ಕೊಮಾಕಿ ಫ್ಲೋರಾ ನೂತನ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಕೈಗೆಟುಕುವ ದರದ ಸ್ಕೂಟರ್. ಜೊತೆಗೆ 100 ಕಿ.ಮೀ ಮೈಲೇಜ್ ರೇಂಜ್ ಹೊಂದಿದೆ. ನೂತನ ಸ್ಕೂಟರ್ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.
ಬೆಂಗಳೂರು(ನ.23) ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ಹೊಸ ಹೊಸ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈಗಾಗಲೇ ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಮೂಲಕ ಬಾರಿ ಸಂಚಲನ ಸೃಷ್ಟಿಸಿರುವ ಕೊಮಾಕಿ ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಕೊಮಾಕಿ ಫ್ಲೋರಾ ಸ್ಕೂಟರ್ ಇದೀಗ ಹೊಸ ಸಂಚಲನ ಸೃಷ್ಟಿಸಿದೆ. ನೂತನ ಬೈಕ್ ಬೆಲೆ 78,999 ರೂಪಾಯಿ(ಎಕ್ಸ್ ಶೋ ರೂಂ). ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಕೈಗೆಟುಕುವ ದರಲ್ಲಿರುವ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಕೊಮಾಕಿ ಫ್ಲೋರಾ ಪಾತ್ರವಾಗಿದೆ.
ನೂತನ ಕೊಮಾಕಿ ಫ್ಲೋರಾ ಸ್ಕೂಟರ್‌ನಲ್ಲಿ ಲಿಥಿಯಂ ಐಯಾನ್ LiFePO4 ಬ್ಯಾಟರಿಯನ್ನು ಬಳಸಲಾಗಿದೆ. ಇದು ಹೆಚ್ಚು ಸರುಕ್ಷಿತ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಕೇಳಿಬರುತ್ತಿರುವ ಬ್ಯಾಟರಿ ಸಮಸ್ಯೆಗಳ ಕುರಿತು ಗಮನದಲ್ಲಿಟ್ಟು ಈ ಸ್ಕೂಟರ್ ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿ ಸುರಕ್ಷತೆ ವಿಚಾರದಲ್ಲಿ LiFePO4 ಬಳಕೆಗೆ ಯೋಗ್ಯವಾಗಿದೆ ಎಂದು ಕೊಮಾಕಿ ಹೇಳಿದೆ.
undefined
Electric Cruiser Bike 220 ಕಿ.ಮಿ ಮೈಲೇಜ್, ಭಾರತದ ಮೊದಲ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಕೊಮಾಕಿ ಲಾಂಚ್!
ಕೊಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ಮೈಲೇಜ್ ನೀಡಲಿದೆ. ಮತ್ತೊಂದು ವಿಶೇಷತೆ ಅಂದರೆ ಕೊಮಾಕಿ ಅತೀ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಎಂದು ಕಂಪನಿ ಹೇಳಿಕೊಂಡಿದೆ.
ವೀಡ ಇವಿ ಸ್ಕೂಟರ್ ಎಕ್ಸ್‌ಪೀರಿಯನ್ಸ್ ಸೆಂಟರ್
ಹೀರೋ ಮೋಟೋಕಾಪ್‌ರ್‍ನ ಬ್ರಾಂಡ್ ಆಗಿರುವ ವೀಡ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿ ತನ್ನ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಿಸಿದೆ. ಈ ಕೇಂದ್ರದಲ್ಲಿ ವೀಡ ವಿ1 ಇ ಸ್ಕೂಟರ್‌ಗಳ ಟೆಸ್ಟ್ ರೈಡ್, ಮಾರಾಟ ಇತ್ಯಾದಿ ನಡೆಯುತ್ತದೆ. ವೀಡ ವಿ1 ಪ್ಲಸ್ ಮತ್ತು ವೀಡ ವಿ1 ಪ್ರೋ ಎಂಬ ಎರಡು ಮಾದರಿಯಲ್ಲಿ ಈ ಸ್ಕೂಟರ್ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ ರು.1,45,000 ಮತ್ತು ರು.1,59,000.
ಹೀರೋ ಲೆಕ್ಟ್ರೋದ 2 ಹೊಸ ಇ-ಸೈಕಲ್‌ಗಳು
ಹೀರೋ ಲೆಕ್ಟ್ರೋ ಕಂಪನಿ ಎಚ್3 ಮತ್ತು ಎಚ್5 ಎಂಬ ಎರಡು ಇ-ಸೈಕಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕ್ರಮವಾಗಿ ರು. 27,499 ಮತ್ತು ರು.28,499. ಲಿ-ಐಯಾನ್ ಬ್ಯಾಟರಿ ಹೊಂದಿರುವ ಈ ಸೈಕಲ್‌ಗಳು ಗಂಟೆಗೆ 25 ಕಿಮೀ ವೇಗದಲ್ಲಿ ಚಲಿಸಬಲ್ಲವು. ಒಮ್ಮೆ ಪೂರ್ತಿ ಚಾಜ್‌ರ್ ಮಾಡಿದರೆ 30 ಕಿಮೀ ಸಾಗುತ್ತದೆ. ಪೂರ್ತಿ ಚಾಜ್‌ರ್ ಆಗಲು 4 ಗಂಟೆ ಬೇಕು.
10 ತಿಂಗಳಲ್ಲಿ 1 ಲಕ್ಷ ಓಲಾ ಸ್ಕೂಟರ್
ಓಲಾ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ 10 ತಿಂಗಳಲ್ಲಿ 1 ಲಕ್ಷ ಸ್ಕೂಟರ್ ತಯಾರಿಸಿದೆ ಎಂದು ಕಂಪನಿ ತಿಳಿಸಿದೆ. ಅಕ್ಟೋಬರ್ ತಿಂಗಳಿನಲ್ಲಿಯೇ 20 ಸಾವಿರ ಇವಿ ಸ್ಕೂಟರ್‌ಗಳು ಮಾರಾಟವಾಗಿವೆ ಎಂದು ಕಂಪನಿ ಲೆಕ್ಕ ಕೊಟ್ಟಿದೆ.