ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಲಾಂಚ್, 307 ಕಿ.ಮೀ ಮೈಲೇಜ್!

By Suvarna News  |  First Published Nov 24, 2022, 3:59 PM IST

ಬಹುನಿರೀಕ್ಷಿತ ಅಲ್ಟ್ರಾವೈಲೆಟ್  F77 ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಹಲವು ವಿಶೇಷತೆಗಳಲ್ಲಿ ಈ ಬೈಕ್ ಮೈಲೇಜ್ ಕೂಡ ಒಂದು. ಒಂದು ಸಂಪೂರ್ಣ ಚಾರ್ಜ್‌ಗೆ 307 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬೈಕ್ ಬೆಲೆ, ಲಭ್ಯತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
 


ಬೆಂಗಳೂರು(ನ.24):  ಅಲ್ಟ್ರಾವೈಲೆಟ್ ಆಟೋಮೋಟಿವ್ ಬೆಂಗಳೂರು ಮೂಲಕ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ ಅಪ್ ಕಂಪನಿ. ಇದೀಗ ಹೊಚ್ಚ ಹೊಸ ಅಲ್ಟಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಹತ್ತು ಹಲವು ವಿಶೇಷತೆಗಳೊಂದಿಗೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಅತ್ಯಾಕರ್ಷಕ ಬೈಕ್ ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಅಲ್ಟ್ರಾವೈಲೆಟ್ F77 ಏರ್‌ಸ್ಟ್ರೈಕ್, ಲೇಸರ್ ಹಾಗೂ ಶ್ಯಾಡೋ ಅನ್ನೋ ಮೂರು ವೇರಿಯೆಂಟ್ ಬೈಕ್ ಈಗಾಗಲೇ ಭಾರಿ ಸಂಚಲನ ಸೃಷ್ಟಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 307 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪೈಕಿ ಇದು ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಲ್ಟ್ರಾವೈಲೆಟ್  F77 ಎಲೆಕ್ಟ್ರಿಕ್ ಬೈಕ್ 0-60 ಕಿ.ಮೀ ವೇಗವನ್ನು ಕೇವಲ 3 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ. ಗರಿಷ್ಠ ವೇಗ 150 ಕಿ.ಮೀ ಪ್ರತಿ ಗಂಟಗೆ.  ಅಲ್ಟ್ರಾವೈಲೆಟ್  F77 ಬೈಕ್  30 kw ಪವರ್ ಹಾಗೂ 100 nm ಟಾರ್ಕ್ ಸಾಮರ್ಥ್ಯ ಹೊಂದಿದೆ. ಹೆಚ್ಚು ಕಡಿಮೆ ಕಾರಿನ ಸಾಮರ್ಥ್ಯ ಹೊಂದಿದೆ. ಬೈಕ್ ಬ್ಯಾಟರಿ ಡಸ್ಟ್ ಹಾಗೂ ವಾಟರ್ ರೆಸಿಸ್ಟೆನ್ಸಿ ಹೊಂದಿದೆ. ಹಲವು ಪ್ರಯೋಗ ಹಾಗೂ ಪರೀಕ್ಷಾರ್ಥಗಳನ್ನು ನಡೆಸಿ ಬಳಕೆ ಮಾಡಲಾಗಿದೆ. ಹೀಗಾಗಿ ಸುರಕ್ಷತೆಗೆ ಹೆಚ್ಚಿನ ಗಮನಕೇಂದ್ರೀಕರಿಸಲಾಗಿದೆ.

Tap to resize

Latest Videos

ಕೈಗೆಟುಕವ ದರದಲ್ಲಿ ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, 100 ಕಿ.ಮೀ ಮೈಲೇಜ್!

