Union Budget 2022: ನಾರಿಗೆ ಶಕ್ತಿ ತುಂಬಿದ ಬಜೆಟ್; ಮಹಿಳಾ ಸಬಲೀಕರಣಕ್ಕೆ ಯಾವೆಲ್ಲ ಕಾರ್ಯಕ್ರಮಗಳು ಘೋಷಣೆಯಾಗಿವೆ?

By Suvarna News  |  First Published Feb 1, 2022, 3:47 PM IST

*ಮಹಿಳಾ ಸಬಲೀಕರಣಕ್ಕಾಗಿ ಮೂರು ಯೋಜನೆ ಘೋಷಣೆ
* ಮಹಿಳೆಯರಿಗಾಗಿ ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ  ಮತ್ತು ಸಕ್ಷಮ್ ಅಂಗನವಾಡಿ ಹಾಗೂ ಪೋಶನ್  2.0 ಯೋಜನೆ
* 2 ಲಕ್ಷ ಅಂಗನವಾಡಿಗಳ ಅಭಿವೃದ್ಧಿಗೆ ಒತ್ತು


ನವದೆಹಲಿ (ಫೆ.1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ.1) ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿ ತಮ್ಮ ನಾಲ್ಕನೇ ಬಜೆಟ್ ಭಾಷಣದಲ್ಲಿ ಕೆಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಆ ಮೂಲಕ ಈ ಬಾರಿಯ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯರ  ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸೋ ಜೊತೆಗೆ ಹಳೆಯ ಯೋಜನೆಗಳಿಗೆ ಹೊಸ ರೂಪ ನೀಡಿದೆ ಕೂಡ. 

ನಾರಿಶಕ್ತಿ ಹೆಚ್ಚಳಕ್ಕೆ ಮೂರು ಯೋಜನೆ
ನಾರಿಶಕ್ತಿ ಮಹತ್ವವನ್ನು ಮನಗಂಡಿರೋ ಸರ್ಕಾರ, ಬಜೆಟ್ ನಲ್ಲಿ ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನೆಗಳಿಗೆ ಹೊಸ ರೂಪ ನೀಡಿದೆ. ಇದರ ಅನ್ವಯ  ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ  ಮತ್ತು ಸಕ್ಷಮ್ ಅಂಗನವಾಡಿ ಹಾಗೂ ಪೋಶನ್  2.0 ಎಂಬ ಮೂರು ಯೋಜನೆಗಳನ್ನು ಸರ್ಕಾರ ಘೋಷಿಸಿದೆ. 

Tap to resize

Latest Videos

undefined

Union Budget 2022 : ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಸರ್ಕಾರದ ಒಪ್ಪಿಗೆ

ಮಿಷನ್​ ವಾತ್ಸಲ್ಯ
ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಮಿಷನ್ ವಾತ್ಸಲ್ಯ ಯೋಜನೆ ಆರಂಭಿಸಿದೆ. ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಯೋಜನೆಗಳು ಮಿಷನ್ ವಾತ್ಸಲ್ಯ ಯೋಜನೆಯನ್ನು ಬಲಪಡಿಸುತ್ತವೆ

