
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಡಿ ಗ್ಯಾಂಗ್‌ನಿಂದ ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ತಿರುವುಗಳು ಸಿಗುತ್ತಿವೆ. ಇದೀಗ ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖ ತಿರುವು ಪಡೆದುಕೊಂಡಿರುವ 'ಮಾಫಿ ಸಾಕ್ಷಿ' (ಅಪ್ರೂವರ್) ಪ್ರದೋಷ್‌ಗೆ ಜೈಲಿನಲ್ಲಿ ಪ್ರಾಣಾಪಾಯ ಎದುರಾಗಿದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದ್ದು, ಜೈಲು ಆಡಳಿತ ಮಂಡಳಿ ಆತನಿಗೆ ಹೈಟೆಕ್ ಭದ್ರತೆಯನ್ನು ಒದಗಿಸಿದೆ.
ಕೇಸ್‌ನಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರದೋಷ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ರೂಪದಲ್ಲಾದರೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಜೈಲು ಹಿರಿಯ ಅಧಿಕಾರಿಗಳಿಗೆ ಮಹತ್ವದ ಗುಪ್ತಚರ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾರಾಗೃಹ ಇಲಾಖೆ, ಪ್ರದೋಷ್ ಇರುವ ಬ್ಯಾರಕ್ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಿದೆ.
ಇಷ್ಟು ಮಾತ್ರವಲ್ಲ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ಗೆ ನೀಡುವ ಪ್ರತಿಯೊಂದು ವಸ್ತುವಿನ ಮೇಲೆಯೂ ಜೈಲು ಸಿಬ್ಬಂದಿ ಕಣ್ಣಿಟ್ಟಿದ್ದಾರೆ. ಅಧಿಕಾರಿಗಳು ಕೈಗೊಂಡಿರುವ ಪ್ರಮುಖ ಸುರಕ್ಷತಾ ಕ್ರಮಗಳು ಹೀಗಿವೆ.
ಸೋಮವಾರ ಪ್ರದೋಷ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದ್ದು, ಜೈಲಿನಿಂದ ಕೋರ್ಟ್‌ಗೆ ಕರೆತರುವ ಹಾದಿಯಲ್ಲೂ ಆತನಿಗೆ ಗರಿಷ್ಠ ಮಟ್ಟದ ಪೊಲೀಸ್ ಭದ್ರತೆಯನ್ನು ಒದಗಿಸಲು ನಿರ್ಧರಿಸಲಾಗಿದೆ. ಪ್ರಕರಣದ ನೈಜ ಸತ್ಯಗಳನ್ನು ನ್ಯಾಯಾಲಯದ ಮುಂದೆ ತೆರೆದಿಡಲು ಮುಂದಾಗಿರುವ ಪ್ರದೋಷ್‌ಗೆ ಯಾವುದೇ ಹಾನಿಯಾಗದಂತೆ ತಡೆಯುವುದು ತನಿಖಾ ತಂಡ ಹಾಗೂ ಕಾರಾಗೃಹ ಇಲಾಖೆಗೆ ಅತ್ಯಂತ ಸವಾಲಿನ ಕೆಲಸವಾಗಿದೆ.
ಮಾಫಿ ಸಾಕ್ಷಿಯಾಗಿರುವ ಪ್ರದೂಷ್ ಅವರ ಹೇಳಿಕೆಯನ್ನು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಸೆ.28ರಂದು (ಸೋಮವಾರ) ದಾಖಲಿಸಿಕೊಳ್ಳಲಿದೆ. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಅವರು, 14ನೇ ಆರೋಪಿ ಪ್ರದೂಷನ್‌ನನ್ನು ಪ್ರಾಸಿಕ್ಯೂಷನ್‌ನ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಸದ್ಯಕ್ಕೆ ದೋಷಾರೋಪಣಾ ಪಟ್ಟಿಯಲ್ಲಿ ಪ್ರದೂಷ್ ಹೆಸರನ್ನು 14ನೇ ಆರೋಪಿಯೆಂದು ನಮೂದಿಸಿರುವುದನ್ನು ಕೈಬಿಡಲು ಅನುಮತಿಸಲಾಗಿದೆ. ಆತನನ್ನು ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಹಾಜರುಪಡಿಸಬೇಕು ಎಂದು ನಿರ್ದೇಶಿಸಿದರು.