ಬೆಂಗಳೂರು(ಡಿ.21): BMW ಮೋಟಾರ್ರಾಡ್ `ಟೀಮ್ ಇಂಡಿಯಾ’ಗೆ ಫೈನಲಿಸ್ಟ್ ಪ್ರಕಟಿಸಲಾಗಿದೆ. ಆಯ್ಕೆಯಾದ ರೈಡರ್ಸ್ BMW ಮೋಟಾರ್ರಾಡ್ ಇಂಟರ್‌ನ್ಯಾಶನಲ್(BMW Motorrad International) GS ಟ್ರೋಫಿ 2022ರಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದೆ. ದೇಶಾದ್ಯಂತ ಮಲ್ಟಿ-ಸಿಟಿ ಕ್ವಾಲಿಫೈಯರ್‌ಗಳಿಂದ ಫೈನಲಿಸ್ಟ್ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ರೈಡರ್ಸ್ ಭಾರತವನ್ನು ಅಲ್ಬೇನಿಯಾದ ಇಂಟರ್‌ನ್ಯಾಶನಲ್ GS ಟ್ರೋಫಿಯಲ್ಲಿ ಪ್ರತಿನಿಧಿಸಲಿದ್ದಾರೆ.
ಕೊಲ್ಕತಾದ ರಮೀಜ್ ಮಲ್ಲಿಕ್, ಬೆಂಗಳೂರಿನ ಚೌಡೇಗೌಡ ಮತ್ತು ಪುಣೆಯ ಅದಿಬ್ ಜವನ್‍ಮರ್ದಿ ಮೂವರು ವಿಜೇತರು . ಮೊಟ್ಟಮೊದಲ ಬಾರಿಗೆ ಮಹಿಳಾ ರೈಡರ್‍ಟೀಮ್ ಕೂಡಾ ಪ್ರಾದೇಶಿಕ ಕ್ವಾಲಿಫೈಯರ್ ಸುತ್ತುಗಳಲ್ಲಿ ಸ್ಪರ್ಧಿಸಿದ್ದಾರೆ. BMW ಮೋಟಾರ್ರಾಡ್ ಇಂಟರ್‌ನ್ಯಾಶನಲ್ ಟ್ರೋಫಿ 2022 ಚಾಲೆಂಜ್‍ನಲ್ಲಿ ಭಾಗವಹಿಸುವ ಅವಕಾಶ ಕೂಡಾ ಪಡೆಯುತ್ತಾರೆ. GS ಟ್ರೋಫಿ ಸ್ಪರ್ಧಾತ್ಮಕ ಕೌಶಲ್ಯಗಳ ಸವಾಲು, ತಂಡದ ಕೆಲಸ ಮತ್ತು ಮಹತ್ತರ ರೈಡಿಂಗ್‍ನ(Riding) ಹೆಗ್ಗುರುತಾಗಿದೆ. ಎಲ್ಲ ವಿಜೇತರಿಗೂ ಅಸಾಧಾರಣ ಸಹಿಷ್ಣುತೆ, ರೈಡಿಂಗ್ ಕೌಶಲ್ಯಗಳು ಮತ್ತು ತಂಡದ ಸ್ಫೂರ್ತಿ ಪ್ರದರ್ಶಿಸಿರುವುದಕ್ಕೆ ಅಭಿನಂದಿಸುತ್ತೇನೆ. ತವರಿಗೆ ಇಂಟರ್‌ನ್ಯಾಶನಲ್ GS ಟ್ರೋಫಿ ತರಲು ಈ ಗುಣಗಳು ಸಮೃದ್ಧವಾಗಿ ಅಗತ್ಯವಾಗಿವೆ. ಪ್ರತಿ ಸದಸ್ಯರೂ ತಂಡದ ಸಾಮಥ್ರ್ಯಕ್ಕೆ ಕೊಡುಗೆ ನೀಡಲು ಮತ್ತು ಶಕ್ತಿ ತುಂಬಲು ಶಕ್ತಿಮೀರಿ ಶ್ರಮಿಸುತ್ತಾರೆ. ಆದರೆ ಸ್ಪರ್ಧೆಗಿಂತ ಹೆಚ್ಚಾಗಿ ಮತ್ತಾವುದಕ್ಕಿಂತಲೂ ಅದು ಸ್ಮರಣೀಯ ಅನುಭವವಾಗಿರುತ್ತದೆ. ಇಡೀ BMW GS ಸಮುದಾಯ ಮತ್ತು ಭಾರತದಲ್ಲಿ ರೈಡಿಂಗ್ ಉತ್ಸಾಹಿಗಳು ನಿಮ್ಮ ಪ್ರಗತಿಯನ್ನು ಹತ್ತಿರದಿಂದ ಅನುಸರಿಸುತ್ತಿರುತ್ತಾರೆ. ನಾವು `ಟೀಮ್ ಇಂಡಿಯಾ’ಗೆ ಶುಭ ಕೋರುತ್ತೇವೆ ಎಂದು BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದ್ದಾರೆ.
