ಓಲಾ 72 ಗಂಟೆ ರಶ್ ಅಭಿಯಾನ, 25 ಸಾವಿರ ರೂ ಡಿಸ್ಕೌಂಟ್, 30,000 ರೂ ಹೆಚ್ಚುವರಿ ಪ್ರಯೋಜನ!

By Chethan KumarFirst Published Oct 29, 2024, 4:03 PM IST
Highlights
  • ಓಲಾ ಇಲೆಕ್ಟ್ರಿಕ್ ನಿಂದ "72 ತಾಸುಗಳ ರಶ್" ಅಭಿಯಾನ:  ಎಸ್1 ಪೋರ್ಟ್‌ಫೋಲಿಯೊದಲ್ಲಿ 25,000 ₹ ವರೆಗಿನ ರಿಯಾಯಿತಿಗಳು ಮತ್ತು 30,000 ₹ ವರೆಗಿನ ಹೆಚ್ಚುವರಿ ಪ್ರಯೋಜನಗಳು.
  •   ಎಸ್1 ಪೋರ್ಟ್‌ಫೋಲಿಯೊದಲ್ಲಿ 25,000 ₹ ವರೆಗೆ ರಿಯಾಯಿತಿ
  •  ಹಣಕಾಸು ಕೊಡುಗೆಗಳು, ಸಾಫ್ಟ್‌ ವೇರ್ ಅಪ್‌ಗ್ರೇಡ್, ಚಾರ್ಜಿಂಗ್ ಕ್ರೆಡಿಟ್‌ಗಳು ಮತ್ತು ಇನ್ನೂ ಹೆಚ್ಚಿನವು ಸೇರಿದಂತೆ 30,000 ₹ ವರೆಗಿನ ವಿಶೇಷ ಡೀಲ್‌ಗಳು, ನಿಮಗಾಗಿ.

ಬೆಂಗಳೂರು(ಅ.29): ಭಾರತದ ಅತಿದೊಡ್ಡ ಪ್ಯೂರ್-ಪ್ಲೇ ಇವಿ ಕಂಪನಿಯಾದ ಓಲಾ ಇಲೆಕ್ಟ್ರಿಕ್, ತಮ್ಮ 'ಬಾಸ್' ಕೊಡುಗೆಗಳ ಭಾಗವಾಗಿ "72 ಗಂಟೆಗಳ ರಶ್" ಅನ್ನು ಘೋಷಿಸಿದೆ. ಇದು, ಹಬ್ಬದ ಸೀಸನ್‌ಗಾಗಿ ಓಲಾ ನಡೆಸುತ್ತಿರುವ ಅತಿ ದೊಡ್ಡ ಸೇಲ್ ಅಭಿಯಾನ. ಗ್ರಾಹಕರು ಎಸ್1 ಪೋರ್ಟ್‌ಫೋಲಿಯೊದಲ್ಲಿ 25,000 ₹ ವರೆಗೆ ರಿಯಾಯಿತಿಗಳನ್ನು ಪಡೆಯಬಹುದು ಮತ್ತು ಸ್ಕೂಟರ್‌ಗಳಲ್ಲಿ 30,000 ₹ ವರೆಗಿನ ಮೌಲ್ಯದ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಇವಿ ಗೆ ಬದಲಾಗಲು ಇದೊಂದು ಉತ್ತಮ ಸಮಯ. 31 ಅಕ್ಟೋಬರ್, 2024 ರವರೆಗೆ ಖರೀದಿಸುವವರು ಈ ಕೊಡುಗೆಗಳನ್ನು ಪಡೆಯಬಹುದು.

