ಭಾರತದಲ್ಲಿ ಹೊಸ ಸಂಚಲನ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಎಂಜಿನ್ ಹೋಂಡಾ CB300R ಬೈಕ್ ಬಿಡುಗಡೆ!

By Suvarna News  |  First Published Oct 17, 2023, 6:07 PM IST

20% ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ಎಂಜಿನ್ ಬೈಕನ್ನು ಹೋಂಡಾ ಬಿಡುಗಡೆ ಮಾಡಿದೆ. ಹೊಸ ಬೈಕ್ ನಿರ್ವಹಣೆ ವೆಚ್ಚ ಕಡಿಮೆ ಮಾಡಲಿದೆ. ಇಷ್ಟೇ ಅಲ್ಲ, ಗರಿಷ್ಠ ಪವರ್ ಹಾಗೂ ಪರ್ಫಾಮೆನ್ಸ್ ಹೊಂದಿರುವ ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಅ.17) : ಹೋಂಡಾ ಮೋಟಾರ್ ಸೈಕಲ್ ಸ್ಕೂಟರ್ ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಶೇಕಜಾ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಎಂಜಿನ್ ಬೈಕ್ CB300R ಬಿಡುಗಡೆ ಮಾಡಿದೆ.  ಅಲ್ಟಿಮೇಟ್ ನಿಯೋ ಸ್ಪೋರ್ಟ್ಸ್ ಕೆಫೆ ರೋಡ್‌ಸ್ಟರ್‌ನಂತೆ ಆಧುನಿಕವಾಗಿ ವಿನ್ಯಾಸಗೊಳಿಸಲಾಗಿದೆ. ನೂತನ ಬೈಕ್ ಬೆಲೆ 2,40,000 (ಎಕ್ಸ್ ಶೋ ರೂಂ).  

ವಿನ್ಯಾಸ ಮತ್ತು ಸಾಧನ ಸಾಮಗ್ರಿಗಳ ಸಜ್ಜುಗೊಳಿಸುವಿಕೆ:
ಹೋಂಡಾದ ಪ್ರಾತಿನಿಧಿಕ ದ್ವಿಚಕ್ರ ವಾಹನ CB1000R ಲೀಟರ್-ಕ್ಲಾಸ್ ರೋಡ್‌ಸ್ಟರ್‌ನಿಂದ ರೆಟ್ರೊ-ಥೀಮ್ ಇರುವ ವಿನ್ಯಾಸ ಸ್ಫೂರ್ತಿಯಿಂದ ಹೊರಮೂಡಿರುವ 2023ರ ಹೊಸ CB300R, ಟೈಮ್‌ಲೆಸ್ ರೋಡ್‌ಸ್ಟರ್ ವಿನ್ಯಾಸದಲ್ಲಿ ಹೋಂಡಾದ ಅಲ್ಟ್ರಾ-ಮಾಡರ್ನ್ ರೂಪದಲ್ಲಿ ರಸ್ತೆಗೆ ಇಳಿದಿದೆ. ಇದು ಉತ್ಕೃಷ್ಟ ಇಂಧನ ಟ್ಯಾಂಕ್ ಮತ್ತು ನಿಯೋ ಸ್ಪೋರ್ಟ್ಸ್ ಕೆಫೆ ಮಾಡೆಲ್  ರೂಪ(ಡಿಎನ್ಎ)ದಲ್ಲೇ, ಹಿಂದಕ್ಕೆ ಬಾಚಿಕೊಂಡಿರುವ  ಗಟ್ಟಿಮುಟ್ಟಾದ ಎಕ್ಸಾಸ್ಟ್(ಎಂಜಿನ್ ನಿಂದ ಹಬೆ ಹೊರಹಾಕುವ ಸಾಧನ) ಹೊಂದಿದೆ. ಎಲ್ಲಾ ಎಲ್ಇಡಿ ಲೈಟಿಂಗ್ ಸಿಸ್ಟಮ್ (ರೌಂಡ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ವಿಂಕರ್ ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್) ಮೂಲಕ ಸ್ಟೈಲಿಂಗ್ ಅಂಶಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

Tap to resize

Latest Videos

undefined

ಹೋಂಡಾ ಗೋಲ್ಡ್ ವಿಂಗ್ ಬೆಲೆ 39 ಲಕ್ಷ ರೂಪಾಯಿ, ಈ ಬೈಕ್‌ನಲ್ಲಿ ಅಂತಾದ್ದೇನಿದೆ ?

