ಮೇಡ್ ಇನ್ ಇಂಡಿಯಾ ಆಟೋಬ್ಯಾಲೆನ್ಸ್ ಸ್ಕೂಟರ್ ಅನಾವರಣ, ಇದು ವಿಶ್ವದಲ್ಲೇ ಮೊದಲು!

By Suvarna News  |  First Published Jan 15, 2023, 3:50 PM IST

ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋದಲ್ಲಿ ಮೇಡ್ ಇನ್ ಇಂಡಿಯಾ ಲಿಗರ್ x ಹಾಗೂ ಲಿಗರ್ X+ ಸ್ಕೂಟರ್ ಅನಾವರಣ ಮಾಡಲಾಗಿದೆ. ಲಿಗರ್ ಕಂಪನಿಯ ಈ ಸ್ಕೂಟರ್ ಹಲವು ವಿಶೇಷತೆ ಹೊಂದಿದೆ. ಇದು ಆಟೋ ಬ್ಯಾಲೆನ್ಸಿಂಗ್ ಸ್ಕೂಟರ್. ಈ ಸ್ಕೂಟರ್ ಯಾರ ಸಹಾಯವೂ ಇಲ್ಲದೆ ಸ್ವಯಂ ಬ್ಯಾಲೆನ್ಸ್ ಮಾಡಲಿದೆ. ವಿಶ್ವದಲ್ಲೇ ಮೊದಲ ಸೆಲ್ಫ್ ಬ್ಯಾನ್ಸಿಂಗ್ ಸ್ಕೂಟರ್‌ನ ಮತ್ತಷ್ಟು ಮಾಹಿತಿ ಇಲ್ಲಿದೆ.
 


ನವದೆಹಲಿ(ಜ.15): ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿರುವ ಎಲೆಕ್ಟ್ರಿಕ್ ವಾಹನಗಳು ಜಗತ್ತನ್ನೇ ಬೆರಗುಗೊಳಿಸುವಂತಿದೆ. ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಕರ್ಷಕ ಡಿಸೈನ್, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳಿವೆ. ಈ ಪೈಕಿ ಮುಂಬೈ ಮೂಲದ ಲಿಗರ್ ಮೊಬಿಲಿಟಿ ವಿಶ್ವವನ್ನೇ ಚಕಿತಗೊಳಿಸಿದೆ. ಲಿಗರ್ ಮೊಬಿಲಿಟಿ ಎರಡು ಸ್ಕೂಟರ್ ಅನಾವರಣ ಮಾಡಿದೆ. ಲಿಗರ್ x ಹಾಗೂ ಲಿಗರ್ X+ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿದೆ. ಈ ಸ್ಕೂಟರ್ ವಿಶೇಷತೆ ಎಂದರೆ ಸೆಲ್ಫ್ ಬ್ಯಾಲೆನ್ಸಿಂಗ್. ರೈಡರ್ ಸಹಾಯವಿಲ್ಲದೆ ಬೈಕ್ ಸೆಲ್ಫ್ ಬ್ಯಾಲೆನ್ಸ್ ಮಾಡಿಕೊಳ್ಳಲಿದೆ. ಈ ರೀತಿ ಸ್ಕೂಟರ್ ಸ್ವತಃ ಬ್ಯಾಲೆನ್ಸಿಂಗ್ ಮಾಡಬಲ್ಲ ತಂತ್ರಜ್ಞಾನ ವಿಶ್ವದಲ್ಲೇ ಇದೇ ಮೊದಲು.  ಹಲವು ಪ್ರಯೋಗಗಳು ನಡೆದಿದರೂ ಯಾವುದು ಅನಾವರಣ ಮಟ್ಟಕ್ಕೆ ಬಂದಿಲ್ಲ. ಆದರೆ ಲಿಗರ್ ಮೊಬಿಲಿಟಿ ಇದನ್ನು ಸಾಧ್ಯವಾಗಿಸಿದೆ.

