ಎಮಿರೆಟ್ಸ್ ಡ್ರಾದಲ್ಲಿ ₹33 ಕೋಟಿ ಗೆದ್ದ ಭಾರತೀಯ ಅಕೌಂಟೆಂಟ್, ಬೆಂಗಳೂರಲ್ಲಿ ಓದಿದ ಯುವಕನ ರೋಚಕ ಕತೆ

Published : Oct 08, 2026, 11:39 AM IST
UAE Emirates Draw

ಸಾರಾಂಶ

ಎಮಿರೆಟ್ಸ್ ಡ್ರಾದಲ್ಲಿ ಭಾರತೀಯ ಮೂಲದ ಅಕೌಂಟೆಂಟ್ ಬರೋಬ್ಬರಿ 33 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾನೆ. ವಿಶೇಷ ಅಂದರೆ ಈ ಯುವಕ ತನ್ನ ವಿದ್ಯಾಭ್ಯಾಸ ಪೂರೈಸಿದ್ದು ಬೆಂಗಳೂರಿನಲ್ಲಿ. ಯುವಕ ರೋಚಕ ಸ್ಟೋರಿ ಇಲ್ಲಿದೆ.

ಯುಎಐ (ಅ.08): ಉದ್ಯೋಗದ ನಡುವೆ ಸಿಕ್ಕ ಸಣ್ಣ ವಿಶ್ರಾಂತಿ ಸಮಯದಲ್ಲಿ ಬಂದ ಒಂದು ಫೋನ್ ಕರೆ, ಕೇರಳ ಮೂಲದ 26 ವರ್ಷದ ಯುವಕನ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಯುಎಇ ಮೂಲದ ಪ್ರಸಿದ್ಧ 'ಎಮಿರೆಟ್ಸ್ ಡ್ರಾ' (Emirates Draw) ಲಾಟರಿಯಲ್ಲಿ ಭರ್ಜರಿ ಮೊತ್ತವನ್ನು ಗೆಲ್ಲುವ ಮೂಲಕ ಭಾರತೀಯ ಮೂಲದ ಅಕೌಂಟೆಂಟ್ ಮೆಲ್ವಿನ್ ಫ್ರಾನ್ಸಿಸ್ ಹೊಸ ದಾಖಲೆ ಬರೆದಿದ್ದಾರೆ.

ಕೆಲಸದ ನಡುವೆ ಬಂತು ಫೋನ್ ಕಾಲ್

ಆಗಸ್ಟ್ 26ರಂದು ಆಫೀಸ್ ಕೆಲಸದ ನಡುವೆ ಮೆಲ್ವಿನ್ ಫ್ರಾನ್ಸಿಸ್ ಅವರಿಗೆ ಎಮಿರೆಟ್ಸ್ ಡ್ರಾದಿಂದ ಕರೆ ಬಂದಾಗ, ಅವರ ಪಕ್ಕದಲ್ಲೇ ಸಹೋದ್ಯೋಗಿಯೊಬ್ಬರು ಕುಳಿತಿದ್ದರು. ಕರೆ ಮಾಡಿದವರು ತಮಗೆ $4 ಮಿಲಿಯನ್ (ಸುಮಾರು ₹33.5 ಕೋಟಿಗೂ ಹೆಚ್ಚು) ಜಾಕ್‌ಪಾಟ್ ಒಲಿದಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು. ಆದರೆ, ಮೆಲ್ವಿನ್ ಯಾವುದೇ ಅತಿರೇಕದ ಉದ್ವೇಗ ತೋರಿಸದೆ ಅತ್ಯಂತ ಶಾಂತವಾಗಿ ಆ ಕರೆಯನ್ನು ಸ್ವೀಕರಿಸಿದರು.

