ಯಮಹಾ ಭಾರತದಲ್ಲಿ FZS ಸೀರೀಸ್ ನಾಲ್ಕು ಬೈಕ್ ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ವಿನ್ಯಾಸ, ಆಕರ್ಷಕ ಬೆಲೆ, ಅತ್ಯುತ್ತಮ ಪರ್ಫಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಫೆ.18): ಹಲವರಿಗೆ ಯಮಹಾ ಬೈಕ್ ಎಂದರೆ ಬಲು ಪ್ರೀತಿ, ಅದು ಆರ್‌ಎಕ್ಸ್ 100ನಿಂದ ಹಿಡಿದು ಈಗಿನ ಯಾವುದೇ ಯಮಹಾ ಬೈಕ್‌ವವರೆಗೂ ಆ ಪ್ರೀತಿ ಹಾಗೆ ಮುಂದುವರಿದಿದೆ. ಇದಕ್ಕೆ ತಕ್ಕಂತೆ ಯಮಹಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೈಕ್ ಬಿಡುಗಡೆ ಮಾಡುತ್ತಲೇ ಬಂದಿದೆ. ದೇಶಾದ್ಯಂತ ಬೈಕಿಂಗ್ ಉತ್ಸಾಹಿಗಳಿಗೆ ಉತ್ಸಾಹಕರ ಮತ್ತು ರೋಮಾಂಚಕ ರೈಡ್ ಅನುಭವದ ಭರವಸೆ ನೀಡಿರುವ ಯಮಾಹಾ ಇದೀಗ 2023ರ FZS ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್, ಎಂಟಿ-15 ವಿ2 ಡಿಲಕ್ಸ್ ಮತ್ತು ಆರ್15ಎಂ ಬೈಕ್ ಬಿಡುಗಡೆ ಮಾಡಿದೆ.
ನೂತನ ಬೈಕ್ ಬೆಲೆ:
ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್ : 1, 27,400 ರೂಪಾಯಿ(ಎಕ್ಸ್ ಶೋ ರೂಂ)
ಎಫ್‍ಝಡ್-ಎಕ್ಸ್ ಡಾರ್ಕ್ ಮ್ಯಾಟ್ ಬ್ಲೂ : 1, 36, 900 ರೂಪಾಯಿ(ಎಕ್ಸ್ ಶೋ ರೂಂ)
ಆರ್15ಎಂ : 1, 93, 900 ರೂಪಾಯಿ(ಎಕ್ಸ್ ಶೋ ರೂಂ)
ಆರ್15ವಿ4 ಡಾರ್ಕ್ ನೈಟ್: 1, 81,900 ರೂಪಾಯಿ(ಎಕ್ಸ್ ಶೋ ರೂಂ)
ಎಂಟಿ15 ವಿ2 ಡಿಲಕ್ಸ್ ಮೆಟಾಲಿಕ್ ಬ್ಲಾಕ್: 1, 68, 400 ರೂಪಾಯಿ(ಎಕ್ಸ್ ಶೋ ರೂಂ)
undefined
ಯಮಹಾ ಮಾನ್‌ಸ್ಟರ್ ಮೊಟೋ ಜಿಪಿ ಎಡಿಷನ್ ಬೈಕ್ ಬಿಡುಗಡೆ!
150-ಸಿಸಿ ವರ್ಗವನ್ನು ಮುನ್ನಡೆಸುತ್ತಿರುವ ಯಮಾಹಾ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್, ಎಫ್‍ಝಡ್-ಎಕ್ಸ್ ಮತ್ತು ಎಂಟಿ-15 ವಿ2 ಡಿಲಕ್ಸ್ ಮಾದರಿಗಳು ಯಮಾಹಾ ಆರ್15ಎಂ ಮತ್ತು ಆರ್15ವಿ4ಗಳೊಂದಿಗೆ ಈಗ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ(ಟಿಸಿಎಸ್) ಅನ್ನು ಸ್ಟಾಂಡರ್ಡ್ ಫೀಚರ್ಸ್ ಹೊಂದಿದೆ. ಈ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಇಗ್ನಿಷನ್ ಸಮಯವನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚು ಜಾರುವಿಕೆ ತಪ್ಪಿಸಲು ತಕ್ಷಣವೇ ಎಂಜಿನ್ ಶಕ್ತಿಯನ್ನು ಹೊಂದಿಸಲು ಇಂಧನದ ಸೇರ್ಪಡಿಕೆ ಪ್ರಮಾಣ ನಿಯಂತ್ರಿಸುತ್ತದೆ. ಇದರಿಂದ ಚಕ್ರಕ್ಕೆ ಶಕ್ತಿಯ ದಕ್ಷ ಪೂರೈಕೆಯಾಗುತ್ತದೆ ಮತ್ತು ಚಕ್ರ ತಿರುಗುವಿಕೆ ಕಡಿಮೆ ಮಾಡುತ್ತದೆ, ಇದರಿಂದ ಆಧುನಿಕ ಕಾಲದ ಬೈಕರ್‍ಗಳು ಬಯಸುವ ಥ್ರಿಲ್ ನೀಡುತ್ತದೆ.
