ಬೆಂಗಳೂರಲ್ಲಿ 'ಗಣೇಶ ದೇವರಲ್ಲ' ಎಂದು ಕಾರಿಗೆ ಒದ್ದು ಆವಾಚ್ಯ ಶಬ್ದಗಳಿಂದ ನಿಂದನೆ; ಆರೋಪಿಯ ಪಾಡು ಏನಾಯ್ತು ನೋಡಿ!

Published : Oct 01, 2026, 11:39 AM IST
Bengaluru Man Car clash Ganesh Idol

ಸಾರಾಂಶ

ಬೆಂಗಳೂರಿನಲ್ಲಿ ಕಾರಿನಲ್ಲಿದ್ದ ಗಣೇಶ ಮೂರ್ತಿಯನ್ನು ನೋಡಿ ಕಾರಿಗೆ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯದ ವಿಡಿಯೋ ವೈರಲ್ ಆದ ನಂತರ ಹೆಣ್ಣೂರು ಠಾಣೆಯ ಪೊಲೀಸರು ಆರೋಪಿ ಶಿವಕುಮಾರ್‌ನನ್ನು ತಕ್ಷಣವೇ ವಶಕ್ಕೆ ಪಡೆದಿದ್ದರು. ಈ ವ್ಯಕ್ತಿಯ ಕಥೆಯೇನಾಯ್ತು ನೀವೇ ನೋಡಿ.

ಬೆಂಗಳೂರು (ಅ.01): ಬೆಂಗಳೂರಿನ ಹೊರಮಾವು ಬಳಿಯ ಬಂಜಾರ ಲೇಔಟ್‌ನಲ್ಲಿ ಗಣೇಶ ಮೂರ್ತಿಯನ್ನು ಕಂಡು ಕಾರಿಗೆ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಈತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

ಏನಿದು ಘಟನೆ?

ನಗರದ ಬಂಜಾರ ಲೇಔಟ್‌ನಲ್ಲಿ ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ (ಶಿವಕುಮಾರ್), ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಗಣೇಶನ ಮೂರ್ತಿಯನ್ನು ಕಂಡು ಇದ್ದಕ್ಕಿದ್ದಂತೆ ಸಿಟ್ಟಿಗೆದ್ದಿದ್ದಾನೆ. ತಮಿಳು ಭಾಷೆಯಲ್ಲಿ ಕಿರುಚಾಡುತ್ತಾ ಕಾರಿಗೆ ಕಾಲಿನಿಂದ ಒದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪ್ರಶ್ನಿಸಿದಾಗ, "ಗಣೇಶ ಏನು ದೇವರಾ?" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಸಿಸಿಟಿವಿ ದೃಶ್ಯದಿಂದ ಪತ್ತೆ:

ಆರೋಪಿಯ ಈ ದುಷ್ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೃಶ್ಯವನ್ನು ಗಮನಿಸಿದ ಹೆಣ್ಣೂರು ಪೊಲೀಸರು ತನಿಖೆ ಆರಂಭಿಸಿದರು. ತನಿಖೆಯ ವೇಳೆ, ಆರೋಪಿ ಶಿವಕುಮಾರ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ನಿಮ್ಹಾನ್ಸ್ (NIMHANS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಕ್ರಮ:

ಸ್ಥಳೀಯರು ನೀಡಿದ ದೂರು ಮತ್ತು ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮತ್ತೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಇಂತಹ ಕೃತ್ಯಗಳು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

PREV
Read more Articles on
click me!

Recommended Stories

ಬೆಂಗಳೂರು ಪ್ರತಿಷ್ಠಿತ ಶಾಲೆಯ ಸಣ್ಣತನ: ಶುಲ್ಕ ಕಟ್ಟಿಲ್ಲವೆಂದು ಪರೀಕ್ಷೆ ಕೊಡದೇ ಹೊರಗೆ ಹಾಕಿದ ಶಾಲೆ!
ಬೆಂಗಳೂರಿನ 59,000 ಆಸ್ತಿ ಮಾಲೀಕರಿಗೆ ತೆರಿಗೆ ಕಟ್ಟುವಂತೆ 4.5 ಲಕ್ಷ ಬಾರಿ ಕರೆ ಮಾಡಿದ AI; ಹಣ ವಸೂಲಿಗೆ ಹೊಸ ದಾರಿ