ಆಗಸ್ಟ್ 21, 2026 ರಂದು ಮೆಲ್ವಿನ್ ಒಟ್ಟು 11 EASY6 ಟಿಕೆಟ್‌ಗಳನ್ನು ಖರೀದಿಸಿದ್ದರು. ಇದರಲ್ಲಿ 5 ಟಿಕೆಟ್‌ಗಳಿಗೆ ಬಹುಮಾನ ಬಂದಿದ್ದು, ಎಮಿರೆಟ್ಸ್ ಡ್ರಾ ಇತಿಹಾಸದಲ್ಲೇ ಒಂದೇ ದಿನ ಆಟದ ಎಲ್ಲಾ ಬಹುಮಾನ ವಿಭಾಗಗಳನ್ನು (All Prize Tiers) ಹಾಗೂ ಗ್ರ್ಯಾಂಡ್ ಪ್ರೈಜ್ ಒಟ್ಟಿಗೆ ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅತ್ಯಂತ ಕಿರಿಯ ಗ್ರ್ಯಾಂಡ್ ಪ್ರೈಜ್ ವಿಜೇತಎಮಿರೆಟ್ಸ್ ಡ್ರಾದಲ್ಲಿ ಇಲ್ಲಿಯವರೆಗೆ $4 ಮಿಲಿಯನ್ ಗ್ರ್ಯಾಂಡ್ ಪ್ರೈಜ್ ಗೆದ್ದ ಒಂಬತ್ತು ವಿಜೇತರ ಪೈಕಿ 26 ವರ್ಷದ ಮೆಲ್ವಿನ್ ಫ್ರಾನ್ಸಿಸ್ ಅತ್ಯಂತ ಕಿರಿಯ ವಯಸ್ಸಿನ ಗ್ರ್ಯಾಂಡ್ ಪ್ರೈಜ್ ವಿಜೇತರಾಗಿದ್ದಾರೆ.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಮೆಲ್ವಿನ್

ಕೇರಳದಲ್ಲಿ ಜನಿಸಿದ ಮೆಲ್ವಿನ್, ತಮ್ಮ ಉನ್ನತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರು. "ನನಗೆ ಸೈನ್ಸ್‌ನಲ್ಲಿ ಆಸಕ್ತಿ ಇರಲಿಲ್ಲ, ಬದಲಿಗೆ ಸಂಖ್ಯೆಗಳೊಂದಿಗೆ ಆಟವಾಡುವುದು ಇಷ್ಟವಿತ್ತು" ಎಂದು ಹೇಳುವ ಅವರು ಬೆಂಗಳೂರಿನಲ್ಲಿ ಅಕೌಂಟಿಂಗ್ ಶಿಕ್ಷಣ ಪೂರ್ಣಗೊಳಿಸಿದರು. ಓದಿನ ಜೊತೆಗೆ ಕೆಲಸವನ್ನೂ ಮಾಡುತ್ತಿದ್ದರಿಂದ ಅವರ ಡಿಗ್ರಿ ಪೂರ್ಣಗೊಳ್ಳಲು ಕೊಂಚ ತಡವಾಗಿತ್ತು.

ತಮ್ಮ ಮೊದಲ ಸಂಬಳ ಬಂದಾಗ ಅದನ್ನು ತಂದೆಯ ಕೈಗಿಟ್ಟು, ತಮಗೆ ಅಗತ್ಯವಿದ್ದಷ್ಟನ್ನು ಮಾತ್ರ ಪಡೆದುಕೊಂಡಿದ್ದರು. ಪ್ರಸ್ತುತ ಜಿಸಿಚಿ (GCC) ರಾಷ್ಟ್ರದಲ್ಲಿ ತಮ್ಮ ತಂದೆಯ ಜೊತೆ ಕುಟುಂಬದ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೆಲ್ವಿನ್, ಕೆಲಸದ ಜೊತೆಯಲ್ಲೇ US CMA ಪೂರ್ಣಗೊಳಿಸಿದ್ದು, ಆನ್‌ಲೈನ್ MBA ಮಾಡುತ್ತಿದ್ದಾರೆ.

30 ವರ್ಷ ವಯಸ್ಸಿನವರೆಗೆ ಕಷ್ಟಪಟ್ಟು ದುಡಿದು ಹಣ ಉಳಿಸು, ಆಮೇಲೆ ವಿಶ್ರಾಂತಿ ಪಡೆ ಎಂದು ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದರು. ಆದರೆ ಈಗ ನನಗೆ 26 ವರ್ಷ. ಈ ಬಹುಮಾನದ ಮೊತ್ತ ಬಂದಿರುವುದರಿಂದ ನಾನು 30 ವರ್ಷದವರೆಗೆ ಕಾಯಬೇಕಾದ ಅಗತ್ಯವಿಲ್ಲ ಎಂದು ಮೆಲ್ವಿನ್ ಸಂತಸದಿಂದ ತಾಯಿ ಸಲಹೆ ನೆನಪಿಸಿಕೊಂಡಿದ್ದಾರೆ.

