ಹೊಚ್ಚ ಹೊಸ ಪಲ್ಸರ್ N250 ಹಾಗೂ F250 ಬೈಕ್ ಬಿಡುಗಡೆ !

By Suvarna News  |  First Published Oct 29, 2021, 3:38 PM IST
  • ಸಂಪೂರ್ಣ ಹೊಸದಾದ ಎರಡು  ಪಲ್ಸರ್ 250 ಗಳನ್ನು ಬಿಡುಗಡೆ 
  • ಸ್ಪೋರ್ಟ್ಸ್‌ತಂತ್ರಜ್ಞಾನದ ವಿನ್ಯಾಸ, ಮೊಬೈಲ್ ಚಾರ್ಜಿಂಗ್‌ ಸೇರಿ ಹಲವು ವಿಶೇಷ
  • ಹೊಸ ತಲೆಮಾರಿನ ಸ್ಪೋಟ್ಸ್‌ಬೈಕಿಂಗ್‌ಗೆ ಹೊಸ ಭಾಷ್ಯ

ಬೆಂಗಳೂರು(ಅ.29): ಭಾರತದ ಸ್ಪೋರ್ಟ್ಸ್‌ಮೋಟರ್‌ಸೈಕಲ್ ಮಾರುಕಟ್ಟೆಯಲ್ಲಿನ ತನ್ನ 20 ವರ್ಷಗಳ ನಾಯಕತ್ವದ ಸಂಭ್ರಮಾಚರಿಸುತ್ತಿರುವ ಬಜಾಜ್ ಆಟೊ(Baja Auto), ದೇಶಿ ಮಾರುಕಟ್ಟೆಗೆ ಸಂಪೂರ್ಣ ಹೊಸದಾದ ಪಲ್ಸರ್ 250 (Pulsar 250)  ಬಿಡುಗಡೆ ಮಾಡಿದೆ.  Pulsar 250 ದೈನಂದಿನ ಪರಿಸ್ಥಿತಿಗಳಲ್ಲಿಯೂ  ಸವಾರಿ ಮಾಡಬಹುದಾದ ಸ್ಪೋರ್ಟಿ ಲಕ್(Sporty Look) ಆಗಿದೆ.  ಯುವ ಸಮುದಾಯದ ಹೊಸ ನಿರೀಕ್ಷೆಗಳನ್ನೆಲ್ಲ ಇದು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಈ ಎರಡೂ ಬಗೆಯ ಬೇಡಿಕೆಗಳನ್ನು Pulsar 250  ಸುಲಭವಾಗಿ ಪೂರೈಸಲಿದೆ.

ಬಜಾಜ್ ಡೊಮಿನಾರ್ 250 ಡ್ಯುಯಲ್ ಟೋನ್ ಎಡಿಶನ್ ಬೈಕ್ ಬಿಡುಗಡೆ!

Tap to resize

Latest Videos

ಪಲ್ಸರ್‌ N250 ಬೆಲೆ ರೂ. 1,38,000 ಮತ್ತು ಪಲ್ಸರ್‌ F250 ಬೆಲೆ ರೂ 1,40,000 (ಎಕ್ಸ್ ಷೋರೂಂ ದೆಹಲಿ), Pulsar 250 ಟೆಕ್ನೊ ಗ್ರೇ ಮತ್ತು ರೇಸಿಂಗ್ ರೆಡ್ ಸೇರಿದಂತೆ 2 ಅತ್ಯಾಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.  ಪವರ್-ಆನ್-ಟ್ಯಾಪ್(Power On tap) ಕಾರ್ಯಕ್ಷಮತೆಯೊಂದಿಗೆ ಅದರ ಬಹುಮುಖ ಸ್ವರೂಪದ ಸಮತೋಲನವನ್ನೂ ಇದು ನೀಡುತ್ತದೆ. ಈ ಕ್ವಾರ್ಟರ್ ಲೀಟರ್ ಕೊಡುಗೆಯು ಎರಡು ದಶಕಗಳ ಹಿಂದೆ ಪ್ರಾರಂಭವಾದಾಗಿನಿಂದ 125ಸಿಸಿ  ನಿಂದ 220ಸಿಸಿ ವರೆಗಿನ ಮೋಟರ್‌ಸೈಕಲ್‌ಗಳನ್ನು ಹುಟ್ಟುಹಾಕಿದ ಜನಪ್ರಿಯ ಪಲ್ಸರ್ ಮಾದರಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ.

