ಸಾಗಣೆ ವೆಚ್ಚ ತಗ್ಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಸಂಶೋಧನೆಗೆ ಆದ್ಯತೆ ನೀಡಿ, ಹೊಸ ಸಂಶೋಧನೆ ನಡೆಸಲು ಸಹಕರಿಸಲಾಗುತ್ದೆ. 

11:39 AM (IST) Feb 01

ಪಿಎಂ ಗತಿ ಶಕ್ತಿ ಯೋಜನೆಗೆ ವೇಗ

ಹೈಯರ್ ಸ್ಪೀಡ್ ರೈಲನ್ನು ಪರಚಯಿಸುವುದೊಂದಿಗೆ ವಿವಿಧ ಮೂಲ ಸೌಕರ್ಯಗಳ ಕಡೆ ಒತ್ತು ನೀಡಲು ಪಿಎಂ ಶಕ್ತಿ ಯೋಜನೆಯಡಿ ವೇಗ ಪಡೆದುಕೊಳ್ಳುತ್ತಿದೆ. ಮೂಲಕ ಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡುತ್ತಿದ್ದು, 11,11, 111 ಕೋಟಿ ರೂ ವಿನಿಯೋಗಿಸಲಾಗುತ್ತದೆ. ಮೂರು ಪ್ರಮುಖ ರೈಲ್ವೆ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ನಗರ ಪ್ರದೇಶಗಳಲ್ಲಿ ಸಾರಿಗೆ ಸೌಕರ್ಯ ಸರಳೀಕರಣಗೊಳಿಸಲು ಮೆಟ್ರೋ ರೈಲು ಆರಂಭಕ್ಕೆ ಒತ್ತು ನೀಡುತ್ತಿದೆ. ಒಂದೇ ಭಾರತ ರೈಲುಗಳನ್ನು ಅಭಿವೃದ್ಧಿ ಪಡಿಸಲಿದೆ. 

11:36 AM (IST) Feb 01

ಅತ್ಯುತ್ತಮ ಸೇವೆಗ ಒತ್ತು

ಹೊಸ ಹೊಸ ಸಂಶೋಧನಗಳಿಂದ ಹೊಸ ರೀತಿಯ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಜೈ ಜವಾನ್, ಜೈ ಕಿಸಾನ್ ಮತ್ತು ಜೈ ಅನುಸಾಂಧಾನ್ ಎಂಬ ಘೋಷ ವಾಕ್ಯದೊಂದಿಗೆ ಹೊಸ ಹೊಸ ಸಂಶೋಧನೆಗಳಿಗೆ ನೆರವು ನೀಡಲಾಗುತ್ತದೆ. ಒಟ್ಟಿನಲ್ಲಿ ಮುಂದಿನ ಐದು ವರ್ಷ ಭಾರತ ನಿರಂತರವಾಗಿ ಅಭಿವೃದ್ಧಿ ಕಾಣುತ್ತಲೇ ಇರುತ್ತದೆ. 

 

11:33 AM (IST) Feb 01

ತೈಲ ಬೀಜಗಳಿಗೆ ಸಂಶೋಧನೆ ಒತ್ತು

ಆಧುನಿಕ ರೈತ ಪದ್ಧತಿ ಕಡೆ ಗಮನ ಹರಿಸಿ, ಭಾರತ ವಿಶ್ವದಲ್ಲಿ ಹೆಚ್ಚು ಹಾಲು ಉತ್ಪನ್ನವಾಗುವ ದೇಶವಾಗಿ ಹೊರಹೊಮ್ಮಿದೆ ಮತ್ಸ್ಯ ಸಂಪದ ಎಂಬ ಯೋಜನೆ ಜಾರಿಗೊಳಿಸಲಿದೆ. ಆತ್ಮನಿರ್ಭರ್ ತೈಲ ಬೀಜ ಅಭಿಯಾನದಿಂದ ಸಾಸಿವೆ, ಸೂರ್ಯ ಕಾಂತಿ ಸೇರಿ ಪ್ರತಿಯೊಂದೂ  ಕೃಷಿ ಉತ್ಪನ್ನಗಳಿಂದ ಎಣ್ಣೆ ಉತ್ಪಾದಿಸಲಿದೆ. 