'ಬಾಸ್' ಅಭಿಯಾನದ ಅಡಿಯಲ್ಲಿ, ಕಂಪನಿಯು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ:
● ಬಾಸ್ ಬೆಲೆಗಳು: ಓಲಾ ಎಸ್1 ಪೋರ್ಟ್‌ಫೋಲಿಯೊ ಕೇವಲ 74,999 ₹ ನಿಂದ ಪ್ರಾರಂಭವಾಗುತ್ತದೆ
● ಬಾಸ್ ರಿಯಾಯಿತಿಗಳು: ಇಡೀ ಎಸ್1 ಪೋರ್ಟ್‌ಫೋಲಿಯೊಗೆ 25,000 ₹ ವರೆಗೆ
● ಹೆಚ್ಚುವರಿ ಬಾಸ್ ಪ್ರಯೋಜನಗಳು: 30,000 ₹ ವರೆಗೆ 
○ ಬಾಸ್ ವಾರಂಟಿ: 7,000 ₹ ಮೌಲ್ಯದ ಉಚಿತ 8-ವರ್ಷ/80,000 ಕಿಮೀ ಬ್ಯಾಟರಿ ವಾರಂಟಿ
○ ಬಾಸ್ ಹಣಕಾಸು ಕೊಡುಗೆಗಳು: ಆಯ್ದ ಕ್ರೆಡಿಟ್ ಕಾರ್ಡ್ ಇಎಂಐ ಗಳಲ್ಲಿ 5,000 ₹ ವರೆಗಿನ ಹಣಕಾಸು ಕೊಡುಗೆಗಳು
○ ಬಾಸ್ ಪ್ರಯೋಜನಗಳು: 6,000 ₹ ಮೌಲ್ಯದ ಉಚಿತ MoveOS+ ಅಪ್‌ಗ್ರೇಡ್;
○ 7,000 ₹ಮೌಲ್ಯದ ಉಚಿತ ಚಾರ್ಜಿಂಗ್ ಕ್ರೆಡಿಟ್‌ಗಳು
○ ಬಾಸ್ ವಿನಿಮಯ ಕೊಡುಗೆಗಳು: ಎಸ್1 ಪೋರ್ಟ್‌ಫೋಲಿಯೊದಲ್ಲಿ 5000 ₹ ವರೆಗೆ ವಿನಿಮಯ ಕೊಡುಗೆಗಳು
ಓಲಾ ಇಲೆಕ್ಟ್ರಿಕ್: ವಿವಿಧ ಶ್ರೇಣಿಯ ಅಗತ್ಯತೆಗಳು ಆಕರ್ಷಕ ಬೆಲೆಗಳ ಜೊತೆಗೆ ಆರು ಕೊಡುಗೆಗಳೊಂದಿಗೆ ವಿಸ್ತಾರವಾದ ಎಸ್1 ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಪ್ರೀಮಿಯಂ ಕೊಡುಗೆಗಳಾದ ಎಸ್1 ಪ್ರೋ ಮತ್ತು ಎಸ್1 ಏರ್ ಬೆಲೆಗಳು ಕ್ರಮವಾಗಿ - 1,14,999 ₹ ಮತ್ತು 1,07,499 ₹. ಸಾಮೂಹಿಕ ಮಾರುಕಟ್ಟೆ ಕೊಡುಗೆಗಳಲ್ಲಿ ಎಸ್1 X ಪೋರ್ಟ್‌ಫೋಲಿಯೊ (2 kWh, 3 kWh, ಮತ್ತು 4 kWh) ಬೆಲೆಗಳು ಕ್ರಮವಾಗಿ - 74,999 ₹, 77,999 ₹, ಮತ್ತು 91,999 ₹.

