ಸೂಪರ್ ಬೈಕ್‌ಗಳ ಪೈಕಿ ಕವಾಸಕಿ ನಿಂಜಾ ಮಾಡೆಲ್‌ಗಳ ಬೈಕ್‌ಗಳು ತಮ್ಮ ಪವರ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ವಿಭಿನ್ನವಾಗಿ ನಿಲ್ಲುತ್ತವೆ. ಹಾಗಾಗಿ, ಕವಾಸಕಿ ನಿಂಜಾ ಬೈಕ್‌ಗಳಿಗೆ ಎಂದಿಗೂ ಬೇಡಿಕೆ ಕುಂದಿಲ್ಲ. ಇದೀಗ ಕವಾಸಕಿ ಇಂಡಿಯಾ ಭಾರತೀಯ ಮಾರುಕಟ್ಟೆಗೆ 2021ರ ಕವಾಸಕಿ ನಿಂಜಾ ಜೆಡ್ಎಕ್ಸ್-10 ಆರ್ ಬೈಕ್ ಅನ್ನು ಲಾಂಚ್ ಮಾಡಿದೆ.
ಕವಾಸಕಿ ಸೂಪರ್ ಬೈಕ್‌ಪ್ರಿಯರಿಗೆ ಕವಾಸಕಿ ಇಂಡಿಯಾ ಸಂತೋಷದ ಸುದ್ದಿ ನೀಡಿದೆ. ನಿರೀಕ್ಷೆಯಂತೆ ಕವಾಸಕಿ ಇಂಡಿಯಾ ಭಾರತೀಯ ಮಾರುಕಟ್ಟೆಗೆ 2021ರ ಕವಾಸಕಿ ನಿಂಜಾ ಜೆಡ್ಎಕ್ಸ್-10 ಆರ್ ಬೈಕ್ ಅನ್ನು ಲಾಂಚ್ ಮಾಡಿದೆ. ಈ ಬೈಕ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 14.99 ಲಕ್ಷ ರೂಪಾಯಿಯಾಗಿದೆ. ಇದು ಎಕ್ಸ್‌ಶೋರೂಮ್ ಬೆಲೆ. 2020ರ ಮಾಡೆಲ್‌ಗಿಂತ ಒಂದು ಲಕ್ಷ ರೂಪಾಯಿ ಈ ಹೆಚ್ಚಾಗಿದೆ. ಹೊಸ ಜೆಡ್ಎಖ್ಸ್ 10 ಆರ್ ಕೂಡ 998 ಸಿಸಿ , 200 ಬಿಎಚ್‌ಪಿ ಪವರ್, ನಾಲ್ಕು ಸಿಲೆಂಡರ್ ಎಂಜಿನ್ ಒಳಗೊಂಡಿದೆ.
ಮಹಿಂದ್ರಾ ವಾಹನಗಳ ಖರೀದಿ ಮೇಲೆ ಗರಿಷ್ಠ 3.06 ಲಕ್ಷ ರೂ. ಡಿಸ್ಕೌಂಟ್
ಈ ಎಂಜಿನ್ 13,200 ಆರ್‌ಪಿಎಂನಲ್ಲಿ 200.22 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ ಮತ್ತು 11,400 ಆರ್‌ಪಿಎಂನಲ್ಲಿ 114.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಲೈಮ್ ಗ್ರೀನ್ ಮತ್ತು ಫ್ಲ್ಯಾಟ್ ಎಬೋನಿ ಟೈಪ್ 2 ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ.
ಈ ಕವಾಸಕಿ ನಿಂಜಾ ಜೆಡ್ಎಕ್ಸ್-10 ಆರ್ ಬೈಕ್ ಇನ್ಲೈನ್-ನಾಲ್ಕು ಎಂಜಿನ್ ಫಿಂಗರ್ ಫಾಲೋಯರ್ ವಾಲ್ವ್ ಆಕ್ಟಿವೇಷನ್ ಸಿಸ್ಟಮ್‌ನಿಂದ ಪ್ರಯೋಜನ ಪಡೆಯುತ್ತದೆ, ಜೊತೆಗೆ ಹೊಸ ಏರ್-ಕೂಲ್ಡ್ ಆಯಿಲ್ ಕೂಲರ್ ಅನ್ನು ಕವಾಸಕಿ ಡಬ್ಲ್ಯುಎಸ್‌ಬಿಕೆ ರೇಸ್ ಮೆಷಿನ್, X ಡ್‌ಎಕ್ಸ್ 10 ಆರ್ ಆರ್ ಪ್ರೇರಣೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸರ್ಕಿಟ್ ರೇಸಿಂಗ್‌ಗೆ ಅನುಕೂಲವಾಗುವಂತೆ 2021ರ ಜೆಡ್ಎಕ್ಸ್ 1 0ಆರ್ ಎಂಜಿನಿನ ಗೇರ್ ರೆಷಿಯೋವನ್ನು ರೂಪಿಸಲಾಗಿದೆ. ದೊಡ್ಡದಾದ 41-ಟೂತ್ ಹಿಂಭಾಗದ ಸ್ಪ್ರಾಕೆಟ್ (ಹಿಂದಿನ ಮಾಡೆಲ್ ಬೈಕ್‌ನಲ್ಲಿ 39-ಹಲ್ಲಿನ ಸ್ಪ್ರಾಕೆಟ್ ಇತ್ತು), ಮತ್ತು 1, 2 ಮತ್ತು 3 ನೇ ಗೇರ್‌ಗಳಿಗೆ ಕಡಿಮೆ ರೇಷಿಯೋ ನೀಡಿದ ಪರಿಣಾಮ, ನೀವು ಕಡಿದಾದ ತಿರುವುಗಳಲ್ಲಿ ತ್ವರಿತವಾಗಿ ನಿರ್ಗಮಿಸಲು ನೆರವು ಒದಗಿಸುತ್ತದೆ.
