ಯಮಹಾದಿಂದ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್

By Suvarna News  |  First Published Jun 21, 2021, 10:45 AM IST

ದ್ವಿಚಕ್ರವಾಹನಗಳ ಉತ್ಪಾದಕ ಕಂಪನಿಗಳ ಪೈಕಿ ಪ್ರಮುಖ ಕಂಪನಿ ಎನಿಸಿಕೊಂಡಿರುವ ಯಮಹಾ ಎಫ್‌ಜೆಡ್-ಎಕ್ಸ್ ಬಿಡುಗಡೆ ಮಾಡಿದ ಬೆನ್ನಲ್ಲೇ, ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್ ಅನಾವರಣ ಮಾಡಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಕೂಟರ್ ಬೆಲೆ ಎಷ್ಟು ಎಂಬುದು ಇನ್ನೂ ತಿಳಿದು ಬಂದಿಲ್ಲ.


ತನ್ನ ಶಕ್ತಿಶಾಲಿ ದ್ವಿಚಕ್ರವಾಹನಗಳ ಮೂಲಕ ಹೆಸರುವಾಸಿಯಾಗಿರುವ ಯಮಹಾ ಪ್ರೀಮಿಯಂ ಬೈಕ್ ಮತ್ತು ಸ್ಕೂಟರ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಪ್ರಭಾವಳಿಯನ್ನು ಸೃಷ್ಟಿಸಿಕೊಂಡಿದೆ. ವಿಶೇಷವಾಗಿ ಫ್ಯಾಸಿನೋ ಸ್ಕೂಟರ್ ಅಂತೂ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಕಂಪನಿ ಹೊಸ ಆವೃತ್ತಿ ಬಿಡುಗಡೆಗೆ ಮುಂದಾಗಿದೆ. 

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯಲ್ಲೂ 17,800 ರೂ.ವರೆಗೆ ಕಡಿತ!

Tap to resize

Latest Videos

undefined

ಯಮಹಾ ಎಫ್‌ಜೆಡ್-ಎಕ್ಸ್ ಬಿಡುಗಡೆ ಬೆನ್ನಲ್ಲೇ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್  ಸ್ಕೂಟರ್ ಅನಾವರಣ ಮಾಡಲಾಗಿದೆ. ಆದರೆ, ಈ ಸ್ಕೂಟರ್ ಬೆಲೆ ಎಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಸ್ಕೂಟರ್ ಡಿಸ್ಕ್ ಮತ್ತು ಡ್ರಮ್ ಆವೃತ್ತಿಗಳಲ್ಲಿ ದೊರೆಯಲಿದೆ. ಬಿಎಸ್ 6 ನಿಯಮಗಳನ್ನು ಅನುಸರಿಸಿರುವ ಈ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್‌ನಲ್ಲಿ ಏರ್ ಕೂಲ್ಡ್ , ಫ್ಯುಯೆಲ್ ಇಂಜೆಕ್ಟೆಡ್, 125 ಸಿಸಿ ಬ್ಲೂ ಕೋರ್ ಎಂಜಿನ್ ಇದ್ದು,  6500 ಆರ್‌ಪಿಎಂನಲ್ಲಿ 8.2 ಬಿಎಚ್‌ಪಿ ಪವರ್ ಉತ್ಪಾದಿಸಿದರೆ,  5000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 

ಸ್ಮಾರ್ಟ್ ಮೋಟಾರ್ ಜನರೇಟರ್ ಸಿಸ್ಟಮ್‌ ತಂತ್ರಜ್ಞಾನ (ಎಸ್ಎಂಜಿ)ವನ್ನು ಯಮಹಾ ಕಂಪನಿಯ ಹೊಸ ಫ್ಯಾಸಿನೋ ಫೈ 125 ಸ್ಕೂಟರ್ ಹೊಂದಿದೆ. ಈ ಎಸ್ಎಂಜಿ ವ್ಯವಸ್ಥೆಯ ವಿಶೇಷ ಏನೆಂದರೆ- ಇದು ಎಲೆಕ್ಟ್ರಿಕ್ ಮೋಟಾರ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೆದ. ಗಾಡಿ ನಿಂತಾಗ ಅದನ್ನು ಚಲಿಸಲು ಎಕ್ಸೆಲರೇಟರ್ ನೀಡಿದಾಗ, ಎಂಜಿನ್‌ಗೆ ಶಕ್ತಿಯನ್ನು ಒದಗಿಸುತ್ತದೆ. ಇದರಿಂದಾಗಿ ಪ್ರಾರಂಭದ ಸಮಯದಲ್ಲಿ ಸವಾರಿ ಮಾಡುವಾಗ ಅಥವಾ ದಿಬ್ಬವನ್ನು ಏರುವಾಗ ಉಂಟಾಗುವ ಕಂಪನದಿಂದ ಉಂಟಾಗುವ ಅಭದ್ರತೆಯನ್ನು ಇದು ಕಡಿಮೆ ಮಾಡುತ್ತದೆ.

ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!

ಗಾಡಿ ಶುರವಾದ ಮೂರು ಸೆಕೆಂಡ್‌ಗಳ ಬಳಿಕ ಅಥವಾ ಥ್ರೋಟಲ್ ಅನ್ನು ಹಿಂದಕ್ಕೆ ಪಡೆದುಕೊಂಡಾಗ ಇಲ್ಲವೇ ಎಂಜಿನ್ ಆರ್‌ಪಿಎಂ ನಿಗದಿತ ಮಟ್ಟವನ್ನು ಮೀರಿದಾಗ ಪವರ್ ಅಸಿಸ್ಟ್ ಕಾರ್ಯವು ಸ್ಥಗಿತವಾಗುತ್ತದೆ. ಹಾಗೆಯೇ, ಈ ಪವರ್ ಅಸಿಸ್ಟ್(ಹೈಬ್ರಿಡ್ ಸಿಸ್ಟಮ್) ಚಾಲನೆಗೊಂಡಾಗ ಸವಾರನಿಗೆ  ಇನ್ಸುಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಇಂಡಿಕೇಟರ್ ಕೂಡ ಬೆಳಗುತ್ತದೆ. 

