
ನವದೆಹಲಿ (ಜು.20) ಪೆಟ್ರೋಲ್ ಅವಲಂಬನೆ ತಗ್ಗಿಸಲು, ವಿದೇಶಿ ವಿನಿಮಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಉತ್ತರವಾಗಿ ಕೇಂದ್ರ ಸರ್ಕಾರ ಇದೀಗ ಇ20 ಪೆಟ್ರೋಲ್ ನೀಡುತ್ತಿದೆ. ನಾವು ಖರೀದಿಸುವ ಪೆಟ್ರೋಲ್‌ನಲ್ಲಿ ಶೇಕಡಾ 200 ಎಂಎಲ್ ಎಥೆನಾಲ್ ಮಿಶ್ರಿತ ಪೆಟ್ರೋಲ್ ಆಗಿದೆ. ಈ ಪೆಟ್ರೋಲ್‌ನಿಂದ ಹಳೇ ಅಂದರೆ 2023ಕ್ಕಿಂತ ಹಿಂದಿನ ವಾಹನಗಳ ಎಂಜಿನ್, ಮೈಲೇಜ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಥೆನಾಲ್ ಮಿಶ್ರಣ ಹೆಚ್ಚಾಗಲಿದೆ. ಹೀಗಾಗಿ ಇದೀಗ ಯಾವ ವಾಹನ ಖರೀದಿಸಲಿ ಅನ್ನೋ ಚಿಂತೆಗೆ ಮಾರುಕಟ್ಟೆಯಲ್ಲಿ ನಾಲ್ಕು ಬೈಕ್ ಲಭ್ಯವಿದೆ. ಈ ಬೈಕ್ ಕೆಗೆಟುಕುವ ದರಲ್ಲಿದೆ. ಇಷ್ಟೇ ಅಲ್ಲ ಇ85 ಅಂದರೆ ಶೇಕಡಾ 85ರಷ್ಟು ಎಥನಾಲ್ ಮೂಲಕ ಚಲಿಸಲಿದೆ.
ಹೀರೋ ಹೆಚ್ಆಫ್ ಡಿಲಕ್ಸ್ ಫ್ಲೆಕ್ಸ್ ಫ್ಯೂಯೆಲ್ ಸದ್ಯ ಲಭ್ಯವಿರುವ ಇ85 ಚಾಲಿತ ಅಗ್ಗದ ಬೈಕ್. ಇದರ ಬೆಲೆ 72,792 ರೂಪಾಯಿ (ಎಕ್ಸ್ ಶೋ ರೂಂ). ಈ ಬೈಕ್ ಶೇಕಡಾ 20 ರಿಂದ ಶೇಕಡಾ 85ರಷ್ಟು ಎಥೆನಾಲ್ ಇಂದನದಲ್ಲಿ ಚಲಿಸಲಿದೆ. 97.22 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಇದೀಗ ಭಾರಿ ಬೇಡಿಕೆ ಪಡೆದುಕೊಂಡಿದೆ.
ಹೀರೋ ಸ್ಪ್ಲೆಂಡರ್ ಬೈಕ್ ಭಾರಿ ಬೇಡಿಕೆಯ ಬೈಕ್ ಪ್ರಮುಖವಾಗಿ ಇದರ ಮೈಲೇಜ್. ಇದೀಗ ಹೀರೋ ಸ್ಪ್ಲಂಡರ್ ಫ್ಲೆಕ್ಸ್ ಫ್ಯೂಯೆಲ್ ಬೈಕ್ ಇ20 ಯಿಂದ ಇ85 ಎಥೆನಾಲ್ ಇಂದನದಲ್ಲಿ ಓಡಲಿದೆ. ಸ್ಪ್ಲೆಂಡರ್ ಫ್ಲೆಕ್ಸ್ ಫ್ಯೂಯೆಲ್ ಬೆಲೆ 82,710 ರೂಪಾಯಿ (ಎಕ್ಸ್ ಶೋ ರೂಂ)
ಯಮಹಾ ಇತ್ತೀಚೆಗೆ ಎಫ್‌ಜೆಡ್ ಬ್ಲೂ ಫ್ಲೆಕ್ಸ್ ಫ್ಯೂಯೆಲ್ ಬೈಕ್ ಬಿಡುಗಡೆ ಮಾಡಿದೆ. 149ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಶೇಕಡಾ 85ರಷ್ಟು ಎಥೆನಾಲ್ ಇಂದನದಲ್ಲಿ ಚಲಿಸಲಿದೆ. ಇದರ ಬೆಲೆ 1.24 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಹೆಚ್ಚು ಆಕರ್ಷಕ ಹಾಗೂ ಯಮಾಹದಲ್ಲಿ ಅತೀ ಹೆಚ್ಚು ಮಾರಾಟ ದಾಖಲೆ ಹೊಂದಿರುವ ಎಫ್‌ಝಿ ಪ್ರೇರಿತ ಮಾಡೆಲ್ ಇದು.
ಸುಜುಕಿ ಜಿಕ್ಸರ್ ಎಸ್ಎಫ್ 250 ಫ್ಲೆಕ್ಸ್ ಫ್ಯೂಯೆಲ್ ಬೈಕ್ ಸ್ವಲ್ಪ ಹೈಯರ್ ರೇಂಜ್. ಅಂದರೆ ಇದು 249 ಸಿಸಿ ಎಂಜಿನ್ ಹೊಂದಿದೆ. ಇದರ ಬೆಲೆ 2,00,896 ರೂಪಾಯಿ (ಎಕ್ಸ್ ಶೋ ರೂಂ). ಜಿಕ್ಸರ್ ಶೇಕಡಾ 85ರಷ್ಟು ಎಥೆನಾಲ್ ಇಂನದಲ್ಲಿ ಚಲಿಸಲಿದೆ. ಅಂದರೆ ಶೇಕಡಾ 15ರಷ್ಟು ಪೆಟ್ರೋಲ್ ಹಾಗೂ ಶೇಕಡಾ 85ರಷ್ಟು ಎಥೆನಾಲ್ ಮಿಶ್ರಿತ ಇಂದನದಲ್ಲಿ ಚಲಿಸಲಿದೆ.
ಸದ್ಯ ಎಥೆನಾಲ್ ಮಿಶ್ರಿತ ಪೆಟ್ರೋಲ್ ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ಭಾರತದಲ್ಲಿ ಇನ್ನು ಶೇಕಡಾ 100ರಷ್ಟು ಪೆಟ್ರೋಲ್ ಲಭ್ಯವಿರುವುದಿಲ್ಲ. ಇ20 ಪೆಟ್ರೋಲ್ ನೀತಿ ಜಾರಿಗೆ ಬಂದಿದೆ. ಇನ್ನು ಹಂತ ಹಂತವಾಗಿ ಇ25, ಇ30 ರೀತಿಯಲ್ಲಿ ಸಾಗಲಿದೆ. ಇದಕ್ಕೆ ತಕ್ಕಂತೆ ಆಟೋಮೊಬೈಲ್ ಕಂಪನಿಗಳು ಎಥೆನಾಲ್ ಮಿಶ್ರಿತ ವಾಹನಗಳ ಉತ್ಪಾದನೆ ಮಾಡುತ್ತಿದೆ.