BMW M8 ಕೂಪ್ ಭಾರತದಲ್ಲಿರುವ ಮೋಸ್ಟ್ ಪವರ್‌ಫುಲ್ ಕಾರು; 3.3 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ!
BMW GS ಮಾಲೀಕರು ರೋಮಾಂಚಕವಾದ ಇಂಡಿಯನ್ ನ್ಯಾಷನಲ್ ಕ್ವಾಲಿಫೈಯರ್‌ನ ಮೂರನೇ ಆವೃತ್ತಿಯಲ್ಲಿ ರೈಡರ್ಸ್ ವಿವಿಧ ತೀವ್ರ ಹಂತಗಳ ಹಣಾಹಣಿ ನಡೆಸಿದರು ಅದರಲ್ಲಿ ಹಾರ್ಡ್-ಕೋರ್ ಅಡ್ವೆಂಚರ್ ರೈಡಿಂಗ್ ಮತ್ತು ಟೀಮ್‍ವರ್ಕ್ ಸವಾಲುಗಳಿದ್ದವು. ರೈಡಿಂಗ್ ಸಾಮಥ್ರ್ಯ, ಟೆಕ್ನಿಕ್, ನ್ಯಾವಿಗೇಷನ್, ಫಿಟ್‍ನೆಸ್ ಮತ್ತು ಮೆಕ್ಯಾನಿಕಲ್ ಕೌಶಲ್ಯಗಳು ಪ್ರದರ್ಶನಕ್ಕೆ ವಿಶೇಷ ಪರೀಕ್ಷೆಗಳಿದ್ದವು.
ಟೀಮ್ ಇಂಡಿಯಾ(Team India) ದೇಶವನ್ನು ಅಲ್ಬೇನಿಯಾದಲ್ಲಿ ನಡೆಯುವ BMW ಮೋಟಾರ್ರಾಡ್ ಇಂಟರ್‌ನ್ಯಾಶನಲ್ GS ಟ್ರೋಫಿ 2022 ರಲ್ಲಿ ಹೆಮ್ಮೆಯಿಂದ ಪ್ರತಿನಿಧಿಸಲಿದೆ. ತಂಡವು ಮುಂದಿನ ಸಾಹಸಕ್ಕೆ BMW ಮೋಟಾರ್ರಾಡ್‍ನೊಂದಿಗೆ ಪೂರ್ಣ ಸನ್ನದ್ಧವಾಗಿದ್ದು ಅಲ್ಬೇನಿಯಾಗೆ ಪ್ರಯಾಣಿಸಿದೆ ಮತ್ತು ಕಾರ್ಯಕ್ರಮದ ಸಮಯದಲ್ಲಿ ಪ್ರತಿ ರೈಡರ್‍ಗೂ ಹೊಚ್ಚಹೊಸ ವೈಯಕ್ತಿಕಗೊಳಿಸಿದ BMW GS ಮೋಟಾರ್‍ಸೈಕಲ್ ನೀಡಲಾಗಿದೆ. ಟೀಮ್ ಇಂಡಿಯಾ ಬ್ರೆಜಿಲ್, ಚೀನಾ, ಫ್ರಾನ್ಸ್, ಜರ್ಮನಿ, ಜಪಾನ್, ಲ್ಯಾಟಿನ್ ಅಮೆರಿಕಾ, ಮೆಕ್ಸಿಕೊ, ನೆದರ್ಲೆಂಡ್, ರಷ್ಯಾ, ದಕ್ಷಿಣ ಆಫ್ರಿಕಾ, ಆಗ್ನೇಯ ಆಫ್ರಿಕಾ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್‍ಡಂ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಇತರೆ ತಂಡಗಳ ವಿರುದ್ಧ ಸ್ಪರ್ಧಿಸಲಿದೆ.
ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್ ಲಾಂಚ್, ಬೆಲೆ ಎಷ್ಟಿದೆ?
