ಹೆಲ್ಮೆಟ್ ಕೊಟ್ಟ, ಪಿನ್ ಹೇಳಿದೆ, ಬೈಕ್ ಹತ್ತೋ ಮೊದಲೇ ಹೊರಟು ಬಿಟ್ಟ, ಬೆಂಗ್ಳೂರು ಯುವತಿ ಟ್ಯಾಕ್ಸಿ ಕತೆ

Published : Sep 25, 2026, 03:09 PM IST
Bengaluru Woman’s Taxi Ride Goes Awry

ಸಾರಾಂಶ

ಬುಕ್ ಮಾಡಿದ ಕೆಲ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಬಂದಿತ್ತು. ಹೆಲ್ಮೆಟ್ ಕೊಟ್ಟ ಪಿನ್ ಕೇಳಿದ್ದ. ಯುವತಿ ಪಿನ್ ಹೇಳಿದ ತಕ್ಷಣವೇ ಬೈಕ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟಿದ್ದಾನೆ. ಯುವತಿ ಮಾತ್ರ ನಿಂತ ಜಾಗದಲ್ಲೇ ನಿಂತರೆ, ಬೈಕ್ ಮಾತ್ರ ಡಿಸ್ಟಿನೇಶನ್ ಕಡೆ ಸಾಗಿದ ಘಟನೆಯನ್ನು ಬೆಂಗಳೂರು ಯುವತಿ ಬಿಚ್ಚಿಟ್ಟಿದ್ದಾಳೆ.

ಬೆಂಗಳೂರು (ಸೆ.25) ಕ್ಯಾಬ್, ಬೈಕ್ ಟ್ಯಾಕ್ಸಿ ಬುಕಿಂಗ್ ವೇಳೆ, ಪ್ರಯಾಣದ ನಡುವೆ ನಡುವೆ ಹಲವು ಸ್ವಾರಸ್ಯಕರ ಘಟನೆಗಳು ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಬೆಂಗಳೂರಿನಲ್ಲಿ ಯುವತಿಯೊಬ್ಬಳು ಬೈಕ್ ಟ್ಯಾಕ್ಸಿ ಬುಕಿಂಗ್ ಮಾಡಿ ಬಳಿಕ ನಡೆದ ಘಟನೆಯನ್ನು ವಿವಿರಿಸಿದ್ದಾಳೆ. ಯುವತಿ ಬಳಿ ಬಂದ ಬೈಕ್ ಟ್ಯಾಕ್ಸಿ ರೈಡರ್, ಹೆಲ್ಮೆಟ್ ನೀಡಿ ಪಿನ್ ಕೇಳಿದ್ದಾನೆ. ಪಿನ್ ನಮೂದಿಸಿದ ಬಳಿಕ ಯುವತಿಯನ್ನು ಬೈಕ್‌ನಲ್ಲಿ ಹತ್ತಿಸಿಲ್ಲ. ಅಧಕ್ಕೂ ಮೊದಲೇ ನೇರವಾಗಿ ತೆರಳಿದ್ದಾನೆ. ವಿಶೇಷ ಅಂದರೆ ಆತ ಡ್ರಾಪ್ ಸ್ಥಳದಲ್ಲೇ ಬೈಕ್ ನಿಲ್ಲಿಸಿದಾಗಲೇ ಯುವತಿ ಹತ್ತೇ ಇಲ್ಲ ಅನ್ನೋದು ಗೊತ್ತಾಗಿದೆ.

ಬೆಂಗಳೂರಿನ ಬೈಕ್ ಟ್ಯಾಕ್ಸಿ ರೈಡ್

ಯುವತಿ ಪ್ರಯಾಣಕ್ಕಾಗಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಟ್ರಾಫಿಕ್ ನಡುವೆಯೂ ಹೆಚ್ಚಿನ ಸಮಯ ತೆಗೆದುಕೊಳ್ಳದೆ ತಲುಪುತ್ತದೆ. ಜೊತೆಗೆ ಬೆಲೆಯೂ ಕಡಿಮೆ. ತ್ವರಿತವಾಗಿ ತೆರಳಲು ಯವತಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾಳೆ. ಕೆಲ ಹೊತ್ತಲ್ಲಿ ಬೈಕ್ ಟ್ಯಾಕ್ಸಿ ಯುವತಿ ಇದ್ದ ಸ್ಥಳಕ್ಕೆ ಆಗಮಿಸಿದೆ. ಯುವತಿ ಪಕ್ಕ ಬೈಕ್ ನಿಲ್ಲಿಸಿದ ರೈಡರ್ ಹೆಲ್ಮೆಟ್ ತೆಗೆದು ಯುವತಿಗೆ ನೀಡಿದ್ದಾನೆ. ಇತ್ತ ಪಿನ್ ನಂಬರ್ ಕೇಳಿದ್ದಾನೆ. ಯುವತಿ ಮೊಬೈಲ್ ನೋಡಿ ಪಿನ್ ನಂಬರ್ ಹೇಳಿದ್ದಾಳೆ. ಬಳಿಕ ರೈಡರ್ ನೀಡಿದ ಹೆಲ್ಮೆಟ್ ಧರಿಸಿದ್ದಾಳೆ.