ಈ ಸ್ಕೂಟರ್‌ನಲ್ಲಿ ಕುಳಿತು ಪ್ರಯಾಣ ಮಾಡುವುದು ಎಲ್ಲರಿಗೂ ಸುಲಭ. ಕಾರಣ ರೈಡರ್ ಸ್ಕೂಟರ್ ಬ್ಯಾಲೆನ್ಸ್ ಮಾಡಬೇಕಿಲ್ಲ. ಸ್ಕೂಟರ್ ಬ್ಯಾಲೆನ್ಸ್ ಮಾಡಿಕೊಂಡು ರೈಡರ್‌ನ ಕರೆದುಕೊಂಡು ಹೋಗಲಿದೆ. ರೈಡರ್ ಕೇವಲ ಎಕ್ಸಲೇಟರ್, ಬ್ರೇಕ್, ಇಂಡಿಕೇಟರ್, ಹೆಡ್‌ಲೈಟ್ ಆಪರೇಟ್ ಮಾಡಿದರೆ ಸಾಕು. ಬ್ಯಾಲೆನ್ಸಿಂಗ್ ಸ್ಕೂಟರ್ ಸ್ವಯಂ ಮಾಡಲಿದೆ.

Tap to resize

Latest Videos

undefined

Auto Expo 2023 ಹೆಚ್ಚು ಸ್ಪೋರ್ಟೀವ್, ಟಾರ್ಕ್ ಕ್ರಾಟೋಸ್ X ಎಲೆಕ್ಟ್ರಿಕ್ ಬೈಕ್ ಅನಾವರಣ!

ಇದು ಹೇಗೆ ಸಾಧ್ಯ? ಎರಡು ಚಕ್ರದ ಸ್ಕೂಟರ್ ಇತರ ಸ್ಕೂಟರ್‌ಗಳಂತಿದೆ. ಆದರೂ ಬ್ಯಾಲೆನ್ಸಿಂಗ್ ಹೇಗೆ ಸಾಧ್ಯ? ಈ ಕುರಿತು ಲಿಗರ್ ಮೊಬಿಲಿಟಿ ಸಹ ಸಂಸ್ಥಾಪಕ ವಿಕಾಸ್ ಪೊದ್ದಾರ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸ್ಕೂಟರ್ ಸ್ವಯಂ ಬ್ಯಾಲೆನ್ಸಿಂಗ್ ಮಾಡಲು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (AI)ತಂತ್ರಜ್ಞಾನ ಇದರಲ್ಲಿ ಬಳಸಲಾಗಿದೆ. AI ತಂತ್ರಜ್ಞಾನ ಸ್ಕೂಟರ್‌ನ್ನು ಗುರುತ್ವಾಕರ್ಷಣೆಯ ಕೇಂದ್ರವನ್ನು ಸೂಚಿಸಲಿದೆ. ಇದರಿಂದ ಸ್ಕೂಟರ್ ಯಾವ ಕಡೆ ವಾಲಿದರೂ ಗುರುತ್ವಾಕರ್ಷಣೆಯ ಕೇಂದ್ರಬಿಂದುವನ್ನು ಹಿಡಿದಿಟ್ಟುಕೊಂಡೇ ವಾಲಲಿದೆ. ಇದಕ್ಕಾಗಿ ವಿಶೇಷ ವಿನ್ಯಾಸ ಪಡಿಸಿದ ಆಟೋಬ್ಯಾಲೆನ್ಸಿಂಗ್ ಪ್ರೊಸೆಸರ್ ಕೆಲಸ ಮಾಡಲಿದೆ. ಈ ಪ್ರೊಸೆಸರ್ ಪ್ರತಿ ಸೆಕೆಂಡ್‌ಗೆ 9,000 ಡೇಟಾ ಪಾಯಿಂಟ್ಸ್ ಗುರುತಿಸಲಿದೆ. AI ಆಲ್ಗೋರಿದಮ್ ತಂತ್ರಜ್ಞಾನದ ಮೂಲಕ ಈ ಎಲ್ಲಾ ಪ್ರೊಸೆಸರ್ ಕೆಲಸ ಮಾಡಲಿದೆ.

