
ಬೆಂಗಳೂರು (ಜ.22) ಬೆಂಗಳೂರು ಯುವತಿಗೆ ಅವಲಹಳ್ಳಿ ಫಾರೆಸ್ಟ್‌ನಲ್ಲಿ ಬೆಳಗಿನ ವಾಕಿಂಗ್ ತೆರಳಿದ ಯುವತಿಗೆ ಅಪ್ರಾಪ್ತರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿದ್ದಾಳೆ. ಎಂದಿನಂತೆ ಆವಲಹಳ್ಳಿ ಫಾರೆಸ್ಟ್‌ನಲ್ಲಿ ಬೆಳಗಿನ ವಾಕಿಂಗ್ ತೆರಳುತ್ತಿದ್ದ ವೇಳೆ 10 ರಿಂದ 13 ವರ್ಷ ವಯಸ್ಸಿನ ಹುಡುಗರು ಕನ್ನಡದಲ್ಲಿ ಯುವತಿಯ ಎದೆಭಾಗ ನೋಡಿ ಕಮೆಂಟ್ ಮಾಡಿದ್ದಾರೆ. ಕನ್ನಡದಲ್ಲಿ ಹೇಳಿದ ಪದಗಲು ಅರ್ಥವಾಗಿಲ್ಲ, ಆದರೆ ಅವರು ಕಮೆಂಟ್ ಪಾಸ್ ಮಾಡಿ ನಗುವ ಮೂಲಕ ಕೆಟ್ಟ ದೃಷ್ಟಿಯಿಂದ ನೋಡಿರುವುದು ಸ್ಪಷ್ಟವಾಗಿತ್ತು ಎಂದು ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಯುವತಿ ಬೆಂಬಲಕ್ಕೆ ನಿಂತಿದ್ದರೆ, ಮತ್ತೆ ಕೆಲವರು ಇದು ಲೈಕ್ಸ್‌ಗಾಗಿ ಮಾಡಿದ ವಿಡಿಯೋ ಎಂದು ಪ್ರತಿಕ್ರಿಯಿಸಿದ್ದಾರೆ.
ರಿತಿಕಾ ಸೂರ್ಯವಂಶಿ ಅನ್ನೋ ಯುವತಿ ಎಂದಿನಂತೆ ಅವಲಹಳ್ಳಿ ಫಾರೆಸ್ಟ್ ವಲಯದಲ್ಲಿ ವಾಕಿಂಗ್ ತೆರಳಿದ್ದಾಳೆ. ಈ ವೇಳೆ ಹುಡುಗರ ಗುಂಪು ರಿತಿಕಾ ಸೂರ್ಯವಂಶಿ ಎದೆಭಾಗದ ಕುರಿತು ಕೆಟ್ಟ ಕಮೆಂಟ್ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ವಿಡಿಯೋದಲ್ಲಿ ರಿತಿಕಾ ತನ್ನ ಉಡುಪು ಹಾಗೂ ಕಮೆಂಟ್ಸ್ ಕುರಿತು ಹೇಳಿಕೊಂಡಿದ್ದಾಳೆ. ಸ್ಪೋರ್ಟ್ಸ್ ಬ್ರಾ ಹಾಗೂ ಟ್ಯಾಂಕ್ ಟಾಪ್ ಹಾಕಿದ್ದೇನೆ. ವಾಕಿಂಗ್, ರನ್ನಿಂಗ್ ವೇಳೆ ಇದು ಸಾಮಾನ್ಯ ಡ್ರೆಸ್. ಈ ಡ್ರೆಸ್‌ನಲ್ಲಿ ಸಭ್ಯತೆ ಗಡಿ ದಾಟಿದ ರೀತಿ ಇಲ್ಲ. ನನಗಿದು ಸಾಮಾನ್ಯ ಡ್ರೆಸ್ ಎಂದು ರಿತಿಕಾ ಸೂರ್ಯವಂಶಿ ವಿಡಿಯೋದಲ್ಲಿ ಹೇಳಿದ್ದಾರೆ.
ರಿತಿಕಾ ತನ್ನ ವಿಡಿಯೋದಲ್ಲಿ , ಎದುರಿನಿಂದ ಬರುತ್ತಿದ್ದ ಹುಡುಗರು, ತನ್ನ ದೇಹದ ಕುರಿತು ಕೆಟ್ಟ ಕಮೆಂಟ್ ಪಾಸ್ ಮಾಡಿ ನಕ್ಕಿದ್ದಾರೆ.ಹುಡುಗರು ಎಂದು ಮುಂದೆ ಸಾಗುತ್ತಿದ್ದಂತೆ ಮತ್ತೆ ಕಮೆಂಟ್ ಮಾಡಿದ್ದಾರೆ. ಹೀಗಾಗಿ ತಕ್ಷಣವೇ ತಿರುಗಿ ಮಹಿಳೆಯರನ್ನು ಗೌರವಿಸುವುದು ಕಲಿಯಿರಿ ಎಂದು ಗದರಿಸಿದ್ದಾಳೆ. ಸಣ್ಣ ವಯಸ್ಸಿನಲ್ಲಿ ಈ ರೀತಿಯ ವರ್ತನೆ ಮಾಡಿದರೆ ದೊಡ್ಡವರಾದಾಗ ನಿಮ್ಮ ವರ್ತನೆ ಏನಾಗಿರುತ್ತೆ, ಶಿಸ್ತು, ಗೌರವದಿಂದ ನಡೆದುಕೊಳ್ಳುವುದು ಕಲಿಯಿರಿ ಎಂದು ಹುಡುಗರಿಗೆ ಗದರಿಸಿರಿವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ರಿತಿಕಾ ಸೂರ್ಯವಂಶಿ ಮಾಡಿದ ವಿಡಿಯೋಗೆ ಪರ ವಿರೋಧ ಚರ್ಚೆಗಳು ಶುರುವಾಗಿದೆ. ನಿಜಕ್ಕೂ ಹುಡುಗರು ಕಮೆಂಟ್ ಮಾಡಿದ್ರಾ ಇಲ್ಲಾ ಲೈಕ್ಸ್ ಗಾಗಿ ಈ ರೀತಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರಾ ಎಂಬ ಪ್ರಶ್ನೆಗಳು ಉದ್ಭವಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಕೇರಳದಲ್ಲಿ ಇತ್ತೀಚೆಗೆ ಯುವತಿಯೊಬ್ಬಳು ಬಸ್ ಪ್ರಯಾಣದ ವೇಳೆ ಮಾಡಿದ ವಿಡಿಯೋ ಭಾರಿ ಕೋಲಾಹಲ ಸೃಷ್ಟಿ ಮಾಡಿದೆ. ಬಸ್‌ನಲ್ಲಿ ತನಗೆ ಕಿರುಕುಳ ಕೊಟ್ಟಿದ್ದಾರೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಳು. ಪರಿಣಾಮ ವ್ಯಕ್ತಿ ದುರಂತ ಅಂತ್ಯ ಕಂಡಿದ್ದ. ಇದರಿಂದ ಕೇರಳದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಲೈಕ್ಸ್‌ಗಾಗಿ ವಿಡಿಯೋ ಮಾಡಿ ವ್ಯಕ್ತಿಯ ಬದುಕನ್ನೇ ಕಸಿದುಕೊಂಡಿದ್ದಾಳೆ ಎಂಬ ಆರೋಪಗಳು ಕೇಳಿಬಂದಿದೆ. ಯುವತಿ ವಿರುದ್ದ ಭಾರಿ ಟ್ರೋಲ್, ಮೀಮ್ಸ್ ಹರಿದಾಡುತ್ತಿದೆ.