ದುಡ್ಡು ದುಡ್ಡು, ದೇಶದ ಟಾಪ್‌ 5 ಶ್ರೀಮಂತ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?

Published : Sep 12, 2026, 02:16 PM IST
richest city in india

ಸಾರಾಂಶ

ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿಟಿ ಯಾವುದು? ನಿಮಗೆ ಗೊತ್ತಾ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎಂದು? ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ಅದಕ್ಕೆ ನಮ್ಮ ಮಹಾನಗರಗಳು ಪ್ರಮುಖ ಪಾತ್ರವಹಿಸುತ್ತವೆ. ಬೆಂಗಳೂರು, ಹೈದರಾಬಾದ್‌, ಮುಂಬೈ, ದೆಹಲಿ, ಅಹ್ಮದಾಬಾದ್‌ ಸೇರಿದಂತೆ ಪ್ರಮುಖ ನಗರಗಳು ದೇಶದ ಬೆಳವಣಿಗೆಗೆ ಅಮೂಲ್ಯ ಕೊಡುಗೆಗಳನ್ನ ನೀಡುತ್ತಿವೆ. ನಿಮಗೆ ದೇಶದ ಯಾವ ನಗರವು ಆದಾಯ ಮತ್ತು ಸಂಪತ್ತಿನ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗೊತ್ತಾ? ಇತ್ತೀಚೆಗೆ ಜಿಡಿಪಿ ದತ್ತಾಂಶದ ಮಾಹಿತಿ ಪ್ರಕಾರ ದೇಶದ ಮಹಾನಗರಗಳ ಕೊಡುಗೆ ಇಲ್ಲಿದೆ.

ಮುಂಬೈ ಕೊಡುಗೆ ಏನು?

ಅತ್ಯಂತ ಶ್ರೀಮಂತ ಮತ್ತು ಆದಾಯದ ದೃಷ್ಟಿಯಿಂದ ಮುಂಬೈ ಮೊದಲ ಸ್ಥಾನದಲ್ಲಿದೆ. ಹಣಕಾಸು ವರ್ಷದ ಅಂಕಿ-ಅಂಶಗಳ ಪ್ರಕಾರ.. ಮುಂಬೈನ GDP ಸುಮಾರು $310 ಬಿಲಿಯನ್ ಅಂದರೆ ಸರಿಸುಮಾರು ₹25 ಲಕ್ಷ ಕೋಟಿ. ಅತಿದೊಡ್ಡ ಷೇರು ವಿನಿಮಯ ಕೇಂದ್ರ ಇರೋದು ಇದೇ ಮುಂಬೈನಲ್ಲಿ. ಈ ಎಲ್ಲಾ ಕಾರಣಗಳಿಂದ ಮುಂಬೈ ನಗರವನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಬಾಲಿವುಡ್, ಬಂದರುಗಳಲ್ಲಿ ನಡೆಯುವ ದಾಖಲೆಯ ವ್ಯವಹಾರಗಳು ಆದಾಯಕ್ಕೆ ಪ್ರಮುಖ ಕೊಡುಗೆಗಳನ್ನ ನೀಡುತ್ತವೆ.

ದೆಹಲಿ NCR

ಇನ್ನು, ಎರಡನೇ ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿ ಮತ್ತು ಅದರ NCR ಪ್ರದೇಶಗಳು ಬರುತ್ತವೆ. ದೆಹಲಿ-NCR ಸುಮಾರು 293.6 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ದೆಹಲಿ ದೇಶದ ರಾಜಕೀಯ ಕೇಂದ್ರ ಮಾತ್ರವಲ್ಲದೇ, ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದೆ. ಅಲ್ಲೇ ಸಮೀಪವಿರುವ ಗುರುಗ್ರಾಮ್ ವಿಶ್ವದ ಕೆಲವು ದೊಡ್ಡ ಕಾರ್ಪೊರೇಟ್ ಕಂಪನಿಗಳ ಕಚೇರಿ ಹೊಂದಿದೆ. ಆದರೆ ನೋಯ್ಡಾ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿದೆ.