ಮೆಲ್ವಿನ್ ಅವರಿಗೆ ಎಮಿರೆಟ್ಸ್ ಡ್ರಾ ಬಗ್ಗೆ ಮೊದಲು ತಿಳಿದಿದ್ದು ಇನ್‌ಸ್ಟಾಗ್ರಾಮ್‌ ಮೂಲಕ. $27 ಮಿಲಿಯನ್ ಗೆದ್ದ ಶ್ರೀರಾಮ್ ಹಾಗೂ $4 ಮಿಲಿಯನ್ ಗೆದ್ದ ಅಜಯ್ ಅವರ ಸಂದರ್ಶನ ನೋಡಿ ಪ್ರೇರಿತರಾಗಿದ್ದರು. ಜೂನ್ 14, 2026 ರಂದು ತಮ್ಮ ಜನ್ಮದಿನದ ನಂತರ ಮೊದಲ ಟಿಕೆಟ್ ಖರೀದಿಸಿ $14 ಗೆದ್ದಿದ್ದರು. ನಂತರ ಟಿಕೆಟ್ ದರ ಮತ್ತು ಗೆಲ್ಲುವ ಸಾಧ್ಯತೆಗಳನ್ನು ವಿಶ್ಲೇಷಿಸಿ EASY6 ಆಟವನ್ನು ಆರಿಸಿಕೊಂಡರು.

ತಾವು ಆರಿಸುವ ಸಂಖ್ಯೆಗಳಿಗಾಗಿ ಅವರು ರ‍್ಯಾಂಡಮೈಜರ್ (Randomiser) ಆಯ್ಕೆಯನ್ನು ಬಳಸುತ್ತಿದ್ದರು. ಪ್ರತಿ ಟಿಕೆಟ್‌ನಲ್ಲಿ ಸೂಕ್ತ ಸಂಖ್ಯೆಗಳ ಸೆಟ್ ಸಿಗುವವರೆಗೂ ಆ ಐಕಾನ್ ಅನ್ನು ಕ್ಲಿಕ್ ಮಾಡುತ್ತಾ, ವಾರಾಂತ್ಯದಲ್ಲಿ ಸತತ ಎರಡು ತಿಂಗಳುಗಳ ಕಾಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಮೊದಲು ಅವರ ಖಾತೆಗೆ $8,333 ಕ್ರೆಡಿಟ್ ಆದಾಗ ಕೇವಲ ಸಣ್ಣ ಮೊತ್ತ ಕಾಣಿಸಿತ್ತು. ನಂತರ ದೊಡ್ಡ ಮೊತ್ತದ ವಿಜೇತರ ಗುರುತು ಮತ್ತು ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಿದ ಬಳಿಕ $4 ಮಿಲಿಯನ್ ಮೊತ್ತವನ್ನು ಸಂಪೂರ್ಣವಾಗಿ ನೀಡಲಾಯಿತು. "ವಿಜೇತರ ಭದ್ರತೆಗಾಗಿ ಈ ತಪಾಸಣೆಗಳು ಅತ್ಯಗತ್ಯ ಎಂದು ತಿಳಿದಾಗ ನನಗೆ ಸಂತೋಷವಾಯಿತು" ಎಂದು ಮೆಲ್ವಿನ್ ತಿಳಿಸಿದ್ದಾರೆ.

ಈ ಸಿಹಿ ಸುದ್ದಿಯನ್ನು ಮೆಲ್ವಿನ್ ಮೊದಲು ತಮ್ಮ ತಂದೆ ಹಾಗೂ ಸಹೋದರಿಗೆ ತಿಳಿಸಿದ್ದಾರೆ. ತಂದೆ ಪ್ರತಿಯೊಂದು ಟಿಕೆಟ್ ಅನ್ನು ತಾವೇ ಸ್ವತಃ ಪರಿಶೀಲಿಸಲು ಬಯಸಿದರೆ, ಸಹೋದರಿಯು "ಟಿಕೆಟ್ ಸಂಖ್ಯೆಗಳನ್ನು ಮತ್ತೊಮ್ಮೆ ಕ್ರಾಸ್ ಚೆಕ್ ಮಾಡು, ಸುದ್ದಿ ನಿಜವೇ ಎಂದು ಖಾತ್ರಿಪಡಿಸಿಕೊ" ಎಂದು ಸಲಹೆ ನೀಡಿದ್ದರು. ಈ ಬಹುಮಾನ ಹಣವನ್ನು ನಾನು ಒಂದು ಜವಾಬ್ದಾರಿಯಾಗಿ ನೋಡುತ್ತೇನೆ. ಈ ಮೊತ್ತದಿಂದ ನನ್ನ ತಂದೆಗೆ ಕುಟುಂಬದ ಉದ್ಯಮವನ್ನು ವಿಸ್ತರಿಸಲು ನೆರವಾಗುತ್ತೇನೆ. ಇದರಿಂದ ಅವರು ಬೇಗನೇ ನಿವೃತ್ತಿ ಪಡೆದು ವಿಶ್ರಾಂತಿ ತೆಗೆದುಕೊಳ್ಳಬಹುದು. ಸರಿಯಾದ ಕಡೆಗಳಲ್ಲಿ ಹೂಡಿಕೆ ಮಾಡುವುದು ನನ್ನ ಆದ್ಯತೆ" ಎಂದು ಮೆಲ್ವಿನ್ ಹೇಳಿದ್ದಾರೆ.