ಸ್ಕೂಟರ್‌ನಲ್ಲಿ ಹಲವು ಸೆನ್ಸಾರ್ ಬಳಕೆ ಮಾಡಲಿದೆ. ಈ ಸೆನ್ಸಾರ್ ಮೂಲಕ ಆಟೋಬ್ಯಾಲೆನ್ಸಿಂಗ್ ಪ್ರೊಸೆಸರ್ ಡೇಟಾ ಸಂಗ್ರಹಿಸಲಿದೆ. ಆಟೋಬ್ಯಾಲೆನ್ಸಿಂಗ್ ಸ್ಕೂಟರ್‌ನ್ನು ಲ್ಯಾಬ್ ಹಾಗೂ ರಸ್ತೆಯಲ್ಲಿ ಪರೀಕ್ಷಿಸಲಾಗಿದೆ. 10,000 ಗಂಟೆಗಳ ಕಾಲ ಈ ಪರೀಕ್ಷೆ ನಡೆಸಿದ್ದೇವೆ. ಈ ಸ್ಕೂಟರ್‌ನಲ್ಲಿ ಲಿಕ್ವಿಡ್ ಕೂಲ್ಡ್ ಬ್ಯಾಟರಿ ಬ್ಯಾಕ್ ಬಳಸಲಾಗಿದೆ. ಬ್ಯಾಟರಿ ಪ್ಯಾಕನ್ನು 30,000 ಕಿಲೋಮೀಟರ್ ಚಲಾಯಿಸಿ ಪರೀಕ್ಷಿಸಲಾಗಿದೆ.

Auto Expo 2023 ಸಿಂಗಲ್ ಚಾರ್ಜ್‌ಗೆ 700 ಕಿ.ಮೀ ಮೈಲೇಜ್, ಭಾರತದಲ್ಲಿ ಬಿವೈಡಿ ಸೀಲ್ ಕಾರು ಅನಾವರಣ!

ಔರಾಂಗಾಬಾದ್‌ನಲ್ಲಿ ಲಿಗರ್ ಮೊಬಿಲಿಟಿ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗಿದೆ. 2023ರ ಅಂತ್ಯದಲ್ಲಿ ಲಿಗರ್ ಆಟೋಬ್ಯಾಲೆನ್ಸಿಂಗ್ ಸ್ಕೂಟರ್ ಉತ್ಪಾದನೆ ಆರಂಭಿಸಲಿದೆ. ಆರಂಭಿಕ ಹಂತದಲ್ಲಿ 20,000 ಆಟೋಬ್ಯಾಲೆನ್ಸಿಂಗ್ ಸ್ಕೂಟರ್ ಉತ್ಪಾದನೆ ಮಾಡಲಾಗುತ್ತಿದೆ. ಔರಂಗಬಾದ್ ಉತ್ಪಾದನಾ ಘಟಕದಲ್ಲಿ 1 ಲಕ್ಷ ಸ್ಕೂಟರ್ ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ.

ಲಿಗರ್ x ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 60 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು   ಲಿಗರ್ X+ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಹೀಗಾಗಿ ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಸ್ಕೂಟರ್ ಗರಿಷ್ಠ ಮೈಲೇಜ್ 65 ಕಿ.ಮಿ ಪ್ರತಿ ಗಂಟೆಗೆ. 

ಲಿಗರ್ ಮೊಬಿಲಿಟಿಯ ಆಟೋಬ್ಯಾಲೆನ್ಸಿಂಗ್ ಸ್ಕೂಟರ್ ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಮಾಡಲಾಗಿದೆ. ಇದು ಹೆಮ್ಮೆಯ ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದೆ. ಭಾರತದ ಕಂಡೀಷನ್‌ಗೆ ಅನುಗುಣುವಾಗಿ ಅಭಿೃದ್ಧಿ ಮಾಡಲಾಗಿದೆ. ಗರಿಷ್ಠ ತಾಪಮಾನ, ಇಲ್ಲಿನ ಹವಾಮಾನ, ರಸ್ತೆ ಸೇರಿದಂತೆ ಭಾರತದ ಪರಿಸ್ಥಿತಿಗೆ ತಕ್ಕಂತೆ ಈ ಸ್ಕೂಟರ್ ಅಭಿವೃದ್ಧಿಪಡಿಸಲಾಗಿದೆ.

click me!