Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

By Suvarna News  |  First Published Dec 31, 2021, 7:38 PM IST
  • ಆಕರ್ಷಕ, ಅತ್ಯುತ್ತಮ ವಿನ್ಯಾಸದ ಸೈಬಾರ್ಗ್ ಯೋದ ಕ್ರ್ಯೂಸರ್ ಬೈಕ್
  • 30 ನಿಮಿಷದಲ್ಲಿ ಶೇಕಡಾ 50 ರಷ್ಟು ಚಾರ್ಜ್ ಆಗಬಲ್ಲ ಬ್ಯಾಟರಿ
  • ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ಮೈಲೇಜ್ ರೇಂಜ್

ನವದೆಹಲಿ(ಡಿ.31): ಭಾರತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ(Electric two Wheeler) ವಿಭಾಗಕಕ್ಕೆ ಮತ್ತೊಂದು ಹೊಸ ಬೈಕ್ ಸೇರ್ಪಡೆಗೊಂಡಿದೆ. ಹೊಚ್ಚ ಹೊಸ ಕ್ರ್ಯೂಸರ್ ಬೈಕ್(Cruiser Bike) ಭಾರತದಲ್ಲಿ ಅನಾವರಣಗೊಂಡಿದೆ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್.ಇಗ್ನಿಟ್ರಾನ್ ಮೋಟೋಕಾರ್ಪ್(Ignitron Motocorp) ಸ್ಟಾರ್ಟ್ ಕಂಪನಿ ಅನಾವರಣ ಮಾಡಿರುವ ಸೈಬಾರ್ಗ್ ಯೋದಾ(CYBORG yoda) ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಆಕರ್ಷಕ ವಿನ್ಯಾಸದ, ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲ ಮೈಲ್ಡ್ ಸ್ಪೀಡ್ ಬೈಕ್ ಇದಾಗಿದ್ದು, ಶೀಘ್ರದಲ್ಲೇ ಬುಕಿಂಗ್ ಆರಂಭಿಸಲಿದೆ.

ಬದಲಾಯಿಸಬಲ್ಲ ಬ್ಯಾಟರಿ(battery swapping), ಸುರಕ್ಷಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆ ಮಾಡುತ್ತಿರುವ ಇಗ್ನಿಟ್ರಾನ್ ಇದೀಗ ಹೆಚ್ಚು ಮೈಲೇಜ್ ಸಾಮರ್ಥ್ಯ ಹಾಗೂ ಗರಿಷ್ಠ ಸುರಕ್ಷತೆಯ ಬೈಕ್ ಅನಾವರಣ ಮಾಡಿದೆ. ಸೈಬಾರ್ಗ್ ಯೋದಾ ಕ್ರ್ಯೂಸರ್ ಬೈಕ್ ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಮೂಲಕ ಡೀಸೆಂಟ್ ರೇಂಜ್ ನೀಡಬಲ್ಲ ಎಲೆಕ್ಟ್ರಿಕ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Tap to resize

Latest Videos

undefined

Simple One 203KM ಮೈಲೇಜ್ ನೀಡಬಲ್ಲ ಬೆಂಗಳೂರಿನ ಸಿಂಪಲ್ ಎನರ್ಜಿ ಸ್ಕೂಟರ್ ಉತ್ಪಾದನೆ ಶೀಘ್ರದಲ್ಲೇ ಆರಂಭ!

ಯೋದಾ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಬದಲಾಯಿಸಬಲ್ಲ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಬ್ಯಾಟರಿ ಮುಗಿದರೆ, ಸಮೀಪದ ವಿನಿಮಯ ಕೇಂದ್ರದಲ್ಲಿ ಖಾಲಿ ಬ್ಯಾಟರಿ ನೀಡಿ ಚಾರ್ಜ್ ತುಂಬಿದ ಬ್ಯಾಟರಿ ಹಾಕಿ ಪ್ರಯಾಣ ಮುಂದುವರಿಸಬಹುದು. ಯೋದಾ ಈಗಾಗಲೇ ಕೆಲ ಬ್ಯಾಟರಿ ಕಂಪನಿಗಳು ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಪ್ರಕಾರ ರಸ್ತೆ ಬದಿಗಳಲ್ಲಿ, ಪ್ರಮುಖ ಕೇಂದ್ರಗಳಲ್ಲಿ, ನಗರ ಪಟ್ಟಣಗಳಲ್ಲಿ ಯೋದಾ ಬ್ಯಾಟರಿ ವಿನಿಮಯ ಘಟಕ ತರೆಯಲಾಗುತ್ತಿದೆ.  ಬೈಕ್ ಖರೀದಿ ವೇಳೆ ಬೈಕ್ ಚಾರ್ಜ್ ಮಾಡಬಲ್ಲ ಚಾರ್ಜ್ ಕೇಬಲ್ ಹಾಗೂ ಬಾಕ್ಸ್ ನೀಡಲಿದೆ. ಈ ಚಾರ್ಜರ್ ಮೂಲಕ ಕೇವಲ 30 ನಿಮಿಷದಲ್ಲಿ ಶೇಕಡಾ 50 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. 

