ಬೆಂಗಳೂರಲ್ಲಿ ಇವಿ ಕ್ರಾಂತಿ ವಿಶ್ವದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಸಿಲಿಕಾನ್ ಸಿಟಿಗೆ ಡಿಸ್ಕೌಂಟ್

Published : Apr 17, 2025, 03:04 PM ISTUpdated : Apr 17, 2025, 03:07 PM IST
ಬೆಂಗಳೂರಲ್ಲಿ ಇವಿ ಕ್ರಾಂತಿ ವಿಶ್ವದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಸಿಲಿಕಾನ್ ಸಿಟಿಗೆ ಡಿಸ್ಕೌಂಟ್

ಸಾರಾಂಶ

ಎಲೆಕ್ಟ್ರಿಕ್ ಬೈಕ್, ಸ್ಕೂಟರ್‌ಗಳಲ್ಲಿ ಗೇರ್ ಇಲ್ಲ. ಇನ್ನು ಇವಿ ಕಾರುಗಳಲ್ಲೂ ಟ್ರಾನ್ಸ್‌ಮಿಶನ್ ಇರಲ್ಲ, ಏನಿದ್ದರು ಡ್ರೈವ್, ಸ್ಪೋರ್ಟ್ ಮೂಡ್, ರಿವರ್ಸ್ ಹೀಗಿರುತ್ತೆ. ಆದರೆ ಇವಿಯಲ್ಲಿ ಇದೀಗ ಕ್ರಾಂತಿಯಾಗಿದೆ. ಬೆಂಗಳೂರಿನಲ್ಲಿ ವಿಶ್ವದ ಮೊದಲ ಗೇರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಅತ್ಯಾಕರ್ಷಕ ಹಾಗೂ ಉತ್ತಮ ಪರ್ಫಾಮೆನ್ಸ್ ಬೈಕ್ ಬೆಲೆ ಎಷ್ಟು?

ಬೆಂಗಳೂರು(ಏ.17) ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಸಂಶೋಧನೆ, ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದರ ಪರಿಣಾಮ ಹೊಸ  ಹೊಸ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ  ಭಾರತದ ಸ್ಟಾರ್ಟ್ಅಪ್ ಕಂಪನಿ ಮ್ಯಾಟರ್ ಮೋಟಾರ್ ವರ್ಕ್ಸ್ ಇದೀಗ ಅತ್ಯಾಧುನಿಕ ಹಾಗೂ ವಿಶ್ವದಲ್ಲೇ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಬೈಕ್ ನಮ್ಮ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ.ಮ್ಯಾಟರ್ ಎಇಆರ್‌ಎ ಬೈಕ್ ಅತ್ಯಾಕರ್ಷಕ ಲುಕ್ ಜೊತಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡುತ್ತಿದೆ.  ವಿಶೇಷ ಅಂದರೆ ಬೆಂಗಳೂರಲ್ಲಿ ಬಿಡುಗಡೆಯಾದ ಈ ಬೈಕ್ ಇದೀಗ ಆರಂಭಿಕ ಡಿಸ್ಕೌಂಟ್ ಆಫರ್ ಘೋಷಿಸಿದೆ. 