ಎರಡು ದಶಕಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ  ಪಲ್ಸರ್, ಭಾರತದಲ್ಲಿ ಸ್ಪೋರ್ಟ್ಸ್‌ಮೋಟರ್‌ಸೈಕ್ಲಿಂಗ್(Sports Motorcycling)  ಪರಿಕಲ್ಪನೆಯನ್ನು  ಅದೇ ಮೊದಲ ಬಾರಿಗೆ ಪರಿಚಯಿಸಿತು. ಈಗ 20 ವರ್ಷಗಳ ನಂತರ, ಈ ವಿಭಾಗದಲ್ಲಿ ನಾವು ಮುಂಚೂಣಿಯಲ್ಲಿ ಇರುವುದಕ್ಕೆ ಸಾಕ್ಷಿಯಾಗುತ್ತಿದ್ದಂತೆ, ಪಲ್ಸರ್ ಬ್ಯಾಡ್ಜ್, ಸ್ಪೋರ್ಟ್ಸ್ ಬೈಕಿಂಗ್ ವಿದ್ಯಮಾನಕ್ಕೆ ಸಮಾನಾರ್ಥಕವಾಗಿದೆ. ಈಗ ಸಂಪೂರ್ಣ ಹೊಸದಾದ Pulsar 250 ಬಿಡುಗಡೆಯೊಂದಿಗೆ, ಇದು ಮತ್ತೊಮ್ಮೆ ಸ್ಪೋರ್ಟ್ಸ್‌ಬೈಕಿಂಗ್ ಲೋಕವನ್ನು ಬದಲಾಯಿಸಲು ಸಿದ್ಧವಾಗಿದೆ.