ಕೋಲ್ಕತ್ತಾ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ದೇಶದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾವನ್ನು ಪಡೆದುಕೊಂಡಿದೆ. ಕೋಲ್ಕತ್ತಾದ ಒಟ್ಟು GDP ಸುಮಾರು $150 ಬಿಲಿಯನ್ ಎಂದು ಹೇಳಲಾಗಿದೆ. ಕೋಲ್ಕತ್ತಾವನ್ನು ಈಶಾನ್ಯ ಭಾರತದ ಅತಿದೊಡ್ಡ ವಾಣಿಜ್ಯ ಕೇಂದ್ರ ಎಂದು ಹೇಳುತ್ತಾರೆ. ಸೆಣಬಿನ ಉದ್ಯಮ, ಚಹಾ ವ್ಯಾಪಾರ, ಬಂದರುಗಳು, ಬ್ಯಾಂಕಿಂಗ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಂದಾಗಿ ಬಲವಾದ ಆರ್ಥಿಕ ಶಕ್ತಿ ಕೇಂದ್ರವಾಗಿ ಇಂದಿಗೂ ಉಳಿದುಕೊಂಡಿದೆ.

ಬೆಂಗಳೂರು

ಕನ್ನಡಿಗರ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬೆಂಗಳೂರು ಸುಮಾರು 110 ಬಿಲಿಯನ್ ಡಾಲರ್‌ ಜಿಡಿಪಿ ಹೊಂದಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮತ್ತು ಸ್ಟಾರ್ಟ್ಅಪ್ ರಾಜಧಾನಿ ಅಂತಲೂ ಕರೆಯಲಾಗುತ್ತದೆ. ವಿಶ್ವದ ದೈತ್ಯ ಐಟಿ ಮತ್ತು ಸಾಫ್ಟ್‌ವೇರ್ ಕಂಪನಿಗಳು, ಏರೋಸ್ಪೇಸ್ ಉದ್ಯಮ ಮತ್ತು ಬಯೋಟೆಕ್ ಸಂಸ್ಥೆಗಳು ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತವೆ. ಬೆಂಗಳೂರು ಹೆಚ್ಚು ಟೆಕ್ ಪ್ರೊಫೆಷನಲಿಸ್ಟ್‌ ಮತ್ತು ಹೊಸ ಮಿಲಿಯನೇರ್‌ಗಳನ್ನ ಹುಟ್ಟು ಹಾಕುತ್ತದೆ.

ಚೆನ್ನೈ

ದಕ್ಷಿಣ ಭಾರತದ ಪ್ರಮುಖ ಮಹಾನಗರ ಚೆನ್ನೈ. ಈ ಪಟ್ಟಿಯಲ್ಲಿ ಅದು 5ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂದಾಜು $90 ರಿಂದ $100 ಬಿಲಿಯನ್ ಜಿಡಿಪಿಯೊಂದಿಗೆ, ಚೆನ್ನೈ ದೇಶದ ಅತಿದೊಡ್ಡ ಆಟೋಮೊಬೈಲ್ ಉದ್ಯಮಕ್ಕೆ ನೆಲೆಯಾಗಿದೆ. ಚೆನ್ನೈ ಬಂದರಿನ ಮೂಲಕ ಜಾಗತಿಕ ವ್ಯಾಪಾರ ಮತ್ತು ವೇಗವಾಗಿ ಬೆಳೆಯುತ್ತಿರುವ ಜವಳಿ ಮತ್ತು ಜವಳಿ ಕ್ಷೇತ್ರಗಳು ದೇಶಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿವೆ.

PREV
Read more Articles on
click me!

Recommended Stories

Yettinahole Water Project: 11 ವರ್ಷ ಬಳಿಕ ಎತ್ತಿನಹೊಳೆ ಯೋಜನೆಗೆ ಟ್ರಯಲ್ ರನ್! ಅಕ್ಟೋಬರ್‌ನಲ್ಲಿ ತುಮಕೂರಿಗೆ ನೀರು
ಕೆಪಿಎಸ್‌ಸಿ ಮತ್ತೊಂದು ಹಗರಣ ಬಯಲಿಗೆ: ಶಿವಶಂಕರಪ್ಪ ಸಾಹುಕಾರ್, ಜ್ಞಾನೇಂದ್ರಕುಮಾರ್‌ಗೆ ಮತ್ತೊಂದು ಸಂಕಷ್ಟ!