ಈ ಹೊಸ ಜೆಡ್ಎಕ್ಸ್-10 ಆರ್ ಬೈಕ್ ಹೊಸ ವಿನ್ಯಾಸಗಳನ್ನು ಕೂಡಾ ಹೊಂದಿದೆ. ಏರೋಡೈನಾಮಿಕ್ ಮೇಲ್ಭಾಗದ ಕೌಲ್‌ನೊಂದಿಗೆ ಪರಿಷ್ಕೃತ ವಿನ್ಯಾಸವನ್ನು ನೀವು ಕಾಣಬಹುದು. ಉತ್ತಮ ಏರೋಡೈನಾಮಿಕ್ಸ್ ಪಡೆಯಲು ವಿಂಗ್ಲೆಟ್‌ಗಳಲ್ಲಿ ಫೇರಿಂಗ್ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ, ಹೊಸ ಟೇಲ್ ಕೌಲ್ ವಿನ್ಯಾಸ, ಫೂಟ್‌ಪೆಗ್ ಪೊಶಿಷೇನ್ ಮತ್ತು ಹ್ಯಾಂಡಲ್‌ಬಾರ್‌ಗಳ ವಿನ್ಯಾಸವನ್ನು ಪರಿಷ್ಕರಣೆ ಮಾಡಲಾಗಿದೆ.
ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!
ಬೈಕ್‌ನ ಅಪ್ಪರ್ ಕೌಲ್‌ನ ಕೆಳಬದಿಯಲ್ಲಿ ಹೆಡ್‌ಲೈಟ್‌ಗಳನ್ನು ವಿನ್ಯಾಸಗೊಳಿಸಿರುವುದನ್ನು ನೀವು ಕಾಣಬಹುದು. ಹಾಗೆಯೇ ಎಲ್ಲ ಕಡೆಗೂ ಎಲ್ಇಡಿ ಲೈಟಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ರೈಡಿಯಾಲಾಜಿ ಆಪ್ ಮೂಲಕ ಸ್ಮಾರ್ಟ್‌ಪೋನ್ ಅಪ್ಲಿಕೇಷನ್ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ ಮೂಲಕ 4.3 ಇಂಚ್ ಟಿಎಫ್‌ಟಿ ಇನ್ಸುಟ್ರುಮೆಂಟ್ ಕಾನ್ಸೂಲ್ ಕೂಡ ನೀವು ಬೈಕ್‌ನಲ್ಲಿ ಕಾಣಬಹುದು. ಈ ಹೊಸ ಬೈಕ್ ನಿಮಗೆ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ರೋಡ್, ರೈನ್, ಸ್ಪೋರ್ಟ್ ಮತ್ತು ರೈಡರ್ ಮೋಡ್‌ಗಳ ಮೂಲಕ ನೀವು ಬೈಕ್ ಚಲಾಯಿಸಬಹುದು. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಮೋಡ್‌ಗಳಲ್ಲಿ ಬದಲಿಸಿಕೊಳ್ಳಲು ಅವಕಾಶವಿದೆ.