ಸೈಬಾರ್ಗ್ ಯೋದಾ ಸಂಪೂರ್ಣವಾಗಿ ಭಾರತದಲ್ಲೇ ಉತ್ಪಾದನೆಯಾದ ಮೇಕ್ ಇನ್ ಇಂಡಿಯಾ ಉತ್ಪನ್ನವಾಗಿದೆ. ಇಷ್ಟೇ ಅಲ್ಲ ಇದು ಸೈಬಾರ್ಗ್‌ನ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಆಗಿದೆ. ಭಾರತದ ಅತ್ಯಂತ ಕಠಿಣ ರಸ್ತೆ, ಪ್ರದೇಶಗಳಲ್ಲಿ ಯೋದಾ ಎಲೆಕ್ಟ್ರಿಕ್ ಬೈಕ್ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲಾ ಕಂಡೀಷನ್‌ಗಳಲ್ಲೂ ಯೋದಾ ಬೈಕ್ ಯಶಸ್ವಿಯಾಗಿ ಮುನ್ನುಗ್ಗಿದೆ.

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

ಯೋದಾ ಎಲೆಕ್ಟ್ರಿಕ್ ಬೈಕ್ ಸಂಪ್ರಾದಾಯಿಕ ಶೈಲಿಯ ಕ್ರ್ಯೂಸರ್ ಬೈಕ್ ಆಗಿದೆ. ಇದರ ಡಿಸೈನ್ ಟ್ರಡೀಶನ್ ಕಮ್ ಮಾರ್ಡನ್ ಲುಕ್ ನೀಡಲಾಗಿದೆ. ಇದರ ಹೆಡ್‌ಲೈಟ್ ಬೈಕ್ ಅಂದವನ್ನು ಹೆಚ್ಚಿಸಿದೆ, ಟ್ರಿಪಲ್ ಭೀಮ್ ಹೆಡ್‌ಲೈಟ್ ಬಳಸಲಾಗಿದೆ. ಟೈಲ್‌ಲೈಡ್, ಇಂಡಿಕೇಟರ್ ವಿನ್ಯಾಸದಲ್ಲಿ ರೆಟ್ರೋ ಮಾದರಿಯ ಶೈಲಿ ಬಳಸಿಸಿಕೊಳ್ಳಲಾಗಿದೆ. ಇಂಧನ ಟ್ಯಾಂಕ್ ವಿನ್ಯಾಸ ಕೂಡ ವಿಶೇಷವಾಗಿದೆ. ಬುಲೆಟ್ ರೀತಿಯಲ್ಲಿ ಎರಡು ಸೀಟುಗಳನ್ನು ನೀಡಲಾಗಿದೆ. ಎತ್ತರ ಹಾಗೂ ಅಗಲವಾದ ಹ್ಯಾಂಡ್ಲಬಾರ್, ಆರಾಮದಾಯಕ ರೈಡಿಂಗ್‌ಗಾಗಿ ಫೂಟ್‌ರೆಸ್ಟ್ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ.

ಯೋದಾ ಎಲೆಕ್ಟ್ರಿಕ್ ಬೈಕ್ LED ಹೆಡ್‌ಲೈಟ್ಸ್ ಹಾಗೂ ಟೈಲ್ ಲೈಟ್ಸ್, ಇಂಡಿಕೇಟರ್ ಹೊಂದಿದೆ. ಇದರಲ್ಲಿ ಮತ್ತೂ ಕೆಲವು ವಿಶೇಷತೆಗಳಿವೆ. ಥೆಫ್ಟ್ ಅಲರಾಂ ನೀಡಲಾಗಿದೆ. ಇದರಿಂದ ಬೈಕ್ ಕಳ್ಳತನಕ್ಕೆ ಯತ್ನಿಸಿದರೆ ಅಲರಾಂ ಎಚ್ಚರಿಕೆ ನೀಡಲಿದೆ. ಕಾರಿನಲ್ಲಿರುವಂತೆ ಕೀ ಲೆಸ್ ಎಂಟ್ರಿ ನೀಡಲಾಗಿದೆ. ಇನ್ನು ಕಾರಿನ ರಿಮೋಟ್ ಕೀಗಳಂತೆ ಯೋದಾ ಬೈಕನ್ನು ಕಿ ಬಳಸಿ ಲಾಕ್, ಅನ್‌ಲಾಕ್ ಮಾಡಬಹುದು. ಹಿಂಭಾಗದ ಪ್ರಯಾಣಿಕರಿಗೆ ಬ್ಯಾಕ್ ರೆಸ್ಟ್ , ಸೈಡ್ ಬಾಕ್ಸ್, ಅಡ್ಜಸ್ಟ್ ಸಸ್ಫೆನ್ಶನ್ ನೀಡಲಾಗಿದೆ.

Bounce Infinity e1 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ವಿನಿಮಯ ಮತ್ತಷ್ಟು ಸುಲಭ, ನೋಬ್ರೋಕರ್ ಜೊತೆ ಒಪ್ಪಂದ!

ಹೊಸ ವರ್ಷದಲ್ಲಿ ನೂತನ ಯೋದಾ ಕ್ರ್ಯೂಸರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲಿದೆ. 2022ರಲ್ಲಿ ಕ್ರ್ಯೂಸರ್ ಬೈಕ್ ಬೆನ್ನಲ್ಲೇ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಹಾಗೂ ರೆಗ್ಯೂಲರ್ ಎಲೆಕ್ಟ್ರಿಕ್ ಬೈಕ್ ಕೂಡ ಬಿಡುಡೆ ಯಾಗುತ್ತಿದೆ. 2022-23ರಲ್ಲಿ ಕಂಪನಿ ವಾರ್ಷಿಕವಾಗಿ 40,000 ಬೈಕ್ ನಿರ್ಮಾಣ ಮಾಡಬಲ್ಲ ಸಾಮರ್ಥ್ಯದ ಘಟಕ ಹೊಂದಿದೆ. 

click me!