ಇಂಡಿಯನ್ ನ್ಯಾಷನಲ್ ಕ್ವಾಲಿಫೈಯರ್ ಪ್ರತಿ ಎರಡು ವರ್ಷಗಳಿಗೆ ನಡೆಯುತ್ತದೆ ಮತ್ತು ಇಂಟರ್‌ನ್ಯಾಶನಲ್ GS ಟ್ರೋಫಿಯ ಸವಾಲುಗಳನ್ನು ಪುನರಾವರ್ತಿಸುತ್ತದೆ. ಮೂರನೇ ಆವೃತ್ತಿಗೆ ಮಲ್ಟಿ-ಸಿಟಿ ಕ್ವಾಲಿಪೈಯರ್‍ಗಳು ದೆಹಲಿ, ಮುಂಬೈ, ಬೆಂಗಳೂರು ಮತ್ತು ಭುವನೇಶ್ವರಗಳಲ್ಲಿ ನಡೆಯಿತು. 250 ಕ್ಕೂ ಹೆಚ್ಚು ರೈಡರ್‍ಗಳು ದೇಶದ ಮೂಲೆ ಮೂಲೆಯಿಂದ ಭಾಗವಹಿಸಿ ಅವರ ಸಾಮಥ್ರ್ಯ ಒರೆಗೆ ಹಚ್ಚಿದರು.
ಇಂಟರ್‌ನ್ಯಾಶನಲ್ GS ಟ್ರೋಫಿ
BMW ಮೋಟಾರ್ರಾಡ್ ಇಂಟರ್‍ನ್ಯಾಷನಲ್ GS ಟ್ರೋಫಿ ಒಂದು ರೇಸ್ ಅಲ್ಲ ಆದರೆ ತಂಡದ ಸ್ಪರ್ಧೆಯಾಗಿದ್ದು GS ರೈಡಿಂಗ್ ಇಂಟರ್‍ನ್ಯಾಷನಲ್ ಸಂಭವನೀಯರು ಪರಸ್ಪರ ಸರಣಿ ಸವಾಲುಗಳಲ್ಲಿ ಎದುರಿಸಿದರು ಮತ್ತು ಎಲ್ಲರೂ ರೈಡಿಂಗ್‍ನಲ್ಲಿ ತೊಡಗಿರಲಿಲ್ಲ. `ಎಕ್ಸ್‍ಪ್ಲೋರ್ ದಿ ಅನ್‍ಎಕ್ಸ್‍ಪೆಕ್ಟೆಡ್’ BMW ಮೋಟಾರ್ರಾಡ್ ಇಂಟರ್‍ನ್ಯಾಷನಲ್ GS ಟ್ರೋಫಿಯ ಎಂಟನೇ ಆವೃತ್ತಿಯ ಧ್ಯೇಯವಾಗಿದ್ದು ಅದು 2022 ರ ಬೇಸಿಗೆಯಲ್ಲಿ ನಡೆಯಲಿದೆ. ಅಲ್ಬೇನಿಯಾ ಆಫ್-ರೋಡ್ ಟೂರಿಂಗ್‍ಗೆ ಅತ್ಯುತ್ತಮ ತಾಣವಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಅಸಾಧಾರಣ ಸಸ್ಯ ಹಾಗೂ ಪ್ರಾಣಿ ಸಂಪತ್ತು ಹಾಗೂ ಸಂಸ್ಕಂತಿಯಿಂದ ಉನ್ನತವಾಗಿದೆ. ವಿಶ್ವದಲ್ಲಿ ಅತ್ಯುತ್ತಮ ಎಂಡುರೊ ರೈಡರ್‍ಗಳು ಈ ಪ್ರಶಾಂತ ಅಜ್ಞಾನ ಸೌಂದರ್ಯವನ್ನು ಅವರ GS ಬೈಕ್ಸ್‍ನಲ್ಲಿ ಆವಿಷ್ಕರಿಸಬಹುದು ಮತ್ತು ಹತ್ತಿರದಿಂದ #SpiritOfGS ಯ ಅನುಭವ ಪಡೆದುಕೊಳ್ಳಬಹುದು.
ಸ್ಪರ್ಧಿಗಳು ರಾತ್ರಿಯಲ್ಲಿ ಬೈವಾಕ್‍ನಲ್ಲಿ ಕ್ಯಾಂಪ್ ಮಾಡುತ್ತಾರೆ, ಈ ಕಾರ್ಯಕ್ರಮವು ಸೋದರತ್ವ, ಸೋದರಿಯತ್ಬ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ. ಯಶಸ್ವಿ ತಂಡವು ಅವರ ಪರಿಸರಕ್ಕೆ ಗೌರವಯುತವಾಗಿರುತ್ತಾರೆ, ಅವರ ಯಂತ್ರಕ್ಕೆ ಕರುಣೆ ಮತ್ತು ತಂಡದ ಸದಸ್ಯರನ್ನು ಅರ್ಥ ಮಾಡಿಕೊಳ್ಳುತ್ತಾರೆ.