ಕೊರೋನಾದಿಂದ ಸಾವನ್ನಪ್ಪಿದರೆ ಉದ್ಯೋಗಿ ಕುಟುಂಬಕ್ಕೆ ಎರಡು ವರ್ಷದ ವೇತನ

 ಉತ್ಪನ್ನ ತಯಾರಿಕೆ ಹಿಂದಿನ ತತ್ವಶಾಸ್ತ್ರ
ಸಂಪೂರ್ಣ ಹೊಸದಾದ Pulsar 250 ಅನ್ನು ದೈನಂದಿನ ಸವಾರಿಯಲ್ಲಿ  ಶುದ್ಧ ರೋಮಾಂಚನದ ಅನುಭವ ಸೇರಿಸುವ ಏಕೈಕ ಉದ್ದೇಶದಿಂದ ಇದರ ಪರಿಕಲ್ಪನೆ ರೂಪಿಸಲಾಗಿದೆ. ಹೊಸ ಶತಮಾನದ ತಿರುವಿನಲ್ಲಿ ಸ್ಪೋರ್ಟ್ಸ್‌ಮೋಟರ್‌ಸೈಕ್ಲಿಂಗ್ ಅನ್ನು ಸ್ವೀಕರಿಸಿದ ಪೀಳಿಗೆಗೆ ಸಲ್ಲಿಸಲಾದ ಸಮ್ಮತಿ ಇದಾಗಿದೆ. ‘ರೆಡ್-ಲೈನ್' ಮತ್ತು 'ಫ್ರೀ-ರಿವೈವಿಂಗ್‌' ನಂತಹ ನುಡಿಗಟ್ಟುಗಳಿಗೆ ಹೊಸ ಅರ್ಥ ನೀಡುವ # ಪಲ್ಸರ್‌ಅಭಿಮಾನಿ ಪೀಳಿಗೆಗೆ ಈ ಬೈಕ್‌ಹೇಳಿ ಮಾಡಿಸಿದಂತಿದೆ ಇದು ರಸ್ತೆಯ ಮೇಲೆ ಸಂಚರಿಸುವಾಗ ಅಡೆತಡೆಗಳನ್ನು ಬದಿಗಿಟ್ಟು ಶುದ್ಧವಾದ ಕಾರ್ಯನಿರ್ವಹಣೆಯ ಮೇಲೆ ಅಚಲವಾದ ಗಮನ ಕೇಂದ್ರೀಕರಿಸುವ ಮನೋಭಾವಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಕ್ವಾರ್ಟರ್-ಲೀಟರ್ ಸ್ಟೀಡ್, ಮೊದಲ ನೋಟಕ್ಕೆ ಮನಸೆಳೆಯುವ ಆಕರ್ಷಕ ವಿನ್ಯಾಸ ಹೊಂದಿದೆ.  ಶಿಲ್ಪದ ಶುದ್ಧತೆಯ ವಿನ್ಯಾಸ ತತ್ವದ ಮೂಲಕ ಇದನ್ನು ಸಾಧಿಸಲಾಗಿದೆ. ಇದು ಮುಂಭಾಗದ ನೋಟದ ಜೊತೆ ಮಿಳಿತವಾಗಿರುವ ದೊಡ್ಡ ಟ್ಯಾಂಕ್‌ನಿಂದಾಗಿ ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಹೃದಯಭಾಗವಾಗಿರುವ ಸಿಂಗಲ್‌ಸಿಲಿಂಡರ್‌ಎಂಜಿನ್‌ಸರಳ ಆದರೂ ಶಕ್ತಿಯುತವಾಗಿದೆ.  ಇದು ರೇವ್ ಬ್ಯಾಂಡ್‌ನಾದ್ಯಂತ ಸ್ಥಿರವಾದ ಶಕ್ತಿ ಒದಗಿಸುತ್ತದೆ. ಇದು ಪಲ್ಸರ್‌ನ  'ಪ್ರತಿ ಸಿಸಿಗೆ ಗರಿಷ್ಠ ರೋಮಾಂಚನ‘ದ ಪ್ಯಾಕೆಜಿಂಗ್‌ಕೊಡುಗೆಗಳಿಗೆ ಅನುಗುಣವಾಗಿದೆ.

ವಿಶ್ವದಾದ್ಯಂತ ಗರಿಷ್ಠ ಬೈಕ್ ಮಾರಾಟ; ಭಾರತದ ನಂ.1 ಕಂಪನಿಯಾಗಿ ಹೊರಹೊಮ್ಮಿದ ಬಜಾಜ್!

ಸ್ವರೂಪ ಮತ್ತು ವಿನ್ಯಾಸ
Pulsar 250 ವಿನ್ಯಾಸದ ಭಾಷೆಯು ಬಲಿಷ್ಠ ಅನುಪಾತಗಳು ಮತ್ತು ಆಧುನಿಕ ಏರೊಡೈನಮಿಕ್‌ವಿನ್ಯಾಸದೊಂದಿಗೆ ತೀಕ್ಷ್ಣ ಸ್ವರೂಪದ ಹಾಗೂ ಏಕ ರೂಪದ ನಿಲುವು  ಹೊಂದಿದೆ. ಗರಿಷ್ಠ ಸಾಮರ್ಥ್ಯದ ಟ್ಯಾಂಕ್ ಅನ್ನು ಗಮನ ಸೆಳೆಯುವ ರೀತಿಯ ವಿನ್ಯಾಸದಲ್ಲಿ ರೂಪಿಸಲಾಗಿದೆ. ಇದು ಸ್ಯಾಟಿನ್ ಗ್ರೇ ಫಿನಿಷ್‌ನಲ್ಲಿ ಸ್ಪೋರ್ಟಿಯರ್, ಥ್ರೋಟಿಯರ್ ಮತ್ತು ಸ್ಟೈಲಿಷ್‌ಎಕ್ಸಾಸ್ಟ್‌ಹೊಂದಿದೆ. ಫ್ಲೋಟಿಂಗ್ ಬಾಡಿ ಪ್ಯಾನೆಲ್‌ಗಳಾದ ಬೆಲ್ಲಿ ಪ್ಯಾನ್, ಫ್ರಂಟ್ ಫೇರಿಂಗ್ ಮತ್ತು ಫ್ರಂಟ್ ಫೆಂಡರ್ ಜೊತೆಗೆ ಅಗಲವಾದ ಟೈರ್‌ಗಳು ಹೊಸ ಪಲ್ಸರ್‌ನ ಭವ್ಯ ವಿನ್ಯಾಸದ ಪರಿಕಲ್ಪನೆಯನ್ನು ಪೂರ್ಣಗೊಳಿಸುತ್ತವೆ.

