Ola Electric Scooter Update: ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ತಗುಲಿದ ಘಟನೆಯ ನಂತರ, ಈಗ ಸ್ಕೂಟರ್ನ ಆ್ಯಕ್ಸಲೇಟರ್ನಲ್ಲಿ ಗ್ಲಿಚ್ ವರದಿಯಾಗಿದೆ. ಪರಿಣಾಮವಾಗಿ, ವಾಹನ ನಿಲ್ಲಿಸಿದ ನಂತರವೂ ಅದು ರಿವರ್ಸ್ ಮೋಡ್ನಲ್ಲಿ ಚಲಿಸುತ್ತದೆ.
Ola Electric Scooter Glitches: ಭಾರತೀಯ ದ್ವಿಚಕ್ರ ವಾಹನಗಳ ವಲಯದಲ್ಲಿ ಭಾರಿ ಸದ್ದು ಮಾಡಿದ್ದ ಓಲಾ ಎಲೆಕ್ಟ್ರಿಕ್ (Ola Electric) ಈಗ ಒಂದರ ಹಿಂದೊಂದು ವಿವಾದ, ಅವಘಡಗಳಿಂದ ಸುದ್ದಿಯಾಗುತ್ತಿದೆ. ಆರಂಭದಲ್ಲಿ ಅದರ ವಿಲೇವಾರಿ ವಿಳಂಬದಿಂದ ಸಾಕಷ್ಟು ಟೀಕೆಗೊಳಗಾಗಿದ್ದ ಓಲಾ ಎಲೆಕ್ಟ್ರಿಕ್, ನಂತರ ಅದರ ಸ್ಕೂಟರ್ನಲ್ಲಿ ನೀಡಿದ ಭರವಸೆಯ ತಾಂತ್ರಿಕತೆಗಳ ಕೊರತೆಯಿಂದ ಕೂಡ ವಿವಾದಕ್ಕೆ ಸಿಲುಕಿತ್ತು.
ಈಗ ಮತ್ತೊಮ್ಮೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳು ಹಲವು ಸಮಸ್ಯೆಗಳಿಗೆ ತುತ್ತಾಗಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಬೆಂಕಿ ತಗುಲಿದ ಘಟನೆಯ ನಂತರ, ಈಗ ಸ್ಕೂಟರ್ನ ಆ್ಯಕ್ಸಲೇಟರ್ನಲ್ಲಿ ಗ್ಲಿಚ್ ವರದಿಯಾಗಿದೆ. ಪರಿಣಾಮವಾಗಿ, ವಾಹನ ನಿಲ್ಲಿಸಿದ ನಂತರವೂ ಅದು ರಿವರ್ಸ್ ಮೋಡ್ನಲ್ಲಿ ಚಲಿಸುತ್ತದೆ. ಈ ಸಮಸ್ಯೆಯ ಕುರಿತು ಗ್ರಾಹಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಆದರೆ, ವೀಡಿಯೊದ ನಿಖರ ಮೂಲ ತಿಳಿದಿಲ್ಲ. ವೀಡಿಯೊದಲ್ಲಿ, ಓಲಾ ಎಸ್1 ಪ್ರೋ (Ola S1 Pro) ಅನ್ನು ನೆಲದ ಮೇಲೆ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿದ ಸ್ಕೂಟರ್ ಚಕ್ರ ರಿವರ್ಸ್ ಮೋಡ್ನಲ್ಲಿ ಚಲಿಸುವುದುನ್ನು ಕಾಣಬಹುದು. ಜೊತೆಗೆ, ಸ್ಕೂಟರ್ನ ಟರ್ನ್ ಸಿಗ್ನಲ್ ಸಹ ನಿರಂತರವಾಗಿ ಬ್ಲಿಂಕ್ ಆಗುತ್ತಿರುವುದು ಕಂಡುಬಂದಿದೆ.
