EV Two Wheelers Launch: ಬೂಮ್ ಕಾರ್ಬೆಟ್ ಅನ್ನು ಇಎಂಐ ಮೂಲಕ ಖರೀದಿಸಿ!

By Suvarna News  |  First Published Nov 13, 2021, 4:34 PM IST

ಬೂಮ್ ಮೋಟಾರ್ಸ್ (Boom Motors) ಕಂಪನಿಯು ಬೂಮ್ ಕಾರ್ಬೆಟ್ (Boom Corbett) ಎಂಬ ದ್ವಿಚಕ್ರವಾಹನವನ್ನು ಲಾಂಚ್ ಮಾಡಿದೆ. ಈ ದ್ವಿಚಕ್ರವಾಹನ ಖರೀದಿಗೆ ಈಗಾಗಲೇ ಬುಕ್ಕಿಂಗ್ ಕೂಡ ಆರಂಭವಾಗಿದ್ದು, ಐದು ವರ್ಷಗಳ ಇಎಂಐ ಮೂಲಕ ಈ ಬೈಕ್ ಖರೀದಿಸಬುಹದಾಗಿದೆ. ಬ್ಯಾಟರಿಗಳನ್ನು ಸ್ವ್ಯಾಪ್ ಮಾಡಲು ಅವಕಾಶವಿದೆ. ವಿಶಿಷ್ಟ ವಿನ್ಯಾಸ ಹಾಗೂ ಫೀಚರ್‌ಗಳ ಮೂಲಕ ಈ ಇವಿ ಬೈಕ್ ಗಮನ ಸೆಳೆಯುತ್ತಿದೆ.


ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ (Electric Vehicle) ಬೂಮ್ ಶುರುವಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವನ್ನು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ರಾಷ್ಟ್ರವಾಗಿ ಮಾರ್ಪಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ವಿಶೇಷವಾಗಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಮಾರಾಟವೂ ಭರ್ಜರಿಯಾಗಿದ್ದು, ಇದೇ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೂಮ್ ಮೂಟಾರ್ಸ್ (Boom Motors) ಮುಂದಾಗಿದ್ದು, ಬೂಮ್ ಕಾರ್ಬೆಟ್ (Boom Corbett) ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಬಿಡುಗಡೆ ಮಾಡಿದೆ. ಬೂಮ್ ಮೋಟಾರ್ಸ್ ಬಿಡುಗಡೆ ಮಾಡಿರುವ ಬೂಮ್ ಕಾರ್ಬೆಟ್ ಎಲೆಕ್ಟ್ರಿಕ್ ದ್ವಿಚಕ್ರವಾಹನದ ಬೆಲೆ 89,999 ರೂ. ಆಗಿದೆ. ಇದು ಎಕ್ಸ್‌ಶೋರೂಮ್ ಬೆಲೆಯಾಗಿದ್ದು, ಆನ್‌ರೋಡ್ ಬೆಲೆ ವ್ಯತ್ಯಾಸವಾಗಬಹುದು. ಭಾರತದ ಅತ್ಯಂತ ಬಾಳಿಕೆ ಬರುವ ಎಲೆಕ್ಟ್ರಿಕ್ ಬೈಕ್ ಎಂಬ ಅಭಿದಾನದೊಂದಿಗೆ ಮಾರುಕಟ್ಟೆಗೆ ಪರಿಚಯವಾಗುತ್ತಿದೆ. 

ವಿಶೇಷ ಏನೆಂದರೆ, ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸ ಮಾಡಲಾದ ಹಾಗೂ ಭಾರತೀಯ ಪರಿಸ್ಥಿತಿ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ದ್ವಿಚಕ್ರವಾಹನ ಎನಿಸಿಕೊಂಡಿದೆ. ಇದರ ಜತೆಗೆ, ಪೋರ್ಟೇಬಲ್ ಚಾರ್ಜರ್‌ಗಳೊಂದಿಗೆ ಸರಳವಾಗಿ ಬ್ಯಾಟರಿ ಸ್ವ್ಯಾಪ್ ಮಾಡಲು ಅವಕಾಶ ಕಲ್ಪಿಸುತ್ತಿರುವ ಮೊದಲ ಇವಿ ಕಂಪನಿ ಎಂಬ ಹೆಗ್ಗಳಿಕೆ ಕೂಡ ಅಂಟಿದೆ. 