ಸಂಪೂರ್ಣ ಹೊಸದಾದ ಸ್ಪೋರ್ಟ್ಸ್‌ತಂತ್ರಜ್ಞಾನ ಆಧರಿಸಿದ ವಿನ್ಯಾಸವು ಶಿಲ್ಷದ ಶುದ್ಧತೆಯ ಪ್ರತೀಕವಾಗಿದೆ.  ಹೊಸದಾಗಿ ಅಭಿವೃದ್ಧಿಪಡಿಸಿರುವ ಪ್ರೀಮಿಯಂ ಮೆಟ್ಯಾಲಿಕ್‌ಡ್ಯುಯೆಲ್‌ಕಲರ್‌ಮತ್ತು ಮೋಟರ್‌ಸೈಕಲ್‌ನ ಫ್ರೇಮ್‌ಗೆ ಅಳವಡಿಸಿರುವ ಮತ್ತು ಸವಾರನ ಸುರಕ್ಷತೆಗಾಗಿ ಇರುವ ಬೈಕ್‌ಮುಂಭಾಗದ ಕವಚ   (cowl) ಮೊದಲ ನೋಟದಲ್ಲಿಯೇ ಗಮನ ಸೆಳೆಯುವಂತಿದೆ. ಬೈಕ್‌ನ ಆಕ್ರಮಣಕಾರಿಯಾದ ಗಮನ ಸೆಳೆಯುವ ಮುಂಭಾಗದ ನೋಟವು, ಸದೃಢ ಟ್ಯಾಂಕ್‌ಹಾಗೂ ಸಮಗ್ರ ಸ್ವರೂಪದ ಕವಚವು – ಎಲ್ಲವನ್ನೂ ಒಂದೇ ನೋಟದಲ್ಲಿ ಆಕರ್ಷಿಸುವ ರೀತಿಯಲ್ಲಿ ಇದೆ.  ಮುಂಭಾಗದಿಂದ ಹಿಂಭಾಗದವರೆಗಿನ ಪ್ರತಿಯೊಂದು ನೋಟದಲ್ಲಿ ಹೊಸ Pulsar 250 ನಲ್ಲಿ ಹೊಸತನ, ತಾಜಾತನ ಅಳವಡಿಸಿರುವುದು ಗಮನ ಸೆಳೆಯುತ್ತದೆ.  ಟೋನ್-ಆನ್-ಟೋನ್ ಸೌಲಭ್ಯವು ಸವಾರಿ ಸಂದರ್ಭದಲ್ಲಿ ಹೆಚ್ಚು ಗಮನ ಸೆಳೆಯುವ ರೀತಿಯಲ್ಲಿ ಇದೆ.

