ನಾಗರಿಕತೆಯ ಜ್ಞಾನ ಹಾಗೂ ಆಧುನಿಕ ಆಡಳಿತ, ಬೆಂಗಳೂರಲ್ಲಿ ವೈಸುಧೈವ ಕುಟುಂಬಕಂ 5.0 ಸಂವಾದ

Published : Oct 13, 2026, 06:16 PM IST
Vasudhaiva Kutumbakam

ಸಾರಾಂಶ

ಆಡಳಿತದಲ್ಲಿ ಎದುರಾಗುವ ಸಮಸ್ಯೆಗಳು , ಪರಿಹಾರ ಹಾಗೂ ಸಾರ್ವಕಾಲಿಕ ತತ್ವಗಳ ಕುರಿತು ಬೆಂಗಳೂರಿನಲ್ಲಿ ಮಹತ್ವದ ಸಂವಾದ ನಡೆದಿದೆ. ವಸುಧೈವ ಕುಟುಂಬಕಂ 5.0 ಸಂವಾದ ಕಾರ್ಯಕ್ರಮದಲ್ಲಿ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು (ಅ.11) ವಿಭಜಿತ ಜಗತ್ತಿನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಡಳಿತ ವ್ಯವಸ್ಥೆಯನ್ನು ನಡೆಸಲು ಅಗತ್ಯವಿರುವ ಸಾರ್ವಕಾಲಿಕ ತತ್ವಗಳ ಕುರಿತು ಬೆಂಗಳೂರಿನಲ್ಲಿ ಎರಡು ದಿನಗಳ ಮಹತ್ವದ ವಿಚಾರಸಂಕಿರಣ ನಡೆದಿದೆ. ವಸುಧೈವ ಕುಟುಂಬಕಂ ಕಿ ಓರ್ 5.0' (Vasudhaiva Kutumbakam Ki Oar 5.0) ವಿಚಾರ ಸಂಕೀರ್ಣ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. 'ಇಐಎಂಆರ್ ಬಿಸಿನೆಸ್ ಸ್ಕೂಲ್ ಸಹಯೋಗದೊಂದಿಗೆ ಬಸವನಗುಡಿಯ ಚಂದ್ರ ಚೌಹಾಣ್ ಧರ್ಮಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತೀರ್ಥಂಕರ ಶ್ರೀ ಮಹಾವೀರ ಸ್ವಾಮಿಗಳ 79ನೇ ಉತ್ತರಾಧಿಕಾರಿಗಳಾದ ಪರಮಪೂಜ್ಯ ಜೈನಾಚಾರ್ಯ ಯುಗಭೂಷಣಸೂರಿಜಿ ಮಹಾರಾಜ್ ಸಾಹೇಬರ ಪಾವನ ಉಪಸ್ಥಿತಿಯಲ್ಲಿ "ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಡಳಿತದ ಸಾರ್ವಕಾಲಿಕ ತತ್ವಗಳು" ಎಂಬ ವಿಷಯದ ಮೇಲೆ ದೇಶದ ಪ್ರಮುಖ ಚಿಂತಕರು, ರಾಜತಾಂತ್ರಿಕರು ಹಾಗೂ ಶಿಕ್ಷಣ ತಜ್ಞರು ಸುದೀರ್ಘ ಚರ್ಚೆ ನಡೆಸಿದರು.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಆಡಳಿತದ ಸವಾಲುಗಳು:

