ಹೊಸ ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, ಬೆಲೆ ಕೇವಲ 1,09,999 ರೂಪಾಯಿ!

By Suvarna News  |  First Published Apr 6, 2024, 6:56 PM IST

ಹೊಚ್ಚ ಹೊಸ ಏಥರ್ ರಿಝ್ತಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಸ್ಕಿಡ್ ತಡೆಯುವ ಫೀಚರ್, ಗರಿಷ್ಠ ಸುರಕ್ಷತೆ, 160 ಕಿ.ಮೀ ಮೈಲೇಜ್, ಆಕರ್ಷಕ ಬಣ್ಣ ಸೇರಿದಂತೆ ಹಲವು ವಿಶೇಷತೆಗಳ ಫ್ಯಾಮಿಲಿ ಬೈಕ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಕೇವಲ 999 ರೂಪಾಯಿಗೆ ಈ ಬೈಕ್ ಬುಕ್ ಮಾಡಬಹುದು. ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 


ಬೆಂಗಳೂರು(ಏ.06) : ಭಾರತದ ಭಾರಿ ಬೇಡಿಕೆಯ ಏಥರ್ ಎನರ್ಜಿ ಇದೀಗ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಏಥರ್ ರಿಝ್ತಾ ಇವಿ ಸ್ಕೂಟರ್ ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದೆ. ಟಿಪಿಕಲ್ ಏಥರ್ ಸ್ಕೂಟರ್ ವಿನ್ಯಾಸಕ್ಕಿಂತ ಭಿನ್ನವಾಗಿ ಈ ಸ್ಕೂಟರ್ ಡಿಸೈನ್ ಮಾಡಲಾಗಿದೆ. ಹೆಚ್ಚು ಸ್ಟೋರೇಜ್, ಅತ್ಯಾಧುನಿಕ ತಂತ್ರಜ್ಞಾನ, ಸ್ಕಿಡ್ ಕಂಟ್ರೋಲ್, ವ್ಯಾಟ್ಸ್ಆ್ಯಪ್ ಸ್ಕೂಟರ್ ಡ್ಯಾಶ್‌‌ಬೋರ್ಡ್‌ನಲ್ಲಿ ಲಭ್ಯವಾಗುವಂತೆ ಹಲವು ಫೀಚರ್ಸ್ ಒಳಗೊಂಡ ಸ್ಕೂಟರ್ ಬಿಡುಗಡೆಯಾಗಿದೆ. ನೂತನ ರಿಝ್ತಾ ಸ್ಕೂಟರ್ ಆರಂಭಿಕ ಬೆಲೆ 1,09,999 (ಎಕ್ಸ್ ಶೋ ರೂಂ)
 
ಹೊಚ್ಚಹೊಸ ರಿಜ್ಟಾ- ರಿಜ್ಟಾ S ಮತ್ತು ರಿಜ್ಟಾ Z  2.9 KWH ಬ್ಯಾಟರಿಯಲ್ಲಿ ಮತ್ತು ಟಾಪ್-ಎಂಡ್ ಮಾಡೆಲ್ ರಿಜ್ಟಾ Z 3.7 KWH 2 ಮಾದರಿಯಲ್ಲಿ ಲಭ್ಯವಿದೆ.  2.9 ಕೆಡಬ್ಲ್ಯೂಎಚ್ ವೇರಿಯೆಂಟ್ ಗಳು ಊಹಿಸಬಲ್ಲ ಐಡಿಸಿ ಶ್ರೇಣಿ 123 ಕಿಮಿ ಮೈಲೇಜ್ ರೇಂಜ್, 3.7 KWH ವೇರಿಯೆಂಟ್ 160 ಕಿಮಿ ಮೈಲೇಜ್ ರೇಂಜ್ ನೀಡಲಿದೆ. ಏಥರ್ ರಿಜ್ಟಾ  S 3 ಮಾನೊಟೋನ್ ಬಣ್ಣಗಳಲ್ಲಿ ಒದಗಿಸಿದರೆ ರಿಜ್ಟಾ Z 7 ಬಣ್ಣಗಳಲ್ಲಿ ಲಭ್ಯವಿದ್ದು ಅದರಲ್ಲಿ 3 ಮಾನೊಟೋನ್ ಮತ್ತು 4 ಡ್ಯುಯಲ್ ಟೋನ್ ಬಣ್ಣಗಳಿವೆ. 

10 ರೂ ನಾಣ್ಯ ಕೂಡಿಟ್ಟು 1.10 ಲಕ್ಷ ಬೆಲೆಯ ಎದರ್ ಸ್ಕೂಟರ್ ಖರೀದಿ,ಸಂತಸ ವ್ಯಕ್ತಪಡಿಸಿದ ಸಿಇಒ!