undefined
ರಿವರ್ಸ್ ಮೋಡ್ನಲ್ಲಿ ಚಕ್ರ ತಿರುಗುವಿಕೆಯ ಸಮಸ್ಯೆಯನ್ನು ವರದಿ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ, ಓಲಾ ಎಸ್1 ಪ್ರೋ (Ola S1 Pro) 102 kmph ವೇಗದಲ್ಲಿ ರಿವರ್ಸ್ ಮೋಡ್ಗೆ ಬದಲಾಯಿಸಿದಾಗ ಇದೇ ರೀತಿಯ ಸಮಸ್ಯೆ ವರದಿಯಾಗಿದೆ. ಆದರೆ, ಇದರಲ್ಲಿ ಚಾಲಕನ ತಪ್ಪು ಇತ್ತು ಕೂಡ ಇತ್ತು. ಓಲಾ ಎಸ್1 ಪ್ರೋ ರಿವರ್ಸ್ ಮೋಡ್ ವೈಶಿಷ್ಟ್ಯವನ್ನು. ಇದು ಸ್ಕೂಟರ್ ಅನ್ನು ರಿವರ್ಸ್ ಮಾಡಲು ಅಗತ್ಯವಿರುವಾಗ ಉಪಯುಕ್ತವಾಗಿದೆ ಎಂದು ಕಂಪನಿ ತಿಳಿಸಿತ್ತು. ಆದರೆ, ಸಾಫ್ಟ್ವೇರ್ ಗ್ಲಿಚ್ ಕಾರಣದಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Halo car 800 ಕಿ.ಮೀ ಮೈಲೇಜ್, ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ತಯಾರಿ
ಓಲಾ ಸ್ಕೂಟರ್, ಸ್ಕೂಟರ್ನ ವಿವಿಧ ಕಾರ್ಯಗಳನ್ನು ನಿಯಂತ್ರಿಸುವ ಸಾಫ್ಟ್ವೇರ್ನೊಂದಿಗೆ ಬರುತ್ತದೆ. ಇದರೊಂದಿಗೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಈ ಸಾಫ್ಟ್ವೇರ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಸ್ವಯಂಚಾಲಿತ ರಿವರ್ಸ್ ಮೋಡ್ ಕೂಡ ಇದೇ ಸಾಫ್ಟ್ವೇರ್ ಸಮಸ್ಯೆ ಎಂದು ಹೇಳಲಾಗುತ್ತಿದೆ. ಓಲಾ ಎಸ್1 ಪ್ರೋ ದರ 1.29 ಲಕ್ಷ ರೂ.ಗಳಾಗಿದ್ದು, 3.97 kWh ಬ್ಯಾಟರಿ ಹಾಗೂ 181 ಕಿಮೀ ಗರಿಷ್ಠ ವ್ಯಾಪ್ತಿಯೊಂದಿಗೆ ಬರುತ್ತದೆ ಮತ್ತು ಸ್ಕೂಟರ್ನೊಂದಿಗೆ ಬರುವ ಪೋರ್ಟಬಲ್ 750W ಚಾರ್ಜರ್ ಅನ್ನು ಬಳಸಿಕೊಂಡು 6 ಗಂಟೆ 30 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ.
ಇತ್ತೀಚೆಗೆ ಪುಣೆ-ನೋಂದಾಯಿತ ವ್ಯಕ್ತಿಯೋರ್ವರ ಓಲಾ ಎಸ್1 ಪ್ರೋಗೆ ಬೆಂಕಿ ಹತ್ತಿರುವ ವಿಡಿಯೋ ವೈರಲ್ ಆಗಿದೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಬದಿ ನಿಲ್ಲಿಸಿದ್ದ ನೀಲಿ ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ. ಬಾಡಿವರ್ಕ್ನ ಅಡಿಯಲ್ಲಿ ಹೊಗೆ ಹೊರಸೂಸುವಿಕೆ ಕಂಡುಬಂದಿತ್ತು. ನಂತರ ಸ್ಕೂಟರ್, ಜ್ವಾಲೆಗೆ ಸ್ಫೋಟಿಸಿ ಶೀಘ್ರದಲ್ಲೇ ಇಡೀ ವಾಹನವನ್ನು ಆವರಿಸಿತು.
ಇದನ್ನೂ ಓದಿ: Hero Destini 125 XTEC ಹೊಚ್ಚ ಹೊಸ ಹೀರೋ ಡೆಸ್ಟಿನಿ 125 XTEC ಸ್ಕೂಟರ್ ಬಿಡುಗಡೆ!
ಈ ಕುರಿತು ಹೇಳಿಕೆ ನೀಡಿರುವ ಓಲಾ, “ಘಟನೆಯ ಮೂಲ ಕಾರಣ ಅರ್ಥಮಾಡಿಕೊಳ್ಳಲು ತನಿಖೆ ನಡೆಸುತ್ತಿದ್ದೇವೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ. ಓಲಾದಲ್ಲಿ ವಾಹನ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ ಮತ್ತು ನಮ್ಮ ಉತ್ಪನ್ನಗಳಲ್ಲಿ ಉತ್ತಮ ಗುಣಮಟ್ಟದ ಗುಣಮಟ್ಟಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸ್ಪಷ್ಟನೆ ನೀಡಿತ್ತು