BMW Motorrad; ಬೆಂಗಳೂರಿನಲ್ಲಿ GS Trophy 2022, ಸ್ಪರ್ಧಿಗಳಿಗೆ ಭಾರತ ಪ್ರತಿನಿಧಿಸುವ ಅವಕಾಶ!

By Suvarna NewsFirst Published Nov 15, 2021, 8:52 PM IST
Highlights
  • ರೈಡಿಂಗ್ ಪ್ರತಿಭೆ ಆಫ್-ರೋಡಿಂಗ್ ಸಾಮರ್ಥ್ಯಗಳ ಪ್ರದರ್ಶನ
  • ಟೀಂ ಇಂಡಿಯಾ ಭಾಗವಾಗುವ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ
  • ಬೆಂಗಳೂರಿನಲ್ಲಿ ನಡೆದ GS Trophy 2022
     

ಬೆಂಗಳೂರು(ನ.15): BMW ಮೋಟರ‍್ರಾಡ್ ಇಂಟರ್‌ನ್ಯಾಶನಲ್ ಬೆಂಗಳೂರು GS Trophy 2022 ಯಶಸ್ವಿಯಾಗಿ ಅಂತ್ಯಗೊಂಡಿದೆ. ಮೋಟಾರು ರೈಡಿಂಗ್‌ನಲ್ಲಿ ಹೊಸ ಅನುಭವ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಮನೋಭಾವದಲ್ಲಿ  BMW ಮೋಟರ‍್ರಾಡ್ ರೈಡ್ ಜನಪ್ರಿಯವಾಗಿದೆ. ಈ ರೈಡಿಂಗ್  BMW GS ರೈಡರ್‌ಗಳಿಗೆ ಅತ್ಯಂತ ನಿರೀಕ್ಷೆಯ ಅವಕಾಶವಾಗಿದೆ.  ರೈಡರ್‌ಗಳು ಅವರ ಆಫ್-ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಲು ಮಾತ್ರವಲ್ಲ,  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತಾರೆ

ಬೆಂಗಳೂರು ಕ್ವಾಲಿಫೈಯರ್ ಕಾರ್ಯಕ್ರಮವು ದೊಡ್ಡಮಲ್ಲೆಕೆರೆಯ ಟ್ರೈಲ್ ಮಾಸ್ಟರ್ ರಾಂಚ್‌ನ ಆಕರ್ಷಕ ತಾಣದಲ್ಲಿ ನಡೆಯಿತು. ಎಲ್ಲ BMW GS ಮೋಟಾರ್ ಸೈಕಲ್ ಮಾಲೀಕರಿಗೆ ನೋಂದಣಿ ಮುಕ್ತವಾಗಿತ್ತು. ಸುಂದರ ತಾಣದಲ್ಲಿ ರೈಡರ್‌ಗಳು ತಮ್ಮ ಆಫ್ ರೋಡ್ ರೈಡಿಂಗ್ ಮೂಲಕ ಮಿಂಚಿನ ಅನುಭವ ಪಡೆದುಕೊಂಡರು. 

BMW M8 ಕೂಪ್ ಭಾರತದಲ್ಲಿರುವ ಮೋಸ್ಟ್ ಪವರ್‌ಫುಲ್ ಕಾರು; 3.3 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ!

ಬಹು-ನಗರಗಳ ಕ್ವಾಲಿಫೈಯರ್‌ಗಳನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಭುವನೇಶ್ವರಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪರೀಕ್ಷಿಸಿ ಆಯ್ಕೆಯಾದ ರೈಡರ್‌ಗಳು ಭಾರತದ ನ್ಯಾಷನಲ್ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸಲಿದ್ದು ಅದರಲ್ಲಿ ಮೂವರು ವಿಜೇತರು ಅಂತಿಮವಾಗಿ `ಟೀಮ್ ಇಂಡಿಯಾ’ ಪ್ರತಿನಿಧಿಸಲಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಹಾಗೂ ಪಡೆಯಲಿದ್ದಾರೆ.

ಟೀಮ್ ಇಂಡಿಯಾ ದೇಶವನ್ನು ಅಲ್ಬೇನಿಯಾದಲ್ಲಿ ನಡೆಯುವ BMW ಮೋಟರ‍್ರಾಡ್ ಇಂಟರ್‌ನ್ಯಾಷನಲ್ Trophy 2022 ಯಲ್ಲಿ ಪ್ರತಿನಿಧಿಸುತ್ತಾರೆ. ತಂಡವು ಮುಂದಿನ ಸಾಹಸಕ್ಕೆ ಪೂರ್ಣ ಸನ್ನದ್ಧವಾಗಿದೆ ಮತ್ತು ಹೊಚ್ಚಹೊಸ ವೈಯಕ್ತಿಕಗೊಳಿಸಿದ BMW GS ಮೋಟಾರ್‌ಸೈಕಲ್ ಅನ್ನು ಪ್ರತಿ ರೈಡರ್‌ಗೂ ಈ ಕಾರ್ಯಕ್ರಮದ ಅವಧಿಯಲ್ಲಿ ನೀಡಲಾಗುತ್ತದೆ. ಟೀಮ್ ಇಂಡಿಯಾ ಬ್ರೆಜಿ಼ಲ್, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಲ್ಯಾಟಿನ್ ಅಮೆರಿಕಾ, ಮೆಕ್ಸಿಕೊ, ನೆದರ್‌ಲ್ಯಾಂಡ್ಸ್, ರಷ್ಯಾ, ದಕ್ಷಿಣ ಆಫ್ರಿಕಾ, ಸೌಥ್ ಈಸ್ಟ್ ಏಷ್ಯಾ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ತಂಡಗಳ ವಿರುದ್ಧ ಸ್ಪರ್ಧಿಸಲಿದೆ

ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್‌ ಲಾಂಚ್, ಬೆಲೆ ಎಷ್ಟಿದೆ?.

