ಬಿಡಿಎ ವಿರುದ್ಧ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ಸೈಟ್‌ದಾರರ ಹೋರಾಟ

Published : Oct 13, 2026, 07:13 AM IST
BDA

ಸಾರಾಂಶ

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎಗೆ ತಮ್ಮ ಜಾಗ ನೀಡಿದ 17 ಗ್ರಾಮಗಳ ಕಂದಾಯ ನಿವೇಶನದಾರರು ಬದಲಿ ನಿವೇಶನಕ್ಕಾಗಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಿರಾಶ್ರಿತರಾಗಿರುವ ಇವರು, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ವಕೀಲರ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಬೆಂಗಳೂರು: ಬಿಡಿಎ ನಮ್ಮ ಸ್ವಂತ ಜಾಗಗಳಲ್ಲಿ, ಅಷ್ಟೇ ವಿಸ್ತೀರ್ಣದ ಬದಲಿ ನಿವೇಶನ ನೀಡಬೇಕೆಂದು ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಕಂದಾಯ ನಿವೇಶನಗಳ ಮಾಲೀಕರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ.

ಬದಲಿ ನಿವೇಶನವನ್ನು ನ್ಯಾಯಯುತವಾಗಿ ಪಡೆಯುವ ಕುರಿತು ಸುದೀರ್ಘ ಚರ್ಚೆ 

ಸುಮಾರು 2000ಕ್ಕೂ ಹೆಚ್ಚು ನಿವೇಶನದಾರರು ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಲಕ್ಷ್ಮೀಪುರದ ಬಳಿ ಸಭೆ ಸೇರಿ, ಬಿಡಿಎ ವಿರುದ್ಧ ಮುಂದಿನ ಕಾನೂನು ಹೋರಾಟ ಮತ್ತು ತಮ್ಮ ನಿವೇಶನಕ್ಕೆ ಸಿಗಬೇಕಾದ ಬದಲಿ ನಿವೇಶನವನ್ನು ನ್ಯಾಯಯುತವಾಗಿ ಪಡೆಯುವ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಅಭಿವೃದ್ಧಿ ನೆಪದಲ್ಲಿ ಸ್ವಾದೀನ

ದಸಂಸ ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್ ಮಾತನಾಡಿ, ಉತ್ತಮ ಭವಿಷ್ಯದ ಕನಸನ್ನು ಸಾಕಾರಗೊಳಿಸಿಕೊಳ್ಳಲು ಕಷ್ಟಪಟ್ಟು ಖರೀದಿಸಿದ್ದ ನಿವೇಶನವನ್ನು ಬಿಡಿಎ ಅಭಿವೃದ್ಧಿ ನೆಪದಲ್ಲಿ ಸ್ವಾದೀನ ಪಡಿಸಿಕೊಂಡಿದ್ದು, ಇದೀಗ ತಮ್ಮ ಸ್ವಂತ ನಿವೇಶನವೂ ಇಲ್ಲ, ಸಕಾಲದಲ್ಲಿ ಬದಲೀ ನಿವೇಶನವೂ ಇಲ್ಲ ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿವೇಶನದಾರರಿಗೆ ಹೋರಾಟವೊಂದೇ ಉಳಿದಿರುವ ಅನಿವಾರ್ಯ ಮಾರ್ಗ ಎಂದರು.

ನಿವೇಶನದಾರರಿಗೆ ಆತ್ಮಸ್ಥೈರ್ಯ

ಶೀಘ್ರದಲ್ಲೇ ನರ್ಮದಾ ಬಚಾವೋ ಹೋರಾಟದಲ್ಲಿ ಹೋರಾಟಗಾರರಿಗೆ ನ್ಯಾಯ ದೊರಕಿಸಿಕೊಟ್ಟ ಸುಪ್ರೀಂ ಕೋರ್ಟ್‌ನ ಅಡ್ವಕೇಟ್ ಒಬ್ಬರನ್ನು ಭೇಟಿ‌ ಮಾಡಿ, ಸೂಕ್ತ ನ್ಯಾಯಕ್ಕೆ ಚರ್ಚಿಸಿ ಬಳಿಕ ಮುಂದಿನ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ನಿವೇಶನದಾರರಿಗೆ ಆತ್ಮಸ್ಥೈರ್ಯ ತುಂಬಿದರು.

17 ಗ್ರಾಮಗಳ ನಿವೇಶನದಾರರು

ಈ ವೇಳೆ ಕಂದಾಯ ನಿವೇಶನಗಳ ಮಾಲೀಕರಾದ ಶೇಷನ್, ನಟರಾಜ್, ಓಂ ಪ್ರಸನ್ನ, ಚಂದ್ರಶೇಖರ್, ಸರವಣದಾಸ್, ಕೇಶವ್, ಯಶ್ ಪಾಲ್, ವೆಂಕಟರಾಮು ಸೇರಿ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ಸಹಸ್ರಾರು ಸಂಖ್ಯೆಯ ಕಂದಾಯ ನಿವೇಶನದಾರರಿದ್ದರು.

ಕಳೆದ 10 ವರ್ಷಗಳಿಂದ ನಮ್ಮ ಸ್ವಂತ ಸೈಟ್‌ಗಳನ್ನು ಬಿಡಿಎಗೆ ನೀಡಿ ಅಕ್ಷರಶಃ ನಿರಾಶ್ರಿತರಾಗಿದ್ದೇವೆ. ಪ್ರತಿ ವರ್ಷ ನಮ್ಮ ಸೈಟ್‌ಗಳಿಗೆ ಕಟ್ಟಬೇಕಿದ್ದ ಶುಲ್ಕ ಕಟ್ಟಿದ್ದೇವೆ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ಖರೀದಿಸಿದ್ದ ನಿವೇಶನದಲ್ಲಿ ಆರ್ಥಿಕ ತೊಂದರೆಯಿಂದಾಗಿ ಕಟ್ಟಡ ಕಟ್ಟಲಾಗದೆ, ಕಾಂಪೌಂಡ್ ಹಾಕಿಕೊಂಡಿದ್ದ ನಮ್ಮ ನಿವೇಶನಗಳನ್ನು ಬಿಡಿಎ ಸಂಸ್ಥೆ ಶಿವರಾಮ ಕಾರಂತ ಬಡಾವಣೆ ಯೋಜನೆಗೆ ಸ್ವಾಧೀನ ಪಡಿಸಿಕೊಂಡಿದ್ದು ನಮಗೆ ಬದಲಿ ನಿವೇಶನ ನೀಡಿಲ್ಲ.

-ಅರುಣ್, ನಿವೇಶನದಾರ

PREV
Read more Articles on
click me!

Recommended Stories

ನಮ್ಮ ಮೆಟ್ರೋ ಹಳಿಗೆ ಹಾರಿದ ವ್ಯಕ್ತಿ: ವಿಜಯನಗರ-ಚಲ್ಲಘಟ್ಟ ಮಾರ್ಗದ ರೈಲು ಸಂಚಾರ ಕೆಲಕಾಲ ಸ್ಥಗಿತ!
North Karnataka: ಯಾವ ಉತ್ತರ ಕರ್ನಾಟಕ ಭಾಷೆ ಎಂದ ವಿಚಾರ; ಪ್ರದೀಪ ವಿರುದ್ಧ ಉತ್ತರದಲ್ಲಿ ಎಲ್ಲೆಡೆ ಆಕ್ರೋಶ! ಮನೆ ಮುತ್ತಿಗೆಗೆ ಪ್ಲಾನ್?