
ಬೆಂಗಳೂರು: ಬೈಕ್ ಪ್ರಿಯರಿಗೆ ಬೆಂಗಳೂರು ಮೂಲದ ಎಕ್ಟ್ರಾನಿಕ್ ವಾಹನ ತಯಾರಿಕಾ ಸಂಸ್ಥೆ Ultraviolette Automotive ಬಿಗ್ ಅಪ್‌ಡೇಟ್ಸ್ ತನ್ನ Shockwave ಎಲೆಕ್ಟ್ರಿಕ್ ಬೈಕ್ ಮತ್ತು Tesseract ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಈ ಎರಡೂ ಹೊಸ ಮಾದರಿಯ ವಾಹನಗಳು ಅತ್ಯಾಧುನಿಕ 100V (ವೋಲ್ಟ್) ಆರ್ಕಿಟೆಕ್ಚರ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರಲಿವೆ. ಆದರ ಗ್ರಾಹಕರು ಇದನ್ನು ಖರೀದಿಸಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ. 2027ರಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಇನ್ನು, ಅಲ್ಟ್ರಾವೈಲೆಟ್ ಸಂಸ್ಥೆಯು 2025ರ ಮಾರ್ಚ್ ತಿಂಗಳಲ್ಲಿ ತನ್ನ ಮೊದಲ ಎರಡು ವಾಹನಗಳನ್ನು ಪರಿಚಯಿಸಿತು.
ಅಂದು ನೀಡಿದ್ದ ಭರವಸೆಯಂತೆ 2026ರ ಆರಂಭದಲ್ಲೇ ಗ್ರಾಹಕರಿಗೆ ಡೆಲಿವರಿ ನೀಡಬೇಕಿತ್ತು. ಕಂಪನಿಯು ತನ್ನ ಎಫ್77 (F77) ಬೈಕ್‌ನಲ್ಲಿ ಬಳಸುತ್ತಿದ್ದ ಹಳೆಯ 60V ಆರ್ಕಿಟೆಕ್ಚರ್ ಬದಲಿಗೆ, ಹೆಚ್ಚು ದಕ್ಷತೆ ಮತ್ತು ಪವರ್ ನೀಡುವ ಹೊಸ 100V ಆರ್ಕಿಟೆಕ್ಚರ್‌ಗೆ ಬದಲಾಯಿಸಲು ನಿರ್ಧರಿಸಿದೆ. ತಂತ್ರಜ್ಞಾನದಲ್ಲಿ ಬದಲಾವಣೆ ಮಾಡಲು ಹೊರಟಿರೋದ್ರಿಂದ ರಿಲೀಸ ಡೇಟ್ ಮುಂದೂಡಿಕೆ ಆಗಿದೆ ಎಂದು ಕಂಪನಿ ಹೇಳಿದೆ.
ಆರಂಭದಲ್ಲಿ ಅನಾವರಣಗೊಂಡ ಬೆಲೆಗಿಂತ ಎಕ್ಸ್‌ಶೋರೂಂ ರೇಟ್‌ನಲ್ಲಿ ಭಾರೀ ಬದಲಾವಣೆ ಆಗಿದೆ. Tesseract ಇ-ಸ್ಕೂಟರ್‍ನ ಆರಂಭಿಕ ಬೆಲೆ ₹1.20 ಲಕ್ಷ ಎಂದು ಹೇಳಿತ್ತು. ಪರಿಷ್ಕೃತ ದರ ₹1.45 ಲಕ್ಷಕ್ಕೆ ಏರಿಕೆಯಾಗಿದೆ. ಶಾಕ್‌ವೇವ್ ಇ-ಬೈಕ್‌ನ ಬೆಲೆ ₹1.50 ಲಕ್ಷ ಎಂದು ಹೇಳತ್ತು. ಪರಿಷ್ಕೃತ ಬೆಲೆ ₹1.75 ಲಕ್ಷಕ್ಕೆ ತಲುಪಿದೆ. ಮಾರುಕಟ್ಟೆಗೆ ಬರುವ ಹೊತ್ತಿಗೆ ಇವುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ತಮಿಳುನಾಡಿನ ಹೊಸೂರು ಘಟಕದಲ್ಲಿ ಬೈಕ್‌ಗಳನ್ನ ಅಭಿವೃದ್ಧಿಪಡಿಸಲಾಗುತ್ತಿದೆ. ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ನಾರಾಯಣ್ ಸುಬ್ರಮಣ್ಯಂ ಮಾತನಾಡಿ.. ಹೊಸ 100V ತಂತ್ರಜ್ಞಾನಕ್ಕೆ ಬದಲಾಗಿರುವುದು ಕಂಪನಿಯ ಇವಿ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಶೀಘ್ರದಲ್ಲೇ ಎರಡೂ ವಾಹನಗಳ ಸಂಪೂರ್ಣ ಫೀಚರ್ಸ್ ಮತ್ತು ಅಂತಿಮ ಬೆಲೆಯ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.
Ultraviolette Shockwave ಎಂಬುದು ಬೆಂಗಳೂರು ಮೂಲದ ಇವಿ (EV) ಸ್ಟಾರ್ಟ್‌ಅಪ್ ಕಂಪನಿ. Ultraviolette Automotive ತಯಾರಿಸುತ್ತಿರುವ ಒಂದು ನೂತನ ಎಲೆಕ್ಟ್ರಿಕ್ ಆಫ್-ರೋಡ್ / ಎಂಡ್ಯೂರೋ (Enduro) ಬೈಕ್ ಆಗಿದೆ. ಹಳೆಯ ಕಾಲದ 2-ಸ್ಟ್ರೋಕ್ ಬೈಕ್‌ಗಳ ಥ್ರಿಲ್ ಮತ್ತು ಹಗುರವಾದ ವಿನ್ಯಾಸವನ್ನು ಆಧುನಿಕ ಎಲೆಕ್ಟ್ರಿಕ್ ತಂತ್ರಜ್ಞಾನದೊಂದಿಗೆ ಮರುಸೃಷ್ಟಿಸಲು ಈ ಬೈಕನ್ನು ವಿನ್ಯಾಸಗೊಳಿಸಲಾಗಿದೆ.