ಸಕ್ಷಮ್  ಅಂಗನವಾಡಿ  ಹಾಗೂ ಪೋಶನ್  2.0
ಸಕ್ಷಮ್ ಅಂಗನವಾಡಿಗಳು ಹೊಸ ತಲೆಮಾರಿನ ಅಂಗನವಾಡಿಗಳಾಗಿವೆ. ಈ ಯೋಜನೆಯಡಿಯಲ್ಲಿ  ಅಂಗನವಾಡಿಗಳಲ್ಲಿ ಉತ್ತಮ ಮೂಲಸೌಕರ್ಯ, ಆಡಿಯೋ ವಿಷ್ಯುವಲ್​ ಸಾಧನ, ಶುದ್ಧ ಇಂಧನ ಸೌಲಭ್ಯಗಳನ್ನು ಹೊಂದಲಿವೆ. ಈ ಅಂಗನವಾಡಿಗಳಲ್ಲಿ ಮಕ್ಕಳ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.  ಈ ಯೋಜನೆಯಡಿಯಲ್ಲಿ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗೋದೆಂದು ಬಜೆಟ್ ನಲ್ಲಿ ಸರ್ಕಾರ ತಿಳಿಸಿದೆ. ಈ ಯೋಜನೆಯಡಿ ಸರ್ಕಾರ ಶಿಶುಗಳ ಪೌಷ್ಟಿಕಾಂಶ ಹೆಚ್ಚಳಕ್ಕೆ ತಗಲುವ ವೆಚ್ಚವನ್ನು ಭರಿಸಲಿದೆ. ಈ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರೋ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶಗಳನ್ನು ಒದಗಿಸಲಾಗುತ್ತದೆ. ಪೌಷ್ಟಿಕಾಂಶ  2.0  ಯೋಜನೆ 'ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು' (ICDS),ಅಂಗನವಾಡಿ ಸೇವೆಗಳು ಮತ್ತು ಕೆಲವು ಇತರ ಯೋಜನೆಗಳನ್ನು ಒಳಗೊಂಡಿದೆ. ಐಸಿಡಿಎಸ್ ಯೋಜನೆಯಡಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಆಹಾರ, ಶಾಲಾಪೂರ್ವ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಲಸಿಕೆ ಮತ್ತು ಆರೋಗ್ಯ ತಪಾಸಣೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 

Union Budget 2022: ನಿರ್ಮಲಾ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?

ಕಳೆದ ವರ್ಷದ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಕ್ಷಮ್  ಅಂಗನವಾಡಿ  ಹಾಗೂ ಪೋಶನ್  2.0 ಕಾರ್ಯಕ್ರಮಕ್ಕೆ 20,105ಕೋಟಿ ರೂ. ಮೀಸಲಿಟ್ಟಿದ್ದರು. ಮಿಷನ್ ವಾತ್ಸಲ್ಯ ಯೋಜನೆಗೆ 900 ಕೋಟಿ ರೂ. ಹಾಗೂ ಮಿಷನ್ ಶಕ್ತಿಗೆ 3,109 ಕೋಟಿ ರೂ. ಮೀಸಲಿಟ್ಟಿದ್ದರು. 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಾಹಿತಿ ಅನ್ವಯ 2011ರ ಜನಗಣತಿ ಪ್ರಕಾರ ಮಹಿಳೆಯರು ಮತ್ತು ಮಕ್ಕಳು ಭಾರತದ ಒಟ್ಟು ಜನಸಂಖ್ಯೆಯ 67.7% ರಷ್ಟಿದ್ದಾರೆ.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಕೊರೋನಾ ಕಾರಣದಿಂದ ಸಾಕಷ್ಟು ಸಮಸ್ಯೆಗಳೊಳಗಾಗಿರೋ ವಿವಿಧ ವಲಯಗಳಿಗೆ ಚೇತರಿಕೆ ನೀಡುವಂಥ ಪ್ರಯತ್ನವನ್ನು ಬಜೆಟ್ ನಲ್ಲಿ ಮಾಡಲಾಗಿದೆ.ಗ್ರಾಮೀಣ ಭಾಗದ ಅದ್ರಲ್ಲೂ ಬುಡಕಟ್ಟು ಜನಾಂಗದ ಮಕ್ಕಳು ಎರಡು ವರ್ಷ ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂಥ ಮಕ್ಕಳಿಗಾಗಿ 'ಒಂದು ವರ್ಗ ಒಂದು ಟಿವಿ ಚಾನೆಲ್' ಅಡಿಯಲ್ಲಿ ಟಿವಿ ಚಾನೆಲ್ ಗಳನ್ನು 12ರಿಂದ 200 ಕ್ಕೆ ಹೆಚ್ಚಿಸಲಾಗೋದು. 1-12ತರಗತಿಗಳ ತನಕದ ಮಕ್ಕಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಸಪ್ಲಿಮೆಂಟರಿ ಶಿಕ್ಷಣ ನೀಡೋ ಬಗ್ಗೆ ಕೂಡ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. 

click me!