ಇಷ್ಟುಮಾತ್ರವಲ್ಲದೇ ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್, ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಲ್ಲ ಹಿಂಬದಿ ಮತ್ತು ಮುಂಬದಿ ಸಸ್ಪೆನ್ಷನ್, 43 ಎಂಎಂ ಇನ್ವರ್ಟೆಡ್ ಶೋವಾ ಬ್ಯಾಲೆನ್ಸ್ ಫ್ರೀ ಪೋರ್ಕ್, ಬ್ಯಾಕ್ ಲಿಂಕ್ ರಿಯರ್ ಸಸ್ಪೆನ್ಷನ್ ಕೂಡ ಇದೆ. ಬ್ರೆಂಬೋ ಬ್ರೇಕಿಂಗ್ ವ್ಯವಸ್ಥೆ ಇದೆ. ಬೈಕ್‌ನ ಮುಂಬದಿಯ ಚಕ್ರಕ್ಕೆ ಬ್ರೆಂಬೋ ಎಂ50 ಕ್ಯಾಲಿಪರ್ಸ್‌ನೊಂದಿಗೆ 330 ಎಂಎಂ ಡಿಸ್ಕ್ ಬ್ರೆಕ್ ಇದ್ದರೆ, ಹಿಂಬದಿಯಲ್ಲಿ 220 ಎಂಎಂ ಡಿಸ್ಕ್ ಬ್ರೆಕ್ ಕೊಡಲಾಗಿದೆ.
ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಲಾಂಚ್ ಕಂಟ್ರೋಲ್, ಕಾರ್ನಿರಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್, ಪವರ್ ಮೋಡ್ಸ್, ಎಂಜಿನ್ ಬ್ರೆಕ್ ಕಂಟ್ರೋಲ್, ಇಂಟಲಿಜೆಂಟ್ ಎಬಿಎಸ್ ಜೊತೆಗೆ ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್, ಅಪ್ ಆಂಡ್ ಡೌನ್ ಕ್ವಿಕ್ಶಿಫ್ಟರ್ ಸೇರಿದಂತೆ ಇನ್ನೂ ಹಲವು ಹೆಚ್ಚುವರಿ ಫೀಚರ್‌ಗಳನ್ನು ನೀವು ಕವಾಸಕಿ ನಿಂಜಾ ಜೆಡ್ಎಕ್ಸ್-10 ಆರ್‌ನಲ್ಲಿ ಕಾಣಬಹುದು.
ಬಜಾಜ್‍ನ ಹೊಸ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಬಿಡುಗಡೆ
ಈ ಬೈಕ್ ಬೆಲೆ ಎಷ್ಟು?
ಭಾರತದಲ್ಲಿ ಸದ್ಯ ಲಭ್ಯವಿರುವ ಹೆಚ್ಚು ಕಡಿಮೆ ಬೆಲೆಯ ಲೀಟರ್ ಕ್ಲಾಸ್ ಸೂಪರ್ ಬೈಕ್‌ಗಳ ಪೈಕಿ ಕವಾಸಕಿ ನಿಂಜಾ ಜೆಡ್ಎಕ್ಸ್ 10 ಆರ್ ಬೈಕ್ ಅತ್ಯಂತ ಕಡಿಮೆ ಬೆಲೆಯ ಬೈಕ್ ಆಗಿದೆ. ಈ ಹಿನ್ನೆಲೆಯಲ್ಲಿ ನೀವು ನೋಡುವುದಾದರೆ ಬಜೆಟ್ ಸೂಪರ್ ಬೈಕ್ ಎಂದು ಹೇಳಬಹುದು. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿರುವ ಡುಕಾಟಿ ಪನಿಗಾಲೆ ವಿ2 17.49 ಲಕ್ಷ ರೂಪಾಯಿ ಇದ್ದರೆ, ಬಿಡುಗಡೆ ಕಾಣಲಿರುವ ಬಿಎಂಡಬ್ಲ್ಯೂ 1000 ಆರ್ ಆರ್ ಕೂಡ 20 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ನಮೂದಿಸಿರುವ ಎಲ್ಲ ಬೆಲೆಯೂ ಎಕ್ಸ್ ಶೋರೂಮ್ ಬೆಲೆಯಾಗಿದೆ.
ಸೂಪರ್‌ಬೈಕ್ ಸೆಗ್ಮೆಂಟ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಈ ಕವಾಸಕಿ ಮೊದಲಿನಿಂದಲೂ ತನ್ನದೇ ಪ್ರಾಬಲ್ಯವನ್ನ ಹೊಂದಿದೆ. ಹಾಗೂ ತನ್ನದೇ ಗ್ರಾಹಕವರ್ಗವನ್ನು ಹೊಂದಿದೆ. ಹಾಗಾಗಿ, ಈಗ ಬಿಡುಗಡೆಯಾಗಿರುವ 2021ರ ಕವಾಸಕಿ ನಿಂಜಾ ಜೆಡ್ಎಕ್ಸ್ 10 ಆರ್ ಬೈಕ್‌ಗೂ ಉತ್ತಮ ಪ್ರತಿಕ್ರಿಯೆ ಸಿಗಬಹುದು.