Tap to resize

Latest Videos

undefined

ಬೂಮ್ ಮೋಟಾರ್ಸ್, ಬೂಮ್ ಕಾರ್ಬೆಟ್ (Boom Corbett) ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಈಗ ಲಾಂಚ್ ಮಾಡಿದೆಯಾದರೂ ಗ್ರಾಹಕರಿಗೆ ಅದು 2022ರ ಜನವರಿಯಿಂದ ಡೆಲಿವರಿ ನೀಡಲಿದೆ. ಆದರೆ, ಕಂಪನಿಯು ಈಗ ಈ  ಎಲೆಕ್ಟ್ರಿಕ್ ದ್ವಿಚಕ್ರವಾಹನಕ್ಕೆ ಬುಕ್ಕಿಂಗ್ ಆರಂಭಿಸಿದೆ. ಇದರ ಜತೆಗೆ ಐದು ವರ್ಷಗಳ ಇಎಂಐ (EMI) ಯೋಜನೆಯನ್ನು ಕಂಪನಿ ಪ್ರಕಟಿಸಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸಲುವಾಗಿ, ವಾಹನಗಳು ಗ್ರಾಹಕರಿಗೆ ಮೌಲ್ಯ, ಅನುಕೂಲ ಮತ್ತು ಮನಸ್ಸಿನ ಶಾಂತಿಯನ್ನು ನೀಡಬೇಕು ಎಂದು ಬೂಮ್ ಮೋಟಾರ್ಸ್ ನಂಬುತ್ತದೆ, ಆಗ ಮಾತ್ರ ಅವು ಸಾಮೂಹಿಕವಾಗಿ ಬದಲಾಗುತ್ತವೆ. ನಮ್ಮ ಉತ್ತಮ ದರ್ಜೆಯ ಮೌಲ್ಯವನ್ನು ಪ್ರದರ್ಶಿಸಲು, ಬೂಮ್ ಮೋಟಾರ್ಸ್ ನಮ್ಮ ವಾಹನಗಳನ್ನು ಖರೀದಿಸಲು ಗ್ರಾಹಕರಿಗೆ 5 ವರ್ಷಗಳ EMI ಯೋಜನೆ ಪ್ರಕಟಿಸಿರುವ ಮೊದಲ ಇವಿ ಕಂಪನಿಯಾಗಿದೆ. ಇಎಂಐ ದರಗಳು ತಿಂಗಳಿಗೆ 1,699 ರೂ.ಗಳಿಂದ ಪ್ರಾರಂಭವಾಗುತ್ತವೆ, ಇದು ಅನೇಕ ಜನರು ಪೆಟ್ರೋಲ್‌ಗೆ ಖರ್ಚು ಮಾಡುವುದಕ್ಕಿಂತ ಕಡಿಮೆಯಾಗಿದೆ. ಅನುಕೂಲಕ್ಕಾಗಿ, ನಾವು ಪೋರ್ಟಬಲ್ ಚಾರ್ಜರ್‌ನೊಂದಿಗೆ ಬದಲಾಯಿಸಬಹುದಾದ ಬ್ಯಾಟರಿಯನ್ನು ನೀಡುತ್ತಿದ್ದೇವೆ ಅದು ಬೈಕ್ ಅನ್ನು ಎಲ್ಲಿ ಬೇಕಾದರೂ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ ಎಂದು ಬೂಮ್ ಮೋಟಾರ್ಸ್‌ನ ಸಿಇಒ (CE)) ಅನಿರುದ್ಧ್ ರವಿ ನಾರಾಯಣನ್ (Anirudh Ravi Narayanan) ತಿಳಿಸಿದ್ದಾರೆ. 

