PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್

By Suvarna News  |  First Published Feb 12, 2021, 3:20 PM IST

ಇ-ಬೈಕ್ ಸಾಮಾನ್ಯವಾಗಿ ತುಟ್ಟಿಯಾಗಿರುತ್ತವೆ. ಆದರೆ, ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ವೊಂದು ಪರ್ಸನಲ್ ಹಾಗೂ ಕಮರ್ಷಿಯಲ್ ಬಳಕೆಗೆ ಅನುಕೂಲವಾಗುವಂಥ ಇ-ಬೈಕ್ ಅಭಿವೃದ್ಧಪಡಿಸಿದ್ದು, ಅದರ ಬೆಲೆ 30 ಸಾವಿರ ಇರಲಿದೆ ಮತ್ತು ಇದಕ್ಕೆ ಯಾವುದೇ ನೋಂದಣಿ ಹಾಗೂ ಚಲಾಯಿಸಲು ಚಾಲನಾ ಪರವಾನಿಗೆ(ಡಿಎಲ್) ಬೇಕಾಗಿಲ್ಲ!


ಇದೀಗ ವಿದ್ಯುತ್‌ಚಾಲಿತ ಕಾರುಗಳು, ಎಸ್‌ಯುವಿಗಳು, ಇ-ಬೈಕು, ಮೋಟಾರ್‌ಸೈಕಲ್‌ಗಳದೇ ಸುದ್ದಿ.  ಇಂಧನ ಉಳಿತಾಯ ಮತ್ತು ಪರಿಸರ ರಕ್ಷಣೆಗೆ ಪೂರಕವಾಗಿರುವ ಈ ಇ-ಮೋಟಾರ್‌ಸೈಕಲ್‌ಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆಯಾದರೂ ಇನ್ನೂ ಸಾಮಾನ್ಯರ ಕೈಗೆಟುಕುವ ದರದಲ್ಲಿ ದೊರೆಯುತ್ತಿಲ್ಲ. ಈ ಕಾರಣದಿಂದಲೇ ಇ-ಮೋಟಾರ್‌ಸೈಕಲ್, ಬೈಕ್‌ಗಳು  ಎಷ್ಟು ಪ್ರಸಿದ್ಧಗಳಿಸಬೇಕಿತ್ತೋ ಅಷ್ಟು ಗಳಿಸಿಲ್ಲ. ಆದರೆ, ಚೆನ್ನೈ ಮೂಲದ ಪೈ-ಬೀಮ್ ಎಂಬ ಸ್ಮಾರ್ಟ್‌ಅಪ್ ಕಂಪನಿಯೊಂದು ಅಗ್ಗದ ಇ ಬೈಕ್ ಬಿಡುಗಡೆ ಮಾಡಿದೆ.

ಕೂಡಿ ಬಂದ ಕಾಲ! ಫೆ.15ಕ್ಕೆ ರೆನೋ ಕೈಗರ್ ಕಾರ್ ಬಿಡುಗಡೆ

Tap to resize

Latest Videos

undefined

ಪೈ ಬೀಮ್(Pi-beam) ಬಿಡುಗಡೆ ಮಾಡಿರುವ ಈ ಪೈಮೋ(PiMo) ಇ ಬೈಕ್ ಒಮ್ಮೆ ಚಾರ್ಜ್ ಮಾಡಿದರೆ, ಪ್ರತಿ ಗಂಟೆಗೆ 25 ಕಿ.ಮೀ ಸ್ಪೀಡ್‌ನಲ್ಲಿ 50 ಕಿಲೋ ಮೀಟರ್‌ವರೆಗೂ ಓಡುತ್ತದೆ. ಒಮ್ಮೆ ಚಾರ್ಜ್ ಮಾಡಲು ನಿಮಗೆ ಎರಡು ಗಂಟೆ ಬೇಕಾಗುತ್ತದೆ. ಈ ಬೈಕ್‌ ತಯಾರಿಸಲು ಬೇಕಾಗಿರುವ ಒಟ್ಟು ಬಿಡಿ ಭಾಗಗಳ ಪೈಕಿ ಶೇ.90ರಷ್ಟು ಬಿಡಿ ಭಾಗಗಳು ಮೇಡ್ ಇನ್ ಇಂಡಿಯಾ ಆಗಿವೆ. ಈ ಪೈಕಿ ಬ್ಯಾಟರಿಗಳು, ಕಂಟ್ರೋಲರ್‌ಗಳು ಸೇರಿದಂತೆ ಪ್ರಮುಖ ವಸ್ತುಗಳು ಭಾರತದಲ್ಲೇ ತಯಾರಿಸಿದ್ದಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.

