Bengaluru: 16ನೇ ಮಹಡಿಯಿಂದ ಬಿದ್ದು ಟೆಕ್ಕಿ ನಿಕ್ಷೇಪ್‌ ಬಂಗೇರಾ ಆ*ತ್ಮಹ*ತ್ಯೆ

Published : Jan 07, 2026, 06:26 PM IST
Nikshep Bangera

ಸಾರಾಂಶ

ಬೆಂಗಳೂರಿನ ಬಾಗಲಗುಂಟೆಯಲ್ಲಿ 26 ವರ್ಷದ ಟೆಕ್ಕಿ ನಿಕ್ಷೇಪ್ ಬಂಗೇರಾ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದವರಾದ ಇವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ. 

ಬೆಂಗಳೂರು (ಜ.7): ಉದ್ಯಾನನಗರಿಯಲ್ಲಿ ಟೆಕ್ಕಿಯೊಬ್ಬ 16ನೇ ಮಹಡಿಯಿಂದ ಬಿದ್ದು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. 26 ವರ್ಷದ ನಿಕ್ಷೇಪ್‌ ಬಂಗೇರಾ ಜೀವ ಕಳೆದುಕೊಂಡಿರುವ ಟೆಕ್ಕಿ. ಬಾಗಲಗುಂಟೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದ ನಿಕ್ಷೇಪ್‌ ಅಲ್ಲಿಯೇ ತಮ್ಮ ಜೀವ ಕಳೆದುಕೊಂಡಿದ್ದಾರೆ. ವರ್ಕ್‌ ಫ್ರಂ ಹೋಮ್‌ನಲ್ಲಿ ನಿಕ್ಷೇಪ್‌ ಕೆಲಸ ಮಾಡುತ್ತಿದ್ದ. ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ 16ನೇ ಮಹಡಿಗೆ ಬಂದು ಅಲ್ಲಿಂದ ಕೆಳಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.ಮಂಗಳೂರು ಮೂಲದ ನಿಕ್ಷೇಪ್‌ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಮೂಲಗಳ ಪ್ರಕಾರ, ನಿಕ್ಷೇಪ್‌ ವಿದೇಶದಲ್ಲಿ ಇಂಜಿನಿಯರಿಂಗ್‌ ವ್ಯಾಸಾಂಗ ಮಾಡಿ ಬೆಂಗಳೂರಿನಲ್ಲಿ ಕೆಲಸ ಪಡೆದುಕೊಂಡಿದ್ದ ಎನ್ನಲಾಗಿದೆ. ಬೆಂಗಳೂರಿಗೆ ಬಂದಾಗಿನಿಂದಲೂ ಬಾಗಲಗುಂಟೆಯ ಪ್ರಿನ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಎನ್ನಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಆತ ಮಾನಸಿಕ ಖಿನ್ನತೆಗೆ ಜಾರಿದ್ದ ಎನ್ನಲಾಗಿದೆ.

 

PREV
Read more Articles on
click me!

Recommended Stories

ಮಗಳಿಗೆ ನೇಣು ಹಾಕಿ ಬಳಿಕ ತಾಯಿ ಸಾಯಲು ಯತ್ನ; ಅನೈತಿಕ ಸಂಬಂಧದ ಅನುಮಾನ ತಂದ ದುರಂತ!
ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಸಂಪರ್ಕಿಸುವ ಪ್ರಮುಖ ರಸ್ತೆ 3 ತಿಂಗಳು ಬಂದ್! ಪರ್ಯಾಯ ಮಾರ್ಗ ಯಾವುದು?