ಭಾರತದಲ್ಲಿ ಹೊಂಡಾ CB200X ಬೈಕ್ ಡೆಲಿವರಿ ಆರಂಭ!

Published : Sep 09, 2021, 09:23 PM IST
ಭಾರತದಲ್ಲಿ ಹೊಂಡಾ CB200X ಬೈಕ್ ಡೆಲಿವರಿ ಆರಂಭ!

ಸಾರಾಂಶ

ಹೊಸದಾದ CB200X ಬೈಕ್ ಡೆಲಿವರಿಗೆ ಚಾಲನೆ ABS ಸೇರಿ ಗರಿಷ್ಠ ಸುರಕ್ಷತಾ ಫೀಚರ್ಸ್ ಉತ್ಸಾಹಿ ಬೈಕ್ ಸವಾರರಿಗೆ ನೆಚ್ಚಿನ ಬೈಕ್

ಫರೀದಾಬಾದ್(ಸೆ.09): ಭಾರತದಲ್ಲಿ 180-200 ಸಿಸಿ ಬೈಕ್ ವಿಭಾಗದಲ್ಲಿ ಸಂಚಲನ ಮೂಡಿಸಿರುವ ಹೊಂಡಾ ಮೋಟಾರ್ ಸೈಕಲ್ , ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. 180-200 ಸಿಸಿ ವಿಭಾಗದಲ್ಲಿ ಸುಸ್ಥಿರ ಬದಲಾವಣೆ ತಂದಿರುವ ಹೋಂಡಾ ಮೋಟಾರ್‌ಸೈಕಲ್  , ಭಾರತದಲ್ಲಿ ಸಂಪೂರ್ಣ ಹೊಸದಾದ CB200X ಬೈಕ್ ಡೆಲಿವರಿಗೆ ಚಾಲನೆ ನೀಡಿದೆ. 

ತಿಂಗಳ ಮಾರಾಟ ವರದಿ ಪ್ರಕಟ; 2.8 ಲಕ್ಷ ವಾಹನ ಮಾರಾಟ ಮಾಡಿದ ಹೊಂಡಾ!

ದೈನಂದಿನ ಪ್ರಯಾಣಕ್ಕೆ ಹೊಸ ಅರ್ಥ ನೀಡಲು ಹಾಗೂ ವೀಕೆಂಡ್ ಟ್ರಿಪ್ ಮತ್ತಷ್ಟು  ಮುದ ನೀಡಲು ನೂತನ  CB200X ಬೈಕ್ ನೆರವಾಗಲಿದೆ. ವಾರಾಂತ್ಯದಲ್ಲಿ ಹೊಸ ಸ್ಥಳಗಳನ್ನು ಅನ್ವೇಷಿಸಲು ಸವಾರರನ್ನು ಉತ್ತೇಜಿಸುವ ರೀತಿಯಲ್ಲಿ ತಯಾರಿಸಲಾಗಿದೆ. ಅದರ ವಿಶಿಷ್ಟ ಲಕ್ಷಣಗಳು ಮತ್ತು ಗಟ್ಟಿಮುಟ್ಟಾದ ದೇಹರಚನೆಯು, ಉತ್ಸಾಹಿ ಬೈಕ್ ಸವಾರರ ನಿರೀಕ್ಷೆಗಳನ್ನೆಲ್ಲ ಈಡೇರಿಸುವ ನೈಜ ಅನ್ವೇಷಕವಾಗಿದೆ.

ಕಂಪನಿಯ ರೆಡ್ ವಿಂಗ್' ಡೀಲರ್‌ಶಿಪ್‌ಗಳ ಮೂಲಕ ಇದರ ವಿತರಣೆಗೆ ಚಾಲನೆ ನೀಡಲಾಗಿದೆ. ಹರಿಯಾಣದ ಫರೀದಾಬಾದ್ ಹೋಂಡಾ ಘಟಕದಲ್ಲಿ ಮೊದಲ ಗ್ರಾಹಕರ ಕೀ ಹಸ್ತಾಂತರ ಸಮಾರಂಭದ ಮೂಲಕ ನೂತನ CB200X ಬೈಕ್ ವಿತರಣೆಗೆ ಚಾಲನೆ ನೀಡಲಾಗಿದೆ.

ಭಾರತದಲ್ಲಿ ಹೊಂಡಾ CBR650R ಬೈಕ್ ಬಿಡುಗಡೆ; ಬುಕಿಂಗ್ ಆರಂಭ!

ಪರಿಚಯಿಸಿದ ದಿನದಿಂದಲೇ ಗ್ರಾಹಕರು ನಮ್ಮ ಡೀಲರ್ ನೆಟ್‌ವರ್ಕ್ ಸಂಪರ್ಕಿಸಿ ಇದರ ಬಗ್ಗೆ ಮಾಹಿತಿ ಕೇಳಲು ಆರಂಭಿಸಿದ್ದಾರೆ. ಈಗ ಕೋವಿಡ್ ನಂತರದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಕೆಲಸ ಮತ್ತು ವಿರಾಮ ಉದ್ದೇಶದ ಪ್ರವಾಸಗಳಿಗಾಗಿ ಮನೆಗಳಿಂದ ಹೊರ ಹೋಗುತ್ತಿದ್ದಾರೆ. ಅವರು ತಮ್ಮ ಎಲ್ಲ ನಿರೀಕ್ಷೆಗಳನ್ನು ಪೂರೈಸುವ ಸಮರ್ಥ ಮೋಟರ್ ಸೈಕಲ್ ಅನ್ನು ಹುಡುಕುತ್ತಿದ್ದಾರೆ. ಹೊಂಡಾ  CB200X ಬೈಕ್ ಬಿಡುಗಡೆ ಮಾಡಲಾಗಿದೆ. ಎಂದು ಹೊಂಡಾ ಇಂಡಿಯಾದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.

ಉನ್ನತ ತಂತ್ರಜ್ಞಾನ ಮತ್ತು ಅನುಕೂಲತೆ: 
ಗೋಲ್ಡನ್ ಅಪ್‌ಸೈಡ್ ಡೌನ್ (ಯುಎಸ್‌ಡಿ) ಫ್ರಂಟ್ ಫೋರ್ಕ್ಸ್, 5 ಹಂತದ ಪ್ರಖರತೆ ಹೊಂದಾಣಿಕೆಯ ಸರ್ವಿಸ್ ಸೂಚಕ, ಪೆಟಲ್ ಡಿಸ್ಕ್ ಬ್ರೇಕ್‌ಗಳು (ಮುಂಭಾಗ ಮತ್ತು ಹಿಂಭಾಗ) ABS, ಅಪಾಯ ಸ್ವಿಚ್ ಸೌಲಭ್ಯ ಮತ್ತು ಟ್ಯಾಂಕ್ ಮೇಲೆ ಕೀ ಮತ್ತು ಸದೃಢ ಹಿಡಿತಕ್ಕಾಗಿ ಟಫ್ ಟ್ರೆಡ್ ಪ್ಯಾಟರ್ನ್ ಟೈರ್ 

ಪಿಸ್ಟನ್ ಕೂಲಿಂಗ್ ಜೆಟ್, ಡೈಮಂಡ್ ಟೈಪ್ ಸ್ಟೀಲ್ ಫ್ರೇಮ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ. 

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್