Bidar ಬೀದಿ ನಾಯಿಗಳಂತೆ ಕಿತ್ತಾಡಿಕೊಂಡ ಪಾಟೀಲ್ ಕುಟುಂಬ!

By Suvarna News  |  First Published Apr 13, 2022, 4:51 PM IST
  • ರಾಮ ನವಮಿ ಮೆರವಣಿಗೆಯಲ್ಲಿ ಪಾಟೀಲ್ ಕುಟುಂಬಗಳ ಕಿತ್ತಾಟ
  • ಬಾಯಿಗೆ ಬಂದ ಹಾಗೆ ಅವಾಚ್ಯವಾಗಿ ಬೈದುಕೊಂಡ ಪಾಟೀಲ್ ಸಹೋದರರು
  • ಶಾಸಕ ರಾಜಶೇಖರ ಪಾಟೀಲ್ ಸಹೋದರ ಸಂಬಂಧಿ ಸಿದ್ದ ಪಾಟೀಲ್ ಗುಂಪಿನ ಮಧ್ಯೆ ಮಾತಿನ ಚಕಮಕಿ 

ವರದಿ: ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್  

ಬೀದರ್ (ಏ.13): ಬೀದರ್ (Bidar) ಜಿಲ್ಲೆಯ ಹುಮನಾಬಾದ್ (Humnabad) ಪಟ್ಟಣದಲ್ಲಿ ನಡೆದ ರಾಮನವಮಿ ( Ramanavami) ಮೆರವಣಿಗೆ ವೇಳೆ ಶಾಸಕ ರಾಜಶೇಖರ ಪಾಟೀಲ್ (Rajashekhar B Patil) ಸಹೋದರ ಸಂಬಂಧಿ ಸಿದ್ದ ಪಾಟೀಲ್ ಗುಂಪಿನ ಮಧ್ಯ ಮಾತಿನ ಚಕಮಕಿ ನಡೆದು ಪರಸ್ಪರ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ಬೈದುಕೊಂಡ ಘಟನೆ ನಡೆದಿದೆ.

Tap to resize

Latest Videos

ಏ.12 ರಂದು ನಗರದಲ್ಲಿ ರಾಮ ನವಮಿ ಉತ್ಸವ ಸಮಿತಿಯಿಂದ ರಾಮನ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಹುಮನಾಬಾದ್, ಶಾಸಕ ರಾಜಶೇಖರ ಪಾಟೀಲ್ ಸಹೋದರ ಎಮ್ಎಲ್ಸಿ ಭೀಮರಾವ್ ಪಾಟೀಲ್ (bhimrao patil) ದರ್ಶ‌ನ ಪಡೆಯಲು ಆಗಮಿಸುತ್ತಾರೆ ಈ ವೇಳೆ ಮೆರವಣಿಗೆಯ ರಥದ ಮೇಲೆ ರಾಜಶೇಖರ ಪಾಟೀಲ್ ಮತ್ತು ಸಹೋದರ ಭೀಮರಾವ್ ಪಾಟೀಲ್ ಸೇರಿದಂತೆ ಅವರ ಜತೆಯಲ್ಲಿ ಬಂದವರಿಗೆ ಪೇಟ ಧರಿಸಲಾಗುತ್ತದೆ. ಈ ವೇಳೆ ಮುಂಚೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡ ಸಿದ್ದು ಪಾಟೀಲ್ ಅವರನ್ನ ಕೇಳಗೆ ಸೈಡಲ್ಲಿ ಕರೆದುಕೊಂಡು ಬಂದು ಪೇಟೆ ಧರಿಸಿಕೊಳ್ಳಲು ಹೇಳಿ ಇನ್ನು ದರ್ಶನ ಪಡೆಯೋರು ಬಹಳಷ್ಟು ಜನ ಎಂದು ಪೊಲೀಸರ ಮೂಲಕ ಹೇಳುತ್ತಾರೆ.

VIJAYAPURA ಶಿಕ್ಷಕಿ ಬೀಳ್ಕೋಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು!

ಈ ವಿಚಾರ ತಿಳಿಯುತ್ತಿದ್ದ ರಾಜಶೇಖರ ಪಾಟೀಲ್, ಸಿದ್ದು ಪಾಟೀಲ್ ಗುಂಪಿನ ನಡುವೆ ಮಾತಿನ ಚಕಮಕಿ ಶುರುವಾಗುತ್ತದೆ,. ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳು ತಾಯಿ- ತಂದೆ ಹೀಗೆ ಯಾರಿಗೂ ಬಿಡದೇ ಒಬ್ಬರ ಮೇಲೆ ಒಬ್ಬರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ,. ಒಂದು ಕಡೆ ರಾಜಶೇಖರ ಪಾಟೀಲ್, ಎಮ್ಎಲ್ಸಿ ಭೀಮರಾವ್ ಪಾಟೀಲ್ ರಿಂದ ಸಿದ್ದು ಪಾಟೀಲ್ಗೆ ನಿಂದನೆ, ಮತ್ತೊಂದು ಕಡೆಯಿಂದ ಸಿದ್ದು ಪಾಟೀಲ್ ರಿಂದ ರಾಜಶೇಖರ ಪಾಟೀಲ್ ಗೆ ನಿಂದನೆ,. ಈ ವೇಳೆ ಎರಡು ಕಡೆಯ ಗುಂಪುಗಳ ಮಧ್ಯ ಘೋಷಣೆ ಪ್ರಾರಂಭವಾಗುತ್ತದೆ.

ಮಧ್ಯ  ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಮಾಡಬೇಕಾಗುತ್ತದೆ. ಬಳಿಕ ಹುಮನಾಬಾದ್ ಪಟ್ಟಣದಲ್ಲಿ ರಾತ್ರಿಯಿಡಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.‌ ಒಂದು ವರ್ಷದ ಹಿಂದೆ ರಾಜಶೇಖರ ಪಾಟೀಲ್ ಅವರ ಬಲಗೈ ಬಂಟನಂತಿದ್ದ ಸಹೋದರ ಸಂಬಂಧಿ ಸಿದ್ದು ಪಾಟೀಲ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಂದಿನಿಂದ ಹುಮನಾಬಾದ್ ಪಾಟೀಲ್ ಕುಟುಂಬ ಒಡೆದು ಎರಡು ಹೋಳಾಗಿವೆ, ಹುಮನಾಬಾದ್ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಕೂಡ ಮಾಡಲಿದ್ದಾರೆ ಎಂದು ಈಗಾಗಲೇ ಸುದ್ದಿ ಹರಿದಾಡುತ್ತಿದ್ದು. ಆಗಿನಿಂದ ಹಲವು ಬಾರಿ ಎರಡು ಕುಟುಂಬಗಳ ಮಧ್ಯ ಈ ರೀತಿ ಕಿತ್ತಾಟ ನಡೆದಿದೆ.

LINKEDIN RESEARCH 2022ರಲ್ಲಿ ಉದ್ಯೋಗ ಬಿಡಲು ಶೇ.70ರಷ್ಟು ಮಹಿಳೆಯರು ಮುಂದು!

ಆದರೆ ಈ ಬಾರಿ ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ಬೈಕೊಂಡಿದ್ದು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ಜವಬ್ದಾರಿ ಸ್ಥಾನದಲ್ಲಿ ಇದ್ದುಕೊಂಡು ಶಾಸಕ ರಾಜಶೇಖರ ಪಾಟೀಲ್ ಮತ್ತು ಭೀಮರಾವ್ ಪಾಟೀಲ್ ಬಳಸಿದ್ದ ಶಬ್ದಗಳು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುವಂತಾಗಿದೆ.


 

click me!