ಕೈಗೆಟುಕವ ಬೆಲೆ, ಸ್ಮಾರ್ಟ್ ಕೆನೆಕ್ಟ್; ಹೊಸ ಟಿವಿಎಸ್ ಜುಪಿಟರ್ ZX ಡ್ರಮ್ ಸ್ಕೂಟರ್ ಬಿಡುಗಡೆ!

By Suvarna News  |  First Published Aug 11, 2023, 6:49 PM IST

ಟಿವಿಎಸ್ ಹೊಚ್ಚ ಹೊಸ ಜುಪಿಟರ್ ಸ್ಕೂಟರ್ ಬಿಡುಗಡೆ ಮಾಡಿದೆ. SmartXonnect ಟಿವಿಎಸ್ ಜುಪಿಟರ್ ZX ಡ್ರಮ್ ಸ್ಕೂಟರ್ ಕೈಗೆಟುವ ಬೆಲೆ, ಕೆನೆಕ್ಟೆಡ್ ಫೀಚರ್ಸ್ ಸೇರಿದಂತೆ ಹಲವು ವಿಶೇಷತೆ ಹೊಂದಿದೆ.


ಬೆಂಗಳೂರು(ಆ.11): ಸ್ಮಾರ್ಟ್ ಕನೆಕ್ಟ್ ಇದೀಗ ಮೋಟಾರು ವಾಹನಗಳಲ್ಲಿ ಅತ್ಯವಶ್ಯಕ ಫೀಚರ್ ಆಗಿದೆ. ಹೀಗಾಗಿ ಹಲವು ಕಂಪನಿಗಳು ತಮ್ಮ ವಾಹನಗಳನ್ನು ಸ್ಮಾರ್ಟ್‌ಕನೆಕ್ಟ್‌ಗೆ ಅಪ್‌ಗ್ರೇಡ್ ಮಾಡಿದೆ. ಇದರ ಜೊತೆಗೆ ಹಲವು ವಿಶೇಷತೆಗಳನ್ನು ಸೇರಿಸುತ್ತಿದೆ. ಭಾರತದಲ್ಲಿ ಭಾರಿ ಬೇಡಿಕೆಯ ಟಿವಿಎಸ್ ಜುಪಿಟರ್ ಇದೀಗ ತನ್ನ ಹೊರ ವೇರಿಯೆಂಟ್ ಬಿಡುಗಡೆ ಮಾಡಿದೆ. SmartXonnect ಜುಪಿಟರ್ ZX ಡ್ರಮ್ ವೇರಿಯೆಂಟ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಪರ್ಫಾಮೆನ್ಸ್, ಸುಲಭ ರೈಡಿಂಗ್ ಸೇರಿದಂತೆ ಹಲವು ವಿಶೇಷಚೆಗಳನ್ನು ಈ ಸ್ಕೂಟರ್ ಹೊಂದಿದೆ.

ನೂತನ ಟಿವಿಎಸ್ ಜುಪಿಟರ್ ZX ಡ್ರಮ್ ಸ್ಕೂಟರ್ ಎರಡು ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿದೆ. ಜೊತೆಗೆ ಸುಧಾರಿತ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಟಾರ್‌ಲೈಟ್ ಬ್ಲೂ ಹಾಗೂ  ಹೊಸ ಆಲಿವ್ ಗೋಲ್ಡ್ ಬಣ್ಣದೊಂದಿಗೆ ನೂತನ ಸ್ಕೂಟರ್ ಆಕರ್ಷಕತೆ ಮತ್ತಷ್ಟು ಹೆಚ್ಚಿದೆ. ನೂತನ ಸ್ಕೂಟರ್ ಬೆಲೆ 84,468 ರೂಪಾಯಿ(ಎಕ್ಸ್ ಶೋ ರೂಂ).

Tap to resize

Latest Videos

undefined

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಕರ್ನಾಟಕದ ಗ್ರಾಹಕರಿಗೆ ಟಿವಿಎಸ್ ವಿಶೇಷ ಕೊಡುಗೆ!