ಅಲ್ಟ್ರಾವೈಲೆಟ್  F77  ಬೈಕ್ ಮೂರು ಮೊಡ್‌ಗಳಲ್ಲಿ ರೈಡಿಂಗ್ ಆಯ್ಕೆ ಹೊಂದಿದೆ. ಗ್ಲೈಡ್, ಕಾಂಬಾಟ್ ಹಾಗೂ ಬಾಲಿಸ್ಟಿಕ್ ರೈಡ್ ಮೊಡ್ ಹೊಂದಿರುವ ಅಲ್ಟ್ರಾವೈಲೆಟ್ ಭಾರತದಲ್ಲಿ ಲಭ್ಯವಿರುವ ದುಬಾರಿ ಎಲೆಕ್ಟ್ರಿಕ್ ಬೈಕ್ ಆಗಿದೆ. ಅಲ್ಟ್ರಾವೈಲೆಟ್  F77   ಬೈಕ್ ಬೆಲೆ 3.55 ಲಕ್ಷ ರೂಪಾಯಿಯಿಂದ ಗರಿಷ್ಠ 3.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಅಲ್ಟ್ರವೈಲೆಟ್ ಆಟಮೋಟೀವ್ ಕಂಪನಿ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ನಾರಾಯಣ್ ಸುಬ್ರಮಣಿಯಂ ಸಿಇಒ ಆಗಿದ್ದರೆ.ನಿರಂಜನ್ ರಾಜಮೊಹನ್ ಸಿಟಿಒ ಆಗಿದ್ದಾರೆ. ಅಲ್ಟ್ರಾವೈಲೆಟ್ ಕಂಪನಿಯಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಣ ಹೂಡಿಕೆ ಮಾಡಿದ್ದಾರೆ. ಇನ್ನು ಟಿವಿಎಸ್ ಮೋಟಾರ್ಸ್ ಕೂಡ ಪಾಲು ಹೊಂದಿದೆ. 2016ರಲ್ಲಿ ಅಲ್ಟ್ರಾವೈಲೆಟ್ ಕಂಪನಿ ಅಸ್ಥಿತ್ವಕ್ಕೆ ಬಂದಿದೆ. 

40 ಕಿಮೀ ಮೈಲೇಜ್ ನೀಡಲಿವೆ ಮಾರುತಿಯ ಎರಡು ಫೇಸ್‌ಲಿಫ್ಟ್‌ ಕಾರು

ಸಣ್ಣ ಇವಿ ಉದ್ಯಮಿಗಳಿಗೆ ಸಂಪೂರ್ಣ ಇವಿಯ ಸಹಕಾರ
ಪರಿಸರಕ್ಕೆ ಪೂರಕವಾದ ಇವಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಣ್ಣ ಇವಿ ಉದ್ಯಮಿಗಳ ಸಹಾಯಕ್ಕೆ ಸಂಪೂರ್ಣ ಇವಿ ಮುಂದಾಗಿದೆ. ಈ ಬಗ್ಗೆ ವಿವರ ನೀಡಿದ ಸಂಪೂರ್ಣ ಇವಿಯ ಸಂಸ್ಥಾಪಕ ವಿಕಾಸ್‌ ಗುಪ್ತ, ‘ಸಣ್ಣ ಇವಿ ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ಈ ಹೊಸ ಸಂಸ್ಥೆ ಆರಂಭಿಸಲಾಗಿದೆ. ಇಲೆಕ್ಟ್ರಿಕ್‌ ವೆಹಿಕಲ್‌ ಉದ್ಯಮ ಆರಂಭಿಸಲು, ಖರೀದಿಸಲು, ಸೇಲ್ಸ್‌, ಸವೀರ್‍ಸ್‌, ರಿಪೇರಿ, ನಿರ್ವಹಣೆ ಸೇರಿದಂತೆ ಎಲ್ಲಾ ಹಂತದಲ್ಲೂ ಸಂಪೂರ್ಣ ಸಹಕಾರ ನೀಡಲಾಗುವುದು. ಈ ಹಿನ್ನೆಲೆಯಲ್ಲೇ ನಮ್ಮ ಕಂಪನಿಗಳಿಗೆ ಸಂಪೂರ್ಣ ಇವಿ ಎಂಬ ಹೆಸರನ್ನಿಡಲಾಗಿದೆ’ ಎಂದು ತಿಳಿಸಿದರು.

click me!