ಹೆಲ್ಮೆಟ್ ಧರಿಸಿ ಕಣ್ಣುಬಿಡುವಷ್ಟರಲ್ಲಿ ರೈಡರ್ ಹೊರಟೇ ಬಿಟ್ಟ

ಯುವತಿ ಹೆಲ್ಮೆಟ್ ಧರಿಸಿ ಕ್ಲಿಪ್ ಹಾಕುವಷ್ಟರಲ್ಲಿ ಇತ್ತ ಬೈಕ್ ರೈಡರ್ ನೇರವಾಗಿ ಹೊರಟೇ ಬಿಟ್ಟಿದ್ದಾನೆ. ಯುವತಿ ಇನ್ನು ಬೈಕ್ ಹತ್ತೇ ಇಲ್ಲ. ಅವಸರದಲ್ಲಿದ್ದ ರೈಡರ್‌ ಕೂಡ ಯುವತಿಗೆ ಬೈಕ್ ಹತ್ತಲು ಅವಕಾಶವನ್ನು ನೀಡಿಲ್ಲ. ಅಷ್ಟರಲ್ಲೇ ಹೊರಟು ಬಿಟ್ಟಿದ್ದಾನೆ. ಯುವತಿ ನಿಂತ ಸ್ಥಳದಲ್ಲೇ ಬಾಕಿ. ವಿಶೇಷ ಅಂದರೆ ಯುವತಿ ತನ್ನ ಮೊಬೈಲ್ ಮೂಲಕ ಬುಕಿಂಗ್ ನೋಡಿದ್ದಾರೆ. ಈ ವೇಳೆ ಬೈಕ್ ರೈಡರ್ ತನ್ನ ಹಿಂದೆ ಯುವತಿ ಇಲ್ಲ ಅನ್ನೋ ಯಾವುದೇ ಪರಿವೇ ಇಲ್ಲದೆ ಡ್ರಾಪ್ ಸ್ಥಳಕ್ಕೆ ಸಾಗುತ್ತಲೇ ಇದ್ದಾನೆ. 10 ನಿಮಿಷವಾದರೂ ರೈಡರ್‌ಗೆ ತಾನು ಕುಳಿತಿಲ್ಲ ಎಂದು ಗೊತ್ತಿಲ್ಲ ಎಂದು ತನ್ನ ರೈಡ್ ಡಿಟೇಲ್ಸ್ ಹಂಚಿಕೊಂಡಿದ್ದಾಳೆ.

ಅವಸರದಲ್ಲಿದ್ದ ರೈಡರ್ ಮಾತ್ರ ತಡ ಮಾಡದೇ ಡ್ರಾಪ್ ಸ್ಥಳಕ್ಕೆ ತೆರಳಿದ್ದಾನೆ. 15 ನಿಮಿಷದವರೆಗೂ ಬೈಕ್ ರೈಡರ್ ತೆರಳಿದ್ದಾನೆ. ಇನ್ನೇನು ಡ್ರಾಪ್ ಸ್ಥಳ ಹತ್ತಿರಬರುತ್ತಿದ್ದಂತೆ ರೈಡರ್‌ಗೆ ತನ್ನ ಹಿಂದೆ ಯುವತಿ ಕೂತಿಲ್ಲ ಅನ್ನೋದು ಗೊತ್ತಾಗಿದೆ. ಬಳಿಕ ಹಿಂದಿರುಗಿ ಬರವು ಸಾಹಸ ಮಾಡಿಲ್ಲ. ಆತನ ಹೆಲ್ಮೆಟ್ ಯುವತಿ ಬಳಿ ಉಳಿದುಕೊಂಡಿದೆ.

ಈ ಕತೆಯನ್ನು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾಳೆ. ಅಷ್ಟರಲ್ಲೇ ಹಲವರು ಪ್ರತಿಕ್ರಿಯಿಸಿದ್ದಾರೆ. ಹೆಲ್ಮೆಟ್ ನಿಮ್ಮ ಉಳಿಯಿತು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅರ್ಧದಲ್ಲಿ ನೋಡಿರುತ್ತಾನೆ. ಆದರೆ ಈ ಮುಖಭಂಗ ತಪ್ಪಿಸಿಕೊಳ್ಳಲು ಹಿಂದಿರುಗಿ ಬರಲಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

PREV
Read more Articles on
click me!

Recommended Stories

Fake Doccument: ನಕಲಿ ದಾಖಲೆ ಸೃಷ್ಟಿಸಿ 5 ಕೋಟಿಯ 7 ಎಕರೆ ಜಮೀನು ಮಾರಾಟ; ಸಬ್ ರಿಜಿಸ್ಟ್ರಾರ್ ಕಚೇರಿಗೆ ಮುಗಿಬಿದ್ದ ಸಂತ್ರಸ್ತರು!
ಬೆಂಗಳೂರು ಟೆಕ್ಕಿಯಿಂದ ಬಿಹಾರ ಮುಖ್ಯಮಂತ್ರಿಗೆ ವಿಶೇಷ ಮನವಿ, ಚರ್ಚೆಗೆ ಕಾರಣವಾದ ಖರ್ಚು