ಇಂಡಿಯನ್ ನ್ಯಾಷನಲ್ ಕ್ವಾಲಿಫೈಯರ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಇಂಟರ್‌ನ್ಯಾಷನಲ್ Trophy 2022 ಯ ಸವಾಲುಗಳನ್ನು ಪುನರಾವರ್ತಿಸುತ್ತದೆ. ಇದು ಬಹು-ದಿನಗಳ ಸ್ಪರ್ಧೆಯಾಗಿದ್ದು ರೈಡರ್‌ಗಳು ಅಂಕಗಳನ್ನು ಗಳಿಸುತ್ತಾರೆ ಮತ್ತು ಅತ್ಯಂತ ಹೆಚ್ಚು ಅಂಕ ಗಳಿಸಿದವರು ಮೂರು ತಂಡದ ಸ್ಥಾನಗಳಿಗೆ ಸ್ಪರ್ಧಿಸುತ್ತಾರೆ. ನೋಂದಣಿ ಮತ್ತು ಮಾರ್ಗಸೂಚಿಗಳ ವಿವರಗಳನ್ನು BMW ಮೋಟರ‍್ರಾಡ್ ವೆಬ್‌ಸೈಟ್ ಲಿಂಕ್ ಮೂಲಕಪಡೆಯಬಹುದು:

BMW ಮೋಟರ‍್ರಾಡ್  ಇಂಟರ್‌ನ್ಯಾಷನಲ್  GS Trophy 2022 ಕೇವಲ ರೇಸ್ ಅಲ್ಲ, ಇದು ತಂಡದ ಸ್ಪರ್ಧೆಯಾಗಿದೆ. GS ರೈಡಿಂಗ್ ಅಂತಾರಾಷ್ಟ್ರೀಯ ವಿಭಾಗದಲ್ಲಿ ಕಠಿಣ ಸವಾಲುಗಳಿಗೆ ಇದು ಪೂರ್ವಭಾವಿ ವೇದಿಕೆಯಾದಿದೆ. ಅನಿರೀಕ್ಷಿತ ಹುಡುಕಾಟದ ಎಂಟನೇ ಆವೃತ್ತಿ 2022ರ ಬೇಸಿಗೆಯಲ್ಲಿ ನಡೆಯಲಿದೆ.  

ವಿಶೇಷ ಅಂದರೆ ಈ ರ್ಯಾಲಿಯಲ್ಲಿ ಸ್ಪರ್ಧಿಗಳು ಟೆಂಟ್‌ಗಳಲ್ಲಿ ಉಳಿದುಕೊಳ್ಳಲಿದ್ದಾರೆ.  ಈ ಮೂಲಕ ಸ್ಪರ್ಧಿಗಳಲ್ಲಿನ ಆತ್ಮೀಯತೆ ಹೆಚ್ಚಾಗಲಿದೆ. ಇದರೊಂದಿಗೆ ಮುಂದಿನ ರೇಸ್ ಹಾಗೂ ರ್ಯಾಲಿ ಕುರಿತು ಕಾರ್ಯತಂತ್ರ ರೂಪಿಸಲು ಹಾಗೂ ದಿಟ್ಟ ಪ್ರದರ್ಶನ ನೀಡಲು ನೆರವಾಗಲಿದೆ. 

ಮೋಟಾರು ರೇಸಿಂಗ್ ಭಾರತದಲ್ಲಿ ಹೆಚ್ಚು ಜನಪ್ರಿಯಗೊಳ್ಲುತ್ತಿದೆ. ಯುವಕರಲ್ಲಿ ರೇಸಿಂಗ್ ಕ್ರೇಜ್ ಕೂಡ ಹೆಚ್ಚಾಗುತ್ತಿದೆ. ವಿಶೇಷವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದಿಂದ ಹೆಚ್ಚಿನ ಸ್ಪರ್ಧಿಗಳು ಅಂತಾರಾಷ್ಟ್ರೀಯ ಮಟ್ಟ ರೇಸ್ ಹಾಗೂ ರ್ಯಾಲಿಯಲ್ಲಿ ಮಿಂಚುತ್ತಿದ್ದಾರೆ. ಇದು ಇತರರಿಗೂ ಸ್ಪೂರ್ತಿಯಾಗಿದೆ. ಬೆಂಗಳೂರಿನಲ್ಲಿ ಹಲವು ರ್ಯಾಲಿಗಳು ಆಯೋಜನೆಗೊಳ್ಳುತ್ತಿದೆ. ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಹಲವು ರ್ಯಾಲಿಗಳು ಇದೀಗ ಮತ್ತೆ ಪುನರ್ ಆರಂಭಗೊಳ್ಳುತ್ತಿದೆ. BMW ಮೋಟರ‍್ರಾಡ್  ಇಂಟರ್‌ನ್ಯಾಷನಲ್  GS Trophy 2022 ರೇಸ್‌ ಹಾಗೂ ರ್ಯಾಲಿಗೆ ಮುನ್ನುಡಿ ಹಾಕಿದೆ.

 

click me!