ಮ್ಯಾಟರ್ AERA ಬೈಕ್ ಬೆಲೆ  
ಮ್ಯಾಟರ್​​  AERA ಪ್ರೀ ಬುಕಿಂಗ್ ಆರಂಭಗೊಂಡಿದೆ. 1.88 ಲಕ್ಷ ರೂಪಾಯಿ ಎಕ್ಸ್​ ಶೋರೂಂ ಬೆಲೆಗೆ ಈ ಬೈಕ್ ಲಭ್ಯವಿದೆ. ಸೀಮಿತ ಅವಧಿಯ ಬಿಡುಗಡೆ ಆಫರ್‌ನ ಎಂಬಂತೆ ಬೆಂಗಳೂರಿನ ಮೊದಲ 500 ಗ್ರಾಹಕರಿಗೆ 1.79 ಲಕ್ಷ ರೂಪಾಯಿ ವಿಶೇಷ ಬೆಲೆಯಲ್ಲಿ ಲಭ್ಯವಿದೆ.  ಅದಲ್ಲದೆ,  15,000  ರೂಪಾಯಿ ಮೌಲ್ಯದ ಉಚಿತ ಜೀವಮಾನ ಬ್ಯಾಟರಿ ವಾರಂಟಿಯೂ ಘೋಷಿಸಲಾಗಿದೆ. ಇದು ಮ್ಯಾಟರ್‌ನ ಆರಂಭಿಕ ನಂಬಿಕಸ್ಥರಿಗೆ ನೀಡುವ ವಿಶೇಷ ಮಾನ್ಯತೆಯಾಗಿದೆ.  ಶೀಘ್ರದಲ್ಲೇ ಬಿಟಿಎಂ ಲೇಔಟ್  2ನೇ ಹಂತದ ವೈಶ್ಯ ಬ್ಯಾಂಕ್ ಕಾಲೋನಿ, 100 ಅಡಿ ರಸ್ತೆಯ ಬಳಿ ತನ್ನ ಮೊದಲ 'ಎಕ್ಸ್‌ಪೀರಿಯನ್ಸ್ ಹಬ್‌' ತೆರೆಯಲಿದೆ. ಈ ರೋಮಾಂಚಕ ಸ್ಥಳವು ರೈಡರ್‌ಗಳಿಗೆ ಮ್ಯಾಟರ್​ AERA ಸವಾರಿ ಅನುಭವವನ್ನು ನೇರವಾಗಿ ಪಡೆಯಲೆಂದೇ ನಿರ್ಮಿಸಲಾಗಿದೆ. ಅದೇ ರೀತಿ  ಟೆಸ್ಟ್ ರೈಡ್‌ಗಳನ್ನು ಮಾಡುವ ಅವಕಾಶ ಕೂಡ ಇದೆ.

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಶಾಕ್‌ವೇವ್ ಮೋಟರ್ ಸೈಕಲ್ ಸುನಾಮಿ ! 24 ಗಂಟೆಯಲ್ಲಿ 1000 ಯುನಿಟ್ ಬುಕ್

ನಮ್ಮ ಪ್ರಯಾಣ ಆರಂಭಿಸಲು ಬೆಂಗಳೂರಿಗಿಂತ ಉತ್ತಮ ನಗರ ಇನ್ನೊಂದಿಲ್ಲ. ಈ ನಗರದಲ್ಲಿ ನಾವೀನ್ಯತೆ ಕೇವಲ ಒಂದು ಕಲ್ಪನೆಯಲ್ಲ, ಅದು ಜೀವನ ಶೈಲಿ. ಇಲ್ಲಿನ ಪ್ರತಿಯೊಂದು ಓಣಿ, ಪ್ರತಿಯೊಬ್ಬ ಸವಾರನೂ ಗುರಿ ಮತ್ತು ಪ್ರಗತಿಯ ಪ್ರತೀಕ ಎಂದು ಮ್ಯಾಟರ್ ನ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಮೊಹಲ್ ಲಾಲ್ ಭಾಯ್ ಹೇಳಿದ್ದಾರೆ. AERA ಕೇವಲ ಬೈಕ್ ಅಲ್ಲ, ಇದು 22 ನೇ ಶತಮಾನದ ಮೋಟಾರ್​ಬೈಕ್. ಇದು ರಾಕೆಟ್ ಮಾದರಿಯ ರೋಮಾಂಚನ ಮತ್ತು ನಿಮ್ಮ ಜೇಬಿಗೆ ಹೊರೆಯಾಗದಂತಹ ಪ್ರಾಯೋಗಿಕತೆಗೆ ಪೂರಕವಾಗಿದೆ.   ಆಂತರಿಕವಾಗಿ ಅಭಿವೃದ್ಧಿಪಡಿಸಿದ ಹೈಪರ್ ಶಿಫ್ಟ್ ಮ್ಯಾನುವಲ್ ಗೇರ್ ಬಾಕ್ಸ್, ಲಿಕ್ವಿಡ್-ಕೂಲ್ಡ್ ಪವರ್ ಟ್ರೇನ್ ಮತ್ತು ಕನೆಕ್ಟೆಟ್​ ಟೆಕ್ನಾಲಜಿಯೊಂದಿಗೆ ಎಇಆರ್​​ಎ ಹಿಂದೆಂದಿಗಿಂತಲೂ ಅತಿ ಹೆಚ್ಚು ಕಾರ್ಯಕ್ಷಮತೆ. ಭಾವನೆ ಮತ್ತು ಸುಸ್ಥಿರತೆ ನೀಡುತ್ತದೆ ಎಂದಿದ್ದಾರೆ.

