
ಬೆಂಗಳೂರು (ಅ.31) ಪ್ರಿಯಕರ ಹಾಗೂ ಸ್ನೇಹಿತರನ್ನು ಮನೆಗೆ ಕರೆಸುತ್ತಿದ್ದ ಅಪ್ರಾಪ್ತ ಮಗಳನ್ನು ಪ್ರಶ್ನಿಸಿದ ತಾಯಿ ಹತ್ಯೆಯಾದ ಘಟನೆ ಬೆಂಗಳೂರಿನ ಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮಾ ದೇವಸ್ಥಾನದ ಬಳಿ ನಡೆದಿದೆ. ಪ್ರಿಯಕರ ಹಾಗೂ ಸ್ನೇಹಿತರ ಜೊತೆ ಸೇರಿ ತಾಯಿಯನ್ನೇ ಕೊಲೆ ಮಾಡಲಾಗಿದೆ. ಉಸಿರುಗಟ್ಟಿ ಕೊಲೆ ಮಾಡಿ ಬಳಿಕ Neಣು ಹಾಕಿದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಕೃತ್ಯದಲ್ಲಿ ಭಾಗಿಯಾದ ಐವರು ಆರೋಪಿಗಳು ಅಪ್ರಾಪ್ತರು. ಅಪ್ರಾಪ್ತ ಮಗಳ ಪ್ರೀತಿಗೆ ಅಮಾಯಕ ತಾಯಿ ಬಲಿಯಾಗಿದ್ದಾಳೆ.
35 ವರ್ಷದ ನೇತ್ರಾವತಿಗೆ ಪತಿ ಇಲ್ಲ, ಮಗಳು ಒಬ್ಬಳೆ ಪ್ರಪಂಚ. ಇನ್ನು ಕುಟುಂಬಸ್ಥರ ಪೈಕಿ ನೇತ್ರಾವತಿ ಅಕ್ಕ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ನೇತ್ರಾವತಿ ಅಕ್ಕ ಕರೆ ಮಾಡಿದರೆ ಫೋನ್ ಸ್ವೀಕರಿಸಿಲ್ಲ. ಒಂದು ದಿನ ಇಡೀ ಕರೆ ಮಾಡಿದರೂ ಸ್ವೀಕರಿಸದಾಗ ಅನುಮಾನ ಮೂಡಿದೆ. ಇತ್ತ ನೇತ್ರಾವತಿ ಮಗಳಿಗೂ ಕರೆ ಮಾಡಿದರೂ ಸ್ವೀಕರಿಸಿಲ್ಲ. ಹೀಗಾಗಿ ಮರುದಿನ ನೇತ್ರಾವತಿ ಮನೆಯತ್ತ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿತ್ತು. ನೇತ್ರಾವತಿ ಅಂತ್ಯಸಂಸ್ಕಾರಕ್ಕೂ ಪುತ್ರಿಯ ಸುಳಿವಿಲ್ಲ. ಹೀಗಾಗಿ ನೇತ್ರಾವತಿ ಅಕ್ಕ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಇಷ್ಟೇ ಅಲ್ಲ ನೇತ್ರಾವತಿ ಕೊಲೆ ಹಿಂದೆ ಆಕೆಯ ಪುತ್ರಿ ಮೇಲೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆಯಾದ ನೇತ್ರಾವತಿ ಪುತ್ರಿ ಅಪ್ರಾಪ್ತೆ. ಆದರೆ ಈಕೆ ಯವಕನೊಬ್ಬನ್ನು ಪ್ರೀತಿಸುತ್ತಿದ್ದಳು. ನೇತ್ರಾವತಿಯ ಪುತ್ರಿ ತನ್ನ ಪ್ರಿಯಕರನ್ನು