Latest Videos

ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿ ಇವಿ ವಾಹನಗಳ ಬಳಕೆಯನ್ನು ಹೆಚ್ಚಿಸಲು ಮತ್ತು ಮಾರಾಟದ ನಂತರದ ಮತ್ತು ಮಾಲೀಕತ್ವದ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಬೇಕೆನ್ನುವ ಸ್ಪಷ್ಟ ದೃಷ್ಟಿಯೊಂದಿಗೆ ಓಲಾ ಇಲೆಕ್ಟ್ರಿಕ್, ಕಳೆದ ಕೆಲವು ವಾರಗಳಲ್ಲಿ ಹಲವಾರು ಗ್ರಾಹಕ-ಪರ ಉಪಕ್ರಮಗಳ ಸರಣಿಯನ್ನೇ ಘೋಷಿಸಿದೆ. ಕಂಪನಿಯು ಉನ್ನತ ತಂತ್ರಜ್ಞಾನ, ಅತ್ಯುತ್ತಮ-ದರ್ಜೆಯ ಮಾರಾಟದ ನಂತರದ ಅನುಭವವನ್ನು ನೀಡುವತ್ತ ಗಮನಹರಿಸುವುದರೊಂದಿಗೆ #HyperService ಅಭಿಯಾನವನ್ನು ಪ್ರಾರಂಭಿಸಿದೆ. ಅಭಿಯಾನದ ಭಾಗವಾಗಿ, ಕಂಪನಿಯು ಡಿಸೆಂಬರ್ 2024 ರ ವೇಳೆಗೆ ತನ್ನ ಕಂಪನಿ-ಮಾಲೀಕತ್ವದ ಸೇವಾ ಜಾಲವನ್ನು 1,000 ಕೇಂದ್ರಗಳಿಗೆ ಹೆಚ್ಚಿಸಲಿದೆ, ಎಂದರೆ ದ್ವಿಗುಣಗೊಳಿಸಲಿದೆ.

ಹೆಚ್ಚುವರಿಯಾಗಿ, ತನ್ನ ನೆಟ್‌ವರ್ಕ್ ಪಾಲುದಾರ ಕಾರ್ಯಕ್ರಮದ ಭಾಗವಾಗಿ ಕಂಪನಿಯು 2025 ರ ಅಂತ್ಯದ ವೇಳೆಗೆ ಮಾರಾಟ ಮತ್ತು ಸೇವೆಗಳಿಗೆ 10,000 ಪಾಲುದಾರರನ್ನು ಸೇರಿಸಿಕೊಳ್ಳಲಿದೆ. ಕಂಪನಿಯು, 1 ಲಕ್ಷ ಥರ್ಡ್-ಪಾರ್ಟಿ ಮೆಕ್ಯಾನಿಕ್‌ಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿರುವ ಇವಿ ಸೇವಾ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ. ಭಾರತದಾದ್ಯಂತ ಪ್ರತಿಯೊಬ್ಬ ಮೆಕ್ಯಾನಿಕ್ ಕೂಡ ಇವಿ ವಾಹನಗಳನ್ನು ನಿಭಾಯಿಸಲು ಸಿದ್ಧನಾಗಿರಬೇಕೆನ್ನುವುದೇ ಇದರ ಉದ್ದೇಶ. 

ಆಗಸ್ಟ್ 2024 ರಲ್ಲಿನ ತನ್ನ ವಾರ್ಷಿಕ  ಸಂಕಲ್ಪ್ ಕಾರ್ಯಕ್ರಮದಲ್ಲಿ ಕಂಪನಿಯು Roadster X (2.5 kWh, 3.5 kWh, 4.5 kWh), Roadster (3.5 kWh, 4.5 kWh, 6 kWh) ಮತ್ತು Roadster Pro (8 kWh, 16 kWh) ಗಳನ್ನು ಒಳಗೊಂಡಿರುವ ತನ್ನ ರೋಡ್‌ ,Roadster ಮೋಟಾರ್‌ಸೈಕಲ್ ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಮೋಟರ್‌ಸೈಕಲ್‌ಗಳು ಹಲವು ವಿಭಾಗ- ಪ್ರಥಮ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ವೈಶಿಷ್ಟ್ಯಗಳನ್ನು ನೀಡುತ್ತವೆ, ಅವುಗಳ ಬೆಲೆಗಳು ಕ್ರಮವಾಗಿ ₹74,999,₹1,04,999 ಮತ್ತು ₹1,99,999 ರಿಂದ ಪ್ರಾರಂಭವಾಗುತ್ತವೆ.
 

click me!