
ನೈಋತ್ಯ ರೈಲ್ವೆ ವಿಭಾಗವು ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳ ಮೂಲಕ ಸಂಚರಿಸುವ ಒಟ್ಟು 19 ರೈಲುಗಳ ಆಗಮನ ಹಾಗೂ ನಿರ್ಗಮನ ಸಮಯವನ್ನು ಪರಿಷ್ಕರಿಸಿದೆ. ಇದರಲ್ಲಿ ಬೆಂಗಳೂರು ನಗರದಾದ್ಯಂತ ಕಾರ್ಯಾಚರಿಸುವ 13 ಪ್ರಮುಖ ರೈಲುಗಳು ಸೇರಿವೆ. ಮುಖ್ಯವಾಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ನಿಲ್ದಾಣದಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಜನಪ್ರಿಯ ‘ಉದ್ಯಾನ ಎಕ್ಸ್‌ಪ್ರೆಸ್’ ರೈಲಿನ ನಿರ್ಗಮನ ಸಮಯದಲ್ಲೂ ಪ್ರಮುಖ ಮಾರ್ಪಾಡು ಮಾಡಲಾಗಿದೆ. ನವೆಂಬರ್ 11 ರಿಂದ ಈ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.
ಉದ್ಯಾನ ಎಕ್ಸ್‌ಪ್ರೆಸ್ ಸಮಯ ಬದಲಾವಣೆ
ಕೆಎಸ್‌ಆರ್ ಬೆಂಗಳೂರು - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮುಂಬೈ ಉದ್ಯಾನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 11302) ನವೆಂಬರ್ 11 ರಿಂದ ರಾತ್ರಿ 8.40 ರ ಬದಲಾಗಿ ರಾತ್ರಿ 9.05 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ.
ಈ ಎರಡು ನಗರಗಳ ನಡುವೆ ಪ್ರತಿದಿನ ಸಂಚರಿಸುವ ಈ ದೈನಂದಿನ ರೈಲಿನ ವೇಳಾಪಟ್ಟಿ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಬದಲಾಗುತ್ತಿದೆ. ಆದಾಗ್ಯೂ, ಮುಂಬೈನ ಸಿಎಸ್‌ಎಂಟಿ ನಿಲ್ದಾಣದಿಂದ ಈ ರೈಲು ಹೊರಡುವ ಅಥವಾ ತಲುಪುವ ಸಮಯದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ನೈಋತ್ಯ ರೈಲ್ವೆಯು ವಿವಿಧ ದಿನಾಂಕಗಳಿಂದ ಜಾರಿಗೆ ಬರುವಂತೆ ರೈಲುಗಳ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ:
ಕೊಯಮತ್ತೂರು - ಕೆಎಸ್‌ಆರ್ ಬೆಂಗಳೂರು ಉದಯ್ ಡೈಲಿ ಸೂಪರ್‌ಫಾಸ್ಟ್ (22666): ಮಧ್ಯಾಹ್ನ 12.45 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಜೈಪುರ - ಮೈಸೂರು ದ್ವಿ-ವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12976): ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 12.50 ಕ್ಕೆ ಆಗಮಿಸಿ, 1.00 ಗಂಟೆಗೆ ಮೈಸೂರಿನತ್ತ ಹೊರಡಲಿದೆ.
ಅಶೋಕಪುರಂ - ಕೆಎಸ್‌ಆರ್ ಬೆಂಗಳೂರು MEMU (66540): ತ್ರಿ-ಸಾಪ್ತಾಹಿಕ ರೈಲು ರಾತ್ರಿ 7.50 ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ.
ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (22231): ಮಧ್ಯಾಹ್ನ 2.15 ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಲಕ್ನೋ - ಯಶವಂತಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ (22684): ಮಧ್ಯಾಹ್ನ 1.15 ಕ್ಕೆ ಯಶವಂತಪುರ ತಲುಪಲಿದೆ.
ಕೊರ್ಬಾ - ಯಶವಂತಪುರ ವೈನ್‌ಗಂಗಾ ದ್ವಿ-ವಾರದ ಎಕ್ಸ್‌ಪ್ರೆಸ್ (12252): ಮಧ್ಯಾಹ್ನ 1.10 ಕ್ಕೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.
ಅಶೋಕಪುರಂ - ಕಾಚೆಗುಡ ಡೈಲಿ ಎಕ್ಸ್‌ಪ್ರೆಸ್ (12786): ಕೆಂಗೇರಿ ನಿಲ್ದಾಣಕ್ಕೆ ಸಂಜೆ 5.04 ಕ್ಕೆ ಆಗಮಿಸಿ, 5.05 ಕ್ಕೆ ನಿರ್ಗಮಿಸಲಿದೆ.
ಕಾಕಿನಾಡ ಟೌನ್ - ಮೈಸೂರು ದ್ವಿ-ವಾರದ ಎಕ್ಸ್‌ಪ್ರೆಸ್ (17289): ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 12.50 ಕ್ಕೆ ಬಂದು, 1.00 ಗಂಟೆಗೆ ಮೈಸೂರಿಗೆ ಹೊರಡಲಿದೆ.
ಎಸ್‌ಎಂವಿಟಿ ಬೆಂಗಳೂರು - ಬೀದರ್ ದ್ವಿ-ವಾರದ ಎಕ್ಸ್‌ಪ್ರೆಸ್ (16559): ರಾತ್ರಿ 8.40 ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ.
ಕಾಕಿನಾಡ ಟೌನ್ - ಮೈಸೂರು ದ್ವಿ-ವಾರದ ಎಕ್ಸ್‌ಪ್ರೆಸ್ (17289): ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 12.50 ಕ್ಕೆ ಆಗಮಿಸಿ, 1.00 ಗಂಟೆಗೆ ಹೊರಡಲಿದೆ.
ಮೈಸೂರು - ಕಾಕಿನಾಡ ದ್ವಿ-ವಾರದ ಎಕ್ಸ್‌ಪ್ರೆಸ್ (17290): ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ರಾತ್ರಿ 8.05 ಕ್ಕೆ ಬಂದು, 8.15 ಕ್ಕೆ ಹೊರಡಲಿದೆ.
ಜಬಲ್ಪುರ - ಯಶವಂತಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ (12194): ಮಧ್ಯಾಹ್ನ 1.25 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
ಕೆಎಸ್‌ಆರ್ ಬೆಂಗಳೂರು - ಅಶೋಕಪುರಂ ಮಾಲ್ಗುಡಿ ಡೈಲಿ ಎಕ್ಸ್‌ಪ್ರೆಸ್ (20624): ಮಧ್ಯಾಹ್ನ 1.30 ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಮೈಸೂರು ಮಾರ್ಗವಾಗಿ ಹೊರಡಲಿದೆ.
ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿರುವುದರಿಂದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಮುಂಬೈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ತೊಂದರೆ ತಪ್ಪಿಸಲು ನಿಲ್ದಾಣಕ್ಕೆ ಆಗಮಿಸುವ ಮೊದಲು ನೂತನ ಸಮಯವನ್ನು ಪರಿಶೀಲಿಸಿಕೊಳ್ಳಲು ನೈಋತ್ಯ ರೈಲ್ವೆ ಕೋರಿದೆ. ರೈಲುಗಳ ನಿಖರವಾದ ಪ್ರಸ್ತುತ ಸ್ಥಿತಿ ಮತ್ತು ಸಮಯಕ್ಕಾಗಿ ರೈಲ್ವೆಯ ಅಧಿಕೃತ ಸಹಾಯವಾಣಿ ಅಥವಾ NTES ಆ್ಯಪ್ ಬಳಸಬಹುದು.