Hero Optima CX ಕೈಕೆಟುಕವ ದರದ ಹೀರೋ ಆಪ್ಟಿಮಾ CX ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!

By Suvarna News  |  First Published Apr 5, 2022, 3:17 PM IST
  • 2022ರ ಹೀರೋ ಆಪ್ಟಿಮಾ ಸ್ಕೂಟರ್ ಬಿಡುಗಡೆಗೆ ತಯಾರಿ
  • ಏಪ್ರಿಲ್ ತಿಂಗಳಲ್ಲಿ ಸ್ಕೂಟರ್ ಲಾಂಚ್, ಹೊಸ ಫೀಚರ್ಸ್ ಸೇರ್ಪಡೆ
  • ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆ

ನವದೆಹಲಿ(ಏ.05): ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾರುಕಟ್ಟೆ ವಿಸ್ತರಿಸುತ್ತಿದೆ. ಹೀರೋ ಎಲೆಕ್ಟ್ರಿಕ್ ಹೊಸ ಹೊಸ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ಹೀರೋ ಅಪ್‌ಗ್ರೇಡೆಡ್ ವರ್ಶನ್ ಆಪ್ಟಿಮಾ CX ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಆಪ್ಟಿಮಾ HX ಸ್ಕೂಟರ್‌ಗಿಂತ ಅತ್ಯಾಧುನಿಕ ತಂತ್ರಜ್ಞಾನ, ಫೀಚರ್ಸ್ ಸೇರಿಸಲಾಗಿದೆ.

ನೂತನ ಹೀರೋ ಆಪ್ಟಿಮಾ ಸ್ಕೂಟರ್ ಎರಡು ವೇರಿಯೆಂಟ್ ಲಭ್ಯವಿದೆ. CX ಹಾಗೂ CX ER ಎಂಬು ಎರಡು ವೇರಿಯೆಂಟ್ ಮಾರುಕಟ್ಟೆ ಪ್ರವೇಶಿಸಲಿದೆ. CX ಸಿಂಗಲ್ ಬ್ಯಾಟರಿ ಯನಿಟ್ ಸ್ಕೂಟರ್ ಆಗಿ ಬಿಡುಗಡೆಯಾಗಲಿದೆ. ಬಳಿಕ ಡ್ಯುಯೆಲ್ ಬ್ಯಾಟರಿ ಆಯ್ಕೆಯನ್ನು ನೀಡಲು ಹೀರೋ ಎಲೆಕ್ಟ್ರಿಕ್ ಮುಂದಾಗಿದೆ.

Tap to resize

Latest Videos

ಭಾರತದಲ್ಲಿ 4 ಹೊಸ ಇವಿ ಉತ್ಪಾದನಾ ಘಟಕ ಸ್ಥಾಪಿಸಲಿದೆ ಹೀರೋ ಎಲೆಕ್ಟ್ರಿಕ್!

ಆದರೆ ನೂತನ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿರುವ ಆಪ್ಟಿಮಾ ಸ್ಕೂಟರ್‌ಗಿಂತೆ ಹೆಚ್ಚು ಪವರ್‌ಫುಲ್ ಆಗಿದೆ. ಸದ್ಯ ಮಾರುಕಟ್ಟೆಲ್ಲಿರುವ ಆಪ್ಟಿಮಾ HX ಸ್ಕೂಟರ್ ಬೆಲೆ 55,850 ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 65,640 ರೂಪಾಯಿ(ಎಕ್ಸ್ ಶೋ ರೂಂ). ನೂತನ ಸ್ಕೂಟರ್ ಬೆಲೆಯೂ ಇದೇ ರೀತಿ ಕಡಿಮೆಯಾಗಿರಲಿದೆ ಎಂದು ಕಂಪನಿ ಹೇಳಿದೆ.

ಹೀರೋ ಎಲೆಕ್ಟ್ರಿಕ್‌ ಆಪ್ಟಿಮಾ ಮತ್ತು ಹೀರೋ ಎಲೆಕ್ಟ್ರಿಕ್‌ NYX
ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 100 ಕಿಮೀ ಓಡಬಹುದಾದ ಎರಡು ಹೀರೋ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಭಾರಿ ಯಶಸ್ಸು ಕಂಡಿದೆ. ಹೀರೋ ಎಲೆಕ್ಟ್ರಿಕ್‌ ಆಪ್ಟಿಮಾ ಮತ್ತು ಹೀರೋ ಎಲೆಕ್ಟ್ರಿಕ್‌ NYX. ಇವುಗಳ ಬೆಲೆ ಕ್ರಮವಾಗಿ 68,721, ರು.69,754. 

Hero Eddy ನಂಬರ್ ಬೇಡ, ಲೈಸೆನ್ಸ್ ಬೇಕಿಲ್ಲ, ಹೀರೋ ಎಲೆಕ್ಟ್ರಿಕ್ ಎಡ್ಡಿ ಸ್ಕೂಟರ್ ಅನಾವರಣ!