 

11:30 AM (IST) Feb 01

ಆಯುಷ್ಮಾನ್ ಭಾರತ ಯೋಜನೆ ವಿಸ್ತರಣೆ

ರೈತರ ಆದಾಯ ಹೆಚ್ಚಿಸಿ, ಅವರಿಗೆ ಅಗತ್ಯವಾದ ನೆರವು ನೀಡಲು ಭಾರತ ಬದ್ಧವಾಗಿದೆ. ವೈಯಕತ್ತಿ ನೆರವು ಸೇರಿ, ಸ್ಮಾಲ್ ಹೆಲ್ಪ್ ಗ್ರೂಪ್‌ಗೆಳಿಗೆ ಸರಕಾರ ನೀಡುತ್ತಿರುವ ನೆರವು, ಆರ್ಥಿಕವಾಗಿ ಸಬಲರಾಗಲು ಅನುವು ಮಾಡಿಕೊಡುತ್ತಿದೆ. ರೈತರಿಗೆ ನೆರವು ಆಗಲು, ಅವರ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು, ಬೆಳೆ ಸಂರಕ್ಷಿಸಲು ಅಗತ್ಯ ನೆರವು ನೀಡಲಾಗುತ್ತದೆ. 

 

11:28 AM (IST) Feb 01

ಅಮೃತಕಾಲದ ಗುರಿ ಸಾಧಿಸುವಲ್ಲಿ ಭಾರತ ಯಶಸ್ವಿ

1 ಕೋಟಿ ಮನೆಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಿದ್ದು, 3 ಕೋಟಿ ಹೊಸ ಮನೆ ನಿರ್ಮಾಣದ ಗುರಿ ಹೊಂದಿದೆ. ಸರಕಾರ ಇರೋ ಆಸ್ಪತ್ರೆಗಳನ್ನು ಉನ್ನತೀಕರಿಸಿ, ಮತ್ತಷ್ಟು ಮೆಡಿಕಲು ಕಾಲೇಜು ನಿರ್ಮಾಣಕ್ಕೆ ಒತ್ತು ನೀಡಲಿದೆ. ಸರ್ವೈಕಲ್ ಕ್ಯಾನ್ಸರ್‌ಗೆ ಅಗತ್ಯ ಮೆಡಿಸನ್ ಸಂಶೋದನೆಗೆ ಒತ್ತು ನೀಡಲಾಗುತ್ತಿದ್ದು, ಈ ರೋಗದಿಂದ ಬಳಲುತ್ತಿರುವವರಿಗೆ ಅನುಕೂಲವಾಗಲಿದೆ. 

11:25 AM (IST) Feb 01

ಜಾಗತಿಕ ಯುದ್ಧ, ಸಂಘರ್ಷ ಭಾರತದ ಮೇಲೂ ಬೀರಿದೆ ಪ್ರಭಾವ

ಕೋವಿಡ್ ನಂತರ ವಿಶ್ವದಲ್ಲಿ ಹಲವು ಬದಲಾವಣೆಗಳಾಗಿದ್ದು, ಭಾರತದ ಮೇಲೂ ಪರಿಣಾಮ ಬೀರಿದೆ. ಆದರೂ ಭಾರತ 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗುವಲ್ಲಿ ಸಕಲ ಸಿದ್ಧವಾಗಿದೆ. ಸರಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದು, ದೇಶದ ಆರ್ಥಿಕತೆಗೆ ಅವರ ಕೊಡುಗೆ ಹೆಚ್ಚಿಸಲು ಸಕಲ ನೆರವು ನೀಡಲಾಗುತ್ತಿದೆ. 

11:23 AM (IST) Feb 01

ಬೆಲೆ ನಿಯಂತ್ರಣಕ್ಕೆ ಕ್ರಮ

ಕ್ಲೈಮೇಟ್ ಚೆಂಜ್ ಸೇರಿ ಜಾಗತಿಕ ಬದಲಾವಣೆಗಳು ಆರ್ಥಿಕ ಪರಿಸ್ಥಿತಿ ಮೇಲೂ ಪರಿಣಾಮ ಬೀರುತ್ತಿದ್ದು, ಎಲ್ಲವನ್ನೂ ಎದುರಿಸಲು ಭಾರತ ಸನ್ನದ್ಧವಾಗಿದೆ. ಎಲ್ಲರ ವಿಶ್ವಾಸದೊಂದಿಗೆ ಮುಂದಿನ 5 ವರ್ಷಗಳಲ್ಲಿ ಸುವರ್ಣ ಭಾರತವನ್ನು ಕಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಬ್ ಕಾ ಪ್ರಯಾಸ್ ಎಂಬ ಘೋಷ ವಾಕ್ಯಕ್ಕೆ ಒತ್ತು ನೀಡಲಾಗುತ್ತದೆ. ಇಡೀ ಜಗತ್ತೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಭಾರತ ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಶ್ವಿಯಾಗಿದೆ. 