ವಿದ್ಯುತ್ ಬಿಡುಗಡೆಯ ದಿಕ್ಕನ್ನು ಹಿಮ್ಮುಖಗೊಳಿಸುವ ಮೂಲಕ ಎಸ್‌ಎಂಜಿ ಮೋಟರ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಕ್ವೈಟ್ ಎಂಜಿನ್ ಸ್ಟಾರ್ಟ್ ಸಿಸ್ಟಮ್ ಮತ್ತು ಆಟೋಮೆಟಿಕ್ ಸ್ಟಾರ್ಟ್ ಆಂಡ್ ಸ್ಟಾಪ್ ಸಿಸ್ಟಮ್ ಅನ್ನು ಒಳಗೊಂಡಿದೆ. ಫ್ಯಾಸಿನೊ 125 ಫೈ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್ ಹೊಂದಿದ್ದು, ಇದು ಭಾರತದ ಎಲ್ಲಾ ಯಮಹಾ ದ್ವಿಚಕ್ರ ವಾಹನಗಳಿಗೆ ಕಡ್ಡಾಯವಾಗಿದೆ ಕೂಡ. 

ಫ್ಯಾಸಿನೋ 125 ಫೈ ಹೈಬ್ರಿಡ್ ಇ ಡಿಸ್ಕ್ ಬ್ರೇಕ್ ಆವೃತ್ತಿಯನ್ನು ಹೊಂದಿದ್ದು, ಎಲ್ಇಡಿ ಹೆಡ್‌ಲೈಟ್, ಡೈ ಟೈಮ್ ರನ್ನಿಂಗ್ ಲೈಟ್ಸ್(ಡಿಆರ್‌ಎಲ್) ಮತ್ತು ಎಲ್ಇಡಿ ಟೇಲ್ ಲೈಟ್ಸ್ ಕೂಡ ಇದೆ. ಹೈಬ್ರಿಡ್ ಸಿಸ್ಟಮ್ ಚಾಲನೆಗೊಳ್ಳುವುದನ್ನು ತೋರಿಸುವ ಇಂಡಿಕೇಟರ್‌ ಒಳಗೊಂಡ ಡಿಜಿಟಲ್ ಇನ್ಸುಟ್ರುಮೆಂಟ್ ಕ್ಲಸ್ಟರ್ ಅನ್ನು ಇದು ಹೊಂದಿದೆ. ಯುಪಿಎಸ್ ತಂತ್ರಜ್ಞಾನದ0CCAದಿಗೆ 19 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಇದೆ. ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಅಪ್ಲಿಕೇಷನ್‌ನೊಂದಿಗೆ ಸಂಯೋಜನೆಗೊಳ್ಳಬಹುದಾದ ಬ್ಲೂಟೂಥ್ ಕನೆಕ್ಟಿವಿಟಿ ಸಂಪರ್ಕವಿದೆ. ಅನ್ಸರ್ ಬ್ಯಾಕ್, ಲೊಕೆಟ್ ಮೈ ವೆಹಿಕಲ್, ಹೈಡಿಂಗ್ ಹಿಸ್ಟರ್, ಪಾರ್ಕಿಂಗ್ ರೆಕಾರ್ಡ್ ಮತ್ತು ಹಝಾರ್ಡ್ ಮಾಹಿತಿಯನ್ನು ಈ ಅಪ್ಲಿಕೇಷನ್ ಒದಗಿಸುತ್ತದೆ. 

ಕೇಂದ್ರ ನಿರ್ಧಾರದ ಎಫೆಕ್ಟ್: ಅಗ್ಗವಾಗಲಿವೆ ಇ-ಸ್ಕೂಟರ್‌, ಅಥರ್ ಎನರ್ಜಿ ಇಳಿಸಲಿದೆ ಬೆಲೆ!

ಡ್ರಮ್ ಬ್ರೇಕ್ ಆವೃತ್ತಿಯು ಡಿಸ್ಕ್ ಬ್ರೇಕ್ ಆವೃತ್ತಿಯ ಸ್ಕೂಟರ್‌ನ ಬಹಳಷ್ಟು ಫೀಚರ್‌ಗಳಿಗೆ ಸಂಬಂಧಿಸಿದಂತೆ ಸಾಮ್ಯತೆಯನ್ನು ಹೊಂದಿದೆ. ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಸ್ವಿಚ್, ಸೀಟ್ ಓಪನರ್ ಸೇರಿದಂತೆ ಬಹು ಕಾರ್ಯಕ್ಕೆ ನೆರವಾಗುವ ಕೀ, ಸೀಟ್ ಕೆಳಗಡೆ 21 ಲೀ. ಸ್ಟೋರೇಜ್ ಸ್ಪೇಸ್, ಫೋಲ್ಡ್ ಮಾಡಬಲ್ಲ ಹುಕ್, ನಿರ್ವಹಣಾ ರಹಿತ ಬ್ಯಾಟರಿ ಸೇರಿದಂತೆ ಅನೇಕ ಫೀಚರ್‌ಗಳನ್ನು ಹೆಸರಿಸಬಹುದು.

click me!