ಸಾಮಾನ್ಯವಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣ ಬಂದ ತಕ್ಷಣ ಜನ ಕೆಲಸ ತೊರೆಯುತ್ತಾರೆ. ಆದರೆ ಮೆಲ್ವಿನ್ ಇಂದಿಗೂ ತಮ್ಮ ಕೆಲಸಕ್ಕೆ ಹೋಗುತ್ತಿದ್ದಾರೆ, MBA ಮುಂದುವರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಮಾಡಬೇಕಿರುವ US CPA ಕೋರ್ಸ್‌ನ ಸಂಪೂರ್ಣ ವೆಚ್ಚವನ್ನು ತಂದೆಯ ಬಳಿ ಕೇಳದೆ ತಾವೇ ಭರಿಸಲು ನಿರ್ಧರಿಸಿದ್ದಾರೆ. "ಯಾವುದೇ ಹಣಕಾಸು ಕ್ಷೇತ್ರದ ವೃತ್ತಿಪರರಂತೆ ನನಗೂ ಕಂಪನಿಯ ಸಿಎಫ್‌ಒ (CFO) ಆಗುವ ಆಸೆಯಿದೆ ಎಂದು ತಮ್ಮ ಮುಂದಿನ ಗುರಿಗಳ ಕುರಿತು ಹೇಳಿಕೊಂಡಿದ್ದಾರೆ.

ಅಮೆರಿಕದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗುವುದು, ಜಗತ್ತನ್ನು ಸುತ್ತುವುದು ಮತ್ತು ತಮ್ಮ ಸಹೋದರ-ಸಹೋದರಿಯ ಮದುವೆಗೆ ನೆರವಾಗುವುದು ಮೆಲ್ವಿನ್ ಅವರ ಮುಂದಿನ ಯೋಜನೆಗಳು. ಇಷ್ಟೆಲ್ಲಾ ದೊಡ್ಡ ಮೊತ್ತ ಗೆದ್ದರೂ, ಪ್ರತಿದಿನ ಬೆಳಿಗ್ಗೆ 6:30ಕ್ಕೆ ಅಲಾರಾಂ ಇಟ್ಟು ಎದ್ದು, ತಂದೆಯೊಂದಿಗೆ ಮಧ್ಯಾಹ್ನದ ಊಟ ಸವಿಯುವ ಅವರ ದೈನಂದಿನ ಶಿಸ್ತು ಮಾತ್ರ ಬದಲಾಗಿಲ್ಲ.

PREV
Brand Promotion Articles (ಬ್ರ್ಯಾಂಡ್ ಪ್ರಮೋಷನ್ ಆರ್ಟಿಕಲ್ಸ್): Dive into inspiring brand stories, partner content, and sponsored features. Read engaging campaigns, collaborations, and brand initiatives exclusively on Asianet Suvarna News.
Read more Articles on
click me!

Recommended Stories

ಮತದಾರರ 3ನೇ ಬಾರಿ ವಂಚಿಸಬೇಡಿ, ಗೋವಾದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದ ಆಪ್-ಜಿಎಫ್‌ಪಿ ಪೋಸ್ಟರ್
ಒಂದು ಲೀಟರ್ ಪೆಟ್ರೋಲ್ ಮಾರಾಟ ಮಾಡಿದರೆ ಎಷ್ಟು ಆದಾಯ ಸಿಗುತ್ತೆ? ಪೆಟ್ರೋಲ್ ಬಂಕ್ ಆರಂಭಿಸುವುದು ಲಾಭನಾ?