ಕೇವಲ 146 ಕೆಜಿ ತೂಕ ಹೊಂದಿರುವ CB300R, ಅದರ ವರ್ಗದಲ್ಲಿ ಅತ್ಯಂತ ಹಗುರವಾದ ಮೋಟಾರ್‌ಸೈಕಲ್ ಆಗಿದೆ. ಇದು ಚುರುಕಾದ ಅಥವಾ ಚೈತನ್ಯಶೀಲ ನಿರ್ವಹಣೆಯ ಭರವಸೆ ನೀಡುತ್ತದೆ. 41ಎಂಎಂ ಯುಎಸ್ ಡಿ ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅಬ್ಸಾರ್ಬರ್ - ಇದು ಭಾರತೀಯ ರಸ್ತೆಗಳಿಗೆ ಪರಿಪೂರ್ಣ ಹೊಂದಿಕೆಯಾಗಿದೆ. ಬ್ರೇಕಿಂಗ್ ಕೆಲಸಗಳನ್ನು 296ಎಂಎಂ ಡಿಸ್ಕ್ ಬ್ರೇಕ್ (ಮುಂಭಾಗ) ಮತ್ತು 220ಎಂಎಂ ಡಿಸ್ಕ್ (ಹಿಂಭಾಗ) ಜತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಮಾನಕ(ಸ್ಟ್ಯಾಂಡರ್ಡ್)ವಾಗಿ ನಿರ್ವಹಿಸುತ್ತದೆ. ಸಂಪೂರ್ಣ ಡಿಜಿಟಲ್ ಇನ್|ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದೆ. ಇದು ಈಗ ತುರ್ತು ನಿಲುಗಡೆ ಸಿಗ್ನಲ್ ಮತ್ತು ಅಪಾಯದ ಬೆಳಕಿನ ಸ್ವಿಚ್ ಅನ್ನು ನಿರ್ವಹಿಸುತ್ತದೆ.

ಎಂಜಿನ್ ಮತ್ತು ಕಾರ್ಯಕ್ಷಮತೆ:
2023ರ ಹೊಸ CB300R ಹೃದಯ ಭಾಗದಲ್ಲಿ ಶಕ್ತಿಶಾಲಿ 286.01ಸಿಸಿ, 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ ಬಿಎಸ್4(ಭಾರತ್ ಸ್ಟೇಜ್ ಎಮಿಷನ್ ಮಾನದಂಡಗಳು) ಒಬಿಡಿ2ಎ ಅನುಸರಣೆಯ ಪಿಜಿಎಂ-ಎಫ್ಐ ಎಂಜಿನ್ ಅಳವಡಿಸಲಾಗಿದೆ. ಅದು ಈಗ ಮೊದಲಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ. ಈ ವಾಹನವು 22.9 ಕಿಲೋವ್ಯಾಟ್ ಪವರ್ ಮತ್ತು 27.5 ಎನ್ಎಂ ಟಾರ್ಕ್ ಹೊರಹಾಕುತ್ತದೆ. CB300R 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿರುವುದರಿಂದ ಬೀದಿಯ ಮೂಲೆಗಳಲ್ಲೂ ಸುಲಭವಾಗಿ ಸವಾರಿ ಮಾಡಬಹುದು. ಇದು ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಹೊಂದಿದ್ದು, ಇದು ಗೇರ್‌ಶಿಫ್ಟ್‌ಗಳನ್ನು ಸುಲಭಗೊಳಿಸುತ್ತದೆ ಮತ್ತು ನಿಧಾನಗೊಳಿಸುವಾಗ ಹಾರ್ಡ್ ಡೌನ್ ಶಿಫ್ಟ್‌ಗಳಲ್ಲಿ ಹಿಂಬದಿ ಚಕ್ರ ಲಾಕ್-ಅಪ್ ಅನ್ನು ನಿರ್ವಹಿಸುತ್ತದೆ. ಇದರೊಂದಿಗೆ ಸವಾರರ ಸುರಕ್ಷತೆ ಹೆಚ್ಚಿಸುತ್ತದೆ.