ಪ್ರಸ್ತುತದ `ಕಾಲ್ ಆಫ್ ದಿ ಬ್ಲೂ’ ಅಭಿಯಾನದ ಭಾಗವಾಗಿ ಯಮಾಹಾ ಭಾರತಕ್ಕೆ ತನ್ನ ಜಾಗತಿಕ ಉತ್ಪನ್ನ ಪೋರ್ಟ್‍ಫೋಲಿಯೊ ಮೂಲಕ ಆಕರ್ಷಕ ಫೀಚರ್‍ಗಳನ್ನು ಪರಿಚಯಸಲು ಬದ್ಧವಾಗಿದೆ ಮತ್ತು ನಮ್ಮ ಗ್ರಾಹಕರಿಗೆ ಹೊಸ ಅನುಭವಗಳನ್ನು ನೀಡುವ ಉಪಕ್ರಮಗಳನ್ನು ಪರಿಚಯಿಸುತ್ತಿದೆ. ಈ ಬದ್ಧತೆಗೆ ಅನುಗುಣವಾಗಿ ನಾವು ಇಂದು ನಮ್ಮ 149ಸಿಸಿ-155ಸಿಸಿ ಪ್ರೀಮಿಯಂ ಮೋಟಾರ್‍ಸೈಕಲ್ ಶ್ರೇಣಿಯಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಸ್ಟಾಂಡರ್ಡ್ ಫೀಚರ್ ಆಗಿ ಪ್ರಕಟಿಸಲು ಬಹಳಳ ಸಂತೋಷ ಹೊಂದಿದ್ದೇವೆ. ಜಾಗತಿಕವಾಗಿ ಯಮಾಹಾ ಮೋಟಾರ್‍ಸೈಕಲ್‍ಗಳನ್ನು ಅವುಗಳ ಅಸಾಧಾರಣ ನಿರ್ವಹಣೆ ಮತ್ತು ಕಾರ್ಯಕ್ಷಮತೆಗೆ ಅಪಾರ ಪ್ರಶಂಸೆ ಪಡೆದಿವೆ ಮತ್ತು ನಮ್ಮ ಮೋಟಾರ್‍ಸೈಕಲ್‍ಗಳ ಹೆಚ್ಚು ವಿಕಾಸಗೊಂಡ 2023ರ ಆವೃತ್ತಿಗಳು ಅತ್ಯಂತ ನಿರೀಕ್ಷಿತ ಫೀಚರ್‍ಗಳೊಂದಿಗೆ ಭಾರತದ ನಮ್ಮ ಯುವ ಗ್ರಾಹಕರನ್ನು ಆಕರ್ಷಿಸಲಿವೆ ಎಂದು ಯಮಾಹಾ ಮೋಟಾರ್ ಇಂಡಿಯಾ ಸಮೂಹದ ಅಧ್ಯಕ್ಷ ಐಶಿನ್ ಚಿಹಾನಾ ಹೇಳಿದ್ದಾರೆ.
ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!
ಯಮಾಹಾ ಎಫ್‍ಝಡ್‍ಎಸ್-ಎಫ್‍ಐ ವಿ4 ಡಿಲಕ್ಸ್ & ಎಫ್‍ಝಡ್-ಎಕ್ಸ್
ಹೃದಯದಲ್ಲಿ ಕಚ್ಚಾ ಆಗಿರುವ ಆರ್15ಎಂ ಮತ್ತು ಎಂಟಿ-15 ವಿ2 ಡಿಲಕ್ಸ್ ಯಮಾಹಾದ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, ಎಸ್‍ಒಎಚ್‍ಸಿ, 4-ವಾಲ್ವ್, 155ಸಿಸಿ ಫ್ಯೂಯೆಲ್-ಇಂಜೆಕ್ಟೆಡ್ ಎಂಜಿನ್ ವೇರಿಯಬಲ್ ವಾಲ್ವ್ ಆಕ್ಚುಯೇಷನ್(ವಿವಿಎ) ಸಿಸ್ಟಂನೊಂದಿಗೆ ಹೊಂದಿವೆ. ಇದು 6-ಸ್ಪೀಡ್ ಗೇರ್‌ಬಾಕ್ಸ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‍ನೊಂದಿಗೆ ಹಗುರ ಆಕ್ಚುಯೇಷನ್‍ಗೆ ಹೊಂದಿದ್ದು 10,000 RPMನಲ್ಲಿ 18.4PS ಉತ್ಪಾದಿಸುತ್ತಿದ್ದು ಗರಿಷ್ಠ ಔಟ್‍ಪುಟ್ 14.2NM ಟಾರ್ಕ್ ನೀಡುತ್ತದೆ.