ಸೈಡ್ ಕವರ್‌ಗಳಿಗೆ ಸ್ಯಾಟಿನ್ ಬ್ಲ್ಯಾಕ್ ಫಿನಿಷ್‌ಮತ್ತು ಟ್ಯಾಂಕ್‌ನ ಬದಿಯ ಒಳಭಾಗವು ಟ್ಯಾಂಕ್ ಮತ್ತು ಸೀಟ್ ಕವಚದ ಮೆಟಾಲಿಕ್ ಗ್ಲಾಸ್‌ಗೆ ವ್ಯತಿರಿಕ್ತವಾಗಿದೆ. ಎಂಜಿನ್‌ಗೆ ತಾಮ್ರದ ಹೊದಿಕೆ ಅಳವಡಿಸಿರುವುದು ವೀಕ್ಷಕರ ಗಮನ ಸೆಳೆಯಲಿದೆ. 'ಸೈಬೀರಿಯನ್ ಸಿಲ್ವರ್' ಪಿವೋಟ್ ಪ್ಲೇಟ್ ಮತ್ತು ಫ್ಲೋಟಿಂಗ್‌ಬೆಲ್ಲಿ ಪ್ಯಾನ್‌ನಿಂದ ಸುತ್ತುವರೆದಿದೆ.

ಕಾರ್ಯಕ್ಷಮತೆ
ಅತ್ಯಂತ ಶಕ್ತಿಯುತ 150-ಸಿಸಿ, ಡಿಟಿಎಸ್‌–ಐ ನೊಂದಿಗೆ ತನ್ನದೇ ಆದ ಮಾನದಂಡಗಳನ್ನು ಹಿಂದಿಕ್ಕಿರುವ NS200 ನ ನೇಕೆಡ್‌, ಅಡ್ರಿನಾಲಿನ್- ಇಂಡುಸಿಂಗ್‌ಶಕ್ತಿಯೊಂದಿಗೆ ಪಲ್ಸರ್ ಯಾವಾಗಲೂ ವೇಗವಾಡಿ ಓಡುವ ತೋಳವಾಗಿದೆ. ಈಗ ತನ್ನ ಇದುವರೆಗಿನ ಅತಿದೊಡ್ಡ ಅವತಾರದಲ್ಲಿ ಅನಾವರಣಗೊಂಡಿರುವ, Pulsar 250 ಕ್ವಾರ್ಟರ್-ಲೀಟರ್ ವಿಭಾಗದಲ್ಲಿ ಪುನಶ್ಚೇತನದ ಮತ್ತು ಅನಿಯಂತ್ರಿತ ಶಕ್ತಿ ತಂದಿದೆ. 250ಸಿಸಿ, ಭಾರತ್‌, ಡಿಟಿಎಸ್‌–ಐ ಆಯಿಲ್ ಕೂಲ್ಡ್ ಎಂಜಿನ್ ನಯಗಾರಿಕೆಯ 24.5 ಪಿಎಸ್‌, ಲಭ್ಯವಿರುವ-ಬ್ಯಾಂಡ್ ಮೂಲಕ 21.5 ಎನ್‌ಎಂ ನ ಗರಿಷ್ಠ ಟಾರ್ಕ್‌ನೊಂದಿಗೆ ಲಭ್ಯ ಇರಲಿದೆ. ಇದು ಅತ್ಯುನ್ನತ  ಪಿಕಪ್‌ಗೆ ಕಾರಣವಾಗುತ್ತದೆ. '10 ಸೆಕೆಂಡ್ ಅಡ್ರೆನಾಲಿನ್ ರಶ್' ಅನ್ನು ಹೆಚ್ಚಿಸುತ್ತದೆ. ಇದಲ್ಲದೆ, ಶಸಕ್ತ ಸ್ವರೂಪದ ಮಧ್ಯಮ ಶ್ರೇಣಿಯ ಮತ್ತು ವೇಗದ ಪಾದದ ನಿರ್ವಹಣೆಯು ಅದರ ದೈನಂದಿನ ಸವಾರಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ವೈಶಿಷ್ಟ್ಯತೆಗಳು
 * ಎಲ್‌ಇಡಿ ಪ್ರೊಜೆಕ್ಟರ್‌ಯುನಿಪಾಡ್‌ಹೆಡ್‌ಲ್ಯಾಂಪ್‌: ರಿವರ್ಸ್‌ಬೂಮ್‌ರ‍್ಯಾಂಗ್‌ಎಲ್‌ಇಡಿ ಡಿಆರ್‌ಎಲ್‌ಗಳು ಸುಧಾರಿತ ಸುರಕ್ಷತೆಗೆ ಏಕರೂಪದ ಮತ್ತು ನಿಖರ ಕಿರಣದ ಮಾದರಿ ಒದಗಿಸುವುದರ ಜೊತೆಗೆ ವರ್ಧಿತ ಬಿಳಿ ಬೆಳಕಿನ ವೀಕ್ಷಣೆಯ ಅನುಭವ ಒದಗಿಸುತ್ತವೆ.