ಅಕ್ಟೋಬರ್ 10ರಂದು ನಡೆದ ಮೊದಲ ದಿನದ ಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಆಡಳಿತದ ಕುರಿತು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಈ ಗೋಷ್ಠಿಯಲ್ಲಿ ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರ ಹೇಮಾಂಗ್ ಜಾನಿ, ಬಿಜೆಪಿ ವಿದೇಶಾಂಗ ವಿಭಾಗದ ಉಸ್ತುವಾರಿ ಡಾ. ವಿಜಯ್ ಚೌಥಾಯ್‌ವಾಲೆ, ಒ.ಪಿ. ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಡೀನ್ ಪ್ರೊ. ಶ್ರೀರಾಮ್ ಚೌಲಿಯಾ, ಉಸನಾಸ್ ಫೌಂಡೇಶನ್ ಸಿಇಒ ಅಭಿನವ್ ಪಾಂಡ್ಯ, ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಅರವಿಂದ್ ಗುಪ್ತಾ ಮತ್ತು ನೆಟ್‌ವರ್ಕ್ 18 ಹಾಗೂ ಫಸ್ಟ್ ಪೋಸ್ಟ್ ಎಡಿಟರ್ ಶುಭಾಂಗಿ ಶರ್ಮಾ ಭಾಗವಹಿಸಿದ್ದರು.

ಅಕ್ಟೋಬರ್ 11ರಂದು ರಾಷ್ಟ್ರೀಯ ಆಡಳಿತದ ಮೇಲಿನ ಗೋಷ್ಠಿ ನಡೆಯಿತು. ಇದರಲ್ಲಿ ಸಿನರ್ಜಿಯಾ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಟೋಬಿ ಸೈಮನ್ ಸೇರಿದಂತೆ ಹಿರಿಯ ತಜ್ಞರು ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು. ಈ ಎರಡು ದಿನಗಳ ಸುದೀರ್ಘ ಚರ್ಚೆಯ ಮುಖ್ಯಾಂಶಗಳನ್ನು ಆಧರಿಸಿ 'ಧ್ರುವ ಪತ್ರ' (Dhruv Patra) ಎಂಬ ಶ್ವೇತಪತ್ರವನ್ನು (White Paper) ಸಿದ್ಧಪಡಿಸಲಾಗುತ್ತಿದ್ದು, ಇದನ್ನು ವಿ.ಕೆ. 5.0 ಮುಖ್ಯ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುವುದು

ಪರಮಪೂಜ್ಯ ಜೈನಾಚಾರ್ಯ ಯುಗಭೂಷಣಸೂರಿಜಿ ಮಹಾರಾಜ್: "ಜಾಗತಿಕ ಆಡಳಿತದ ರಚನೆಯು ಅಪ್ರಜಾಸತ್ತಾತ್ಮಕವಾಗಿದ್ದಾಗ ಮತ್ತು ಅದರ ನಿರ್ಧಾರಗಳು ಕೇವಲ ಪ್ರಭಾವಿ ರಾಷ್ಟ್ರಗಳ ಮುಷ್ಟಿಯಲ್ಲಿದ್ದಾಗ ಅದು ಜಗತ್ತಿಗೆ ಸರಿಯಾದ ಸೇವೆ ಸಲ್ಲಿಸಲು ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದರು.

PREV
Read more Articles on
click me!

Recommended Stories

ಜಕ್ಕೂರಿನಲ್ಲಿ ಬೆಂಗಳೂರಿನ ಭವಿಷ್ಯ ಬದಲಿಸುವ ಐಷಾರಾಮಿ ವಸತಿ ಯೋಜನೆ, ಅಲ್ಪಾವಧಿಯಲ್ಲೇ ₹550 ಕೋಟಿಗೂ ಹೆಚ್ಚು ಬುಕಿಂಗ್!
ಹೆಬ್ಬಾಳ-ಏರ್‌ಪೋರ್ಟ್ ರಸ್ತೆಯ ಏಕೈಕ ಸಿಗ್ನಲ್‌ಗೆ ಶೀಘ್ರವೇ ಗುಡ್‌ಬೈ: ಸಾದಹಳ್ಳಿ ಜಂಕ್ಷನ್‌ನಲ್ಲಿ 6 ಪಥಗಳ ಓವರ್‌ಪಾಸ್ ಕಾಮಗಾರಿ ಅಧಿಕೃತ ಆರಂಭ