ಹೊಚ್ಚ ಹೊಸ ಪಲ್ಸರ್ N250 ಹಾಗೂ F250 ಬೈಕ್ ಬಿಡುಗಡೆ !

ಬೂಮ್ ಕಾರ್ಬೆಟ್ ಎಲೆಕ್ಟ್ರಿಕ್ ದ್ವಿಚಕ್ರವಾಹನವು, 2.3 kWh  ಬ್ಯಾಟರಿಯನ್ನು ಒಳಗೊಂಡಿದೆ. ಜೊತೆಗೆ, 4.6 kWh ಬ್ಯಾಟರಿ ಆಯ್ಕೆಯೊಂದಿಗೆ ಈ ದ್ವಿಚಕ್ರವಾಹನ ದೊರೆಯಲಿದೆ. ಸಿಂಗಲ್ ಚಾರ್ಜಿಂಗ್‌ನಲ್ಲಿ ಈ ಬೈಕ್ 200 ಕಿ.ಮೀ ದೂರವನ್ನು ಕ್ರಮಿಸಲಿದೆ. ಈ ದ್ವಿಚಕ್ರವಾಹನವನ್ನು  exo-skeletal double-cradle ಚಾಸೀಸ್ ಮೇಲೆ ಬಿಲ್ಡ್ ಮಾಡಲಾಗಿದೆ.

ಬೂಮ್ ಕಾರ್ಬೆಟ್ ದ್ವಿಚಕ್ರವಹಾನದ ಬ್ಯಾಟರಿಗಳನ್ನು ಸ್ವ್ಯಾಪ್ ಮಾಡಲು ಅವಕಾಶವಿದೆ. ಅಂದರೆ, ಚಾರ್ಜಿಂಗ್ ಬ್ಯಾಟರಿಗಳನ್ನ ಬದಲಿಸಲು ಅವಕಾಶ ಕಲ್ಪಿಸಿಕೊಡುತ್ತದೆ. ಮತ್ತು ಈ ಬ್ಯಾಟರಿಗಳು  ಚಾರ್ಜರ್‌ಗಳೊಂದಿಗೆ ಬರುತ್ತವೆ. ಮನೆಯ ಸಾಕೆಟ್‌ಗಳನ್ನು ಬಳಸಿಕೊಂಡೇ ಚಾರ್ಜ್ ಮಾಡಲು ಇದರಿಂದ ಸಾಧ್ಯವಾಗಲಿದೆ. 

ಈಗಾಗಲೇ ಹೇಳಿರುವಂತೆಯು ಕಂಪನಿಯು ಐದು ವರ್ಷಗಳ ಇಎಂಐ ಪ್ಲ್ಯಾನ್ ಮೂಲಕ ಗ್ರಾಹಕರಿಗೆ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಲಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳ 1,699 ರೂ.ನಂತೆ ಐದು ವರ್ಷದವರೆಗೂ ಇಎಂಐ ಕಟ್ಟಬಹುದು. ಜೊತೆಗೆ, ಅಗ್ನಿ ನಿರೋಧಕ ಹಾಗೂ ದೀರ್ಘ ಬಾಳಿಕೆಯ  ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

RoadKing Yezdi is Back: ಶೀಘ್ರವೇ ಹೊಸತಲೆಮಾರಿನ ಬೈಕ್ ರಿಲಾಂಚ್?

ಭಾರತದಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು  ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಮಾತ್ರವಲ್ಲದೇ ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ವಿಶೇಷ ರಿಯಾಯ್ತಿಗಳು, ಉತ್ತೇಜಕಗಳನ್ನು ನೀಡುತ್ತಿವೆ.

click me!