* ಮೊನೊ-ಶಾಕ್ ಸಸ್ಪೆನ್ಷನ್: ಹೊಸ ಮೊನೊ-ಶಾಕ್ ಯುನಿಟ್‌, ಆರಾಮದ ಜೊತೆ ರಾಜಿ ಮಾಡಿಕೊಳ್ಳದೆ ಪಿನ್‌ಪಾಯಿಂಟ್‌ಹ್ಯಾಂಡ್ಲಿಂಗ್‌ಒದಗಿಸುತ್ತದೆ.
* ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌  ಹೆಚ್ಚಿನ ಪ್ರಯತ್ನವಿಲ್ಲದ ಕ್ಲಚ್ ಪುಲ್ ನೊಂದಿಗೆ ಆತ್ಮವಿಶ್ವಾಸದಿಂದ ಆಕ್ರಮಣಕಾರಿಯಾದ ಡೌನ್‌ಶಿಫ್ಟಿಂಗ್‌ಗೆ ಅವಕಾಶ ಒದಗಿಸುತ್ತದೆ.
* ಇನ್ಫಿನಿಟಿ ಡಿಸ್‌ಪ್ಲೇ ಕನ್ಸೋಲ್‌–  ಬ್ಯಾಡ್ಜ್ ಆಫ್ ಥ್ರಿಲ್'  ಉಳಿಸಿಕೊಳ್ಳಲಾಗಿದೆ.  ಟ್ಯಾಕೊಮೀಟರ್‌ ನೀಡಲ್‌ – 'ಮೋಟರ್‌ ಸೈಕ್ಲಿಂಗ್‌ನ ಕಾರ್ಯಕ್ಷಮತೆಯ ಸುವರ್ಣ ಯುಗದ ಸಮ್ಮತಿ ಸೂಚಕವಾಗಿದೆ.
* ಗೇರ್ ಪೊಸಿಷನ್ ಇಂಡಿಕೇಟರ್‌– ಪರಿಪೂರ್ಣ ಗೇರ್ ಶಿಫ್ಟ್ ಅನ್ನು ಸಾಧಿಸುವಲ್ಲಿ ವಿಶ್ವಾಸ ಮತ್ತು ನಿಖರತೆಗೆ ನೆರವಾಗಲಿದೆ
* ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ - ಸದಾ  ಪ್ರಯಾಣದಲ್ಲಿರುವ ಪಲ್ಸರ್‌ಅಭಿಮಾನಿಗಳಿಗೆ ಟ್ಯಾಂಕ್‌ಫ್ಲಾಪ್‌ನಲ್ಲಿ ಅನುಕೂಲಕರ ಸ್ಥಾನದಲ್ಲಿ ಇರಲಿದೆ.
* ಡಿಸ್ಟನ್ಸ್‌ಟು ಎಂಪ್ಟಿ ರೀಡ್‌ಔಟ್‌- ಉತ್ತಮ ಇಂಧನ ಯೋಜನೆಗಾಗಿ ಇನ್ಫಿನಿಟಿ ಕನ್ಸೋಲ್‌ನಲ್ಲಿ ಸಂಯೋಜನೆ
* ಅಶೂರ್ಡ್‌ ಬ್ರೇಕಿಂಗ್ - 300ಎಂಎಂ ಮುಂಭಾಗ ಮತ್ತು 230 ಎಂಎಂ  ಹಿಂಭಾಗ -ಡಿಸ್ಕ್ ಬ್ರೇಕ್ ಮತ್ತು ಸುಧಾರಿತ ಎಬಿಎಸ್ ತಂತ್ರಜ್ಞಾನ
* ಸ್ಟ್ರಾಂಗರ್ ಗ್ರಿಪ್ - ಯಾವುದೇ ಭೂಪ್ರದೇಶದಲ್ಲಿ ರಸ್ತೆ ಮೇಲೆ ಸುಧಾರಿತ ಹಿಡಿತಕ್ಕಾಗಿ 100/80 - 17 ಎಫ್‌ ಮತ್ತು 130/70 – 17 ಆರ್‌ ದೊಡ್ಡ ಟೈರ್‌ಗಳು