ಕರೆದುಕೊಂಡು ಮನೆಗೆ ಬರುತ್ತಿದ್ದಳು. ಪದೇ ಪದೇ ಪ್ರಿಯಕರ ಮನೆಗೆ ಬರುತ್ತಿದ್ದ. ಶನಿವಾರ (ಅ.25) ರಾತ್ರಿ ಪ್ರಿಯಕರ ಜೊತೆಗೆ ನೇತ್ರಾವತಿ ಪುತ್ರಿ ಮನೆಗೆ ಬಂದಿದ್ದಳು. ಆದರೆ ಈ ಬಾರಿ ಪ್ರಿಯಕರ ಜೊತೆಗೆ ಮೂವರು ಸ್ನೇಹಿತರು ಮನೆಗೆ ಬಂದಿದ್ದರು. 11 ಗಂಟೆಗೆ ಮಲಗಿದ್ದ ನೇತ್ರಾವತಿಗೆ ಎಚ್ಚರಗೊಂಡಾಗ ಮನೆಯಲ್ಲಿ ಮಗಳ ಜೊತೆ ನಾಲ್ವರು ಒಂದೇ ಕೋಣೆಯಲ್ಲಿರುವುದು ತಾಯಿಗೆ ಗೊತ್ತಾಗಿದೆ. ಹೀಗಾಗಿ ಮಗಳಗಿ ಬೈದು ಜಗಳವಾಡಿದ್ದಾರೆ. ತಕ್ಷಣವೇ ನಾಲ್ವರನ್ನು ಮನೆಯಿಂದ ಹೊರಗೆ ಹೋಗುವಂತೆ ಎಚ್ಚರಿಸಿದ್ದಾರೆ. ಹೋಗದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಮಗಳ ರಾತ್ರಿ ಪಾರ್ಟಿಗೆ ಅಡ್ಡಿ ಮಾಡಿದ ತಾಯಿ ನೇತ್ರಾವತಿ ವಿರುದ್ದ ಈಕೆ ಕೋಪಗೊಂಡಿದ್ದಾಳೆ. ಆಕೆಯ ಪ್ರಿಯಕರ, ಸ್ನೇಹಿತರು ಆಕ್ರೋಶಗೊಂಡಿದ್ದಾರೆ. ಪುತ್ರಿ ಹಾಗೂ ಇತರ ನಾಲ್ವರು ನೇತ್ರಾವತಿ ಬಾಯಿಯನ್ನು ಬಲವಂತವಾಗಿ ಮುಚ್ಚಿದ್ದಾರೆ. ಟವಲ್ ಮೂಲಕ ನೇತ್ರಾವತಿ ಕುತ್ತಿಗೆಯನ್ನು ಬಿಗಿಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ನೇತ್ರಾವತಿ ಕೊಲೆಯಾಗಿದ್ದಾಳೆ. ಎಲ್ಲಾ ಅಪ್ರಾಪ್ತರು ಸೇರಿ ನೇತ್ರಾವತಿಯನ್ನು ಕೊಲೆ ಮಾಡಿದ್ದಾರೆ. ಬಳಿಕ ನೇತ್ರಾವತಿ ಕತ್ತಿಗೆ ಸೀರೆ ಬಿಗಿದು ಫ್ಯಾನ್‌ಗೆ ಕಟ್ಟಿ ಆತ್ಮ*ತ್ಯೆ ಎಂದು ಬಿಂಬಿಸಿದ್ದಾರೆ. ಇಷ್ಟೇ ಬಲಿಕ ನೇತ್ರಾವತಿ ಪುತ್ರಿ ಸೇರಿದಂತೆ ನಾಲ್ವರು ಎಸ್ಕೇಪ್ ಆಗಿದ್ದಾರೆ.
ನೇತ್ರಾವತಿಯ ಅಕ್ಕ ನೀಡಿದ ದೂರಿನಿಂದ ಪೊಲೀಸರು ನೇತ್ರಾಪತಿ ಪುತ್ರಿಯ ಪ್ರಿಯಕರನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಘಟನೆ ಬೆಳಕಿಗೆ ಬಂದಿದೆ. ಮಗಳನ್ನು ಸರಿದಾರಿಗೆ ತರಲು ಪ್ರಯತ್ನಿಸಿದ ತಾಯಿ ದುರಂತ ಅಂತ್ಯವಾಗಿದ್ದಾಳೆ.