ವೈಯಕ್ತಿಕ ಮತ್ತು ವಾಣಿಜ್ಯ ಬಳಕೆಯನ್ನು ಗುರಿಯಾಗಿಸಿಕೊಂಡು ಪೈ ಬೀಮ್ ಕಂಪನಿಯು ಈ ಬೈಕನ್ನು ಸೈಕಲ್ ರೀತಿಯಲ್ಲಿ ವಿನ್ಯಾಸ ಮಾಡಿದೆ.  ಪೈಮೋ ಇ ಬೈಕ್ ಅನ್ನು ಐಐಟಿ ಮದ್ರಾಸ್ ಬೆಂಬಲಿತ ಪೈಬೀಮ್ ಸ್ಟಾರ್ಟ್ಅಪ್ ಕಂಪನಿ ತಯಾರಿಸಿದೆ. ಅಂದರೆ, ಈ ಬೈಕ್ ಅಭಿವೃದ್ಧಿಪಡಿಸಲು, ವಿನ್ಯಾಸ ಮಾಡಲು ಹಾಗೂ ಬಿಸಿನೆಸ್‌ಗೆ ಐಐಟಿ ಮದ್ರಾಸ್ ನೆರವು ನೀಡಿದೆ.

ಈ ಬೈಕ್‌ ಅನ್ನು ನೀವು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಅಷ್ಟು ಮಾತ್ರವಲ್ಲದೇ ಈ ಇ-ಬೈಕ್ ಚಲಾಯಿಸುವ ಸವಾರನಿಗೆ ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ ಎಂದು ಈ ಬೈಕ್‌ ತಯಾರಿಸಿರುವ ಪೈ ಬೀಮ್ ಕಂಪನಿ ಹೇಳಿಕೊಂಡಿದೆ. ಕಂಪನಿ ಬ್ಯಾಟರಿ ಸ್ವೈಪಿಂಗ್ ತಂತ್ರಜ್ಞಾನವನ್ನು ನೆರವು ನೀಡುತ್ತದೆ. ಅಂದರೆ, ಕೆಲವು ನಿರ್ದಿಷ್ಟ ಪ್ರದೇಶಗಳಿಂದ ಬಳಕೆದಾರರು ಖಾಲಿಯಾದ ಬ್ಯಾಟರಿಯನ್ನು ಕೊಟ್ಟು ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ದಿನಕ್ಕೆ 200ರಿಂದ 250 ಮಹೀಂದ್ರಾ ಥಾರ್‌ ಬುಕ್ಕಿಂಗ್!

