ಬೀದರ್‌ನಲ್ಲಿ ಹತ್ತಿ ಗೋದಾಮಿಗೆ ಬೆಂಕಿ: ಲಕ್ಷಾಂತರ ರು ಹಾನಿ

By Web DeskFirst Published Oct 18, 2019, 12:43 PM IST
Highlights

ಸಿಂಗಾರ ಬಾಗ್‌ನಲ್ಲಿರುವ ಹತ್ತಿ ಗೋದಾಮಿಗೆ ತಗುಲಿದ ಬೆಂಕಿ| ಸುಮಾರು 12 ಲಕ್ಷ ರು.ಗಳಿಗೂ ಹೆಚ್ಚು ಹತ್ತಿ, ಮತ್ತಿತರ ಸಾಮಗ್ರಿಗಳು ಹಾನಿ| ಹಳೆ ತರಕಾರಿ ಮಾರುಕಟ್ಟೆಯಲ್ಲಿರುವ ಅಬ್ದುಲ್‌ ಸಮದ್‌ ಗಾದಿ ಅಂಗಡಿಯವರಿಗೆ ಸೇರಿದ ಗೋದಾಮಿನಲ್ಲಿ ಲಕ್ಷಾಂತರ ರು. ಹತ್ತಿ ಸಂಗ್ರಹಿಸಲಾಗಿತ್ತು| ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಬೆಂಕಿ ತಗುಲಿ ಗಾದಿ ಮಾಡಲು ಸಂಗ್ರಹಿಸಲಾಗಿದ್ದ ಸಂಪೂರ್ಣ ಹತ್ತಿ ಸುಟ್ಟು ಕರಕಲಾಗಿದೆ|  

ಬೀದರ್‌(ಅ.18): ನಗರದ ಸಿಂಗಾರ ಬಾಗ್‌ನಲ್ಲಿರುವ (ಹಳೆ ತರಕಾರಿ ಮಾರುಕಟ್ಟೆ) ಹತ್ತಿ ಗೋದಾಮಿಗೆ ಬೆಂಕಿ ತಗುಲಿ ಸುಮಾರು 12 ಲಕ್ಷ ರು.ಗಳಿಗೂ ಹೆಚ್ಚು ಹತ್ತಿ, ಮತ್ತಿತರ ಸಾಮಗ್ರಿಗಳು ಹಾನಿಯಾದ ಘಟನೆ ನಡೆದಿದೆ. 

ಹಳೆ ತರಕಾರಿ ಮಾರುಕಟ್ಟೆಯಲ್ಲಿರುವ ಅಬ್ದುಲ್‌ ಸಮದ್‌ ಗಾದಿ ಅಂಗಡಿಯವರಿಗೆ ಸೇರಿದ ಗೋದಾಮಿನಲ್ಲಿ ಲಕ್ಷಾಂತರ ರು. ಹತ್ತಿ ಸಂಗ್ರಹಿಸಲಾಗಿತ್ತು. ಗುರುವಾರ ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಬೆಂಕಿ ತಗುಲಿ ಗಾದಿ ಮಾಡಲು ಸಂಗ್ರಹಿಸಲಾಗಿದ್ದ ಸಂಪೂರ್ಣ ಹತ್ತಿ ಸುಟ್ಟು ಕರಕಲಾಗಿದೆ. ಗೋದಾಮಿನ ಅಕ್ಕ-ಪಕ್ಕದಲ್ಲಿ ವಾಸವಿರುವ ಜನರು ಬೆಂಕಿ ಹತ್ತಿದ ಮಾಹಿತಿಯನ್ನು ಅಂಗಡಿ ಮಾಲೀಕರಿಗೆ ಹಾಗೂ ಅಗ್ನಿ ಶಾಮಕ ಠಾಣೆಗೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು 2 ಅಗ್ನಿ ಶಾಮಕ ವಾಹನಗಳೊಂದಿಗೆ ಆಗಮಿಸಿ ಸತತ 3 ಗಂಟೆಯವರೆಗೆ ಬೆಂಕಿ ನಂದಿಸುವಲ್ಲಿ ತೊಡಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅಗ್ನಿ ಶಾಮಕ ಠಾಣೆಯಲ್ಲಿ ಸುಮಾರು 12 ಲಕ್ಷ ರು.ಗಳಿಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂಗಡಿ ಮಾಲೀಕ ಅಬ್ದುಲ್‌ ಸಮದ್‌ ದೂರು ನೀಡಿದ್ದಾರೆ.
 

click me!