ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಬಿಡುಗಡೆ, ಇದು ಮಾರ್ವೆಲ್ ಸೂಪರ್ ಹೀರೋಗಳಿಂದ ಪ್ರೇರಿತ ಬೈಕ್!

By Suvarna News  |  First Published Aug 11, 2023, 8:25 PM IST

ಟಿವಿಎಸ್ ಹೊಚ್ಚ ಹೊಸ ಸೂಪರ್ ಸ್ಕ್ವಾಡ್ ಬೈಕ್ ಬಿಡುಗಡೆ ಮಾಡಿದೆ. 98 ಸಾವಿರ ರೂಪಾಯಿ ಬೆಲೆಯ ಈ ಬೈಕ್ ಹಲವು ವಿಶೇಷತೆ ಹೊಂದಿದೆ. ನೂತನ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
 


ಬೆಂಗಳೂರು(ಆ.11): ಟಿವಿಎಸ್ ಮೋಟಾರ್ ಭಾರತದಲ್ಲಿ ಹೊಸ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ಜೊತೆಗೆ ಕೆಲ ಬೈಕ್ ಅಪ್‌ಗ್ರೇಡ್ ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಟಿವಿಎಸ್ ಬೈಕ್ ಹಾಗೂ ಸ್ಕೂಟರ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೀಗ ಟಿವಿಎಸ್ ಮೋಟಾರ್ ರೈಡರ್ ಸೂಪರ್ ಸ್ಕ್ವಾಡ್ ಆವೃತ್ತಿ ಬಿಡುಗಡೆ ಮಾಡಿದೆ. ಹೊಸ ವವೇರಿಯೆಂಟ್ ಮೋಟರ್‌ಸೈಕಲ್‌ಗಳು ಐಕಾನಿಕ್ ಮಾರ್ವೆಲ್ ಸೂಪರ್ ಹೀರೋಸ್ - ಬ್ಲ್ಯಾಕ್ ಪ್ಯಾಂಥರ್ ಮತ್ತು ಐರನ್ ಮ್ಯಾನ್‌ನಿಂದ ಸ್ಫೂರ್ತಿ ಪಡೆದಿವೆ. ನೂತನ ಬೈಕ್ ಬೆಲೆ  98,919 ರೂಪಾಯಿ(ಎಕ್ಸ್ ಶೋ ರೂಂ).

ಟಿವಿಎಸ್ ರೈಡರ್ ಆರಂಭದಿಂದಲೂ ಡಿಜಿಟಲ್ ಸ್ಥಳೀಯ ಬ್ರ‍್ಯಾಂಡ್ ಆಗಿದೆ. ಜೆನ್ Z ಗ್ರಾಹಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದೆ. ಟಿವಿಎಸ್ ರೈಡರ್ ಒಂದು ವಿಶಿಷ್ಟವಾದ ಸ್ಪೋರ್ಟಿ ಮೋಟಾರ್‌ಸೈಕಲ್ ಆಗಿದ್ದು, ಬ್ಲ್ಯಾಕ್ ಪ್ಯಾಂಥರ್ ಮತ್ತು ಐರನ್ ಮ್ಯಾನ್‌ನ ಶಕ್ತಿಯುತ ಗುಣಲಕ್ಷಣಗಳು ಅದರ ವಿಶಿಷ್ಟ ಆಕರ್ಷಣೆಯನ್ನು ಹೆಚ್ಚಿಸಿವೆ. 

Tap to resize

Latest Videos

undefined

ಕೈಗೆಟುಕವ ಬೆಲೆ, ಸ್ಮಾರ್ಟ್ ಕೆನೆಕ್ಟ್; ಹೊಸ ಟಿವಿಎಸ್ ಜುಪಿಟರ್ ZX ಡ್ರಮ್ ಸ್ಕೂಟರ್ ಬಿಡುಗಡೆ!

ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಆವೃತ್ತಿಯ ಎರಡು ಸಾಂಪ್ರದಾಯಿಕ ಮಾರ್ವೆಲ್ ವೇರಿಯೆಂಟ್‌ನೊಂದಿಗೆ ಬಿಡುಗಡೆಯಾಗಿದೆ. ಮಾರ್ವೆಲ್‌ನೊಂದಿಗಿನ ನಮ್ಮ ಯಶಸ್ವಿ ಸಹಯೋಗದ ಪ್ರಯಾಣದಲ್ಲಿ ಮತ್ತೊಂದು ಹೆಜ್ಜೆಯನ್ನು ಸೂಚಿಸುತ್ತದೆ ಎಂದು ಕಾರ್ಪೊರೇಟ್ ಬ್ರಾಂಡ್ ಮತ್ತು ಡೀಲರ್ ಪರಿವರ್ತನೆ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್ ಹೇಳಿದ್ದಾರೆ.  ಟಿವಿಎಸ್ ರೈಡರ್ 2021 ರಲ್ಲಿ ಪ್ರಾರಂಭವಾದಾಗಿನಿಂದ ವಿಶೇಷವಾಗಿ ಜೆನ್ Z ನಿಂದ ಅಗಾಧವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಈ ಕೊಡುಗೆಯು ಟಿವಿಎಸ್ ರೈಡರ್‌ಗೆ ಬ್ರ‍್ಯಾಂಡ್ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.

ಹೊಸ ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಆವೃತ್ತಿಯ ಬೆಲೆ 98,919 ರೂಪಾಯಿ (ಎಕ್ಸ್ ಶೋ ರೂಂ). ಟಿವಿಎಸ್ ರೈಡರ್ ಎಸ್‌ಎಸ್‌ಇ ಎಲ್ಲ ಟಿವಿಎಸ್ ಮೋಟಾರ್ ಟಚ್‌ಪಾಯಿಂಟ್‌ಗಳಲ್ಲಿ ಲಭ್ಯವಿದೆ.

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಕರ್ನಾಟಕದ ಗ್ರಾಹಕರಿಗೆ ಟಿವಿಎಸ್ ವಿಶೇಷ ಕೊಡುಗೆ!

ರೈಡ್ ಸ್ಕ್ವಾಡ್ ಬೈಕ್ 124.8 ಸಿಸಿ ಎಂಜಿನ್ ಲಭ್ಯವಿದೆ. ಏರ್ ಕೂಲ್ಡ್ ಮೋಟಾರ್, ಜೊತೆಗೆ ಇಂಟರ್ನಲ್ ಆಯಿಲ್ ಕೂಲರ್ ಸಿಸ್ಟಮ್ ಅಳವಡಿಸಲಾಗಿದೆ. ಇದರಿಂದ ಬೈಕ್ ಹೆಚ್ಚಿನ ಹೀಟ್ ಆಗುವುದು ತಪ್ಪಲಿದೆ. ಜೊತೆಗೆ ಅತ್ಯುತ್ತಮ ಮೈಲೇಜ್ ಹಾಗೂ ಪರ್ಫಾಮೆನ್ಸ್‌ಗೆ ಯಾವುದೇ ಸಮಸ್ಯೆಯಾಗುವುದಿಲ್ಲ. 11.22 ಬಿಹೆಚ್‌ಪಿ ಪವರ್ ಹಾಗೂ 11.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್, ಸ್ಟಾಪ್ ಸ್ಟಾರ್ಟಿಂಗ್ ಸಿಸ್ಟಮ್ ಹೊಂದಿದೆ.ಜೊತೆಗೆ ಸೈಲೆಂಟ್ ಮೋಟಾರ್ ಸ್ಟಾರ್ಟರ್‌ನಿಂದ ಉತ್ತಮ ಮೈಲೇಜ್ ಲಭ್ಯವಾಗಲಿದೆ. 17 ಇಂಚಿನ ಅಲೋಯ್ ವ್ಹೀಲ್, ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ.
 

click me!