ನಗರದಲ್ಲಿ ದಟ್ಟ ಮಂಜು : ಸಂಚಾರದಲ್ಲಿ ವ್ಯತ್ಯಯ

By Web DeskFirst Published Jan 11, 2019, 8:47 AM IST
Highlights

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆ ದಟ್ಟಮಂಜು ಆವರಿಸಿದ್ದರಿಂದ ದುಬೈ, ದೆಹಲಿ, ಮುಂಬೈ ಸೇರಿದಂತೆ ದೇಶ-ವಿದೇಶಗಳ ನಾನಾ ನಗರಗಳಿಗೆ ತೆರಳಬೇಕಿದ್ದ 48 ವಿಮಾನಗಳು ನಿಗದಿತ ಸಮಯಕ್ಕೆ ಟೇಕಾಫ್‌ ಆಗಲಿಲ್ಲ. 

ಬೆಂಗಳೂರು :  ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್‌)ದಲ್ಲಿ ಮುಂಜಾನೆ ದಟ್ಟಮಂಜು ಆವರಿಸಿದ್ದರಿಂದ ವಿಮಾನ ಸಂಚಾರ ಸೇವೆಯಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದರು.

ಮುಂಜಾನೆ 5.10ರಿಂದ ಬೆಳಗ್ಗೆ 9.36ರ ವರೆಗೂ ವಾತಾವರಣದಲ್ಲಿ ದಟ್ಟಮಂಜು ಕವಿದಿದ್ದರಿಂದ ದುಬೈ, ದೆಹಲಿ, ಮುಂಬೈ ಸೇರಿದಂತೆ ದೇಶ-ವಿದೇಶಗಳ ನಾನಾ ನಗರಗಳಿಗೆ ತೆರಳಬೇಕಿದ್ದ 48 ವಿಮಾನಗಳು ನಿಗದಿತ ಸಮಯಕ್ಕೆ ಟೇಕಾಫ್‌ ಆಗಲಿಲ್ಲ. ಅಂತೆಯೇ 10 ವಿಮಾನಗಳು ಲ್ಯಾಂಡ್‌ ಆಗುವುದು ವಿಳಂಬವಾಯಿತು. ಈ ನಡುವೆ ತಲಾ ಒಂದು ಬ್ಲೂಡಾರ್ಟ್‌, ಇಂಡಿಗೋ ಮತ್ತು ಗೋಏರ್‌ ವಿಮಾನಗಳನ್ನು ಬೇರೆ ನಿಲ್ದಾಣದತ್ತ ಹೋಗು​ವಂತೆ ಸೂಚಿ​ಸ​ಲಾ​ಯಿತು. ಬೆಳಗ್ಗೆ 6.46ರಿಂದ 7.53ರ ವರೆಗೂ ಸುಮಾರು ಒಂದು ತಾಸು ವಿಮಾನಗಳ ಸಂಚಾರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ವಿಮಾನಗಳ ಟೇಕಾಫ್‌ ವಿಳಂಬವಾದ್ದರಿಂದ ಪ್ರಯಾಣಿಕರು ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು. ವಿಮಾನವೇರಿ ಕುಳಿತ್ತಿದ್ದ ಪ್ರಯಾಣಿಕರು ವಿಮಾನ ಹೊರಡುವುದು ತಡವಾಗುವ ವಿಚಾರ ತಿಳಿದು ಗಾಬರಿಗೊಂಡಿದ್ದರು. ಹಮಾಮಾನ ವೈಪರೀತ್ಯದಿಂದ ವಿಮಾನಗಳ ಹಾರಾಟ ವಿಳಂವಾಗಿದ್ದು, ಪ್ರಯಾಣಿಕರು ಗಾಬರಿಪಡುವ ಅಗತ್ಯವಿಲ್ಲ ಎಂದು ವಿಮಾನದ ಸಿಬ್ಬಂದಿ ಪ್ರಕಟಣೆ ಹೊರಡಿಸಿದರು. ಮಂಜು ಹರಿದು ವಾತಾವರಣ ತಿಳಿಯಾಗುತ್ತಿದ್ದಂತೆ ವಿಮಾನ ಸಂಚಾರ ಎಂದಿನಂತೆ ಮುಂದುವರಿಯಿತು.

click me!