ಈ ಸ್ಕೂಟರ್‌ಗಳನ್ನು ಪೂರ್ತಿ ಚಾಜ್‌ರ್‍ ಮಾಡಲು ನಾಲ್ಕೂವರೆ ಗಂಟೆ ಬೇಕು. ಚಾಜ್‌ರ್‍ ಮಾಡಲು ತುಂಬಾ ಕಷ್ಟವೇನಿಲ್ಲ, ಸ್ಕೂಟರ್‌ನೊಳಗೆ 7 ಕೆಜಿ ಭಾರದ ಎರಡು ಲೀಥಿಯಂ ಬ್ಯಾಟರಿಗಳಿವೆ. ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಮೊಬೈಲ… ಚಾಜ್‌ರ್‍ ಮಾಡಿದಂತೆ ಚಾಜ್‌ರ್‍ ಮಾಡಬಹುದು. ಬ್ಯಾಟರಿಗೆ ಮೂರು ವರ್ಷ ವಾರಂಟಿ ಇದೆ. ಅದನ್ನು ಹೊರತು ಪಡಿಸಿದರೆ ಸ್ಕೂಟರನ್ನು ಚೆನ್ನಾಗಿ ನೋಡಿಕೊಂಡರೆ ಆರಾಮಾಗಿ 20-25 ವರ್ಷ ಸ್ಕೂಟರ್‌ಬಾಳಿಕೆ ಬರುತ್ತದೆ ಎಂದು ಸ್ಕೂಟರ್‌ ಬಿಡುಗಡೆ ಮಾಡಿದ ಹೀರೋ ಎಲೆಕ್ಟ್ರಿಕ್‌ ಸಿಇಓ ಸೋಹಿಂದರ್‌ ಗಿಲ… ಹೇಳಿದರು.

ಹೀರೋ ಎಲೆಕ್ಟ್ರಿಕ್‌ ಸಂಸ್ಥೆಯ ಸುಮಾರು 600 ಸವೀರ್‍ಸ್‌ ಸೆಂಟರ್‌ಗಳು ದೇಶದುದ್ದಕ್ಕೂ ಇವೆ. ಮನೆಯಲ್ಲಲ್ಲದೆ ಅಲ್ಲೂ ಸ್ಕೂಟರ್‌ ಚಾಜ್‌ರ್‍ ಮಾಡಬಹುದು. ಉಳಿದಂತೆ ಬೇರೆ ಬೇರೆ ಕಡೆ ಚಾಜ್‌ರ್‍ ಪಾಯಿಂಟ್‌ಗಳನ್ನು ಸ್ಥಾಪಿಸುವ ಉದ್ದೇಶವೂ ಕಂಪನಿಗೆ ಇದೆ. ಅಲ್ಲಲ್ಲಿ ಕ್ಸೆರಾP್ಸ… ಅಂಗಡಿ, ಪಾನ್‌ ಶಾಪ್‌ಗಳಲ್ಲಿ ಚಾಜ್‌ರ್‍ ಮಾಡುವಂತಹ ಸೌಲಭ್ಯ ಒದಗಿಸುವ ಕುರಿತು ಯೋಜನೆ ಇದೆ ಅಂತ ಸೋಹಿಂದರ್‌ ಹೇಳುತ್ತಾರೆ.

125 ಸಿಸಿಯ ಸ್ಕೂಟರ್‌ ಹೀರೋ ಡೆಸ್ಟಿನಿ
ಹೀರೋ ಕಂಪನಿ 125 ಸಿಸಿಯ ಹೊಸ ಸ್ಕೂಟರ್‌ ಬಿಡುಗಡೆ ಮಾಡಿದೆ. ಅದರ ಹೆಸರು ಹೀರೋ ಡೆಸ್ಟಿನಿ. ಬಿಎಸ್‌ 4 ಇಂಜಿನ್‌ ಹೊಂದಿರುವ ಈ ಸ್ಟೈಲಿಶ್‌ ಸ್ಕೂಟರ್‌ ಹಲವು ಹೊಸ ಫೀಚರ್‌ಗಳನ್ನು ಹೊಂದಿವೆ. ಯುಎಸ್‌ಬಿ ಚಾರ್ಜರ್‌ ಇದೆ, ಸ್ಪೀಡೋಮೀಟರ್‌ಗೆ ಬ್ಲೂಟೂಥ್‌ ಮೂಲಕ ಮೊಬೈಲ್‌ ಕನೆಕ್ಟ್ ಮಾಡಬಹುದಾಗಿದೆ. ಸೈಡ್‌ ಸ್ಟಾಂಡ್‌ ಹಾಕಿದ್ದರೆ ಇಂಜಿನ್‌ ಆನ್‌ ಆಗ ವ್ಯವಸ್ಥೆ ರೂಪಿಸಲಾಗಿದೆ. ಹೊಸ ಕಾಲಕ್ಕೆ ತಕ್ಕಂತೆ ಬಂದಿರುವ ಹೀರೋ ಡೆಸ್ಟಿನಿಯ ಆರಂಭಿಕ ಬೆಲೆ ರು. 69,990.

click me!