11:20 AM (IST) Feb 01

ಆರ್ಥಿಕ ನಿರ್ವಹಣೆಯಲ್ಲಿ ಯಶಸ್ವಿ

ಮೂಲಕ ಸೌಕರ್ಯ ಸೇರಿ ಡಿಜಿಟಲಿ ಪ್ರಗತಿ ಕಾಣುವಲ್ಲಿ ಯಶಸ್ವಿಯಾಗಿದೆ. ಡಿಜಿಟಲ್ ಇನ್‌ಫ್ರಾಸ್ಟ್ರಕ್ಟರ್ ಹೆಚ್ಚಿಸಿ, ಒನ್ ನೇಷನ್, ಒನ್ ಮಾರ್ಕೆಟ್, ಒನ್ ಟ್ಯಾಕ್ಸ್ ನಿಮಯ ಜಾರಿಗೊಳಿಸಿ ತೆರಿಗೆ ಕಟ್ಟುವುದನ್ನು ಸರಣೀಕರಣಗೊಳಿಸಿದೆ. ಪ್ರತಿಯೊಬ್ಬ ಭಾರತೀಯನ ಕನಸು ಸಾಕಾರಗೊಳಿಸಲು ಸರಕಾರ ಯತ್ನಿಸುತ್ತಿದೆ. ಅಭಿವೃದ್ಧಿ ಕಾರ್ಯಗಳು ಬೇಗ ಬೇಗ ಮುಗಿಯುತ್ತಿದ್ದು, ಕ್ಲೈಮೇಟ್ ಬದಲಾವಣೆ ಕಡೆಗೂ ಸರಕಾರ ಒತ್ತು ನೀಡಿದೆ. 

11:17 AM (IST) Feb 01

ಸ್ಪೋರ್ಟ್ಸ್‌ಗೆ, ಮಹಿಳೆಯರ ಸ್ವಾವಲಂಬನೆಗೆ ಒತ್ತು

ಮಹಿಳೆಯರ ಗೌರವ ಹೆಚ್ಚಿಸಲು ಮುದ್ರಾ ಯೋಜನೆ ಪರಿಚಯಿಸುತ್ತಿದ್ದು, ಆರ್ಥಿಕವಾಗಿ ಸಬಲರಾಗಲು ಸರಕಾರ ಅನುದಾನ ನೀಡುತ್ತಿದೆ. ಮಹಿಳೆಯ ಗೌರವ ಹೆಚ್ಚಿಸಲು ಅಗತ್ಯ ಯೋಜನೆಗಳೊಂದಿಗೆ ಪಿಎಂ ಆವಾಜ್ ಯೋಜನೆಯಡಿಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ಮನೆ ನಿರ್ಮಿಸಲು ನೆರವಾಗುತ್ತಿದೆ. 10 ವರ್ಷಗಳಲ್ಲಿ ಶೇ.28 ಉನ್ನತ ಶಿಕ್ಷಣ ಪಡೆದಿದ್ದು, ಏಷ್ಯನ್ ಗೇಮ್ ಸೇರಿ ವಿಶ್ವ ಕ್ರೀಡಾ ಸ್ಪರ್ಧೆಗಳಲ್ಲಿ ಇತ್ತೀಚೆಗೆ ಭಾರತೀಯರ ಗೆಲವು ಹೆಚ್ಚುತ್ತಿದೆ. ತ್ರಿವಳಿ ತಲಾಖ್ ನಿಷೇಧ ಸೇರಿ ಮಹಿಳೆಯರ ಗೌರವ ಕಾಪಾಡಲು ಹಾಗೂ ಸಬಲೀಕರಣಕ್ಕೆ ಸರಕಾರ ಏನೇನು ಮಾಡಬಹುದೋ ಅವನ್ನು ಮಾಡುತ್ತಿದೆ. 

11:14 AM (IST) Feb 01

ಬುಡಕಟ್ಟು ಜನರ ಕೈ ಬಿಡದ ಮೋದಿ ಸರಕಾರ

ಯಾರ ಹಿಂದುಳಿದ ಜನರನ್ನೂ ಕೈ ಬಿಡಿದ ಸರಕಾರ, ಬುಡುಕಟ್ಟು ಜನರಿಗೆ ಸಕಲ ಯೋಜನೆಗಳನ್ನು ತಲುಪಿಸುವಂತೆ ಮಾಡುತ್ತಿದೆ. ಯುವಕರಿಗೆ ಸ್ಟಾರ್ಟ್ ಅಪ್ ಉದ್ಯಮವನ್ನು ಆರಂಭಿಸಲು ರೋಜಗಾರ್ ದಾತಾ ಎಂಬ ಯೋಜನೆಯಡಿಯಲ್ಲಿ ಸಹಕರಿಸುತ್ತಿದೆ. ಇದರಿಂದ ಯುವಕರ ವಿಶ್ವಾಸವನ್ನು ಹೆಚ್ಚಿಸುತ್ತಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕರಿಸುತ್ತಿದೆ. 

