ಮಳೆಗಾಲಕ್ಕೆ ಬಂತು ವೈಪರ್ ಹೆಲ್ಮೆಟ್, ಮಳೆಯಲ್ಲೂ ಸುಲಭವಾಗಿ ಮಾಡ್ಬೋದು ರೈಡಿಂಗ್

Published : May 27, 2025, 05:28 PM ISTUpdated : May 27, 2025, 05:32 PM IST
Helmet

ಸಾರಾಂಶ

ಮಳೆಗಾಲದಲ್ಲಿ ದ್ವಿಚಕ್ರ ವಾಹನ ರೈಡಿಂಗ್ ಸವಾಲು, ಮಳೆಯಲ್ಲಿ ಹೆಲ್ಮೆಟ್ ಮುಂಭಾಗದ ಗಾಜಿನ ಮೇಲೆ ನೀರಿನ ಕಾರಣ ರಸ್ತೆ ಕಾಣಿಸುವುದಿಲ್ಲ. ಕೈಯಿಂದಲೇ ಗಾಜು ಕ್ಲೀನ್ ಮಾಡಿಕೊಂಡು ರೈಡ್ ಮಾಡಬೇಕು. ಈ ಸಮಸ್ಯೆಗೆ ಪರಿಹಾರವಾಗಿ ಇದೀಗ ಹೊಸ ಹೆಲ್ಮೆಟ್ ಮಾರುಕಟ್ಟೆಗೆ ಬಂದಿದೆ.  

ಮಳೆಗಾಲದಲ್ಲಿ ಬೈಕ್, ಸ್ಕೂಟರ್ ರೈಡ್ ಮಾಡುದು ಕಷ್ಟ. ಉತ್ತಮ ರೈನ್ ಕೋಟ್ ಇದ್ದರೂ ಒದ್ದೆಯಾಗುವುದು ತಪ್ಪಿಸುವುದು ಸಾಧ್ಯವಿಲ್ಲ. ಇನ್ನು ಭಾರಿ ಮಳೆ ಇರಲಿ, ಸಣ್ಣ ಮಳೆ ಇರಲಿ ಹೆಲ್ಮೆಟ್ ಗಾಜಿನ ಮೇಲೆ ನೀರು ನಿಂತುಕೊಂಡು ರಸ್ತೆ ಸರಿಯಾಗಿ ಕಾಣುವುದಿಲ್ಲ. ಈ ವೇಳೆ ಹೆಲ್ಮೆಟ್ ಗಾಜು ಒರೆಸುತ್ತಾ ರೈಡ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇಷ್ಟೇ ಅಲ್ಲ ರೈಯಿಂದ ಗಾಜು ಕ್ಲೀನ್ ಮಾಡಿದರೂ ಗೋಚರತೆ ಸ್ಪಷ್ಟವಾಗುದಿಲ್ಲ. ಪ್ರತಿ ಮಳೆಗಾಲದಲ್ಲಿ ಬಹುತೇಕರ ದ್ವಿಚಕ್ರ ವಾಹನ ಸವಾರರು ಪರದಾಡುತ್ತಾರೆ. ಇದೀಗ ಈ ಸಮಸ್ಯೆ ಬಗೆ ಹರಿಸಲು ಹೊಸ ಹೆಲ್ಮೆಟ್ ಮಾರುಕಟ್ಟೆಗೆ ಬಂದಿದೆ. ಇದು ವೈಪರ್ ಹೆಲ್ಮೆಟ್. ಕಾರಿನ ವಿಂಡ್‌ಶೀಲ್ಡ್‌ನಲ್ಲಿರುವಂತೆ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಮೇಲೂ ವೈಪರ್. ಹೆಲ್ಮೆಟ್ ಗಾಜಿನ ಮೇಲೆ ಬಿದ್ದ ನೀರನ್ನು ಈ ವೈಪರ್ ತೆಗೆದು ಹಾಕುತ್ತೆ.

