
ಬೆಂಗಳೂರು (ಜು.29) ಪರ್ಫಾಮೆನ್ಸ್ ಬೇಕು, ಸ್ಟೈಲ್ ಇರಬೇಕು, ರೈಡಿಂಗ್ ವೇಳೆಯೂ ಆಕರ್ಷಕವಾಗಿ ಕಾಣಬೇಕು, ಪವರ್‌ಫುಲ್ ಎಂಜಿನ್ ಹಾಗೂ ಗುಣಮಟ್ಟವೂ ಉತ್ತಮವಾಗಿರಬೇಕು ಎಂದು ಬಯಸುವ ಬೈಕ್ ಪ್ರಿಯರಿಗೆ ಇದೀಗ ಹೊಸ ಬೈಕ್ ಲಭ್ಯವಿದೆ. ಕವಾಸಕಿ ನಿಂಜಾ 300 ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಅತ್ಯಂಕ ಆಕರ್ಷಕ ಹಾಗೂ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಕವಾಸಕಿ ಬ್ರ್ಯಾಂಡ್ ಬೈಕ್ ಇದೀಗ ಹೊಸ ಸಂಚಲನ ಸೃಷ್ಟಿಸಿದೆ.
2027ರ ಕವಾಸಕಿ ನಿಂಜಾ 300 ಬೈಕ್ ಬೆಲೆ 3.34 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸೂಪರ್ ಬೈಕ್, ಸ್ಪೋರ್ಟ್ಸೀವ್ ಆಗಿರುವ ನಿಂಜಾ 300 ಹಲವು ವಿಶೇಷತೆ ಹೊಂದಿದೆ. ಜೊತೆಗದೆ ನೂತನ ಬೈಕ್ ನೇರವಾಗಿ ಟಿವಿಎಸ್ ಅಪಾಜೆ ಆರ್ಆರ್ 310, ಕೆಟಿಎಂ ಆರ್‌ಸಿ 390 ಬೈಕ್‌ಗೆ ಪ್ರತಿಸ್ಫರ್ಧಿಯಾಗಿದೆ.
ಕವಾಸಕಿ ನಿಂಜಾ 300 ಬೈಕ್ 296ಸಿಸಿ ಎಂಜಿನ್ ಹೊಂದಿದೆ. 39 ಹೆಚ್‌ಪಿ ಪವರ್ ಹಾಗೂ 26.1 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 785mm ಸೀಟ್ ಹೈಟ್ ಹೊಂದಿದೆ. 179kg ಕರ್ಬ್ ತೂಕ ಹೊಂದಿದೆ. 140mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ನಿಂಜಾ 300 ಬೈಕ್ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. 37mm ಟೆಲಿಸ್ಕೋಪಿಂಕ್ ಫೋರ್ಕ್ ಹಾಗೂ ಪ್ರೀಲೋಡ್ ಎಡ್ಜಸ್ಟೇಬಲ್ ರೇರ್ ಶಾಕ್ ಹೊಂದಿದೆ. 17 ಲೀಟರ್ ಇಂಧನ ಸಾಮರ್ಥ್ಯ ಹೊಂದಿರುವ ನಿಂಜಾ 300 ಬೈಕ್ LED ಹೆಡ್‌ಲ್ಯಾಂಪ್ಸ್, ಡ್ಯುಯೆಲ್ ಚಾನೆಲ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಬೈಕ್‌ನಲ್ಲಿದೆ.
ಕವಾಸಕಿ ನಿಂಜಾ 300 ಬೈಕ್ ಬೆಲೆ 3.34 ಲಕ್ಷ ರೂಪಾಯಿ. ನೇರ ಪ್ರತಿಸ್ಪರ್ಧಿಯಾಗಿರುವ ಟಿವಿಎಸ್ ಅಪಾಚೆ ಆರ್‌ಆರ್ 310 ಬೆಲೆ 2.62 ಲಕ್ಷ ರೂಪಾಯಿ. ಇನ್ನು KTM RC 390 ಬೈಕ್ ಬೆಲೆ 3.32 ಲಕ್ಷ ರೂಪಾಯಿ. ಎರಡು ಬೈಕ್‌ಗಳಿಗೆ ಹೋಲಿಸಿದರೆ ನಿಂಜಾ 300 ಬೈಕ್ ಬೆಲೆ ಕೊಂಚ ದುಬಾರಿ. ಆದರೆ ಹೆಚ್ಚು ಪವರ್‌ಫುಲ್ ಎಂಜಿನ್ ಹಾಗೂ ಹೆಚ್ಚು ಟಾರ್ಕ್ ಸಾಮರ್ಥ್ಯ ನೀಡಲಾಗಿದೆ. ಜೊತೆಗೆ ಆರಾಮದಾಯಕ ರೈಡ್ ನೀಡಲಿದೆ.