ಪ್ರಮುಖ ಫೀಚರ್‌ಗಳು:
- ವಿಶ್ವದ ಮೊದಲ ಹೈಪರ್‌ಶಿಫ್ಟ್ ಮ್ಯಾನುವಲ್ ಗೇರ್‌ಬಾಕ್ಸ್: ಈ ಇವಿಯಲ್ಲಿ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇದ್ದು, 3 ರೈಡ್ ಮೋಡ್‌ಗಳು (ಇಕೋ, ಸಿಟಿ, ಸ್ಪೋರ್ಟ್) ನೀಡಲಾಗಿದೆ. ಹೀಗಾಗಿ 12 (4x3) ವಿಭಿನ್ನ ರೈಡ್ ಕಾಂಬಿನೇಷನ್‌ಗಳನ್ನು ನೀಡುತ್ತದೆ. ನಗರ ದಟ್ಟಣೆಯ ಪ್ರದೇಶದಲ್ಲಿ ನೆರವಾಗಲು ಸ್ಮಾರ್ಟ್ ಪಾರ್ಕ್ ಅಸಿಸ್ಟ್‌ ಕೂಡ ಇದೆ. 
-  ಲಿಕ್ವಿಡ್-ಕೂಲ್ಡ್ ಪವರ್‌ಟ್ರೇನ್: ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್‌ನಲ್ಲಿ ಸುಧಾರಿತ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯಿದ್ದು, ಹೊರಗಿನ ತಾಪಮಾನ ಮತ್ತು ಟ್ರಾಫಿಕ್‌ ದಟ್ಟಣೆಯಲ್ಲಿ ಉಂಟಾಗುವ ಬಿಸಿಯನ್ನು ಸಹಿಸಿಕೊಂಡು  ಅತ್ಯುತ್ತಮ ದಕ್ಷತೆ ಒದಗಿಸುತ್ತದೆ.
-  17.78 ಸೆಂ.ಮೀ. (7 ಇಂಚು) ಸ್ಮಾರ್ಟ್ ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್: ಈ ಡ್ಯಾಶ್​ಬೋರ್ಡ್​ನಲ್ಲಿ, ನ್ಯಾವಿಗೇಷನ್, ರೈಡ್ ಡೇಟಾ, ಕಾಲ್‌ಗಳು, ಮ್ಯೂಸಿಕ್​ ಮತ್ತು ಓಟಿಎ ಅಪ್‌ಡೇಟ್‌ಗಳೊಂದಿಗೆ ಕನೆಕ್ಟೆಡ್ ಕಾಕ್‌ಪಿಟ್ ವ್ಯವಸ್ಥೆ ಇದೆ. 
-  ಆನ್‌ಬೋರ್ಡ್ ಚಾರ್ಜರ್: 5 ಆಂಪಿಯರ್-ಸಾಟಿಯಾಗುವ ಕೇಬಲ್‌ನೊಂದಿಗೆ ಎಲ್ಲೆಡೆ ಸುಲಭವಾಗಿ ಪ್ಲಗ್-ಆ್ಯಂಡ್​ -ಚಾರ್ಜ್ ಸೌಲಭ್ಯವಿದೆ.
- ಬೋಲ್ಡ್, ಫ್ಯೂಚರಿಸ್ಟಿಕ್ ಡಿಸೈನ್: ಭಾರತೀಯ ಡಿಎನ್‌ಎಯೊಂದಿಗೆ ಹೊಂದಿಕೆ ಮಾಡಲಾಗಿದ್ದು. ಪ್ರತಿ ರಸ್ತೆಯಲ್ಲೂ ಎದ್ದು ಕಾಣುವಂತೆ ಎಂಜಿನಿಯರಿಂಗ್ ವಿನ್ಯಾಸ ಹೊಂದಿದೆ.  .
-  5kWh ಹೈ-ಎನರ್ಜಿ ಬ್ಯಾಟರಿ: IP67 ಸರ್ಟಿಫೈಡ್ ಬ್ಯಾಟರಿಯಿದ್ದು, ಒಂದು ಚಾರ್ಜ್​ಗೆ 172 ಕಿ.ಮೀ.ವರೆಗಿನ ಐಡಿಸಿ ರೇಂಜ್‌ ನೀಡುತ್ತದೆ.
- ವೇಗದ ಆಕ್ಸಿಲರೇಷನ್: ಕೇವಲ 2.8 ಸೆಕೆಂಡ್‌ಗಳಲ್ಲಿ 0ಯಿಂದ 40 ಕಿ.ಮೀ ವೇಗ ಪಡೆಯಲು ಸಾಧ್ಯವಿದೆ. 
-  ಸುರಕ್ಷತೆ ಮತ್ತು ಆರಾಮ:  ಎಬಿಎಸ್​ನೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳು ಇದ್ದು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಮತ್ತು ಡ್ಯುಯಲ್ ರಿಯರ್ ಸಸ್ಪೆನ್ಷನ್ ಹೊಂದಿದೆ. 
-  ಮ್ಯಾಟರ್ ಮೊಬೈಲ್ ಆ್ಯಪ್:  ಈ ಆ್ಯಪ್​ ಮೂಲಕ,  ರಿಯಲ್-ಟೈಮ್ ಬೈಕ್ ಡೇಟಾ, ರಿಮೋಟ್ ಲಾಕ್, ಜಿಯೋ-ಫೆನ್ಸಿಂಗ್, ಮತ್ತು ಸರ್ವಿಸ್ ಅಲರ್ಟ್‌ ಮಾಡುವ ಸಂಪೂರ್ಣ ಕನೆಕ್ಟಿವಿಟಿ ಮಾಡಿಕೊಳ್ಳಬಹುದು.
- ಅತ್ಯುತ್ತಮ ದಕ್ಷತೆ: ಒಂದು ಕಿಲೋ ಮೀಟರ್ ಪ್ರಯಾಣಕ್ಕೆ ಕೇವಲ 25 ಪೈಸೆ ಖರ್ಚಾಗುತ್ತದೆ ಹಾಘೂ  3 ವರ್ಷಗಳಲ್ಲಿ  1 ಲಕ್ಷಕ್ಕೂ ರೂಪಾಯಿಗೂ ಅಧಿಕ ಉಳಿತಾಯವಾಗುತ್ತದೆ.  