ಹೆಲ್ಮೆಟ್ ಮೇಲ್ಭಾಗದಲ್ಲಿ ವೈಪರ್

ಹೆಲ್ಮೆಟ್ ಗಾಜಿನ ಮೇಲ್ಬಾಗದಲ್ಲಿ ಗಾಜಿನ ಗಾತ್ರಕ್ಕೆ ಸರಿಹೊಂದುವ ವೈಪರ್ ಅಳವಡಿಸಲಾಗಿದೆ. ಕಾರಿನಲ್ಲಿರುವಂತೆ ವೈಪರ್ ಕ್ಲೀನಿಂಗ್ ಟೈಮ್ ಸೆಟ್ ಮಾಡಲು ಸಾಧ್ಯವಿದೆ. ಮಳೆಗೆ ಅನುಸಾರ ಸ್ಪೀಡ್ ಅಥವಾ ನಿಧಾನವಾಗಿ ಸೆಟ್ ಮಾಡಿಕೊಳ್ಳಬಹುದು. ಸ್ವಿಚ್ ಆನ್ ಮಾಡಿದ ತಕ್ಷಣ ವೈಪರ್ ಆನ್ ಆಗಲಿದೆ. ಮಳೆ ಬರುತ್ತಿದ್ದಂತೆ ಸ್ವಿಚ್ ಆನ್ ಮಾಡಿದರೆ ವೈಪರ್ ಕಾರ್ಯನಿರ್ವಹಿಸುತ್ತದೆ.

ವಿದೇಶದ ವಿಡಿಯೋಂದು ವೈರಲ್ ಆಗುತ್ತಿದೆ. ಬೈಕ್ ರೈಡರ್ಸ್ ಮಳೆಗಾಲ ಸವಿಯಲು ಬೈಕ್ ರೈಡ್ ಆಯೋಜಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಬೈಕ್ ರೈಡರ್ಸ್ ಈ ರೈಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಬೈಕ್ ರೈಡರ್ ಒಬ್ಬರ ವೈಪರ್ ಹೆಲ್ಮೆಟ್ ಭಾರಿ ಗಮನಸೆಳೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಭಾರತದ ಮಾರುಕಟ್ಟೆಗಳಲ್ಲೂ ಈ ವೈಪರ್ ಹೆಲ್ಮೆಟ್

ವೈಪರ್ ಹೆಲ್ಮೆಟ್ ಭಾರತದ ಮಾರುಕಟ್ಟೆಯಲ್ಲೂ ಲಭ್ಯವಿದೆ. ಆದರೆ ಅಷ್ಟಾಗಿ ಮುನ್ನಲೆಗೆ ಬಂದಿಲ್ಲ. ಇಷ್ಟೇ ಅಲ್ಲ ಈ ಹೆಲ್ಮೆಟ್ ಬೆಲೆ ದುಬಾರಿಯಾಗಿರುವ ಕಾರಣ ಜನಸಾಮಾನ್ಯರ ಕೈಗೆ ಎಟಕುತ್ತಿಲ್ಲ. ರೈಡಿಂಗ್ ಜಾಕೆಟ್ ಜೊತೆಗೆ ಬರುತ್ತಿರುವ ಬಹುತೇಕ ಹೆಲ್ಮೆಟ್‌ಗಳಲ್ಲಿ ವೈಪರ್ ಫೀಚರ್ ಲಭ್ಯವಿದೆ.

ಮಳೆಗಾಲದಲ್ಲಿ ಈ ರೀತಿಯ ವೈಪರ್ ಹೆಲ್ಮೆಟ್ ಹೆಚ್ಚು ಪ್ರಯೋಜನವಾಗುತ್ತದೆ. ಮಳೆ ಇದ್ದರೂ ರೈಡಿಂಗ್ ಸಮಸ್ಯೆಯಾಗುವುದಿಲ್ಲ. ಪ್ರಮುಖವಾಗಿ ಲಾಂಗ್ ರೈಡಿಂಗ್ ಮಾಡುವ ಸವಾರರಿಗೆ ಇದು ಸಹಕಾರಿಯಾಗುತ್ತದೆ. ಮಳೆಯಲ್ಲಿ ಹಲವರು ಲಾಂಗ್ ರೈಡಿಂಗ್ ಹೋಗುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸುವವರ ಸಂಖ್ಯೆ ಹೆಚ್ಚು. ಈ ಲಾಂಗ್ ರೈಡರ್ಸ್‌ಗೆ ವೈಪರ್ ಹೆಲ್ಮೆಟ್ ಹೆಚ್ಚು ಪ್ರಯೋಜನಕಾರಿಯಾಗಿದೆ.

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್