Latest Videos

undefined

ಏಥರ್ ರಿಜ್ಟಾ ತನ್ನ ಬಳಕೆದಾರರಿಗೆ ಸೌಖ್ಯ ಮತ್ತು ಅನುಕೂಲತೆಯ ಗುರಿ ಹೊಂದಿದ್ದು ಈ ವರ್ಗದಲ್ಲಿ ತನ್ನ ಬಳಕೆದಾರರಿಗೆ ಅತ್ಯಂತ ದೊಡ್ಡ ಸೀಟು ಹಾಗೂ ಫ್ಲೋರ್ ಬೋರ್ಡ್ ಹೊಂದಿದೆ. ಅಲ್ಲದೆ ರಿಜ್ಟಾ ಝಡ್ ಪಿಲಿಯನ್ ನಲ್ಲಿ ಲುಂಬಾರ್ ಸಪೋರ್ಟ್ ಹೊಂದಿದ್ದು ಹೆಚ್ಚಿಸಲಾದ ಸೌಖ್ಯ ನೀಡುತ್ತದೆ. 34 ಎಲ್ ಸೀಟಿನಡಿ ಸಾಮರ್ಥ್ಯ ಹೊಂದಿದ್ದು ಮತ್ತು ಐಚ್ಛಿಕ 22ಲೀ ಫ್ರಂಕ್ ಪರಿಕರಗಳನ್ನು ಒಳಗೊಂಡಂತೆ 56ಲೀ ಸಂಗ್ರಹ ಸ್ಥಳದೊಂದಿಗೆ ರಿಜ್ಟಾ ಸ್ಕೂಟರ್ ಮಾರುಕಟ್ಟೆಯಲ್ಲಿ ದೊಡ್ಡ ಶೇಖರಣಾ ಸ್ಥಳವನ್ನು ನೀಡುತ್ತದೆ.

ಇದು ದಿನನಿತ್ಯದ ಅಗತ್ಯ ವಸ್ತುಗಳನ್ನು ಸಾಗಿಸಲು ಸುಲಭವಾಗುತ್ತದೆ. ಸೀಟಿನಡಿಯ ಸಂಗ್ರಹವನ್ನು 18 ಡಬ್ಲ್ಯೂ ಪವರ್ ಔಟ್ ಪುಟ್ಮೂಲಕ ಐಚ್ಛಿಕ ಬಹುಪಯೋಗಿ ಚಾರ್ಜರ್ನೊಂದಿಗೆ ಜೋಡಿಸಬಹುದು. ಇದು ಫೋನ್ಗಳು, ಟ್ಯಾಬ್ಲೆಟ್ಗಳು, ಪೋರ್ಟಬಲ್ ಸ್ಪೀಕರ್ಗಳು ಮತ್ತು ಇತರ ಅಂತಹುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು. 

ಸುರಕ್ಷತೆ ಮತ್ತು ರೈಡ್ ನಿರ್ವಹಣೆ
ಹಲವು ವರ್ಷಗಳಿಂದ ಏಥರ್ ಹಲವು ವಿಶೇಷತೆಗಳನ್ನು ಬಿಡುಗಡೆ ಮಾಡುವ ಮೂಲಕ ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತಾ ಗುಣಮಟ್ಟವನ್ನು ಸುಧಾರಿಸಲು ಬದ್ಧವಾಗಿದೆ. ರಿಜ್ಟಾ ಜೊತೆಗೆ, ಏಥರ್ ಸ್ಕಿಡ್ ಕಂಟ್ರೋಲ್™ ಅನ್ನು ಪರಿಚಯಿಸಿದೆ. ಇದು ಏಥರ್ನ ಪ್ರೊಪ್ರೈಟರಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಆಗಿದ್ದು ಜಲ್ಲಿ, ಮರಳು, ನೀರು ಅಥವಾ ತೈಲ ಬಿದ್ದ ರಸ್ತೆಯ ತೇಪೆಗಳಲ್ಲಿ ಕಡಿಮೆ ಘರ್ಷಣೆಗೆ ವೇಗ ನೀಡಿ ಎಳೆತದ ನಷ್ಟವನ್ನು ತಪ್ಪಿಸಲು ಮೋಟಾರ್ ಟಾರ್ಕ್ ಅನ್ನು ತಡೆರಹಿತವಾಗಿ ನಿಯಂತ್ರಿಸುತ್ತದೆ. 

ಇದನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಮೋಟಾರು ನಿಯಂತ್ರಣ ವ್ಯವಸ್ಥೆ, ಏಥರ್ ಡ್ರೈವ್ ಕಂಟ್ರೋಲರ್™ (ADC™) ಮೂಲಕ ಸಕ್ರಿಯಗೊಳಿಸಲಾಗಿದೆ). 
ಹೆಚ್ಚುವರಿ ಸುರಕ್ಷತೆಯ ವಿಶೇಷತೆಗಳಾದ ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್(ಇ.ಎಸ್.ಎಸ್), ಥೆಫ್ಟ್ ಅಂಡ್ ಟೌ ಡಿಟೆಕ್ಟ್ ಮತ್ತು ಫೈಂಡ್ ಮೈ ಸ್ಕೂಟರ್ ಗಳನ್ನು ಏಥರ್ ನ 450 ಸರಣಿಯ ಸ್ಕೂಟರ್ ಗಳಲ್ಲಿ ಕಾಣಬಹುದಾಗಿದ್ದು ಅವುಗಳನ್ನೂ ಏಥರ್ ರಿಜ್ಟಾದಲ್ಲಿ ಅಳವಡಿಸಲಾಗಿದೆ. 
ಎಲ್ಲ ಮೂರು ವೇರಿಯೆಂಟ್ ಗಳು 80 ಕೆಎಂಪಿಎಚ್ ಟಾಪ್ ಸ್ಪೀಡ್ ನೊಂದಿಗೆ ಮತ್ತು ಝಿಪ್ ಮತ್ತು ಸ್ಮಾರ್ಟ್ ಇಕೊ ಎರಡು ರೈಡಿಂಗ್ ಮೋಡ್ ಗಳಲ್ಲಿ ಬರುತ್ತವೆ. ಅಲ್ಲದೆ ರೈಡ್ ಅಸಿಸ್ಟ್ ವಿಶೇಷತೆಗಳಲ್ಲಿ ಮ್ಯಾಜಿಕ್ ಟ್ವಿಸ್ಟ್, ಆಟೊಹೋಲ್ಡ್ ಮತ್ತು ರಿವರ್ಸ್ ಮೋಡ್ ಗಳಿದ್ದು ಅವುಗಳನ್ನು 450 ಸೀರೀಸ್ ನಲ್ಲಿ ಅಳವಡಿಸಲಾಗಿದ್ದು ಅವು ರಿಜ್ಟಾಗಳಲ್ಲೂ ಅಳವಡಿಸಲಾಗಿದೆ. 

ರಿಜ್ಟಾ 450 ಸೀರೀಸ್ ಹೊಂದಿರುವ ಅದೇ ತತ್ವವನ್ನು ಹೊಂದಿದ್ದು ಅದರ ಕಡಿಮೆ ಗುರುತ್ವಾಕರ್ಷಣೆ, ಮುಂಬದಿಯಿಂದ ಹಿಂಬದಿಗೆ ಸಮತೋಲನದ ತೂಕ ವಿತರಣೆ ಮತ್ತು ಎರಡೂ ಬದಿಗಳಲ್ಲಿ ಸಮಾನ ಸಮತೋಲನದಿಂದ ರೈಡರ್ ಕೌಶಲ್ಯಗಳ ಮಟ್ಟ ಹೇಗೇ ಇರಲಿ ಅಥವಾ ರೈಡಿಂಗ್ ಸನ್ನಿವೇಶಗಳು ಹೇಗೆಯೇ ಇರಲಿ ನಿಖರ ನಿಯಂತ್ರಣ ನೀಡುತ್ತದೆ. ರಿಜ್ಟಾ ತನ್ನ ಕಿರಿದಾದ 1286ಎಂಎಂ ವ್ಹೀಲ್ ಬೇಸ್ ಮೂಲಕ ತಿರುಗಿಸುವುದು ಸುಲಭವಾಗಿದೆ. 

ಹಳೆಯ ಸ್ಕೂಟರ್‌ ಹೊಂದಿದವರು ಏಥರ್‌ 450 ಎಕ್ಸ್‌ ಸ್ಕೂಟರ್‌ಗೆ ಹೀಗೆ ಅಪ್‌ಗ್ರೇಡ್‌ ಮಾಡಿಕೊಳ್ಳಿ..!

ನಾವು ನಮ್ಮ ಕಾರ್ಯಕ್ಷಮತೆಯ ಸ್ಕೂಟರ್ 450 ಸರಣಿಯೊಂದಿಗೆ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆವು, ಅದನ್ನು ಉದ್ಯಮದಲ್ಲಿ ಗುರುತಿಸಲಾಗಿದೆ. ಈಗ, ನಾವು ಭಾರತೀಯ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ ಮತ್ತು ರೂಪಿಸಿದ ರಿಜ್ಟಾದೊಂದಿಗೆ ಕುಟುಂಬ ವಿಭಾಗಕ್ಕೆ ಕಾಲಿಡುತ್ತಿದ್ದೇವೆ ಎಂದು ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ  ಹೇಳಿದ್ಾರೆ. ಇದು ಸೌಕರ್ಯ, ಸುರಕ್ಷತೆ ಮತ್ತು ಸಂಪರ್ಕಿತ ತಂತ್ರಜ್ಞಾನದಂತಹ ಪ್ರಮುಖ ಅಂಶಗಳ ಮೇಲೆ  ಗಮನ ಹರಿಸಿದ್ದು ಇದು ಮಾರುಕಟ್ಟೆಯಲ್ಲಿನ ಸಾಂಪ್ರದಾಯಿಕ ಸ್ಕೂಟರ್ ಗಳಿಂದ ಅಪ್ಗ್ರೇಡ್ ಮಾಡುತ್ತದೆ ಎಂದು ನಾವು ನಂಬುತ್ತೇವೆ. ರಿಜ್ಟಾ ಏಥರ್ನ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಪ್ರತಿಪಾದನೆಯನ್ನು ಪ್ರತಿಬಿಂಬಿಸುತ್ತದೆ ಎಂದರು. 
 

click me!