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ನಂತರ, ಮ್ಯಾಟರ್​,  ಹಂತ ಹಂತವಾಗಿ ಭಾರತದ ಇತರ ಪ್ರಮುಖ ನಗರಗಳಿಗೆ ವಿಸ್ತರಣೆಗೊಳ್ಳಲಿದೆ.  ಅತ್ಯುತ್ತಮ ಬೈಕಿಂಗ್ ಸಂಸ್ಖೃತಿ, ಮುಂದಾಲೋಚನೆಯುಳ್ಳ ಸವಾರರು ಮತ್ತು ಸ್ವಚ್ಛ ತಂತ್ರಜ್ಞಾನದ ಬಳಕೆ ಹೆಚ್ಚಿರುವ ಬೆಂಗಳೂರು ನಗರವು ಮ್ಯಾಟರ್​​ಗೆ ಅತ್ಯುತ್ತಮ ಲಾಂಚ್​ ಪ್ಯಾಡ್ ಎನಿಸಿಕೊಳ್ಳಲಿದ್ದು, ತನ್ನ ಮುಂದಿನ ಅಧ್ಯಾಯಕ್ಕೆ ಸೂಕ್ತ ರೀತಿಯಲ್ಲಿ ಮುಂದಡಿ ಇಡಲಿದೆ.  

ಮ್ಯಾಟರ್ ಕುರಿತು
ಅಹಮದಾಬಾದ್​ನಲ್ಲಿ 2019ರ ಜನವರಿಯಲ್ಲಿ ಸ್ಥಾಪಿನೆಗೊಂಡಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಆಗಿರುವ 'ಮ್ಯಾಟರ್ ಮೋಟಾರ್ ವರ್ಕ್ಸ್' ತನ್ನ "ಇನ್ನೋವೇಟ್ ಇನ್ ಇಂಡಿಯಾ" ವಿಧಾನದೊಂದಿಗೆ ಚಲನಶೀಲತೆಯ ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತಿದೆ. ಸ್ವತಂತ್ರ ಇವಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬದ್ಧವಾಗಿರುವ ಮ್ಯಾಟರ್, ಎಲೆಕ್ಟ್ರಿಕ್ ಸಂಚಾರದ ಪ್ರತಿಯೊಂದು ಅಂಶವನ್ನು ಅನ್ವೇಷಿಸಿ ಭಾರತವನ್ನು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುತ್ತಿದೆ.

ಸ್ಕೂಟರ್‌ಗಿಂತ ಸೈಕಲ್ಲೇ ಬೆಸ್ಟ್‌: ಹೀರೋ ಎಲೆಕ್ಟ್ರಿಕ್ ಸೈಕಲ್‌ ಸ್ಪೆಷಲ್‌, ಒಂದೇ ಚಾರ್ಜ್‌ನಲ್ಲಿ 70 ಕಿ.ಮೀ ಪ್ರಯಾಣ!
 

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್