1988ರಲ್ಲಿ ನಡೆದಿದ್ದ ನೆಲಕದಿರನಹಳ್ಳಿಯ 59 ಎಕರೆ ಭೂಸ್ವಾಧೀನ ಪ್ರಕ್ರಿಯೆ ರದ್ದು: ಸುಪ್ರೀಂಕೋರ್ಟ್

Published : Oct 27, 2026, 06:04 AM IST
Supreme Court Recruitment 2026

ಸಾರಾಂಶ

ಬೆಂಗಳೂರಿನ ನೆಲಕದಿರನಹಳ್ಳಿಯಲ್ಲಿ 1988ರಲ್ಲಿ ನಡೆದಿದ್ದ 59 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದೆ. ಈ ಪ್ರಕ್ರಿಯೆಯು ವಂಚನೆ ಮತ್ತು ಅಕ್ರಮದಿಂದ ಕೂಡಿದೆ ಎಂದು ನ್ಯಾಯಾಲಯ ತಿಳಿಸಿದೆ. ತೀರ್ಪು ನೀಡುವಾಗ ಪೆನ್ಸಿಲ್ವೇನಿಯಾ ಸುಪ್ರೀಂಕೋರ್ಟ್‌ನ ಪ್ರಕರಣವೊಂದನ್ನು ಉಲ್ಲೇಖಿಸಿ, ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ.

ನವದೆಹಲಿ: 1988ರಲ್ಲಿ ಬೆಂಗಳೂರಿನ ನೆಲಕದಿರನಹಳ್ಳಿ ಗ್ರಾಮದಲ್ಲಿ ನಡೆದಿದ್ದ 59 ಎಕರೆ 39 ಗುಂಟೆ ಭೂಮಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಇಡೀ ಪ್ರಕ್ರಿಯೆಯನ್ನು ವಂಚನೆ, ಅಕ್ರಮ ಎಂದು ಹೇಳಿರುವ ನ್ಯಾಯಾಲಯ, 3 ದಶಕಗಳ ಹಿಂದಿನ ಭೂಸ್ವಾಧೀನ ಪ್ರಕ್ರಿಯೆ ರದ್ದು ವೇಳೆ ಪೆನ್ಸಿಲ್ವೇನಿಯಾ ದೇಶದ ಸುಪ್ರೀಂಕೋರ್ಟ್‌ನ ತೀರ್ಪು ಉಲ್ಲೇಖಿಸಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್‌ನ ಏಸದಸ್ಯ ಪೀಠದ ತೀರ್ಪು ಎತ್ತಿ ಹಿಡಿದೆ.

ಖಾಸಗಿ ಹಿತಾಸಕ್ತಿಗಳಿಗೆ ಅನುಕೂಲ

38 ವರ್ಷಗಳ ಹಿಂದೆ ಬೆಂಗಳೂರಿನ ನೆಲಕದಿರನಹಳ್ಳಿ ಗ್ರಾಮದಲ್ಲಿ ಸಹಕಾರಿ ವಸತಿ ಸಂಘ ನಿರ್ಮಾಣಕ್ಕಾಗಿ ಖಾಸಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಕೆಲ ಭೂಮಿ ಮಾಲೀಕರು ಸ್ವಾಧೀನವನ್ನು ಪ್ರಶ್ನಿಸಿದ್ದರು. ಖಾಸಗಿ ಮಧ್ಯವರ್ತಿಗಳ ಜತೆ ಒಪ್ಪಂದ ಮಾಡಿಕೊಂಡು ಅವರಿಗೆ ಅನುಕೂಲ ರೀತಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಕೊಳ್ಳಲಾಗಿದೆ. ಈ ಸ್ವಾಧೀನವು ನಿಜವಾದ ಸದಸ್ಯರಿಗೆ ವಸತಿ ಯೋಜನೆಯನ್ನು ಜಾರಿಗೆ ತರುವ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ಖಾಸಗಿ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದರು.

ಈ ಹಿಂದೆ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿತ್ತು. ಆದರೆ ಬಳಿಕ ಇದನ್ನು ವಿಭಾಗೀಯ ಪೀಠ ವಜಾಗೊಳಸಿತ್ತು. ಇದನ್ನು ಪ್ರಶ್ನಿಸಿ ಎನ್. ಅರಸಪ್ಪ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪೆನ್ಸಿಲ್ವೇನಿಯಾ ತೀರ್ಪು ಉಲ್ಲೇಖ

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠವು ತನ್ನ ತೀರ್ಪಿನ ವೇಳೆ ಪೆನ್ಸಿಲ್ವೇನಿಯಾ ಸುಪ್ರೀಂ ಕೋರ್ಟ್‌ನ ಒಂದು ಪ್ರಕರಣದ ತೀರ್ಪನ್ನು ಉಲ್ಲೇಖಿಸಿದೆ. ‘ಯಾವುದೇ ಸರ್ಕಾರಿ ಪ್ರಾಧಿಕಾರವು ಅನಿಯಮಿತ ಅಧಿಕಾರವನ್ನು ಹೊಂದಿರುವುದಿಲ್ಲ. ಅದರ ನಿರ್ಧಾರಗಳು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರಬೇಕು.

ಇದನ್ನೂ ಓದಿ: ಬೆಂಗಳೂರು ಜನತೆಗೆ KSRTC ಬಂಪರ್ ಆಫರ್; ₹2000ಕ್ಕೆ ಹಾಸನಾಂಬೆ ದರ್ಶನದ ಜೊತೆಗೆ ಒಂದು ದಿನದ ಪ್ರವಾಸ!

ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಒಡೆತನದ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯು ಕಾನೂನಿನ ಅಧಿಕಾರವನ್ನು ಹೊಂದಿರಬೇಕು ಮತ್ತು ಅದಕ್ಕೆ ನ್ಯಾಯಯುತ ಪರಿಹಾರವನ್ನು ಪಾವತಿಸಬೇಕು’ ಎಂದಿದೆ. ಜತೆಗೆ ಅರ್ಜಿಯು ಕಾನೂನು ಬದ್ಧ ಅಧಿಕಾರದ ಕೊರತೆ, ಸಾರ್ವಜನಿಕ ಉದ್ದೇಶದ ಅಭಾವ, ವಂಚನೆ ಒಳಗೊಂಡಿದೆ ಎಂದು ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ: ಬಿಎಂಟಿಸಿ ಹೊಸ ತಂತ್ರಜ್ಞಾನ: 30 ಬಸ್‌ಗಳಲ್ಲಿ APC ವ್ಯವಸ್ಥೆ ಅಳವಡಿಕೆ, ಏನಿದರ ಲಾಭ?

PREV
Read more Articles on
click me!

Recommended Stories

ಹೆಣ್ಣೂರು-ಬಾಗಲೂರು ರಸ್ತೆ ಕಾಮಗಾರಿ: ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಸಚಿವರು ಗರಂ
ಬಿಎಂಟಿಸಿ ಹೊಸ ತಂತ್ರಜ್ಞಾನ: 30 ಬಸ್‌ಗಳಲ್ಲಿ APC ವ್ಯವಸ್ಥೆ ಅಳವಡಿಕೆ, ಏನಿದರ ಲಾಭ?