ಟಿವಿಎಸ್ ಜ್ಯುಪಿಟರ್ Zಘಿ ಡ್ರಮ್ ರೂಪಾಂತರವು ಟಿವಿಎಸ್ SmartXonnect ತಂತ್ರಜ್ಞಾನದೊಂದಿಗೆ ಸಕ್ರಿಯಗೊಳಿಸಲಾದ ಬ್ಲೂಟೂತ್ ಸಂಪರ್ಕಿತ ಡಿಜಿಟಲ್ ಕ್ಲಸ್ಟರ್‌ ಹೊಂದಿದೆ. ಇದು ಸವಾರರಿಗೆ ಅತ್ಯುತ್ತಮ ರೈಡಿಂಗ್ ಅನುಭವಕ್ಕಾಗಿ ಸುಧಾರಿತ ವೈಶಿಷ್ಟ್ಯಗಳ ಶ್ರೇಣಿಯನ್ನು ನೀಡುತ್ತದೆ. ಟಿವಿಎಸ್ SmartXonnect ವೈಶಿಷ್ಟ್ಯಗಳೊಂದಿಗೆ, ಕ್ಲಸ್ಟರ್‌ನಲ್ಲಿ ಟರ್ನ್- ಬೈ- ಟರ್ನ್ ನ್ಯಾವಿಗೇಷನ್, ವಾಯ್ಸ್ ಅಸಿಸ್ಟ್, ಕರೆ ಮತ್ತು ಎಸ್‌ಎಂಎಸ್ ಎಚ್ಚರಿಕೆಗಳ ಅನುಕೂಲತೆಯಂತಹ ಹಲವಾರು ಕಾರ್ಯಚಟುವಟಿಕೆಗಳಿಂದ ಸವಾರರು ಪ್ರಯೋಜನ ಪಡೆಯಬಹುದು. ಈ ಅತ್ಯಾಧುನಿಕ ತಂತ್ರಜ್ಞಾನವು ಸವಾರರು ಪ್ರಯಾಣದಲ್ಲಿರುವಾಗ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ, ತಡೆರಹಿತ ಮತ್ತು ಅನುಕೂಲಕರ ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ರೂಪಾಂತರವು ಅಂತರ್ನಿರ್ಮಿತ ಮೊಬೈಲ್ ಚಾರ್ಜರ್‌ನೊಂದಿಗೆ ಸಜ್ಜುಗೊಂಡಿದೆ, ಚಲಿಸುತ್ತಿರುವಾಗ ತಮ್ಮ ಸಾಧನಗಳನ್ನು ಚಾರ್ಜ್ ಮಾಡಲು ಸವಾರರಿಗೆ ಅಧಿಕಾರ ನೀಡುತ್ತದೆ.

Zyada ka Fayda ಎಂಬ ತನ್ನ ನೈಜ ತತ್ವಶಾಸ್ತಕ್ಕೆ ಅನುಗುಣವಾಗಿ ಟಿವಿಎಸ್ ಜ್ಯುಪಿಟರ್‌ನ ಅತ್ಯಾಧುನಿಕ ವಿಶೇಷತೆಗಳೊಂದಿಗೆ ಹೊಸ ರೂಪಾಂತರವು ಹೆಚ್ಚು ಸುರಕ್ಷತೆ ಹೆಚ್ಚು ಅನುಕೂಲತೆ ಮತ್ತು ಹೆಚ್ಚು ಸಂಪರ್ಕವನ್ನು ತಲುಪಿಸುವ ಬದ್ಧತೆಯನ್ನು ನಿರೂಪಿಸುತ್ತದೆ. ಟಿವಿಎಸ್ ZX  ಡ್ರಮ್ ದೇಶದ ಎಲ್ಲೆಡೆ ಟಿವಿಎಸ್ ಮೋಟಾರ್ ಕಂಪನಿ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ.

ಹೊಸ ಮೈಲಿಗಲ್ಲು ಸ್ಥಾಪಿಸಿದ TVS ಜುಪಿಟರ್, ಕೈಗೆಟುಕವ ಬೆಲೆಗೆ ಕ್ಲಾಸಿಕ್ ಸ್ಕೂಟರ್ ಬಿಡುಗಡೆ!

* ಟಿವಿಎಸ್ ಜ್ಯುಪಿಟರ್ SmartXonnect ಡಿಸ್ಕ್ ರೂಪಾಂತರದ ಯಶೋಗಾಥೆ ಹಿನ್ನೆಲೆಯಲ್ಲಿ ಕಂಪನಿಯು ಸಂಪರ್ಕಿತ ಸವಾರಿ ಅನುಭವದ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ

* ಎರಡು ಹೊಸ ಆಕರ್ಷಕ ಬಣ್ಣಗಳಲ್ಲಿ ಅಂದರೆ ಸ್ಟಾರ್‌ಲೈಟ್ ಬ್ಲೂ ಮತ್ತು ಆಲಿವ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಹೊಸದಾಗಿ ಪ್ರಾರಂಭಿಸಲಾದ ಟಿವಿಎಸ್ ಜ್ಯುಪಿಟರ್ SmartXonnect ಡ್ರಮ್ ರೂಪಾಂತರದ ಬೆಲೆ ರೂ. 84,468 (ಎಕ್ಸ್ ಶೋ ರೂಂ ದೆಹಲಿ) ಆಗಿರುತ್ತದೆ
 

click me!