ಪೈ ಮೋ ಬೆಲೆ ಕೇವಲ 30 ಸಾವಿರ ರೂ.
ಸಾಮಾನ್ಯವಾಗಿ ಬ್ಯಾಟರಿ ಚಾಲಿತ ವಾಹನಗಳು ತುಟ್ಟಿಯಾಗಿರುತ್ತವೆ. ಬೈಕ್‌ಗಳು ಅಷ್ಟೇ ಅವು ಅಗ್ಗದ ದರಕ್ಕೆ ಸಿಗುವುದಿಲ್ಲ. ಆದರೆ, ಈ ಪೈ ಬೀಮ್ ಸ್ಟಾರ್ಟ್‌ಅಪ್ ಕಂಪನಿ ಅಭಿವೃದ್ಧಿಪಡಿಸಿರುವ ಪೈ ಮೋ ಇ-ಬೈಕ್ ಬೆಲೆ ಕೇವಲ 30 ಸಾವಿರ ರೂ. ಎಂದು ಹೇಳಲಾಗುತ್ತಿದೆ. ಹಾಗಂತ ಬೈಕ್ ರೈಡಿಂಗ್‌ನಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಬೈಕ್ ಸವಾರರು ಖಂಡಿತವಾಗಿಯೂ ಅತ್ಯುತ್ತಮ ಚಾಲನೆಯ ಅನುಭವವನ್ನು ಪಡೆಯುತ್ತಾರೆ. ಯಾಕೆಂದರೆ ಇ-ಬೈಕ್‌ನಲ್ಲಿ ಡುಯಲ್ ರಿಯರ್ ಸಸ್ಪೆನ್ಸನ್ ಮತ್ತು ಬೃಹತ್ತಾದ ವಿನ್ಯಾಸ ಹೊಂದಿರುವ ಸೀಟ್‌ ಇದೆ. ಇವು ಬೈಕ್ ಸವಾರರಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ ಎಂಬುದು ಕಂಪನಿಯ  ಲೆಕ್ಕಾಚಾರವಾಗಿದೆ.

ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿ ಹಾಗೂ ಪೈ ಬೀಮ್ ಸಿಇಒ ವಿಶಾಖ್ ಶಶಿಕುಮಾರ್, ದೇಶದ ಬೇರೆ ಬೇರೆ ನಗರಗಳಲ್ಲಿ ನಾವು ಪ್ರದರ್ಶಿಸಿದ ಡೆಮೋ ಹಾಗೂ ಟ್ರಯಲ್ಸ್‌ಗಳಿಂದಾಗಿ ಹೊಸ ಇ ಬೈಕ್ ಮೇಲೆ ಜನರು ತೋರಿಸುತ್ತಿರುವ ಆಸಕ್ತಿ ಹಾಗೂ ಪ್ರೀ ಆರ್ಡರ್‌ಗಳಿಂದಾಗಿ ನಾವು ಎಕ್ಸೈಟ್ ಆಗಿದ್ದೇವೆ. ಬಿ2ಬಿ ವ್ಯವಹಾರ ಅಂದರೆ, ಫುಡ್ ಡೆಲಿವರಿ, ಇ-ಕಾಮರ್ಸ್ ಡೆಲಿವರಿ ಮತ್ತು ಶೇರ್ಡ್ ಸಾರಿಗೆ ಮತ್ತು ಇತ್ಯಾದಿ ವ್ಯವಹಾರಗಳಲ್ಲಿ ಈ ಬೈಕುಗಳು ಹೆಚ್ಚಿನ ನೆರವು ಒದಗಿಸಲಿವೆ ಎಂದು ಹೇಳಿದ್ದಾರೆ.

ಪೈ ಬೀಮ್ ಕಂಪನಿಯ ಪಟ್ಟಿಯಲ್ಲಿ ಪೈಮೋ ಮಾತ್ರವಲ್ಲದೇ ಇ-ಟ್ರಿಕ್, ಇ-ಕಾರ್ಟ್ ಮತ್ತು ಇ-ಆಟೋ ಇವೆ.  ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2021-2022ರ ಸಾಲಿನಲ್ಲಿ ಕಂಪನಿಯ ಹತ್ತು ಸಾವಿರ ಪೈ ಮೋ ಮಾರಾಟ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂಬುದು ಪೈ ಬೀಮ್ ಹೇಳಿಕೆಯಾಗಿದೆ.

ಇನ್ನೆರಡು ತಿಂಗಳಲ್ಲಿ ಹೊಸ ತಲೆಮಾರಿನ ಮಾರುತಿ ಸೆಲೆರಿಯೋ ಮಾರುಕಟ್ಟೆಗೆ?

click me!