ಜಿಲ್ಲೆಯಲ್ಲಿ ಮಳೆ ಪ್ರಮಾಣ ಅತಿ ಕಡಿಮೆ| ಅತಿ ಕಡಿಮೆ ಪ್ರಮಾಣದಲ್ಲಿ ಬೆಳೆದ ಹೆಸರು, ಉದ್ದು ಮತ್ತು ಸೋಯಾ ಬೆಳೆ| ರೈತರಿಗೆ ಮೌಲ್ಯ ಬೆಲೆ ದೊರಕುತ್ತಿಲ್ಲ| ತಕ್ಷಣ ಸರ್ಕಾರದಿಂದ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ|
ಬೀದರ್[ಅ.21]: ಜಿಲ್ಲೆಯಲ್ಲಿ ಶಾಶ್ವತವಾಗಿ ಉದ್ದು, ಹೆಸರು ಮತ್ತು ಸೋಯಾ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಕಲ್ಯಾಣ ಕರ್ನಾಟಕ ರೈತಪರ ಸಂಘ ಆಗ್ರಹಿಸಿದೆ.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ನಾಗಶೆಟ್ಟೆ ಪ್ಪಲಂಜವಾಡೆ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಕಳೆದ ಮೂರು ವರ್ಷಗಳಿಂದ ಬೀದರ್ ಜಿಲ್ಲೆಯಲ್ಲಿ ಮಳೆ ಪ್ರಮಾಣ ಅತಿ ಕಡಿಮೆಯಾಗಿದ್ದರಿಂದ ರೈತರು ಅಲ್ಪ ಸ್ವಲ್ಪ ಮಳೆಯ ಆಶ್ರಯದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಹೆಸರು, ಉದ್ದು ಮತ್ತುಸೋಯಾ ಬೆಳೆಗಳನ್ನು ಬೆಳೆದಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ ಮುಕ್ತ ಮಾರುಕಟ್ಟೆಯ ದರ ಸುಗ್ಗಿಯ ಕಾಲದಲ್ಲಿ ಧೀಡೀರನೆ ಕುಸಿದಿದೆ. ರೈತರಿಗೆ ಮೌಲ್ಯ ಬೆಲೆ ದೊರಕುತ್ತಿಲ್ಲ. ಆದ್ದರಿಂದ ತಕ್ಷಣವೇ ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಕಳೆದ ವರ್ಷ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯ ಹಣವನ್ನು ಸಕಾಲಕ್ಕೆ ದೊರೆತಿಲ್ಲ.
ಪ್ರಸ್ತುತ ಬೀದರ್ ಜಿಲ್ಲೆಯ ನದಿಗಳಲ್ಲಿರುವ ಅಲ್ಪ-ಸ್ವಲ್ಪ ನೀರು ಸಂಗ್ರಹವಾಗುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರವು ಕಾನೂನಿನ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳು ಸಹಕಾರಿ ಹಾಗೂ ಖಾಸಗಿ ಕಾರ್ಖಾನೆಗಳಿಗೆ 15 ದಿವಸಗಳ ನೋಟಿಸ್ ಜಾರಿಮಾಡಿ ಹಣ ಬಿಡುಗಡೆ ಮಾಡದೇ ಇದ್ದಲ್ಲಿ ಎಫ್‌ಐಆರ್ ದಾಖಲಿಸಬೇಕು.
15 ದಿನದಲ್ಲಿ ಖರೀಫ್ ಬೆಳೆಗಳ ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸದೇ ಇರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಯೊಗ್ಯ ಬೆಲೆ ದೊರಕುತ್ತಿಲ್ಲ. ಪ್ರತಿ ರೈತರಿಂದ ಕನಿಷ್ಠ 8 ಕ್ವಿಂಟಲ್ ಆದರೂ ಖರೀದಿ ರೈತರನ್ನು ನಷ್ಟದಿಂದ ಪಾರುಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು. 2019-20 ನೇ ಸಾಲಿನ ಸಕ್ಕರೆ ಕಾರ್ಖಾನೆಗಳನ್ನುಸರಿಯಾದ ಸಮಯಕ್ಕೆ ಪ್ರಾರಂಭಿಸಬೇಕು. ಹಿಂದಿನ ಸರ್ಕಾರವು ರೈತರ ಸಾಲ ಮನ್ನಾ ಮಾಡಿದ್ದು, ಈ ಯೋಜನೆಯು ಎಲ್ಲಾ ರೈತರಿಗೆಸಮರ್ಪಕವಾಗಿ ತಲುಪಿರುವುದಿಲ್ಲ. ಎಲ್ಲಾ ರೈತರಿಗೆ ತಲುಪುವ ವ್ಯವಸ್ಥೆ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ವೇಳೆ ವಿಠಲಜಾಲೆ, ಎಸ್‌ಐ ಬಿರಾದಾರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ರೈತರು.