ಸರಿಯಾಗಿ ಎರಡು ದಶಕಗಳ ಹಿಂದೆ, 2001ರ ಅಕ್ಟೋಬರ್‌28ರಂದು ಬಜಾಜ್‌ ಆಟೊ, ಭಾರತದಲ್ಲಿ ಮೊದಲ ಪಲ್ಸರ್‌ ಬಿಡುಗಡೆ ಮಾಡಿತ್ತು. ಈ ಮೂಲಕ ದೇಶದಲ್ಲಿ ಮೋಟರ್‌ಸೈಕಲ್‌ನ ಪರಿಕಲ್ಪನೆಯನ್ನು ಶಾಶ್ವತವಾಗಿ ಬದಲಿಸಿತ್ತು. ಅಲ್ಲಿಂದಾಚೆಗೆ ಪಲ್ಸರ್‌ನ ವಿವಿಧ ಮಾದರಿಗಳು ದೇಶಿ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಇವು ಭಾರತ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಮಾನದಂಡ ಸೃಷ್ಟಿಸಿವೆ, 50 ದೇಶಗಳಲ್ಲಿ ಬಹು ಜನಪ್ರಿಯ ಬ್ರ್ಯಾಂಡ್‌ಗಳ ಪೈಕಿ ಪಲ್ಸರ್‌ ಕೂಡ ಗರಿಷ್ಠ ಮನ್ನಣೆಗೆ ಪಾತ್ರವಾಗಿದೆ. ಈಗ ಮತ್ತೆ ಪಲ್ಸರ್‌, ಎರಡು ಸಂಪೂರ್ಣ ಹೊಸದಾದ ಪಲ್ಸರ್‌250 ಪರಿಚಯಿಸುವುದರೊಂದಿಗೆ ಮಾನದಂಡವನ್ನು ಹೊಸ ಎತ್ತರಕ್ಕೆ ಏರಿಸಿದೆ.  ಸರ್ವಶ್ರೇಷ್ಠ ಕುಶಲತೆಯಿಂದ ವಿನ್ಯಾಸ ಮಾಡಿರುವ ಈ ಎರಡೂ ಬೈಕ್‌ಗಳು ಪಲ್ಸರ್‌ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದೆ. ಹೆಚ್ಚೆಚ್ಚು ಸವಾರರು ಪಲ್ಸರ್‌ಬ್ರ್ಯಾಂಡ್‌ನತ್ತ ಮತ್ತು ಬೈಕ್‌ಗಳ ಕ್ವಾರ್ಟರ್‌ಲಿಟರ್‌ದರ್ಜೆಯತ್ತ ಆಕರ್ಷಿತರಾಗುವಂತೆ ಮಾಡಿದೆ ಎಂದು  ಬಜಾಜ್ ಆಟೊದ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದರು.

click me!