Karnataka Budget: ಮಕ್ಕಳ ಕಾಳಜಿಗೆ ಸರ್ಕಾರದ ಆದ್ಯತೆ, 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!

Published : Mar 06, 2026, 11:11 AM IST
Karnataka Budget 2026

ಸಾರಾಂಶ

ಸಿದ್ದರಾಮಯ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಷೇಧಿಸಿದೆ. ಮಕ್ಕಳ ಮೇಲೆ ಮೊಬೈಲ್ ಬಳಕೆಯ ಅಡ್ಡಪರಿಣಾಮಗಳನ್ನು ತಡೆಯುವ ಈ ನಿರ್ಧಾರಕ್ಕೆ ಬೆಂಬಲ. ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸುವ ಮೂಲಕ ಈ ನಿಯಮವನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು (ಮಾ.06): ರಾಜ್ಯದಲ್ಲಿ ಮಕ್ಕಳ ಕಾಳಜಿಗೆ ಆದ್ಯತೆ ನೀಡಿರುವ ಸಿದ್ದರಾಮಯ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿಯೇ 16 ವರ್ಷದೊಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಷೇಧಿಸಲಾಗಿದೆ.

ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುತ್ತಿರುವ ಅಡ್ಡಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಸೋಶಿಯಲ್ ಮೀಡಿಯಾ ಬಳಕೆಯಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದ್ದವು. ಮಕ್ಕಳಿಗೆ ಶಾಲೆಯ ಆನ್‌ಲೈನ್ ಕ್ಲಾಸ್ ಕೇಳಲು ಮೊಬೈಲ್ ಕೊಡಿಸಿದರೆ, ಅವರು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದರು. ಮಕ್ಕಳು ಸೋಶಿಲ್ ಮೀಡಿಯಾ ಬಳಕೆಗೆ ತಮ್ಮದೇ ಲಾಗಿನ್ ಮಾಡಿಕೊಂಡು ಬಳಕೆ ಮಾಡುತ್ತಿದ್ದರು. ಆದರೆ, ಇದೀಗ 16 ವರ್ಷದೊಳಗಿನ ಮಕ್ಕಳು ಲಾಗಿನ್ ಮಾಡುವುದಕ್ಕೂ ಮುನ್ನ ವಯಸ್ಸಿನ ದೃಢೀಕರಣ ಮಾಡುವುದನ್ನ ಕಡ್ಡಾಯ ಮಾಡಲಾಗುತ್ತಿದೆ.

ಪೋಷಕರು ಮತ್ತು ತಜ್ಞರ ಸ್ವಾಗತ:

ಸರ್ಕಾರದ ಈ ನಿರ್ಧಾರಕ್ಕೆ ಪೋಷಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಆನ್‌ಲೈನ್ ಗೇಮ್‌ಗಳು ಮತ್ತು ಕಿರು ವಿಡಿಯೋಗಳ ಗೀಳಿನಿಂದ ಮಕ್ಕಳು ಓದಿನಿಂದ ವಂಚಿತರಾಗುತ್ತಿದ್ದರು. ಈಗ ಸರ್ಕಾರದ ಈ ಕ್ರಮವು ಪೋಷಕರಿಗೆ ದೊಡ್ಡ ಸಮಾಧಾನ ತಂದಿದೆ. ಶಿಕ್ಷಣ ತಜ್ಞರು ಮತ್ತು ಮನೋವೈದ್ಯರು ಕೂಡ ಸರ್ಕಾರದ ಈ ಧೈರ್ಯದ ನಡೆಯನ್ನು ಶ್ಲಾಘಿಸಿದ್ದು, ಇದು ಮಕ್ಕಳ ಸೃಜನಶೀಲತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ಸವಾಲುಗಳು ಮತ್ತು ಮುಂದಿನ ಹಾದಿ:

ಆದರೆ, ಈ ನಿಷೇಧವನ್ನು ತಾಂತ್ರಿಕವಾಗಿ ಹೇಗೆ ಜಾರಿಗೆ ತರಲಾಗುತ್ತದೆ ಎಂಬ ಕುರಿತು ಕುತೂಹಲ ಮೂಡಿದೆ. ವಯಸ್ಸಿನ ದೃಢೀಕರಣ (Age Verification) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವಂತೆ ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡುವ ಸಾಧ್ಯತೆಯಿದೆ. ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕಠಿಣ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

PREV
Read more Articles on
click me!

Recommended Stories

ಸಿದ್ದರಾಮಯ್ಯ ಬಜೆಟ್‌ನಲ್ಲಿ ಮತ್ತೆ ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿ ತಗೊಳೋರಿಗೆ ಬೀಳುತ್ತೆ ಹೆಚ್ಚುವರಿ ಟ್ಯಾಕ್ಸ್!
Interest-Free Loan: ಬಡ್ಡಿಯೇ ಇಲ್ಲದ ಸಾಲ ಸಿಗುತ್ತೆ ನೋಡಿ... ಅಸಲು ಕಟ್ಟಿದರೆ ಸಾಕು, 0 % ಬಡ್ಡಿ-100% ಖುಷಿ!