ಬಣ್ಣಗಳು, ಬೆಲೆ ಮತ್ತು ಲಭ್ಯತೆ:
2023ರ ಹೊಸ CB300R ದ್ವಿಚಕ್ರ ವಾಹನವು ಪರ್ಲ್ ಸ್ಪಾರ್ಟಾನ್ ರೆಡ್ ಮತ್ತು ಮ್ಯಾಟ್ ಮ್ಯಾಸಿವ್ ಗ್ರೇ ಮೆಟಾಲಿಕ್ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿದೆ. ಇದಕ್ಕೆ ರೂ. 2,40,000 (ಎಕ್ಸ್ ಶೋ ರೂಂ, ದೆಹಲಿ) ಆಕರ್ಷಕ ಬೆಲೆ ನಿಗದಿ ಪಡಿಸಲಾಗಿದೆ. ಬುಕಿಂಗ್‌ಗಳು ಈಗ ತೆರೆದಿದ್ದು, ಈ ನಿಯೋ ಸ್ಪೋರ್ಟ್ಸ್ ಕೆಫೆ ರೋಡ್‌ಸ್ಟರ್ ಅನ್ನು ಕಂಪನಿಯ ಪ್ರೀಮಿಯಂ ಬಿಗ್‌ವಿಂಗ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

ದಸರಾ ಹಬ್ಬಕ್ಕೆ ಹೋಂಡಾ ಹೊಚ್ಚ ಹೊಸ SP125 ಸ್ಪೋರ್ಟ್ಸ್ ಬೈಕ್ ಬಿಡುಗಡೆ, ಕೈಗೆಟುಕುವ ದರ!

ಭಾರತದಲ್ಲಿ 2023ರ CB300R ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ. ಇದೀಗ ಹೊಸ ಒಬಿಡಿ2ಎ ನಿಯಮ ಅನುಸರಣೆಯ ಎಂಜಿನ್‌ನೊಂದಿಗೆ. ಕಾರ್ಯಕ್ಷಮತೆ ಮತ್ತು ಬಹುಮುಖತೆಯ ಉತ್ತಮ ಸಮತೋಲನ ಕಾಯ್ದುಕೊಳ್ಳುವ ಜತೆಗೆ 4 ಖಂಡಗಳನ್ನು ವ್ಯಾಪಿಸಿರುವ ಪರಂಪರೆಯೊಂದಿಗೆ, CB300R ಯುವ ಸವಾರರಿಗೆ ಹೋಂಡಾದ ಎಂಜಿನಿಯರಿಂಗ್ ಪರಾಕ್ರಮ, ವಿನ್ಯಾಸ ತತ್ವಶಾಸ್ತ್ರ ಮತ್ತು ಉತ್ಕೃಷ್ಟ ತಯಾರಿಕೆಯ ಗುಣಮಟ್ಟವನ್ನು ಬ್ರಾಂಡ್ ಮಾಡಲು ಅಂತಿಮ ಪ್ರವೇಶದ್ವಾರವಾಗಿದೆ ಎಂದು ಹೋಂಡಾ ವ್ಯವಸ್ಥಾಪಕ ನಿರ್ದೇಶಕ ಟ್ಸುಟ್ಸುಮು ಒಟಾನಿ ಹೇಳಿದ್ದಾರೆ.

click me!