*ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಇರುವ ಹಿಂಜರಿಕೆ ದೂರ ಮಾಡುವ ಉದ್ದೇಶ
*ಯಾತ್ರೆಗೆ ಸಚಿವ ಶ್ರೀರಾಮುಲು ಚಾಲನೆ: 54 ದಿನದಲ್ಲಿ 24 ರಾಜ್ಯಗಳ ಮೂಲಕ ಪ್ರಯಾಣ
ಬೆಂಗಳೂರು (ಜ. 7): ಕರ್ನಾಟಕ ಮೂಲಕ ಎಲೆಕ್ಟ್ರಿಕ್ ವಾಹನಗಳ (Electric vehicle) ನವೋದ್ಯಮಗಳು ಸೇರಿಕೊಂಡು 14,216 ಕಿ.ಮೀ.ಗಳ ಜಗತ್ತಿನ ಅತೀ ಸುರ್ದೀರ್ಘ ವಿದ್ಯುತ್ ಚಾಲಿತ ಬೈಕ್‌ಗಳ ಯಾತ್ರೆ ‘ಎಲೆಕ್ಟ್ರೀಕ್ ಭಾರತಮಾಲಾ’ ಆಯೋಜಿಸಿದೆ. ಈ ಯಾತ್ರೆಯ ತಯಾರಿಗೆ ಸಾರಿಗೆ ಸಚಿವ ಶ್ರೀರಾಮುಲು ತಮ್ಮ ನಿವಾಸದಲ್ಲಿ ಚಾಲನೆ ನೀಡಿದರು.ಓಕ್ರಾಸ್ ಎನರ್ಜಿಸ್, ಸ್ಪೇರಿಟ್, ಪಾಟ್ಹೋಲ್ ರಾಜ ಮತ್ತು ಚಾರ್ಜರ್ ಎಂಬ ನಾಲ್ಕು ನವೋದ್ಯಮಗಳು (Startups)ಸ್ಟಾರ್ಟ್‌ಅಪ್ ಎನ್ರೇವ್ ಎಂಬ ಕಾರ್ಯಕ್ರಮದಡಿ ಈ ಯಾತ್ರೆ ಕೈಗೊಂಡಿದೆ.
ಜಾನ್ ಕುರುವಿಲ್ಲಾ ಮತ್ತು ಗೌತಮ್ ಖೋಟ್ ಎಂಬ ಇಬ್ಬರು ರೈಡರ್‌ಗಳು ಮ್ಯಾಂಟಿಸ್ ಎಂಬ ವಿದ್ಯುತ್ ಚಾಲಿತ ಬೈಕ್‌ನಲ್ಲಿ 54 ದಿನದಲ್ಲಿ ದೇಶದ 24 ರಾಜ್ಯಗಳ ಮೂಲಕ ಪ್ರಯಾಣಿಸಲಿದ್ದಾರೆ. ಈ ಮೊದಲು 2013ರಲ್ಲಿ ಇಟಲಿಯ ನಿಕೋಲಾ ಕೊಲೊಂಬೋ ಎಂಬಾತ ತನ್ನ ವಿದ್ಯುತ್ ವಾಹನದಲ್ಲಿ ಬರೊಬ್ಬರಿ 11 ದೇಶಗಳನ್ನು ಸುತ್ತಿ 12,379 ಕಿಮೀ ಚಲಿಸಿ ನಿರ್ಮಿಸಿದ್ದ ದಾಖಲೆಯನ್ನು ಮುರಿಯುವ ಉದ್ದೇಶವನ್ನು ಈ ರೈಡರ್‌ಗಳಿಬ್ಬರು ಹೊಂದಿದ್ದಾರೆ.
undefined
ವಿದ್ಯುತ್ ವಾಹನ ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ!
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಮುಲು, ವಿದ್ಯುತ್ ಮೋಟಾರ್ ಸೈಕಲ್ ಮೇಲೆ 14 ಸಾವಿರ ಕಿಮೀಗಿಂತಲೂ ಹೆಚ್ಚು ಸಾಗುವ ಪ್ರಯತ್ನ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ವಿದ್ಯುತ್ ಚಾಲಿತ ವಾಹನಗಳ ತಯಾರಿ ಮತ್ತು ಬಳಕೆಗೆ ಪ್ರೋತ್ಸಾಹ ಸಿಗುತ್ತಿದೆ. ಸಮಗ್ರ ವಿದ್ಯುತ್ ವಾಹನ ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕ. ಇಂದು ವಿದ್ಯುತ್ ವಾಹನಗಳ ನಿರ್ಮಾಣ ಚಟುವಟಿಕೆಯ ಕೇಂದ್ರ ಬಿಂದುವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಇದನ್ನೂ ಓದಿ: TVS bike launch ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ TVS ರೇಡಿಯೋನ್ ಹೊಸ ಡ್ಯುಯೆಲ್ ಟೋನ್ ಬಣ್ಣದಲ್ಲಿ ಬಿಡುಗಡೆ!
ಮುಂದಿನ ದಿನಗಳಲ್ಲಿ ವಿದ್ಯುತ್ ವಾಹನಗಳು ಮತ್ತು ಅವುಗಳ ಬಿಡಿಭಾಗಳ ಉತ್ಪಾದನೆಯು ಭಾರತದ ಜಿಡಿಪಿಯ ಶೇ.25ಅನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ವಿದ್ಯುತ್ ವಾಹನಗಳ ಬಳಕೆಯಿಂದ ವಾಯು ಮಾಲಿನ್ಯ ಕಡಿಮೆ ಆಗಲಿದೆ. ಈ ಅಭಿಯಾನ ಯಶಸ್ಸಿಯಾಗಲಿ ಎಂದು ಶುಭ ಹಾರೈಸಿದರು.
ಸುಮಾರು 25 ಕಾಲೇಜುಗಳಿಗೆ ಭೇಟಿ
ಜಾನ್ ಕುರುವಿಲ್ಲಾ ಮಾತನಾಡಿ, ವಿದ್ಯುತ್ ವಾಹನಗಳ ಸವೀರ್ಸ್, ಚಾರ್ಚಿಂಗ್ ಮತ್ತು ಸಾಮರ್ಥ್ಯದ ಬಗ್ಗೆಗಿರುವ ಆತಂಕ ನಿವಾರಣೆ, ರಸ್ತೆಯಲ್ಲಿನ ಗುಂಡಿ ಮುಚ್ಚುವಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬಳಕೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಸುಮಾರು 25 ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶವನ್ನಿಟ್ಟುಕೊಂಡು ಈ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: EV Manufacturing Unit ದಕ್ಷಿಣ ಭಾರತದಲ್ಲಿ ಒನ್ ಮೋಟೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ಸ್ಥಾಪನೆ!
ಈ ಯಾತ್ರೆ ಫೆಬ್ರವರಿ 4ರಂದು ಬೆಂಗಳೂರಿನಿಂದ (Bengaluru) ಆರಂಭಗೊಳ್ಳಲಿದೆ. ದೇಶದ ವಿವಿಧ ಹವಾಮಾನ, ಭೂ ಸಂರಚನೆ, ವಿವಿಧ ಮಾರ್ಗಗಳಲ್ಲಿ ಸಾಗಿ ಇಲೆಕ್ಟ್ರೀಕ್ ವಾಹನಗಳ ಬಗ್ಗೆ ಇರುವ ಹಿಂಜರಿಕೆಯನ್ನು ಹೋಗಲಾಡಿಸುವ ಉದ್ದೇಶವನ್ನು ಈ ಯಾತ್ರೆ ಹೊಂದಿದೆ.