11:12 AM (IST) Feb 01

ಭ್ರಷ್ಟಚಾರಕ್ಕೆ ಕಡಿವಾಣ ಹಾಕಿದ ಸರಕಾರ

ಬಡವರ ಕಲ್ಯಾಣ, ದೇಶದ ಕಲ್ಯಾಣವೆಂಬುವುದನ್ನು ನಮ್ಮ ಸರಕಾರ ನಂಬಿದ್ದು, ಮಂಗಳಮುಖಿಯರಿಂದ ಹಿಡಿದು, ಪ್ರತಿಯೊಬ್ಬರ ಕಲ್ಯಾಣಕ್ಕೂ ಒತ್ತು ನೀಡಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೋಟ್ಯಾಂತರ ರೈತರಿಗೆ ನೇರವಾಗಿ ಹಣ ತಲುಪಿದ್ದು, ಪಿಎಂ ಫಸಲ್ ಭೀಮಾ ಯೋಜನೆಯಡಿಯಲ್ಲೂ ದೇಶದ ಅನ್ನದಾತರಿಗೆ ನೆರವಾಗುತ್ತಿದೆ. 

 

11:10 AM (IST) Feb 01

ಸಾಮಾಜಿಕ ನ್ಯಾಯಕ್ಕೆ ಸರಕಾರದ ಒತ್ತು

ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರಿಗೆ ಹಲವು ವಿಧಗಳಿಂದ ಸ್ವಾತಂತ್ರ್ಯ ಕೊಡಲು ಯತ್ನಿಸಿದೆ. ಫಲಾನುಭವಿಗಳಿಗೆ ನೇರವಾಗ ಆರ್ಥಿಕ ನೆರವು ನೀಡುವಲ್ಲಿ ಯಶಸ್ವಿಯಾಗಿದೆ. ಬಡವರು, ಮಹಿಳೆ ಹಾಗೂ ಸರ್ವರ ಕಲ್ಯಾಣಕ್ಕಾಗಿ ಒತ್ತು ನೀಡಿವೆ. 

11:09 AM (IST) Feb 01

​​​​​​​ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದ ಮೋದಿ ಸರಕಾರ

ಮೋದಿ ಸರಕಾರ ಪ್ರತಿಯೊಬ್ಬರ ಭಾರತೀಯನಿಗೆ ನೀರು, ಸೂರು, ವಿದ್ಯುತ್, ಗ್ಯಾಸ್ ನೀಡಲು ಶ್ರಮಿಸುತ್ತಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಭಾರತದ ಆರ್ಥಿಕ ಪರಿಸ್ಥತಿಯಲ್ಲಿ ಗ್ರಾಮೀಣಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನೀತಿ ನಿಮಯಗಳನ್ನು ರೂಪಿಸಲಾಗುತ್ತಿದೆ. 

 

11:03 AM (IST) Feb 01

ಬಜೆಟ್ ಭಾಷಣ ಆರಂಭಿಸಿದ ನಿರ್ಮಲಾ ಸೀತರಾಮನ್

ಕಳೆದ 10 ವರ್ಷಗಳಿಂದಲೂ ಭಾರತದ ಆರ್ಥಿಕತೆ ಪ್ರಗತಿಯ ಹಂತದಲ್ಲಿದ್ದು, ಉದ್ಯೋಗಕ್ಕೆ ಹಾಗೂ ಆಟೋಮೊಬೈಲ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ನೆರವು ನೀಡಲು ಭಾರತ ಸರಕಾರ ಕಟಿಬದ್ಧವಾಗಿದೆ. ಉದ್ಯಮಿಗಳಿಗೆ ಎಷ್ಟು ಸಾಧ್ಯವೋ ಅಷ್ಟು ಧನ ಸಹಾಯ ಮಾಡಲು ಮೋದಿ ಸರಕಾರ ಮುಂದಾಗಿದ್ದು, ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ವಿಕಾಸ್ ತತ್ವಕ್ಕೆ ಬದ್ಧವಾಗಿದೆ.. 

- ನಿರ್ಮಲಾ 

 


More Trending News